ತೀರದ ಕನಸು
ಹೀಗೊಂದು ಕಲ್ಪನೆ......
ಅರಬ್ಬಿ ಸಮುದ್ರ ನಮ್ಮ ಒಲವಿನ ಕಡಲು, ಯಾಕೆ ಸಮುದ್ರ ನಮಗೆ ಅಷ್ಟು ಆಪ್ತ ಎನ್ನುವುದಕ್ಕೆ ಕಾರಣವಿದೆ, ನಾವು ಚಿಕ್ಕವರಿದ್ದಾಗ ಸಾಯಂಕಾಲ ಶಾಲೆ ಬಿಟ್ಟ ನಂತರ ಸಮುದ್ರ ತೀರದಂತೆ ಸಾಗಿ ಮನೆಯ ಹಾದಿ ಹಿಡಿಯಬೇಕಿತ್ತು.
ಆ ಸಮಯದಲ್ಲಿ ಮುಸ್ಸಂಜೆಯ ಸೂಯಽಸ್ತಮಾನ ಕಾಣಸಿಗುತ್ತದೆ, ಸೂಯಽ ಮೆಲ್ಲ ಮೆಲ್ಲನೇ ಇಳೆಗೆ ಜಾರುತ್ತಿದ್ದಾನೆ. ಸಂಜೆಯ ಕೆಂಬಣ್ಣ ನೀರ ಮೇಲೆ ಚೆಲ್ಲಿದೆ, ಜೊತೆ ಜೊತೆಗೆ ಬೆಳ್ಳಿ ತೆರೆಗಳು ಒಂದರ ಮೇಲೊಂದರಂತೆ ಎರಗಿ ಬಂದು ನದಿ ದಡಕ್ಕೆ ಮುತ್ತಿಡುತ್ತಿದೆ.
ಅದರ ಜೊತೆಗೆ ಭೋರ್ಗರೆಯುವ ಶಬ್ಡ ಬೇರೆ, ದಿನ ನಿತ್ಯ ಇದನ್ನು ನೋಡುವುದು ನಮ್ಮ ಕಸುಬಾಗಿತ್ತು. ನಮಗೋ ಘಟ್ಟದ ಮೇಲಿನ ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರಿಂದ ಅಲ್ಲಿಯವರೆಗೆ ಕಡಲು ನಮಗೆ ಅಪರಿಚಿತವಾಗಿತ್ತು.
ಯಾವಾಗ ಪ್ರೌಡ ಶಿಕ್ಷಣಕ್ಕೆಂದು ದಕ್ಷಿಣ ಕನ್ನಡಕ್ಕೆ ಬಂದ ಮೇಲೆ ಅಲ್ಲಿಂದ ಕಡಲಿನೊಂದಿಗೆ ನಂಟು ಬೆಳೆಯಿತು , ಕಾರಣವಾಗಿ ಇತ್ತು ನಮ್ಮ ಶಾಲೆ ಮತ್ತು ಮನೆಯ ಮಧ್ಯೆ ಹೋಗಲು ಹತ್ತಿರದ ದಾರಿ ಆದುವೆ ಸಮುದ್ರ ತೀರದ ದಾರಿ
ತೀರದ ಅಂಚಿನಲ್ಲಿ ಎತ್ತರೆಕ್ಕೆ ಬೆಳೆದು ಬಾಗಿ ನಿಂತಿರುವ ತೆಂಗಿನ ಮರಗಳು ಆಗಲೋ ಈಗಲೋ ಸಮುದ್ರಕ್ಕೆ ಹಾರವಾಗಲೇ ಬೇಕೇಂದು ಗಟ್ಟಿ ನಿಶ್ಚಯ ಮಾಡಿ ನಿಂತಿದಂತಿವೆ,
ಅವುಗಳ ಮಧ್ಯೆ ತಂಪಾಗಿ ಬೀಸುತ್ತಿರುವ ತಂಗಾಳಿಯು ಗಲ್ಲಕ್ಕೆ ಸ್ಪಶಿಽಸಿ ಆಹ್ಲಾದಕರ ಅನುಭವ ನೀಡುತ್ತದೆ. ಇಂತಹ ಮನಸ್ಸನ್ನು ಉಲ್ಲಸಿತಗೊಳ್ಳುವ ಸನ್ನಿವೇಶಕ್ಕೆ ಮನಸೋಲದವರಿಲ್ಲ. ಮನಸ್ಸು ಆಟವಾಡಲು ಬಯಸುತ್ತಿದೆ,
ದೇಹ ನೀರೆಡೆಗೆ ಎಳೆಯುತ್ತಿದ್ದರೂ, ಆದರೂ ಏಲ್ಲಿ ಹಾಕಿದ ಶಾಲೆಯ ಸಮವಸ್ತ್ರ ನೀರಲ್ಲಿ ಒದ್ದೆಯಾಗಿ ಎಲ್ಲಿ ಅಮ್ಮನಿಗೆ ಗೊತ್ತಾಗಿ ಹೊಡೆಯುತ್ತಾಳೋ ಎಂಬ ಭಯದಿಂದ ಆಸೆಯನ್ನ ನುಂಗಿಕೊಂಡು ಪೆಚ್ಚುಮೋರೆ ಹಾಕಿಕೊಂಡು ಮನೆಗೆ ಹೆಜ್ಜೆ ಹಾಕುತಿದ್ವಿ.
