ಸಂಪದಿಗರ ಸಲಹೆಯ ನಿರೀಕ್ಷೆಯಲ್ಲಿ....

ಸಂಪದಿಗರ ಸಲಹೆಯ ನಿರೀಕ್ಷೆಯಲ್ಲಿ....

Comments

Submitted by ಗಣೇಶ Thu, 07/11/2013 - 23:47

>>>ಅರ್ಥಶಾಸ್ತ್ರ ಎಂ.ಎ ಮಾಡಿದರೆ ಉದ್ಯೋಗಾವಕಾಶ ಹೆಚ್ಚು ಎಂದು ಗೆಳೆಯರು ಮತ್ತು ನಮ್ಮ ಉಪನ್ಯಾಸಕರು ಹೇಳುತ್ತಿದ್ದಾರೆ.
-ಅವರ ಸಲಹೆಯಂತೆ ಅರ್ಥಶಾಸ್ತ್ರ ಎಂ.ಎ ಮಾಡಿ, ಉದ್ಯೋಗ ದೊರೆತ ನಂತರ, ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಬಳಿಕ, ನಿಮ್ಮ ಆಸಕ್ತಿಯ "ರಾಜ್ಯಶಾಸ್ತ್ರ"ವನ್ನು ಕಲಿತರಾಯಿತು.

Submitted by ಕೀರ್ತಿರಾಜ್ ಮಧ್ವ Fri, 07/12/2013 - 09:16

In reply to by ಗಣೇಶ

ಗಣೇಶರವರ ಸಲಹೆಗಾಗಿ ಧನ್ಯವಾದಗಳು. ಆದರೆ ಅರ್ಥಶಾಸ್ತ್ರದಲ್ಲಿ ನನಗೆ ಕಿಂಚಿತ್ತು ಆಸಕ್ತಿಯಿಲ್ಲ. ಆಸಕ್ತಿಯಿರದ ವಿಷಯದಲ್ಲಿ ಮುಂದೆ ಹೋದರೆ ಸಮಸ್ಯೆಯಾಗದೇ.? ರಾಜ್ಯಶಾಸ್ತ್ರದಲ್ಲಿ ಉದ್ಯೋಗಾವಕಾಶಗಳೇ ಇಲ್ಲವೇ.?

Submitted by Shreekar Fri, 07/12/2013 - 12:30

In reply to by ಕೀರ್ತಿರಾಜ್ ಮಧ್ವ

ಪುಕ್ಕಟೆ ಸಲಹೆ

ಕೀರ್ತಿರಾಜ್,

ತಂತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವುದು ಯಾವಾಗಲೂ ಒಳ್ಳೆಯದು.

ಇಂದು ಭಾರತದಲ್ಲಿ ಉದ್ಯೋಗಾವಕಾಶಗಳಿಗೇನೂ ಕಡಿಮೆಯಿಲ್ಲ. - ಸರಿಯಾದ attitude ಮತ್ತು aptitude ಗಳು ಇದ್ದರೆ ಸಾಕು.

ಸಂಪದಿಗ ಪ್ರೊಫೆಸರ್ L ಪ್ರೇಮಶೇಖರ್ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದು, ದಿನಪತ್ರಿಕೆ ವಿಜಯವಾಣಿಯಲ್ಲಿ ಪ್ರತೀ ಬುಧವಾರ ತಮ್ಮ ಅಂಕಣ ಜಗದಗಲದಲ್ಲಿ ಜಾಗತಿಕ ರಾಜಕೀಯದ ಬಗ್ಗೆ ಬರೆಯುತ್ತಿರುತ್ತಾರೆ. ಸದ್ಯ ನಿಮ್ಮ ಊರಿನ ಹತ್ತಿರವೇ ಇರುವ ಉಡುಪಿ/ಮಣಿಪಾಲದಲ್ಲಿ ನೆಲಸಿದ್ದಾರೆ ಎಂದು ಕಾಣುತ್ತದೆ. ಬೇಕಿದ್ದರೆ ಅವರನ್ನು ಸಂಪರ್ಕಿಸಿ ಸಮಾಲೋಚನೆ ಮಾಡಬಹುದು. ಅವರ ಬ್ಲಾಗ್ ತಾಣ http://premashekhara.blogspot.in/

ಒಳ್ಳೆಯದಾಗಲಿ.

