ನನ್ನವಳು

Submitted by sriprasad82 on Mon, 08/26/2013 - 21:05

 


ಈ ಲೇಖನ ಬರೆಯಲು ಶುರು ಮಾಡಿ ಸುಮಾರು ಒಂದು ವರ್ಷ ಆಯಿತು, ಫೈನಲ್ ಟಚ್ ಕೊಟ್ಟಿದ್ದು ಮಾತ್ರ ಈಗ ಅಷ್ಟೇ
ಅದ್ಯಾಕೋ ಹಾಗೆ ಸುಮ್ನೆ ಕೂತಿದ್ದಾಗ ನನ್ನ ವಳು ಹೇಗಿರಬೇಕು ಅನ್ನೋ ಯೋಚನೆ ಬಂತು. ಹೇಗಿರಬೇಕು ಅಂತ ಆಸೆಪಡೋದು ಮಾತ್ರ ನಮ್ಮ ಕೆಲಸ. ಆದರೆ ಕೊಡೋದು ಬಿಡೋದು ಎಲ್ಲ ಆ ಸೂತ್ರದಾರನ  ಕೈಲಿ ಅಲ್ವಾ ಆದ್ರೂ ದೇವ್ರು ಅನ್ನೋ ಸೂತ್ರದಾರನ ಮೂಲಕ future wife ಗೆ ಒಂದು ಪತ್ರ.... ಆದ್ರೆ ಇದು ಹೃದಯದ ವಿಷಯ ಅದ್ಕೇ ಈ  ಸಲ ಲೇಖನ without ಮಸಾಲ..

ಸಂಗಾತಿಯಾಗಿ ಬರೋ ನೀನು ಕೆಲಸ ಮಾಡೋದು ಬೇಡ. ಮನೇಲಿ ಆರಾಮಾಗಿರು ಅಂತ ಹೇಳ್ಬೇಕು ಅನ್ನೋ ಆಸೆ ಕಣೆ. ನೀನು ಕೆಲಸ ಮಾಡಿದ್ರೆ ಅಬ್ಬಬ್ಬ ಅಂದ್ರೆ ಸ್ವಲ್ಪ ಹಣ ಜಾಸ್ತಿ ಸಿಗಬಹುದು, ಆಮೇಲೆ ಬೇರೆ ಅವ್ರು ಕಟ್ಟಿರೋ ಮನೆಗೆ ರೆಂಟ್ ಕೊಡೋದು ಬಿಟ್ಟು ನಮ್ಮದು ಅಂತ ಮನೆ ಕೊಂಡ್ಕೊಂಡು EMI ಲೆಕ್ಕಾಚಾರದಲ್ಲಿ ನಮ್ಮ ಮುಂದಿನ ಅಮೂಲ್ಯ 25 -30 ವರ್ಷ ಕಳೆಯಬಹುದು. ಆದರೆ EMI ಲೆಕ್ಕಾಚಾರದಲ್ಲಿ ನಮ್ಮ ಮದ್ಯೆ ಪ್ರೀತಿ ಎಲ್ಲಿ ಸೊರಗಿ ಹೋಗತ್ತೋ ಅನ್ನೋ ಭಯ ನಂಗೆ. ಅದೇ ನೀನು ಮನೇಲೆ ಇದ್ದರೆ  ನಾನು ಆಫೀಸ್ ಇಂದ ಮನೆಗೆ ಬಂದಾಗ ಮುಗುಳ್ನಗೆ ಚೆಲ್ಲಿ ಒಂದು ಕಪ್ ಟೀ ಕೊಟ್ರೆ ಎಷ್ಟು  ಚೆನ್ನಾಗಿರತ್ತೆ ಅಂತ ಯೋಚನೆ ಮಾಡು. ಒಂದು ಕಪ್ ಟೀ ಕುಡಿದು ಒಂದು walking ಹೋಗಿ ಮುಸ್ಸಂಜೆ ತಿಳಿ ತಂಪಲ್ಲಿ ದಿನದ ಆಗು ಹೋಗುಗಳ ಬಗ್ಗೆ ಮಾತುಕತೆ ಮಾಡಿದ್ರೆ ಎಷ್ಟು ಹಿತವಾಗಿರತ್ತೆ ಅಲ್ವಾ...? ನೀನು ಕೆಲಸ ಮಾಡಿದ್ರೆ ನಿನ್ನ shopping ನೀನೆ ಮಾಡ್ಕೊಬೋದು, ಆದ್ರೆ ನನ್ನಲ್ಲಿ ಏನಾದ್ರು ತೆಗ್ಸಿ ಕೊಡಿ ಅಂತ ಹೇಳೋದು,  ನಾನು ಮರೆತರೆ ಹುಸಿ ಕೋಪ ತೋರೋ ಚಾನ್ಸ್ ಮಿಸ್ ಆಗತ್ತೆ ಅಲ್ವಾ ಚಿನ್ನಾ...ಯೋಚನೆ ಮಾಡು.