ಸಮುದ್ರ ತೀರದ ಬದುಕು, ಅಲ್ಲಿಯ ತಂಪಾದ ಗಾಳಿ, ಒಂದು ಹಿತಕರ ಅನುಭವಾಗಿತ್ತು. ಆದರೆ ತೀರದ ವಾಸಿಗಳಿಗೆ ಅದು ಸರ್ವೇಸಾಮಾನ್ಯದ ವಿಷಯವಾಗಿತ್ತು. ಶಾಲೆಗೆ ರಜ ಇದ್ದ ಸಮಯದಲ್ಲಿ ಮಾತ್ರ ಅಮ್ಮನ ಹತ್ತಿರ ಒಪ್ಪಿಗೆ ಪಡೆದು ಸಮುದ್ರ ತೀರಕ್ಕೆ
ಗೆಳೆಯರ ಜೊತೆಗೂಡಿ ಹೋಗಿ ಆಟ ಆಡಿ ಬರುತ್ತಿದ್ವಿ. ಅಲ್ಲಿ ಮರಳ ದಿಣ್ಣೆಗಳ ಮೇಲೆ ಕುಳಿತು ಗುಡೂಗಳನ್ನು ಕಟ್ಟಿ ಅದು ತೆರೆಗಳಿಂದ ಕೊಚ್ಚಿಕೊಂಡು ಹೋಗುವುದು ನೋಡಿ ಮೋಜಿನ ವಿಷಯವಾಗಿತ್ತು.
ಎಷ್ಟು ಬಾರಿ ನೀರಿನಿಂದ ಕೊಚ್ಚಿಕೊಂಡು ಹೋದರು ಛಲ ಬಿಡದ ತ್ರಿವಿಕ್ರಮನಂತೆ ಪುನಃ. ಪುನಃ ಮರಳಿನ ಗುಡೂ ಕಟ್ಟಿ ಗೆದ್ದೆವೆಂದು ಸಂಭ್ರಮಿಸುವ ಹೊತ್ತಿಗೆ ಮತ್ತದೇ ಅಲೆಗಳ ಪುನರಾವರ್ತನೆಯಿಂದ ಕಟ್ಟಿದ ಗುಡೂಗಳೆಲ್ಲ ಕ್ಷಣಾರ್ದದಲ್ಲೆ ನಾಶವಾಗುತ್ತಿತ್ತು.
ಅಲ್ಲಿಗೆ ಅದು ನಮ್ಮದು ಅಂತಿಮ ಸೋಲಾಗುತ್ತಿತ್ತು. ಈ ಅಲೆಗಳ ನಡುವೆ ನಮ್ಮ ಆಟವೇನು ನಡೆಯದು ಎಂದು ಮನೆಕಡೆ ಹೊರಡಲು ಅನುವಾಗುತ್ತಿದ್ವಿ.