Submitted by Shreekar Sat, 07/13/2013 - 15:00

In reply to by makara

ತ್ರಾಸವಿಲ್ಲದೆ ಪ್ರಾಸ ಬಳಸುವ ಪ್ರಿಯಮಿತ್ರ ಶ್ರೀಧರ್ ಬಂಡ್ರಿಯವರಿಗೆ ನಮಸ್ಕಾರಗಳು.
ನಿಮ್ಮ ಒಳ್ಳೆಯ ಮಾತುಗಳಿಂದ ಕೀರ್ತಿರಾಜರ ಪ್ರಶ್ನೆಗೆ ಸಂಬಂಧಿಸಿದ ಎರಡು ಉದಾಹರಣೆಗಳು ನೆನಪಾದವು.

ವಿಕಿ ಆನಂದ್ ಅದಾಗ ತಾನೇ ಹೊಸದಾಗಿ ಶುರುವಾದ information ಟೆಕ್ನಾಲಜಿಯ BE ಪದವಿಗೆ ಅರ್ಧ ಮಿಲಿಯ ಡೊನೇಶನ್ ಮೊತ್ತವನ್ನು ಡಾಲರ್ ಗಳಲ್ಲಿ ಪಾವತಿಸಿ ಸೇರಿಕೊಂಡು ಇಂಜಿನಿಯರ್ ಆದನು. ಆಗ ಅವನಿಗೆ ಜ್ಞಾನೋದಯವಾಯಿತು --- ತಾನು ಇಂಜಿನಿಯರ್ ಆಗಬಾರದಿತ್ತು ತನ್ನ ಆಯ್ಕೆ ತಪ್ಪಾಯಿತು ಎಂದು. ಹಾಗೆಯೇ ತಾನು ಯಾರಡಿಯಲ್ಲೂ ಕೆಲಸ ಮಾಡಲಾರೆ ಎಂದು ನಿರ್ಧರಿಸಿದ ಅವನು ಸ್ಟಾಕ್ ಎಕ್ಷ್ಚೇಂಜ್ ಮೆಂಬರ್ಶಿಪ್ ಕಾರ್ಡ್ ಪಡೆದು ಒಂದೇ ವರ್ಷದಲ್ಲಿ ಮೂರು ಮಿಲಿಯ ಸಂಪಾದಿಸಿ, ನಷ್ಟದಲ್ಲಿದ್ದ ಒಂದೆರಡು ಕಂಪೆನಿಗಳ ನೇತ್ರತ್ವ ಪಡೆದು ಅವುಗಳನ್ನು ಸರಿದಾರಿಗೆ ತಂದನು. ಫೈನಾನ್ಸ್ ಮತ್ತು ಮೇನೇಜ್ಮೆಂಟ್ ನಲ್ಲಿ ತನಗಿರುವ ಜ್ಞಾನ ಸಾಕಾಗದೆಂದು ಅರಿವಾಗಿ ನ್ಯೂಜೀಲ್ಯಾಂಡಿಗೆ ತನ್ನ ಸ್ವಂತ ಸಂಪಾದನೆಯ ಹಣದಲ್ಲಿ ಹೋಗಿ MBA ಪಡೆದು ಈಗ 32 ನೇ ವಯಸ್ಸಿನಲ್ಲಿ Ph.D. ವ್ಯಾಸಂಗ ಮಾಡುತ್ತಿದ್ದಾನೆ. ನ್ಯೂಜೀಲ್ಯಾಂಡ್ ಆಯ್ಕೆ ಯಾಕೆಂದರೆ ಅಲ್ಲೇ ಜಗತ್ತಿನಲ್ಲೇ ಮೊದಲು ಸೂರ್ಯ ಹುಟ್ಟುವುದು. ಅದರಿಂದಾಗಿ ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಹಾಕುವುದು ಸುಲಭ. ವ್ಯಾಸಂಗದ ಜೊತೆ ಜೊತೆಯಲ್ಲೇ ಗಳಿಕೆ ಕೂಡಾ ಮುಂದುವರಿಕೆ