 ಟೀವಿ ಅಲ್ಲಿ ನಿನಗಿಷ್ಟ ಬಂದ ಪಿಲ್ಮ್ ನೋಡು ಆದ್ರೆ ಕುಚ್ ಕುಚ್ ಹೋತ ಹೈ ಅಥವಾ ಕಭಿ ಕುಶಿ ಕಭಿ ಘಂ( ಕಭಿ ಕುಶಿ always ಘಂ)  ಫಿಲಂ ನ 101 ನೇ ಸಲ ನೋಡಿ ಬೇಜಾರು ಮಾಡ್ಕೋಬೇಡ. ಬೇಜಾರ್ ಮಾಡ್ಕೊಂಡ್ರು ಪರವಾಗಿಲ್ಲ ಆದ್ರೆ ಆ ಫಿಲಂ ನಲ್ಲಿ ಶಾರುಖ್ ಆಕ್ಟಿಂಗ್ ಸೂಪರ್ ಅಂತ ಮಾತ್ರ ಹೇಳಬೇಡ (  ಅದನ್ನು ತಡೆದುಕೊಳ್ಳೋ ಸಹನೆ ನಂಗೆ ಇಲ್ಲ :-) ) . ಅವ್ನು ಸಿಗರೇಟ್ ಸೇದುತ್ತಾ ಫೋಸ್ ಕೊಡ್ತಾ ಇದ್ರೆ ಅದೇ ಹೊಗೇಲಿ ಅವನನ್ನು ಸುಡಬೇಕು ಅನ್ನಿಸುತ್ತೆ ನಂಗೆ . ನನಗೆ ಅನ್ನಿಸೋ ಹಾಗೆ ಹಾಗೆ ಅವನಿಗೆ ಸಿಕ್ಕಿದ ಅತ್ಯುತ್ತಮ ಪಾತ್ರ ಅಂದರೆ my name is khaan ಚಿತ್ರದ್ದು ಇರಬೇಕು. ಮನಸ್ಸಿಗೆ ಅದೇನೋ ಖುಷಿ ಆಯ್ತು ಅದನ್ನು ನೋಡಿ ;-)

ಕ್ರಿಕೆಟ್ ಇರೋ ಟೈಮ್ ಅಲ್ಲಿ remote ಕೊಡು ಅಂತ ನಾನು ಜಗಳ ಆಡೋದಿಲ್ಲ. ಅವ್ರು ಆಡೋ ಆ ತೋರಿಕೆಯ ಆಟ ನೋಡೋದಕ್ಕಿಂತ ಅದ್ಯಾವುದೋ serial ಅಲ್ಲಿ busy ಆಗಿರೋ ನಿನ್ನ ಮುಖ ನೋಡೋದೇ ವಾಸಿ ಅನ್ನೋದು ನನ್ನ ಭಾವನೆ...ಆದ್ರೆ ಆ serial ನಲ್ಲಿ ಹೀರೋಯಿನ್ ಮತ್ತೆ ಹೀರೋಗೆ ಜಗಳ ಆಗಿ ಹೀರೋಯಿನ್ ಅತ್ರೆ ನೀವು ಕೂಡ ಅಳಬೇಕು feel her pain ಅಂತ ಮಾತ್ರ ಹೇಳಬೇಡ. ಅವ್ಳು ಅಳೋದಕ್ಕೆ director ಹಣ ಕೊಡ್ತಾನೆ...ನಾನು ಸುಮ್  ಸುಮ್ನೆ ಅತ್ರೆ ನಿಮ್ ಅತ್ತೆ ಒದೆ ಕೊಡ್ತಾರೆ ....ನಂಗೆ or ನಿಂಗೆ!!!!!!!! ಧಾರಾವಾಹಿನ ನೋಡ್ತಾ ಇದ್ರೆ ಬೇಡ ಅನ್ನೋದಿಲ್ಲ ಯಾಕೆ ಅಂದ್ರೆ ಅದೆಲ್ಲಿಂದಲೋ ಹುಡುಕಿ ತಂದ ಸುರಸುಂದರಿಯರೆಲ್ಲ ಇರೋದು ಅಲ್ಲಿನೇ....  ಅವರ  ಗುಣ ಗಾನ ಮಾಡಿದ್ರೆ ಸಿಟ್ಟಾಗಬೇಡ. ಅವ್ರು ನಿನ್ ಮುಂದೆ ವೇಸ್ಟ್ ಅನ್ನೋದನ್ನ ಪದೇ ಪದೇ ನಿರೂಪಿಸಕ್ಕೆ ಹಾಗೆ ನೋಡ್ತೇನೆ ಅಷ್ಟೇ  ...  