ನಮಗೆ ಯಾವತ್ತಿಗೂ ಖುಷಿಕೊಡುವ ವಿಷಯವೆಂದರೆ ಸಮುದ್ರದಲ್ಲಿ ನೀರಿನಲ್ಲಿ ಇಳಿದಾಗ ತೆರೆಗಳು ಒಂದರ ಮೇಲೊಂದರಂತೆ ಎರಗಿ ಆದು ಬಂದು ಅದು ನಮ್ಮನ್ನು ದಾಟಿಕೊಂಡು ದಡಕ್ಕೆ ಮುತ್ತಿಕ್ಕಿ ಮತ್ತೆ ಹಿಂತಿರಿಗುವಾಗ ,
ನೆಲಕ್ಕೆ ಊರಿರುವ ನಮ್ಮ ಪಾದಗಳ ಬೆರಳುಗಳ ಸಂದಿಯಿಂದ ಮರಳು ಕೂಚ್ಸಿಕೊಂಡು ಹೋಗುವ ಅನುಭವವಿದೆಯಲ್ಲ ಅದು ಮನಸ್ಸಿಗೆ ಅತ್ಯಂತ ಖುಷಿ ಕೊಡುವ ವಿಚಾರವಾಗಿತ್ತು.
ಮುಂದೆ ಬುದ್ದಿ ಬೆಳೆದಂತೆ ಸಮುದ್ರದ ಮೇಲಿನ ವ್ಯಾಮೋಹ ಇನ್ನು ಹೆಚ್ಚಾಗಿತ್ತು. ಸ್ವಭಾವತ: ಮೌನಿಯಾದ ನಾವು ಮನುಸ್ಸು ಕಸಿವಿಸಿಗೊಂಡ ಕ್ಷಣದಲ್ಲಿ ಮನಸ್ಸಿಗೆ ಸಾಂತ್ವನ ಹೇಳಲು ಸಮುದ್ರದ ಕಡೆಗೆ ಮುಖ ಮಾಡುತ್ತಿದ್ವಿ.
ಸಮುದ್ರ ತೀರಕ್ಕೆ ಬಂದಾಗ ಅಲ್ಲ್ಲಿನ ತಂಗಾಳಿಯು ಮನಸ್ಸಿಗೆ ಹಿತ ನೀಡುತ್ತೆ. ಎತ್ತ ಕಣ್ಣು ಹಾಯಿಸಿದರು ನೀಲ ವರ್ಣದ ಅಗಾಧ ನೀರ ರಾಶಿ , ನೀರ ಮೇಲೆ ದ್ಯೖತ್ಯ ಅಲೆಗಳ ನೃತ್ಯಲೀಲೆ ,
ಸೂರ್ಯನ ಕೆಂಬಣ್ಣ ಬಾನಿನಲ್ಲಿ ರಂಗಾಗಿ ನೀರ ಮೇಲೂ ಪ್ರತಿಫಲಿಸುತ್ತಿದೆ. ಸಮುದ್ರದ ಭೋರ್ಗರೆಯುವ ಶಬ್ದ ಬೇರೆ ಇವು ನಿಮಗೆ ಬೇರೆ ಆಲೋಚನೆಗೆ ಅವಕಾಶ ಕೊಡದೆ ನಿಮ್ಮ ಆಲೋಚನೆಗಳ ಮೇಲೆ ಪ್ರಭುತ್ವ ಸಾಧಿಸಿ
ನಿಮ್ಮನ್ನು ಮೌನಕ್ಕೆ ಶರಣಾಗುವಂತೆ ಮಾಡುತ್ತದೆ. ಎಲ್ಲರೂ ತೀರದಲ್ಲಿ ಮೌನಿಯಾಗುತ್ತಾರೆ ಮತ್ತೆ ಮಾತನಾಡುವ ಸರದಿ ಅಲೆಗಳ ಶಬ್ದಕ್ಕೆ ಮಾತ್ರ.