ಎರಡನೇ ಉದಾಹರಣೆ ಮಲಯಾಳೀ ಮನೋರಮೆ ಬಾಲಕಿಯೊಬ್ಬಳು PUC ನಂತರ interior decoration ಕೋರ್ಸ್ ಸೇರಬೇಕು ಎನ್ನುವಾಗ ಅವಳನ್ನು ಹಿರಿಯರು ಬೆಂಗಳೂರಿನ Eduquity ಕನ್ಸಲ್ಟೆನ್ಸಿಗೆ ಸೂಕ್ತ ಮಾರ್ಗದರ್ಶನಕ್ಕೆ ಕಳಿಸಿದರು. ಅಲ್ಲಿನ career psychologist ಅವಳನ್ನು ಪರೀಕ್ಷಿಸಿ ಅವಳು ಬಹಿರ್ಮುಖಿ ಯಾ extrovert ಆಗಿದ್ದು ಜನರೊಡನೆ ಸುಲಭವಾಗಿ ಬೆರೆಯುವವಳು ಎಂದು ತಿಳಿದುಕೊಂಡರು. ಅವರ ಸಲಹೆಯಂತೆ ಅವಳು BBM ಪದವಿಗೆ ಸೇರಿ ಚರ್ಚಾ ಸ್ಪರ್ಧೆಗಳಲ್ಲಿ ದೆಹಲಿಗೂ ಹೋಗಿ ಕೀರ್ತಿಗಳಿಸಿ ಉತ್ತಮ ಶ್ರೇಣಿಯಲ್ಲಿ ಪದವಿ ಪಡೆದಳು.

ತನಗೆ ಏನು ಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಂಡರೆ ಅಲ್ಲಿಗೆ ಅರ್ಧ ಕೆಲಸವಾದಂತೆ . ಉಳಿದ ಅರ್ಧ ಅದನ್ನು ಪಡೆದುಕೊಳ್ಳುವುದು ಅಷ್ಟೇ

Submitted by Shreekar Sat, 07/13/2013 - 15:19

In reply to by Shreekar

ಕೀರ್ತಿರಾಜರೇ,

ಇನ್ಫೋಸಿಸ್ ಕಂಪೆನಿಯವರ ತತ್ವ ಒಂದಿದೆ -- ವೆನ್ ಯು ಹ್ಯಾವ್ ಎ ಪ್ರಾಬ್ಲೆಮ್, ಶೇರ್ ಇಟ್ ವಿಥ್ ದಿ ವರ್ಲ್ಡ್.

ಸಮಸ್ಯೆ ಎದುರಾದಾಗ ಅದು ಬಗೆಹರಿಯುವ ತನಕ ಎಲ್ಲರಲ್ಲೂ ಅದರ ಪ್ರಸ್ತಾಪ ಮಾಡಿ ಪರಿಹಾರ ಪಡೆಯಲು ಪ್ರಯತ್ನ ಪಡಿ.

ಆದ್ದರಿಂದ, ಎಷ್ಟು ಸಾಧ್ಯವೋ, ಅಷ್ಟು ಜನರ ಹತ್ತಿರ ನಿಮ್ಮ ಸಮಸ್ಯೆ ಹೇಳಿಕೊಳ್ಳಿ.

ನಿಮಗೆ ಸಮಸ್ಯೆಯ ಅನೇಕ ಮುಖಗಳು ಮತ್ತು ಪ್ರಾಯಶಃ ಪರಿಹಾರಗಳು ಗೋಚರಿಸುವವು.

ಅನೇಕ ಸಲ, ಈ ಹೇಳಿಕೊಳ್ಳುವಿಕೆಯ ಚಟುವಟಿಕೆಯಿಂದಾಗಿ ಸಮಸ್ಯೆಯು ನಮ್ಮ ಮನಸ್ಸಿನಲ್ಲೇ ಒಂದು ಮೂರ್ತ ರೂಪ ಪಡೆದು ಪರಿಹಾರ ನಮಗೇ ಹೊಳೆಯುವುದೂ ಉಂಟು.

ಒಳ್ಳೆಯದಾಗಲಿ.

