ಎಲ್ಲ ಬದಲಾಗಬಹುದು.
ಎಲ್ಲ ಬದಲಾಗಬಹುದು.
ನಿನ್ನ ಕಡೆಯುಸಿರಿಂದ
ಹೊಸ ಬದುಕು ಮೊದಲಾಗಬಹುದು.
ನಡೆದದ್ದು ನಡೆದಾಯ್ತು.
ಮದಿರೆಯೊಡನೆ ಬೆರೆತ ನೀರು
ಮರಳಿ ತರಬಲ್ಲವರಾರು
ನಡೆದದ್ದು ನಡೆದಾಯ್ತು
ಮದಿರೆಯೊಡನೆ ಬೆರೆತ ನೀರು
ಮರಳಿ ತರಬಲ್ಲವರಾರು?
ಎಲ್ಲ ಬದಲಾಗಬಹುದು.
ನಿನ್ನ ಕಡೆಯುಸಿರಿನಿಂದ
ಹೊಸ ಬದುಕು ಮೊದಲಾಗಬಹುದು.
ಬ್ರೆಷ್ಟ್ ಕವಿಯ "ಎವೆರಿಥಿಂಗ್ ಚೇಂಜಸ್" ಕವಿತೆಯ ಭಾವಾನುವಾದ.
Rating
Comments
ಉ: ಎಲ್ಲ ಬದಲಾಗಬಹುದು.
ಬದಲಾವಣೆ ಜಗದ ನಿಯಮ, ಆಗುತ್ತದೆ!!
In reply to ಉ: ಎಲ್ಲ ಬದಲಾಗಬಹುದು. by kavinagaraj
ಉ: ಎಲ್ಲ ಬದಲಾಗಬಹುದು.
ಶಾಶ್ವತವಾಗಿರುವುದು ಬದಲಾವಣೆಯೊಂದೇ! (Nothing is permanent except Change) ಅಲ್ಲವೇ ಕವಿಗಳೆ.
ಉ: ಎಲ್ಲ ಬದಲಾಗಬಹುದು.
ಮೂಲದಲ್ಲಿ ಇದು ದೀರ್ಘವಾಗಿದೆ ..
http://www.lyricsond...
ನಿಮ್ಮದು ಸರಳ ಸುಂದರ ಚೊಕ್ಕ ಭಾವಾನುವಾದ .. ಕನ್ನಡ ಬರಹ ಇಷ್ಟ ಆಯ್ತು .. .
ಶುಭವಾಗಲಿ
\।
In reply to ಉ: ಎಲ್ಲ ಬದಲಾಗಬಹುದು. by venkatb83
ಉ: ಎಲ್ಲ ಬದಲಾಗಬಹುದು.
ಒಂದೆಡೆ ಸಾವು,ಇನ್ನೊಂದೆಡೆ ಹುಟ್ಟು.
ಉ: ಎಲ್ಲ ಬದಲಾಗಬಹುದು.
ಕವಿನಾಗರಾಜರಿಗೆ ಮತ್ತು ಮಕರರಿಗೆ ವಂದನೆಗಳು.
ಹೌದು ಬದಲಾವಣೆ ಜಗದ ನಿಯಮ. ಅದರ ಬಗ್ಗೆ ಆಶಾಭಾವನೆ ಇರಬೇಕೆನ್ನುವುದು ಕವನದ ಆಶಯ ಎಂದು ನನ್ನ ಭಾವನೆ.
ವೆಂಕಟರಿಗೆ ಧನ್ಯವಾದಗಳು
ಮೂಲಕ್ಕಾಗಿ ನೀವು ಕೊಟ್ಟಿರುವ ಕೊಂಡಿ ಕೆಲಸ ಮಾಡುತ್ತಿಲ್ಲ. ಆದರೂ ನನ್ನ ಕವನ ಮೂಲದಷ್ಟೇ ಇದೆ ಎಂದುಕೊಂಡಿದ್ದೇನೆ. ಮೆಚ್ಚಿದ್ದಕ್ಕಾಗಿ ನನ್ನಿ.
ನೋವಿನ ಸಾವು ಸಂತಸದ ಹುಟ್ಟು. ಸಂತಸದ ಸಾವು ನೋವಿನ ಹುಟ್ಟು. ಅಲ್ಲವೇ ಶಶಿಕಾಂತರೇ..
ಸಣ್ಣ ಉದಾಹರಣೆಯೊಂದಿಗೆ ಬದಲಾವಣೆಯನ್ನು ಅಸ್ವಾದಿಸಿ ಎನ್ನುತ್ತಿದ್ದಾನೆ ಬ್ರೆಷ್ಟ್.
ಮೆಚ್ಚಿದ ಎಲ್ಲರಿಗೂ ನನ್ನಿ,