ದ ಪವರ್ ಆಫ್ ಕಂಪೊಂಡಿಂಗ್

ದ ಪವರ್ ಆಫ್ ಕಂಪೊಂಡಿಂಗ್

ನಾನು ವೈದ್ಯ ವೃತ್ತಿಯನ್ನು ಪ್ರಾರಂಭಿಸಿ ಸುಮಾರು 4 ವರ್ಷಗಳು ಮುಗಿದಿವೆ. ನನ್ನ ವೃತ್ತಿಯ ಪ್ರಾರಂಭದ ಸಮಯದಲ್ಲಿ ನನ್ನ ಅಣ್ಣ ಹೇಳಿದ ಕಿವಿಮಾತು ಜ್ಞಾಪಕಕ್ಕೆ ಬಂತು. ಅದನ್ನು ಸಂಪದದಲ್ಲಿ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನ.
ಆ ಸಮಯದಲ್ಲಿ ಆತ ನನಗೆ ಬೇಗ ಹಣ ಸಂಗ್ರಹ ಹಾಗೂ ಉಳಿಕೆಯ ಒಳ ಮರ್ಮವನ್ನು ಅತ್ಯಂತ ಸುಂದರವಾಗಿ ಸುಲಭವಾಗಿ ವರ್ಣಿಸಿ ಮನದಟ್ಟು ಮಾಡಿದ್ದ. ಅದನ್ನು ನಾನು ಮುಖ್ಯವಾಗಿ ಯುವ ಜನಾಂಗದವರಲ್ಲಿ ಅರಿವು ಮುಡಿಸುವ ಒಂದು ಚಿಕ್ಕ ಪ್ರಯತ್ನ.

 “ದ ಪವರ್ ಆಫ್ ಕಂಪೌಂಡಿಗ್”

ರಾಮ ಮತ್ತು ಶಾಮ ಎಂಬ ಸ್ನೇಹಿತರು ತಮ್ಮ ವೃತ್ತಿಜೀವನವನ್ನು 1970ರಂದು ಒಂದೇ ದಿನ ಆರಂಭಿಸಿದರು. ಇಬ್ಬರ ಸಂಬಳವು ಹೆಚ್ಚು ಕಡಿಮೆ ಒಂದೇ ಸಮನಾಗಿತ್ತು. ರಾಮ ಪ್ರಥಮ ಸಂಬಳದ 5000ರೂ ಅನ್ನು ಒಂದು ಬ್ಯಾಂಕಿನ ಖಆ ಖಾತೆಯಲ್ಲಿ ಜಮಾಮಾಡಲು ತೊಡಗಿದನು. ಆತ ಇದೇ ರೀತಿ ಪ್ರತಿ ತಿಂಗಳು 5000ರೂ 5 ವರ್ಷದವರೆಗೆ (1970-1975ರ ವರೆಗೆ) ಹೂಡಿಕೆ ಮಾಡಿದನು. ಆ ನಂತರ ಆತನಿಗೆ ಸಂಸಾರಗಳ ತಾಪತ್ರಯ, ಮನೆ ಖರೀದಿ ಇತ್ಯಾದಿಗಳಿಂದ ಮುಂದೆ ಹಣ ಹೂಡಿಕೆ ಕಷ್ಟವಾಯಿತು. ಆದರೆ ರಾಮ ಐದು ವರ್ಷ ಪೂರ್ತಿಯದಾ ನಂತರ ಬಂದ ಹಣವನ್ನು ಉಪಯೋಗಿಸದೇ ಅದೇ ಬ್ಯಾಂಕನಲ್ಲಿ ಈಆ ಖಾತೆಯಲ್ಲಿ ಜಮಾ ಮಾಡಿದನು.

ಶಾಮ ತನ್ನ ಸಂಬಳದ ಹಣದಲ್ಲಿ ಏನನ್ನೂ ಉಳಿಸದೆ ಐದು ವರ್ಷ(1970-1975ರ ವರೆಗೆ)  ದುಂದು ವೆಚ್ಚಮಾಡಿದನು. ಐದು ವರ್ಷಗಳ ಬಳಿಕ ಜ್ಞಾನೋದಯವಾಗಿ ಮುಂದಿನ ಐದು ವರ್ಷಗಳವರೆಗೆ (1976-1980) ರಾಮನಂತೆ ತಿಂಗಳಿಗೆ 5000ರೂ ಹಣವನ್ನು ಖಆ ಖಾತೆಯಲ್ಲಿ ಜಮಾ ಮಾಡಿದನು. ಶಾಮನಿಗೂ 5 ವರ್ಷಗಳ ನಂತರ ಕೆಲವು ತೊಂದರೆಗಳಿಂದ ಹೂಡಿಕೆ ಮುಂದುವರೆಸಲು ಸಾಧ್ಯವಗಲಿಲ್ಲ ಆದರೆ ಹೂಡಿಕೆಯಿಂದ ಬಂದ ಹಣವನ್ನು ಉಪಯೋಗಿಸದೆ ಅದೇ ಬ್ಯಾಂಕನಲ್ಲಿ ಈಆ ಖಾತೆಯಲ್ಲಿ ಜಮಾ ಮಾಡಿದನು.

ಇಲ್ಲಿ ನಾವು ಗಮನಿಸಬೇಕಾದ ಅಂಶ ರಾಮನಿಗಿಂತ ಶಾಮನು 5 ವರ್ಷ ನಂತರ ಹೂಡಿಕೆ ಪ್ರಾರಂಭ ಮಾಡಿದನು.