ನನ್ನ ಅಪ್ಪ ಅಮ್ಮ ನ  ಚೆನ್ನಾಗಿ  ನೋಡ್ಕೋ ಅಂತ ನಿನ್ ಹತ್ರ ಕೇಳೋದಿಲ್ಲ. ನಿನ್ ಅಪ್ಪ ಅಮ್ಮಂದಿರನ್ನು ಅವರಲ್ಲಿ  ನೋಡು ಅಂತ ಮಾತ್ರ ಹೇಳ್ತೀನಿ ಅಷ್ಟೇ. ಯಾಕೆ ಅಂದ್ರೆ ಯುಗ ಯುಗ ಕಳೆದರೂ ಈ  ಅತ್ತೆ ಸೊಸೆ ಅನ್ನೋ ಕಾನ್ಸೆಪ್ಟ್ ಮಾತ್ರ ಇನ್ನೂ correct ಆಗಿ update  ಆಗಿಲ್ಲ. ಯಾವಾಗ್ಲೂ ಈ ಪ್ರೊಗ್ರಾಮ್ ಕಾನ್ಸೆಪ್ಟ್ ಗೆ ಫಿಟ್ಟಿಂಗ್ ಮಾಸ್ಟರ್ ಗಳು ಅನ್ನೋ  external virus ಅಟ್ಯಾಕ್ ಆಗೋದೇ ಜಾಸ್ತಿ  ....ಎಲ್ಲ ಕಿಂತ ಮುಖ್ಯ  ವಿಷಯ ಅಂದ್ರೆ may ಬಿ ಸುಮಾರು 20 ವರ್ಷಕ್ಕೆ ನಿಂಗೆ ಅತ್ತೆ ಆಗಿ ಪ್ರೋಮೋಷನ್ ಸಿಕ್ಕಿದರು ಸಿಗ್ಬೋದು...ಆಮೇಲೆ ಅಷ್ಟೇ "kyon ki saans bi kabhi bahu thi".

ಇಡೀ ವಾರ ನಾನು ಒಬ್ಳೆ ಇರ್ತೇನೆ  ಕಡೇ ಪಕ್ಷ ವೀಕೆಂಡ್ ಅಲ್ಲಿ ಆದರು ನನ್ನ ಹೊರಗೆ ಎಲ್ಲಾದರು ಕರ್ಕೊಂಡ್ ಹೋಗಿ ನಂಗೆ, ಊಟ ಕೊಡ್ಸಿ, ಚಾಟ್ಸ್ ಕೊಡ್ಸಿ ಅಂತ ಕೇಳು ಓಕೆ ಆದ್ರೆ ಹೋಟೆಲ್ ನೀವೇ choose ಮಾಡಿ  ಅಂತ  ಮಾತ್ರ  ಅನ್ಬೇಡ ಯಾಕೆ ಅಂದ್ರೆ ನಂದು taste based selection. ಅದು ರೋಡ್ ಸೈಡ್  ಅದ್ರು ಸರಿ ತಾಜ್ ವೆಸ್ಟ್ ಎಂಡ್  ಆದರು ಸರಿ. ಆದ್ರೆ ಹುಡುಗಿಯರಿಗೆ ಯಾವಾಗಲು ಜಿಗ ಜಿಗಿಸುವ ದೊಡ್ಡ ಹೋಟೆಲ್ ಗಳೇ ಇಷ್ಟ ಅಂತ ಎಲ್ರೂ  ಹೇಳ್ತಾರೆ...ಅದ್ಕೆ ಹೋಟೆಲ್ ಅರಿಸೋ ಜವಾಬ್ದಾರಿ ನಿಮ್ಮದು...