ಉದ್ಯೋಗ ಅರಸಿಕೊಂಡು ಗಲ್ಫ್ ದೇಶಕ್ಕೆ ಹೋಗಿ ಅಲ್ಲಿ ನೆಲೆ ನಿಂತ ಮೇಲೆ ಬಹುಶಃ ಕೆಲಸದ ಒತ್ತಡದಿಂದ ಮತ್ತೆ ಕಡಲಿನ ಕಡೆ ಮುಖ ಮಾಡಲಾಗಲ್ಲಿಲ್ಲ. ಆದು ಅಲ್ಲದೆ ಪರದೇಶದಲ್ಲಿ
ಪರಕೀಯರಾಗಿ ಬದುಕುವುದು ಮನಸಿಗೆ ಹಿಡಿಸದ ವಿಷಯವಾಗಿತ್ತು. ಇತ್ತೀಚೆಗೆ ಏಕೋ ಮನಸ್ಸು ಸೋಮಾರಿಯಾಗಿ ಅನಿಸಿಬಿಟ್ಟಿದೆ, ಯಾವಾಗಲೂ ಏನೋ ಒಂದು ವಸ್ತು ಕಳೆದುಕೊಂಡವರಂತೆ ಮನಸ್ಸಿಗೆ ಭಾಸವಾಗುತ್ತಿತ್ತು. ಕೊನೆಗೆ
ಯಥಾ ಪ್ರಕಾರ ಕಡಲ ನೆನಪಾಯಿತು ಅದುವೇ ನನ್ನ ಮನಸ್ಸಿಗೆ ಸಾಂತ್ವನ ಹೇಳುವ ತಾಣ. ಒಡನೆಯೇ ಕಛೇರಿಯ ಕೆಲಸಗಳೆಲ್ಲ ಮುಗಿಸಿ ಸೀದಾ ಕಡಲಿಗೆ ಮುಖ ಮಾಡಿ ಹೊರಟೆ. ಕಡಲನ್ನು ನೋಡುತ್ತಲೇ ನನ್ನ ಮನಸು ಅರಳತೊಡಗಿತ್ತು.
ನೆನಪಿನ ಸುರುಳಿ ಒಂದೊಂದಾಗಿ ಬಿಚ್ಚತೊಡಗಿತ್ತು, ಊರಿನ ಶಾಲೆ , ಸೂಯಽಸ್ತಮಾನ , ಗೆಳೆಯರ ಜೊತೆ ಸಮುದ್ರ ತೀರದಲ್ಲಿ ಆಡಿದ ನೆನಪು ಕಣ್ಣೆದುರಿಗೆ ಬಂದವು. ಮನಸ್ಸು ಮತ್ತೆ ನೆನಪಿಂದ ಭಾರವಾಯ್ತು ಮತ್ತದೇ ತಂಗಾಳಿ
ಸೋಕಿ ಮೌನಕ್ಕೆ ಶರಣಾಯಿತು. ಇದರಲ್ಲಿ ಒಂದು ವ್ಯತ್ಯಾಸವೆಂದರೆ ಸೂಯಽಸ್ತಮಾನ ಇರಲ್ಲಿಲ್ಲ ಏಕೆಂದರೆ ನಾವು ಅರಬ್ಬೀ ಸಮುದ್ರದ ಇನ್ನೊಂದು ಮಗ್ಗುಲ್ಲಲ್ಲಿ ಇದ್ದೆವು ಅರ್ಥಾತ್ ಗಲ್ಪ್ ದೇಶದ ಪೂರ್ವ ತೀರದಲ್ಲಿ ಇದ್ದೆ.
ಮತ್ತೆ ನಾಳಿನ ಕೆಲಸದ ನೆನಪಾಗಿ ಅಪಾರ್ಟ್ಮೆಂಟ್ ಕಡೆ ಭಾರವಾದ ಹೆಜ್ಜೆ ಇಡುತ್ತಾ ಮತ್ತೆ ಹಿಂತಿರುಗಿ ನೋಡಿದೆ ಎಲ್ಲಿಯಾದರೂ ನನ್ನ ತೀರದ ಜನರು ಕಾಣ ಸಿಗುತ್ತಾರೆಂದು.
ಪೋಟೊ ಕೃಪೆ ಆಲ್ ಫ್ರಿ ಡೌನ್ ಲೋಡ್:ವೆಬ್ ಸಟ್
Comments
ಉ: ತೀರದ ಕನಸು
In reply to ಉ: ತೀರದ ಕನಸು by makara
ಉ: ತೀರದ ಕನಸು
ಉ: ತೀರದ ಕನಸು
In reply to ಉ: ತೀರದ ಕನಸು by Shashikant P Desai
ಉ: ತೀರದ ಕನಸು
In reply to ಉ: ತೀರದ ಕನಸು by Shashikant P Desai
ಉ: ತೀರದ ಕನಸು
In reply to ಉ: ತೀರದ ಕನಸು by Chakravarthi
ಉ: ತೀರದ ಕನಸು