 
ರಾಮ

5 ವರ್ಷ ಖಆ ಖಾತೆಯಲ್ಲಿ ಹೂಡಿದ ಹಣ – 3 ಲಕ್ಷ ರೂ (1970-1975ರ ವರೆಗೆ)
5 ವರ್ಷದ ನಂತರ (1975ರಲ್ಲಿ) ಬಡ್ಡಿ (9%) ಸೇರಿಸಿ ಆತನಗೆ ದೊರೆತ ಹಣ – 3,79,278.00
3,79,278.00 ಮೂಲ ಧನವಾಗಿ ಮುಂದಿನ 25 ವರ್ಷಗಳ ಕಾಲ (1976-2000) ಈಆ ಖಾತೆಯಲ್ಲಿ ಜಮಾ ಮಾಡಿದನು.
2000ನೇ ವರ್ಷದಲ್ಲಿ ರಾಮನಿಗೆ ದೊರೆತ ಹಣ ಬಡ್ಡಿ (9%) ಸೇರಿಸಿ - 35,09,858.00

ಶಾಮ
5 ವರ್ಷ ಖಆ ಖಾತೆಯಲ್ಲಿ ಹೂಡಿದ ಹಣ – 3 ಲಕ್ಷ ರೂ (1976-1980ರ ವರೆಗೆ)
5 ವರ್ಷದ ನಂತರ (1980ರಲ್ಲಿ) ಬಡ್ಡಿ (9%) ಸೇರಿಸಿ ಆತನಗೆ ದೊರೆತ ಹಣ – 3,79,278.00

 

3,79,278.00 ಮೂಲ ಧನವಾಗಿ ಮುಂದಿನ 20 ವರ್ಷಗಳ ಕಾಲ (1981-2000) ಈಆ ಖಾತೆಯಲ್ಲಿ ಜಮಾ ಮಾಡಿದನು.

2000ನೇ ವರ್ಷದಲ್ಲಿ ಶಾಮನಿಗೆ ದೊರೆತ ಹಣ ಬಡ್ಡಿ (9%) ಸೇರಿಸಿ - 22,49,175.00

 
ಯುವಕರು ಗಮನಿಸಬೇಕಾದ ಅಂಶಗಳು

1. ಇಲ್ಲಿ ರಾಮನಿಗಿಂತ ಶಾಮನು 5 ವರ್ಷ ನಂತರ ಹೂಡಿಕೆ ಪ್ರಾರಂಭ ಮಾಡಿದ್ದ. ಆದರೆ ಇಬ್ಬರ ವೃತ್ತಿ ಜೀವನದ 30 ವರ್ಷಗಳ ನಂತರ ಶಾಮನಿಗಿಂತ ರಾಮನಲ್ಲಿ 12,60,683.00 ರೂ ಹೆಚ್ಚಗಿನ ಹಣ ಸಂಗ್ರಹವಾಗಿತ್ತು.
2. ರಾಮನು ಹೂಡಿದ ಹಣ 3 ಲಕ್ಷ ರೂ. ಆದರೆ 30 ವರ್ಷಗಳ ನಂತರ ಆತನಲ್ಲಿ ಇದ್ದ ಹಣ 35,09,858.00 ರೂ. ಅಂದರೆ 12 ಪಟ್ಟು ಹಣ ಸಂಗ್ರಹಣೆಯಾಗಿರುವುದು. ಇದನ್ನೇ “ದ ಪವರ್ ಆಫ್ ಕಂಪೌಂಡಿಗ್” ಎನ್ನುವುದು.
ಹೀಗಾಗಿ ವೃತ್ತಿಜೀವನ ಆರಂಭವಾಗುತ್ತಿದ್ದಂತೆಯೇ ಹಣ ಹೂಡಿಕೆಯನ್ನು ಪ್ರಾರಂಭಿಸಿ. ಕೇವಲ 1000 ರೂ. ತಿಂಗಳಿಗೆ ಆಗಿದ್ದರು ಪರವಾಗಿಲ್ಲ.

ನಿಮ್ಮಲ್ಲಿ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ದಯವಿಟ್ಟು ಪ್ರತಿಕ್ರಿಯೆಯಲ್ಲಿ ತಿಳಿಸಿ. ನಿಮ್ಮ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತೇನೆ.

ಚಿತ್ರ ಕೃಪೆ: http://amourtan.com/

Comments

Submitted by Manjunatha D G Tue, 09/10/2013 - 18:09

ಸಣ್ಣ‌ ಸಣ್ಣ‌ ಉಳಿತಾಯದಿಂದ‌ ಬದುಕಿನಲ್ಲಿ ದೊಡ್ಡ‌ ದೊಡ್ಡ‌ ಕನಸುಗಳನ್ನು ನನಸಾಗಿಸಿಕೊಳ್ಳಬಹುದು. ಆದರೆ ಹೆಚ್ಚಿನ‌ ಬಡ್ಡಿಯಾಸೆಗೆ ಹೋಗಬಾರದು. ಬ್ಯಾಂಕ್ ಗಳಲ್ಲಿರುವ‌ ರಿಕರಿಂಗ್ ಡೆಪಾಜಿಟ್ ತುಂಬಾ ಒಳ್ಳೆಯದು.