ಇನ್ನು ಕಡೆಯದಾಗಿ ನನ್ ಬಗ್ಗೆ ನಾನು ಹೇಳ್ಕೋಬೇಕು ಅಲ್ವ. ಮುರ್ಖರಿಗೆ ಬುದ್ದಿಯನು ನೂರ್ಕಾಲ ಪೇಳಿದರೆ  ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ  ಅಂತ ಅಮ್ಮ ಯಾವಾಗಲು ಹೇಳ್ತಾ ಇರ್ತಾಳೆ. ಇಲ್ಲಿ ಮುರ್ಖ ಯಾರು ಅಂತ ನೀನು ಜಾಸ್ತಿ ಯೋಚನೆ ಮಾಡೋದು ಬೇಡ ಅನಿಸತ್ತೆ. ನಾವು ಹುಡುಗರೇ ಇಷ್ಟು ಯಾವಾಗಲು ನಮ್ಮ ಬೆನ್ನ ಹಿಂದೆ ಯಾರದ್ರು ಒಬ್ರು ಬುದ್ದಿವಾದ ಹೇಳ್ತಾ ಇರ್ಬೇಕು ಇಲ್ಲ ಅಂದ್ರೆ ನಾವು ಹಿಂದೆನೇ ಉಳಿದು ಬಿಡ್ತೇವೆ. ಬಾಲ್ಯದಲ್ಲಿ ಅಮ್ಮ ತಿದ್ದಿ ತೀಡಿ 50% ಸರಿ ಮಾಡಿದ್ಲು. ಆಮೇಲೆ ಮೇಸ್ಟ್ರು ಲೆಕ್ಚರರ್ ಗಳು ಸೇರಿ ತುಂಬಾ ಪ್ರಯತ್ನ ಪಟ್ರು ಸರಿ ಮಾಡಕ್ಕೆ. ಆದ್ರೆ ಕೆಲ ವಿಷಯಗಳಲ್ಲಿ ನಾವು ಮೇಷ್ಟ್ರಿಗೆ ಕ್ಲಾಸ್  ಹೇಳೋವಷ್ಟು ಬುದ್ದಿವಂತರಾಗಿ ಬಿಟ್ವಿ (ಮೇಷ್ಟ್ರೇ ಸಾಯಂಕಾಲ ಕ್ಲಾಸ್ ಮುಗಿಸ್ಕೊಂಡು ಮನೆಗೆ ಬನ್ನಿ ನಾವು  ನಿಮಗೆ ಟ್ಯುಶನ್ ಕೊಡ್ತೇವೆ ಅನ್ಬೇಕು ಅಂತ ಅದೆಷ್ಟು ಸಲ ಅಂದ್ಕೊಂಡಿದ್ವಿ  ಅಂತ ನಮಗೆ ಮಾತ್ರ ಗೊತ್ತು :-). ಕೆಲ ವಿಷಯಗಳಲ್ಲಿ ನನ್ನ ಬದಲಾಯಿಸಬೇಕು ಅಂತ ನಿನಗೆ ಅನಿಸಬಹುದು. ಆದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?   ತಿದ್ಕೋಳೋಕೆ  ಇಷ್ಟವಿಲ್ಲ ಅಂತೇನೂ ಅಲ್ಲ, ಆದರೆ  ದಿನಚರಿಯಲ್ಲಿ ಒಂದು ಸಣ್ಣ ಬದಲಾವಣೆಯನ್ನು ಮಾಡ್ಕೋಬೇಕು ಅಂದರೆ  ನೂರು ಸಲ ಯೋಚನೆ ಮಾಡೋ ಸೋಂಬೇರಿ ನಾನು (ಯೋಚನೆ ಮಾಡಬೇಕೋ ಬೇಡವೋ ಅಂತ ಯೋಚನೆ ಮಾಡೋವಷ್ಟು ಸೋಂಬೇರಿ ಅನ್ನಬಹುದೇನೋ)

ಕಡೆಯದಾಗಿ,
ನೀ ಕೇಳಿದ್ದೆಲ್ಲ ಕೊಡ್ತೀನಿ ಅಂತೇನೂ ಅಲ್ಲ, ಆದರೆ ಇಲ್ಲ ಅನ್ನೋ ಮಾತು ಬಾಯಿಗೆ ಬರಲ್ಲ
ನಿನ್ನ ನೆನಪಾಗಲ್ಲ ಅಂತೇನೂ ಅಲ್ಲ ಆದರೆ ನೀನು ಮನಸ್ಸಿನ ಪುಟದಿಂದ ಸರಿಯೋದೆ ಇಲ್ಲ
ಸಕ್ಕರೆಗಿಂತ ನೀನು ಸಿಹಿ ಅಂತೇನೂ ಅಲ್ಲ, ಆದ್ರೆ ನೀನಿಲ್ದೆ ಆ ಸಿಹಿ ಸಹ್ಯ ಅನಿಸೋದಿಲ್ಲ ಅಷ್ಟೇ ......
ನಿನ್ ಬಗ್ಗೆ ಲೇಖನ ಬರೀಬೇಕು ಅಂತೇನು ಅಲ್ಲ, ಆದ್ರೆ ಮನಸ್ಸೆಲ್ಲ ತುಂಬಿರೋ ನಿನ್ನ ಪದಗಳಲ್ಲಿ ಸೆರೆ ಮಾಡಬೇಕು ಅನ್ನೋ ಆಸೆ  ಅಷ್ಟೇ .................