Submitted by ಗಣೇಶ Sun, 07/14/2013 - 00:44

In reply to by Shreekar

ಶ್ರೀಕರ್‌ಜಿಯವರ "ಪುಕ್ಕಟೆ ಸಲಹೆ"ಗೆ ನನ್ನದೂ +೧.
ಈ ಕಾಲದಲ್ಲಿ ಹೆದರಿಸುವವರೇ ಜಾಸ್ತಿ ಜನ. ಧೈರ್ಯ ಹೇಳಿ ನಿಮ್ಮ ನಿರ್ಧಾರ ಬೆಂಬಲಿಸುವವರು ಅಲ್ಲೊಬ್ಬರು ಇಲ್ಲೊಬ್ಬರು ಇರುವರು. ಅವರಲ್ಲಿ ಶ್ರೀಕರ್ ಸಾಧಕರ ಉದಾಹರಣೆ ಕೊಟ್ಟು ಅನೇಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
>>ವೆನ್ ಯು ಹ್ಯಾವ್ ಎ ಪ್ರಾಬ್ಲೆಮ್, ಶೇರ್ ಇಟ್ ವಿಥ್ ದಿ ವರ್ಲ್ಡ್. (ಈ ಇನ್ಫೋಸಿಸ್‌ನವರು ಪ್ರಾಬ್ಲೆಮ್ ಬಂದಾಗ ಶೇರ್ ಹಂಚುವರೋ?:) ) ಅಷ್ಟೂ ಜನರ ಬಳಿ ನಿಮ್ಮ ಸಮಸ್ಯೆ ಹಂಚಿದರೆ:-
ಒಬ್ಬರ ಸಲಹೆ : ಥಿಯರಿ ಪ್ರಕಾರ ಶ್ರೀಕರ್ ಅಭಿಪ್ರಾಯ ಚೆನ್ನಾಗಿದೆ. ಆದರೆ ಪ್ರಾಕ್ಟಿಕಲ್ ಸಾಧ್ಯನಾ? ಹೆಚ್ಚಿನವರು ಅವರಿಷ್ಟದ ಡಿಗ್ರಿ ಸರ್ಟಿಫಿಕೆಟ್ ಹಿಡಕೊಂಡು ಕೆಲಸಕ್ಕಾಗಿ ಅಲೆಯುತ್ತಿದ್ದಾರೆ....
ಇನ್ನೊಬ್ಬರ ಸಲಹೆ : ..ಜ್ಯೋತಿಷಿಯ ಸಲಹೆ ಕೇಳಿ. ..ನನ್ನ ಮಗ ಈಗ ದುಬೈಯಲ್ಲಿ ಕೆಲಸ ಮಾಡುತ್ತಿದ್ದಾನೆ...
ಜ್ಯೋತಿಷಿಯ ಸಲಹೆ : ನಿಮ್ಮ ನಿರ್ಧಾರ ತೆಗೆದುಕೊಳ್ಳಲು ತೊಂದರೆ ಯಾಕೆಂದರೆ ವಕ್ರ ಶನಿಯ ದೃಷ್ಠಿ....ಹೋಮ ಮಾಡಿಸಿ..
...
...ಬೇಕಾ ಸಲಹೆ? :)

Submitted by ಕೀರ್ತಿರಾಜ್ ಮಧ್ವ Sun, 07/14/2013 - 22:07

In reply to by ಗಣೇಶ

ಸಂಪದಿಗರ ಸಲಹೆಗೆ ಧನ್ಯವಾದ. ಇದೇ ಮಂಗಳವಾರ (16/07/20131) ಮಂಗಳೂರು ಯುನಿವರ್ಸಿಟಿಗೆ ಹೋಗುತ್ತಿದ್ದೇನೆ. ಯಾವ ವಿಷಯ ಆಯ್ದುಕೊಳ್ಳಬೇಕೆಂಬ ಸಮಸ್ಯೇ ಏಕೋ ದಿನೇದಿನೇ ಹೆಚ್ಚಾಗುತ್ತಿದೆ. ನಿರ್ಧಾರ ಮಾಡಿಕೊಳ್ಳಲು ಕೊನೆಯ ಒಂದು ದಿನವಿದೆ...

Submitted by bhalle Thu, 07/18/2013 - 21:13

In reply to by ಕೀರ್ತಿರಾಜ್ ಮಧ್ವ

ಕೀರ್ತಿರಾಜರೇ

ನಿಮ್ಮ ಹೆಸರಲ್ಲೇ ಕೀರ್ತಿ ಇರುವುದರಿಂದ ಶ್ರದ್ದೆ ಇಟ್ಟು ಯಾವುದೇ ಕ್ಷೇತ್ರದಲ್ಲಿ ವ್ಯಾಸಂಗ / ಕೆಲಸ ಮಾಡಿದಲ್ಲಿ ನಿಮಗೆ ಯಶಸ್ಸು ಖಂಡಿತ

 

ಸೀರಿಯಸ್ಸಾಗಿ ವಿಷಯ ಅರುಹಿದ್ದಾಯಿತು ... ಈಗ ನಿಮ್ಮ ಕಾಲೆಳೆಯುವ :-)

