ಭಾವಪೂರ್ಣ ಶ್ರದ್ಧಾಂಜಲಿ
ಚಿತ್ರ
ನೀನು ಇಲ್ಲವೆಂದು ಕಣ್ಣೀರು ಸುರಿಸಲೆ?
ನೀನು ಬದುಕಿದ್ದೆಯೆಂದು ಹೆಮ್ಮೆ ಪಡಲೆ?
ಮತ್ತೆ ಜನಿಸಿ ಬರಲೆಂದು ದೇವನ ಕೇಳಲೆ?
ನೀನು ಉಳಿಸಿದುದೇನೆಂದು ಹುಡುಕಲೆ?
ನೀನಿಲ್ಲದೆ ಹೃದಯ ಖಾಲಿಯೆಂದು ಅಳಲೆ?
ಬದುಕು ಶೂನ್ಯವೆಂದು ವಿರಾಗಿಯಾಗಲೆ?
ಹೃದಯದಲಿ ನಿನ್ನ ನೆನಪು ತುಂಬಿದೆಯೆನ್ನಲೆ?
ಬೆನ್ನು ಹಾಕಿ ಹಿಂದಿನ ದಿನಗಳಲ್ಲೆ ಇರಲೆ?
ನಿನ್ನೆಯ ನೆನಪಿನಲಿ ನಾಳೆ ಹಸನಾಗಿಸಲೆ?
ನೀನು ಇಲ್ಲವೆಂದು ಮನ ಗಟ್ಟಿಗೊಳಿಸಲೆ?
ನಿನ್ನ ನೆನಪನ್ನು ಚಿರವಿರಿಸಿ ಬದುಕಲೆ?
ಅತ್ತು ಕರೆದು ಹಗುರಾಗಿ ಮರೆಯಲೆ?
ಪ್ರೇಮ ವಾತ್ಸಲ್ಯದಮಲಿನಲಿ ನಗುನಗುತಾ
ನಿನ್ನಿಚ್ಛೆಯ ಕೆಲಸಗಳ ಮುನ್ನಡೆಸಲೆ?
-ಕ.ವೆಂ.ನಾಗರಾಜ್.
Rating
Comments
ಉ: ಭಾವಪೂರ್ಣ ಶ್ರದ್ಧಾಂಜಲಿ
ಬಳಸಿದ ಚಿತ್ರ ಅಂತ್ರಜಾಲದಿಂದ ಹೆಕ್ಕಿದ್ದು. ಮಿತ್ರರು ಶ್ರದ್ಧಾಂಜಲಿಗೆ ತಮ್ಮ ಸಾಲುಗಳನ್ನೂ ಸೇರಿಸಬಹುದು.
In reply to ಉ: ಭಾವಪೂರ್ಣ ಶ್ರದ್ಧಾಂಜಲಿ by kavinagaraj
ಉ: ಭಾವಪೂರ್ಣ ಶ್ರದ್ಧಾಂಜಲಿ
ಅಗಲಿದ ಪ್ರಶ್ನೆಗೆ ಭಾಷ್ಪಾಂಜಲಿ
_________________________
ಹೋಗಬಾರದಿತ್ತು ನೀ ಹೀಗೆ
ನಡು ನೀರಲಿ ಕೈ ಬಿಟ್ಟ ಹಾಗೆ
ಇರುವವರೆಗೊಂದಿತ್ತಾದರೂ ತೃಪ್ತಿ
ಉತ್ತರಗಳನಷ್ಟು ಹುಡುಕೊ ಯುಕ್ತಿ
ಕೈ ಕೊಟ್ಟು ನೀ ಹೀಗೆ ಹೋದೆಯಲ್ಲೆ
ಹುಡುಕಲ್ಯಾರಿಗೆ ಉತ್ತರವಿದ್ದೆ ನನ್ನಲ್ಲೆ
ಶ್ರದ್ದಾಂಜಲಿ ತರ್ಪಣದಲೀಗ ವೃದ್ಧಾಂಜಲಿ
ಸೇರಿಬಿಡೆನ್ನ ನಾನಾಗೊಮುನ್ನ ಶ್ರದ್ಧಾಂಜಲಿ!
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ಭಾವಪೂರ್ಣ ಶ್ರದ್ಧಾಂಜಲಿ by nageshamysore
ಉ: ಭಾವಪೂರ್ಣ ಶ್ರದ್ಧಾಂಜಲಿ
ನಿಮ್ಮ ಪ್ರಶ್ನೆಗೆ ನಿಮ್ಮದೇ ಉತ್ತರಾಂಜಲಿ ಸೊಗಸಾಗಿದೆ. ಧನ್ಯವಾದ, ನಾಗೇಶರೇ.