                                                                                                                                       ----------ಶ್ರೀ :-)

 

Rating
No votes yet

Comments

venkatb83

Wed, 08/28/2013 - 16:26

" ಹುಡುಗಿಯರಿಗೆ ಯಾವಾಗಲು ಜಿಗ ಜಿಗಿಸುವ ದೊಡ್ಡ ಹೋಟೆಲ್ ಗಳೇ ಇಷ್ಟ ಅಂತ ಎಲ್ರೂ ಹೇಳ್ತಾರೆ...ಅದ್ಕೆ ಹೋಟೆಲ್ ಅರಿಸೋ ಜವಾಬ್ದಾರಿ ನಿಮ್ಮದು..."

>>>>ತಾಜ್ ಹೋಟೆಲ್ಗೆ ಸ್ವಾಗತ‌..!! ಬಿಲ್ಲು ಹೊರುವ‌ ಭಾರ‌ ನಿಮ್ಮದು..!!!!

;()))

ಸಂಪದ‌ ಸೇರಿದ‌ ಹೊಸತ್ರಲ್ಲಿ ನಾ ಬರೆದದ್ದು ಇಲ್ಲಿದೆ....!!

http://sampada.net/a...
ಈ ತರ್ಹದ‌ ಭಾವ‌ ಪ್ರತಿ ಹುಡುಗರ‌ ಮನದಲ್ಲಿ ಒಮ್ಮೆಯಾದರೂ ಬಾರದೆ ಇರದು ಅನ್ಸುತ್ತೆ..!!

ಶ್ಹುಭವಾಗಲಿ

\|

venkatb83

Wed, 08/28/2013 - 16:26

" ಹುಡುಗಿಯರಿಗೆ ಯಾವಾಗಲು ಜಿಗ ಜಿಗಿಸುವ ದೊಡ್ಡ ಹೋಟೆಲ್ ಗಳೇ ಇಷ್ಟ ಅಂತ ಎಲ್ರೂ ಹೇಳ್ತಾರೆ...ಅದ್ಕೆ ಹೋಟೆಲ್ ಅರಿಸೋ ಜವಾಬ್ದಾರಿ ನಿಮ್ಮದು..."

>>>>ತಾಜ್ ಹೋಟೆಲ್ಗೆ ಸ್ವಾಗತ‌..!! ಬಿಲ್ಲು ಹೊರುವ‌ ಭಾರ‌ ನಿಮ್ಮದು..!!!!

;()))

ಸಂಪದ‌ ಸೇರಿದ‌ ಹೊಸತ್ರಲ್ಲಿ ನಾ ಬರೆದದ್ದು ಇಲ್ಲಿದೆ....!!

http://sampada.net/a...
ಈ ತರ್ಹದ‌ ಭಾವ‌ ಪ್ರತಿ ಹುಡುಗರ‌ ಮನದಲ್ಲಿ ಒಮ್ಮೆಯಾದರೂ ಬಾರದೆ ಇರದು ಅನ್ಸುತ್ತೆ..!!

ಶ್ಹುಭವಾಗಲಿ

\|

ಕನ್ಯೆ ಸಿಕ್ಕಿ ಸುಮಾರು ಒಂದು ವರುಷ ಆಗಿದೆ. ಈಗೇನಿದ್ದರೂ ಕನಸಿನ ಕೂಸಿಗೆ ಹಂಬಲ ಅಷ್ಟೇ :-)
-----ಶ್ರೀ

ಕನ್ಯೆ ಸಿಕ್ಕಿ ಸುಮಾರು ಒಂದು ವರುಷ ಆಗಿದೆ. ಈಗೇನಿದ್ದರೂ ಕನಸಿನ ಕೂಸಿಗೆ ಹಂಬಲ ಅಷ್ಟೇ :-)
-----ಶ್ರೀ