ಸಾಧ್ಯಾವದಷ್ಟು ಬೇಗ ವ್ಯಾಸಂಗಕ್ಕೆ ಸೇರಿಕೊಳ್ಳಿ "ಇದೇ ಮಂಗಳವಾರ (16/07/20131)" ತನಕ ಕಾಯಬೇಡಿ ... 20131 ತುಂಬಾ ದೂರವಿದೆ :-))))

Submitted by Shreekar Wed, 08/21/2013 - 19:27

In reply to by ಗಣೇಶ

@ ಗಣೇಶಣ್ಣಾ

(ಈ ಇನ್ಫೋಸಿಸ್‌ನವರು ಪ್ರಾಬ್ಲೆಮ್ ಬಂದಾಗ ಶೇರ್ ಹಂಚುವರೋ?:)........

 

ನಾರಾಯಣ ಮೂರ್ತಿಗಳ ಚರಿತ್ರೆಯನ್ನು ಅವಲೋಕಿಸಿದರೆ ನೆನಪಾಗುವುದು ಅವರು ತಮ್ಮ ಪಾಲಿನ Rights Shares ಗಳನ್ನು ತಮ್ಮ ಸಂಸ್ಥೆಯಲ್ಲೇ ದುಡಿಯುವ ಜಾಡಮಾಲಿ, ವಾಹನ ಚಾಲಕರು, ಕಸಗುಡಿಸುವವರು ಮುಂತಾದವರಿಗೆ ಹಂಚಿದ್ದರು ಎಂದು ಕೇಳಿ ಬಲ್ಲೆ.

 

ಇನ್ಫೋಸಿಸ್ ಷೇರುಗಳಿಗೆ ಹಿಂದೆ ಇದ್ದಂತಹ ಆಕರ್ಷಣೆ ಈಗ ಇಲ್ಲ.  ನೀವೂ ಓದಿರಬಹುದು, ಸುಮಾರು 164 ಕೋಟಿ ರೂಪಾಯಿಗಳ ಷೇರುಗಳನ್ನು ಮೊನ್ನೆಯಷ್ಟೇ ರೋಹಿಣಿ ನಿಲೇಕಣಿಯವರು ಮಾರಿದ್ದು.

 

 

 

 

Submitted by Shreekar Mon, 07/15/2013 - 10:27

ಕೀರ್ತಿರಾಜ್ ಮಧ್ವ ರವರೇ,

ಇನ್ನೊಂದು option ಬಗ್ಗೆಯೂ ನೋಡಬಹುದು - ರಾಜ್ಯಶಾಸ್ತ್ರ MA ಜೊತೆಜೊತೆಗೆ ಅರ್ಥಶಾಸ್ತ್ರ MA . -- ಡಬ್ಬಲ್ MA .

ಎರಡಕ್ಕೂ ಪರಸ್ಪರ ಸಂಬಂಧವಿದೆ ಎಂದು ನನ್ನ ತಿಳುವಳಿಕೆ. political economy ಎಂಬ ಶಬ್ದ ಗುಚ್ಚವೇ ಬಳಕೆಯಲ್ಲಿದೆ

ನಮ್ಮ ಮನೆಯ ಹುಡುಗನೊಬ್ಬ ಭಾರತೀಯ ವಿಜ್ಞಾನ ಸಂಸ್ಥೆ (Tata Institute ) ನಲ್ಲಿ power electronics ನಲ್ಲಿ ಸ್ನಾತಕೋತ್ತರ ಪದವಿಗೆ ವ್ಯಾಸಂಗ ಮಾಡುತ್ತಿದ್ದಾಗ ಅದೇ ಕ್ಯಾಂಪಸ್ನಲ್ಲಿ ನಡೆಯುತ್ತಿದ್ದ ಲೆಕ್ಕಪತ್ರ ಶಾಸ್ತ್ರ ಮತ್ತು ಹಾಗೆಯೇ MBA ತರಗತಿಗಳಿಗೂ ತನ್ನ ಖಾಸ್ ಆಸಕ್ತಿಗಾಗಿ ಹೋಗುತ್ತಿದ್ದನು. ಅಷ್ಟು ಸ್ವಾತಂತ್ರ ಅಲ್ಲಿ ಇತ್ತು. ನೀವು ಕೂಡಾ ಮಂಗಳೂರು ವಿ.ವಿ.ದ ಅಧಿಕಾರಿಗಳ ಹತ್ತಿರ ಈ ಬಗ್ಗೆ ಮಾತನಾಡಿ ನೋಡಬಹುದು.

