ಶಿಕ್ಷಕರ ದಿನಾಚರಣೆಯಲ್ಲೊಂದು ನೆನಪು

ಶಿಕ್ಷಕರ ದಿನಾಚರಣೆಯಲ್ಲೊಂದು ನೆನಪು

ಈಗ ಮೈಸೂರಿನಲ್ಲಿರುವ ರೀಜನಲ್ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಶನ್ ಎಂದು ಪ್ರಸಿದ್ಧವಾಗಿರುವ  ರೀಜನಲ್ ಕಾಲೆಜ್ ಆಫ್ ಎಜುಕೇಶನನ್ನು ೧೯೬೫ರ ಡಿಸೆಂಬರ್ ತಿಂಗಳಲ್ಲಿ ಸರ್ವೇಪಲ್ಲಿ  ರಾಧಾಕೃಷ್ಣನ್‌ರವರ ಸಮ್ಮುಖದಲ್ಲಿಉದ್ಘಾಟಿಸಲಾಯಿತು. ಆಗ ಅಲ್ಲಿನ ವಿದ್ಯಾರ್ಥಿಗಳು ಹನ್ನೆರಡನೇ ಶತಮಾನದ ಹೊಯ್ಸಳ ಶಾಸನವೊಂದರಲ್ಲಿ ಉಲ್ಲೇಖಿತವಾದ ಈ ಪ್ರಾರ್ಥನೆಯನ್ನು ಹಾಡಿದರು:

ಯಂ ಶೈವಾ ಸಮುಪಾಸ್ಯತೇ ಶಿವೈತಿ ಬ್ರಹ್ಮೇತಿ ವೇದಾಂತಿನಃ
ಬೌದ್ಧಾಃ ಬುದ್ಧೈತಿ ಪ್ರಮಾಣ ಪಟವಃ ಕರ್ತೇತಿ ನೈಯ್ಯಾಯಿಕಾಃ
ಅರ್ಹನ್ನಿತ್ಯಥ ಜೈನ ಶಾಸನರತಾಃ ಕರ್ಮೇತಿ ಮೀಮಾಂಸಕಾಃ
ಸೋಯಂ ವೋ ವಿಧಧಾತು ವಾಂಛಿತ ಫಲಂ ತ್ರೈಲೋಕನಾಥೋ ಹರಿಃ

ಹನ್ನೆರಡನೆಯ ಶತಮಾನದಲ್ಲೇ ಕನ್ನಡಿಗರು ಭಗವಂತನ ಸ್ವರೂಪವನ್ನು ಶೈವರು, ಬೌದ್ಧರು, ಜೈನರು, ವೇದಾಂತಿಗಳೇ ಮೊದಲಾದವರು ಯಾವ ರೀತಿಯಲ್ಲಿ ಪೂಜಿಸಿದರೂ ಅವನೊಬ್ಬನೇ ಎಂಬ ತತ್ತ್ವವನ್ನು ಲೋಕಕ್ಕೇ ಸಾರಿದ್ದರು.

ಪ್ರಾರ್ಥನೆಯನ್ನು ಆಲಿಸಿದ ಮುಖ್ಯ ಅತಿಥಿಗಳಾಗಿದ್ದ ರಾಧಾಕೃಷ್ಣನ್‌ರವರು ಅಲ್ಲೇ ಅದಕ್ಕೆ ಒಂದು ಸಾಲನ್ನು ಸೇರಿಸಿ, ಹೀಗೆ ಪರಿವರ್ತಿಸಿದರು:

ಯಂ ಶೈವಾ ಸಮುಪಾಸ್ಯತೇ ಶಿವೈತಿ ಬ್ರಹ್ಮೇತಿ ವೇದಾಂತಿನಃ
ಬೌದ್ಧಾಃ ಬುದ್ಧೈತಿ ಪ್ರಮಾಣ ಪಟವಃ ಕರ್ತೇತಿ ನೈಯ್ಯಾಯಿಕಾಃ
ಅರ್ಹನ್ನಿತ್ಯಥ ಜೈನ ಶಾಸನರತಾಃ
ಕ್ರೈಸ್ತ್ವಾ ಕ್ರಿಸ್ತುರಿತಿ ಕ್ರಿಯಾಪರರತಾಃ ಅಲ್ಲೇತಿ ಮಹಮ್ಮದಾಃ
ಕರ್ಮೇತಿ ಮೀಮಾಂಸಕಾಃ
ಸೋಯಂ ವೋ ವಿಧಧಾತು ವಾಂಛಿತ ಫಲಂ ತ್ರೈಲೋಕನಾಥೋ ಹರಿಃ

ಇದು ಅವರ ಸಂಸ್ಕೃತದಲ್ಲಿರುವ ಪಾಂಡಿತ್ಯವನ್ನೂ, ಆಶುಕವಿತ್ವವನ್ನೂ ಪ್ರಕಟಿಸಿರುವದು ಒಂದಾದರೆ, ಭಾರತೀಯ ಅನಾದಿ ಕಾಲದ ತತ್ತ್ವಶಾಸ್ತ್ರದ ಭವ್ಯ ಭವನಕ್ಕೆ ಸಮಕಾಲೀನ ದರ್ಶನವನ್ನು ಸೇರಿಸಿ, ಸನಾತನ ಧರ್ಮವು ಸರ್ವ ಜನಾಂಗವನ್ನು ಸದಾ ಗೌರವಿಸುತ್ತದೆ, ಎಂಬುದನ್ನು ಸರಳವಾಗಿ ಮನನ ಮಾಡಿಕೊಟ್ಟರು.
 

Comments

Submitted by makara Thu, 09/05/2013 - 05:48

ನಿಜಕ್ಕೂ ರಾಧಾಕೃಷ್ಣನ್ನರು ಆಗಿನ ಕಾಲದ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ವಿದ್ವಾಂಸರಲ್ಲಿ ಅಗ್ರಗಣ್ಯರಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ ಬಿಡಿ. ಅವರ ಕುರಿತಾದ ಈ ಚಿಕ್ಕ ಘಟನೆಯನ್ನು ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು, ಪ್ರಭುಕುಮಾರ್ ಅವರೆ.