ನಿಮ್ಮ ಸಮಸ್ಯೆಯನ್ನು ಅವಕಾಶವನ್ನಾಗಿ ಪರಿವರ್ತಿಸಬಹುದು !

MA ( Pol. ) ಮತ್ತು MA (Econ. ) ಎರಡೂ Distance Education ಯೋಜನೆಯಡಿ ಕೂಡ ಲಭ್ಯವೇ ನೋಡಿ.

ಶುಭವಾಗಲಿ.

ಇನ್ನು ಆರ್ಥಿಕ ಸಮಸ್ಯೆಯ ಬಗ್ಗೆ ... ಜಮೀನು ಯಾ ಜಾಮೀನು ಆಧಾರ ಒದಗಿಸಿದಲ್ಲಿ ಸುಲಭವಾಗಿ educational loan ಸಿಗುತ್ತದೆ
ನೋಡಿ: http://www.credila.com

Submitted by ಕೀರ್ತಿರಾಜ್ ಮಧ್ವ Tue, 07/16/2013 - 20:50

In reply to by Shreekar

ನನಗೆ ಸಲಹೆ ನೀಡಿದ ಸಂಪದಿಗರಿಗೆಲ್ಲರಿಗೂ ಧನ್ಯವಾದ. ಅದರಲ್ಲೂ ಶ್ರೀಕರ್‌ರವರಂತೂ ನನ್ನ ಸಮಸ್ಯೆಯನ್ನು ತನ್ನದೆಂದು ತಿಳಿದು ಒಳ್ಳೆಯ ಮಾರ್ಗಗಳನ್ನು ಸೂಚಿಸಿದ್ದಾರೆ.
ಇವತ್ತು ನಾನು ನನ್ನ ಆಸಕ್ತಿಯ ರಾಜ್ಯಶಾಸ್ತ್ರ ಸ್ನಾತ್ತಕೋತ್ತರ ಅಧ್ಯಯನಕ್ಕೆ ಸೇರ್ಪಡೆಗೊಂಡಿದ್ದೇನೆ. ಸಂಪದಿಗರ ಕಳಕಳಿಗೆ ಅನಂತ ಧನ್ಯವಾದ.

Submitted by Manjunatha D G Thu, 07/18/2013 - 19:10

ಅರ್ಥಶಾಸ್ತ್ರ ಯಾವತ್ತೂ ರಾಜ್ಯಶಾಸ್ತ್ರಕ್ಕಿಂತ್ ಉತ್ತಮ‌.  ಕಲಿಕೆಗಾಗಿ ಅಥವ ಉದ್ಯೋಗಕ್ಕಾಗಿ ಅರ್ಥಶಸ್ತ್ರ ಒಳ್ಳೆಯದು. ಅರ್ಥಶಾಸ್ತ್ರ ವಿಧ್ಯಾರ್ಥಿಯು ರಾಜ್ಯಶಾಸ್ತ್ರವೂ ಸೇರಿ ಹಲವು ಮಾನವಿಕ ಶಾಸ್ತ್ರಗಳ ಅದ್ಯಯನ ಮಾಡಿದವನಾದರೆ ಮಾತ್ರ ಒಳ್ಳೆಯ ಅರ್ಥಶಾಸ್ತ್ರ ಪ್ರವೀಣನಾಗಬಹುದೇನೋ.

 

Submitted by Shreekar Sat, 08/03/2013 - 17:41

In reply to by Manjunatha D G

(ಅರ್ಥಶಾಸ್ತ್ರ ಯಾವತ್ತೂ ರಾಜ್ಯಶಾಸ್ತ್ರಕ್ಕಿಂತ್ ಉತ್ತಮ‌)

 

ಅರ್ಥಶಾಸ್ತ್ರದಲ್ಲಿ ಮಹಾನ್ ಪಂಡಿತ ಎನಿಸಿದ ಮ. ಮೋ. ಸಿಂಘಂ ಪ್ರಧಾನಿಯಾಗಿ ಭಾರತದ ಅಧಃಪತನಕ್ಕೆ ನೇರ ಕಾರಣಪುರುಷರಾಗಿದ್ದಾರೆ.

 

ರಾಜ್ಯಶಾಸ್ತ್ರದಲ್ಲಿ  ಬರೀ M.A. ಮಾಡಿದ ನ. ಮೋ. ತನ್ನ ಗುಜರಾತ್ ನ ಅಭೂತಪೂರ್ವ ಅಭಿವ್ರದ್ಧಿಗೆ ಕಾರಣರಾಗಿದ್ದಾರೆ !

:--)))



 

Submitted by Shreekar Fri, 08/16/2013 - 05:39

ಕೀರ್ತಿರಾಜರಿಗೆ ಒಂದು ಒಳ್ಳೆಯ ಸುದ್ದಿ. 

 

 

ಆಗಸ್ಟ್15ರ ವಾರ್ತಾಪತ್ರಿಕೆಗಳಲ್ಲಿ ಬಂದ ಸುದ್ದಿ ಹೀಗಿದೆ:-

 

ಒಂದೇ ಬಾರಿ 2  ಡಿಗ್ರಿ ಪಡೆಯಲು ಯುಜಿಸಿ ಓಕೆ  - 

 

ಹೊಸದಿಲ್ಲಿ, ಆ. 14: ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದಕ್ಕೆ University  Grants  Commission  ಒಪ್ಪಿಗೆ ನೀಡಿದೆ.  ಇದೀಗ ವಿದ್ಯಾರ್ಥಿಯೊಬ್ಬ ಒಂದು ಡಿಗ್ರಿ ಪಡೆಯುವ ವೇಳೆಯಲ್ಲಿಯೇ ದೂರಶಿಕ್ಷಣದ ಮೂಲಕ ಮತ್ತೊಂದು ಪದವಿ ಪಡೆಯಲು ಸಾಧ್ಯವಿದೆ.  ಇದನ್ನು ವಿದ್ಯಾರ್ಥಿ ತಾನು ಈಗ ಓದುತ್ತಿರುವ ಸಂಸ್ಥೆಯಿಂದಲೇ ಅಥವಾ ಬೇರೆ ಮುಕ್ತ ವಿವಿಯ ಮೂಲಕ ಪಡೆದುಕೊಳ್ಳಬಹುದು.   ವಿದ್ಯಾರ್ಥಿ ಇದೀಗ ತನ್ನ ಆಸಕ್ತಿಯ ಯಾವುದೇ ಮತ್ತೊಂದು ಡಿಗ್ರಿಯನ್ನು ಒಂದು  ಪೂರ್ಣ ಡಿಗ್ರಿಯ ವೇಳೆಯೇ ಪಡೆದುಕೊಳ್ಳಬಹುದು. 

 

ಈ  ವಿಷಯದ ಹಿನ್ನೆಲೆ ಮತ್ತು ವಿದ್ಯಾರ್ಥಿಗಳಿಗೆ ಇದರಿಂದ ಆಗುವ ಅನುಕೂಲಗಳು ಇವುಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ ನೋಡಿ:

Dual - degree  plan  with cross -stream option  

 

http://www.telegraph...

 

<>

Submitted by ಕೀರ್ತಿರಾಜ್ ಮಧ್ವ Fri, 08/16/2013 - 21:50

In reply to by Shreekar

ಧನ್ಯವಾದಗಳು ಶ್ರೀಕರ್. ಆದರೆ ಈಗ ನಾನು ರಾಜ್ಯಶಾಸ್ತ್ರ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಅಧ್ಯಯನ ನಡೆಸುತ್ತಿದ್ದೇನೆ. ಎರಡು ವರ್ಷಗಳ ನಂತರವಷ್ಟೇ ಬೇರೆ ವಿಷಯದ ಬಗ್ಗೆ ಯೋಚನೆ ಮಾಡಬೇಕೆಂದಿದ್ದೇನೆ. ನಿಮ್ಮ ಕಳಕಳಿಗಾಗಿ ಮತ್ತೊಮ್ಮೆ ಧನ್ಯವಾದ.

Submitted by ಕೀರ್ತಿರಾಜ್ ಮಧ್ವ Wed, 09/04/2013 - 16:17

In reply to by BALU

ಬಾಲುರವರೇ ಸಲಹೆಗೆ ಧನ್ಯವಾದ.. ಆದರೆ ನಾನು ಈಗಾಗಲೇ ರಾಜ್ಯಶಾಸ್ತ್ರ ಆಯ್ದುಕೊಂಡು ಒಂದೂವರೆ ತಿಂಗಳು ಕಳೆದಿದೆ..

Submitted by Shreekar Wed, 09/04/2013 - 20:19

In reply to by ಕೀರ್ತಿರಾಜ್ ಮಧ್ವ

ಕೀರ್ತಿರಾಜ್ ಅವರೇ,

 

ನಿಮ್ಮ  ಕನ್ನಡ ಬರವಣಿಗೆ ಚೆನ್ನಾಗಿದೆ. 

 

ನೀವು ಕಲಿಯುತ್ತಿರುವ ರಾಜ್ಯಶಾಸ್ತ್ರದಲ್ಲಿ ನಿಮಗೆ ಇಷ್ಟವಾದ ಪಾಠಗಳ ಬಗ್ಗೆ, ನಿಮ್ಮ ವಿದ್ಯಾರ್ಥಿ ಜೀವನದ ಬಗ್ಗೆ ಬರೆಯಲು ಸಾಧ್ಯವೇ?

 

Reading maketh  a  full man , conference  a ready man , and writing a full man - ಸರ್ ಫ್ರಾನ್ಸಿಸ್ ಬೇಕನ್ 

ಬರಹ

ಸಂಪದಿಗರಿಗೆಲ್ಲರಿಗೂ ನಮಸ್ಕಾರ... ನಾನು ನನ್ನ ಬಿ.ಎ ಪದವಿಯನ್ನು ಸಂಪೂರ್ಣಗೊಳಿಸಿದ್ದೇನೆ. ಇದೀಗ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಎಂ.ಎ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ಈ ಎರಡೂ ವಿಭಾಗಗಳಲ್ಲಿ ನಾನು ಆಯ್ಕೆಯಾಗಿರುತ್ತೇನೆ. ನನಗೆ ಈಗಿರುವ ಸಮಸ್ಯೆ ಏನೆಂದರೆ ಇವೆರಡರಲ್ಲಿ ಯಾವುದು ಉತ್ತಮ ಆಯ್ಕೆ ಎಂದು ತಿಳಿಯದೆ ಗೊಂದಲಕ್ಕೀಡಾಗಿದ್ದೇನೆ.
ರಾಜ್ಯಶಾಸ್ತ್ರ ವಿಷಯದಲ್ಲಿ ನನಗೆ ಅತೀವ ಆಸಕ್ತಿಯಿದೆ. ಆದರೆ, ಅರ್ಥಶಾಸ್ತ್ರ ಎಂ.ಎ ಮಾಡಿದರೆ ಉದ್ಯೋಗಾವಕಾಶ ಹೆಚ್ಚು ಎಂದು ಗೆಳೆಯರು ಮತ್ತು ನಮ್ಮ ಉಪನ್ಯಾಸಕರು ಹೇಳುತ್ತಿದ್ದಾರೆ. ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ನಾನು ಇತರರಿಗೆ ಹೊರೆಯಾಗದೆ, ನಾನೇ ದುಡಿದು, ವಿದ್ಯಾಭ್ಯಾಸ ಮುಂದುವರಿಸುತ್ತಿದ್ದೇನೆ. ಈ ಕಾರಣಗಳಿಂದಾಗಿ, ಎಂ.ಎ ಮುಗಿದ ತಕ್ಷಣ ನನಗೆ ಉದ್ಯೋಗದ ಅವಶ್ಯಕತೆಯಿದೆ. ಹೀಗಿರುವಾಗ ನಾನು ನನ್ನ ಆಸಕ್ತಿಯ ರಾಜ್ಯಶಾಸ್ತ್ರ ಆಯ್ದುಕೊಳ್ಳಲೇ ಅಥವಾ ಉದ್ಯೋಗಕ್ಕೋಸ್ಕರ ಅರ್ಥಶಾಸ್ತ್ರ ಆಯ್ದುಕೊಳ್ಳಬೇಕೇ..?
ಸಂಪದಿಗರಿಗೆ ನನ್ನ ಸಮಸ್ಯೆ, ನನ್ನ ಆಸಕ್ತಿ ಮತ್ತು ನಾನಿರುವ ಪರಿಸ್ಥಿತಿ ಅರ್ಥವಾಗಿದೆ ಎಂದುಕೊಳ್ಳುತ್ತೇನೆ. ಇವೆಲ್ಲವನ್ನು ಪರಿಗಣಿಸಿ ನನಗೊಂದು ಉತ್ತಮ ಸಲಹೆ ನೀಡಬೇಕೆಂದು ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet