ನಾಸ್ತಿಕ ಯಾರು? ಹೇಗೆ?

ನಾಸ್ತಿಕ ಯಾರು? ಹೇಗೆ?

ಎವಲ್ಯೂಷನ್ ಬಯಾಲಜಿಸ್ಟ್ ಆಗಿರುವ ಡಾ|| ರಿಚರ್ಡ್ ಡಾಕಿನ್ಸ್ ನಾಸ್ತಿಕರೂ ಹೌದು. ಅವರ ಪುಸ್ತಕ ಓದಿದವರಿಗೆ, ಅವರ ಮಾತುಗಳನ್ನು ಕೇಳಿದವರಿಗೆ ಅವರು ಯಾಕೆ ನಾಸ್ತಿಕರು ಮತ್ತು ಅದನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಬೇಕಾಗಿಲ್ಲ.

ಡಾಕಿನ್ಸರ ಪುಸ್ತಕಗಳನ್ನು ಆಧರಿಸಿದ ಡಾಕ್ಯುಮೆಂಟರಿಯ ಡಿವಿಡಿಗಳ ಬಾಕ್ಸ್ ಸೆಟ್ ಒಂದನ್ನು ಕೊಂಡಾಗ ಅದರ ಒಂದು ಡಿವಿಡಿಯ ಮೇಲೆ "facts about atheism" ಈ ಕೆಳಕಂಡಂತೆ ಇದೆ.

ನಾಸ್ತಿಕತೆಯ ಬಗ್ಗೆ ಕೆಲವು ಸಂಗತಿಗಳು

  • ನಾಸ್ತಿಕತೆ ಅನ್ನೋದು ದೇವರು ಮತ್ತು ಅಲೌಕಿಕ ಶಕ್ತಿಗಳ ಮೇಲಿನ ನಂಬಿಕೆಯ ತಿರಸ್ಕಾರ
  • ನಾಸ್ತಿಕರು ಲೋಕದ ಇರುವಿಕೆಯನ್ನು ವಿವರಿಸಲು ದೇವರನ್ನು ಬಳಸುವುದಿಲ್ಲ
  • ನಾಸ್ತಿಕರ ಪ್ರಕಾರ ಬದುಕಿನಲ್ಲಿ ದೇವರ ಮತ್ತು ಪವಿತ್ರಗ್ರಂಥಗಳ ನೆರವಿಲ್ಲದೆ ನೈತಿಕ ನಿಯಮಗಳನ್ನು ರೂಪಿಸಿಕೊಳ್ಳಬಹುದು
  • ಹಲವು ಸಲ ನಾಸ್ತಿಕರೂ ಕೂಡ ಧರ್ಮೀಯರು ಪಾಲಿಸುವ ನೈತಿಕ ನಿಯಮಗಳನ್ನೇ ಪಾಲಿಸುತ್ತಾರೆ, ಆದರೆ ಒಳಿತು ಮತ್ತು ಕೆಡಕನ್ನು ದೈವತ್ವದ ನೆರವಿಲ್ಲದೆ ನಿರ್ಧರಿಸಿಕೊಂಡಿರುತ್ತಾರೆ.
  • ನಾಸ್ತಿಕರಾಗಿಯೂ ಧಾರ್ಮಿಕರಾಗಿರಲು ಸಾಧ್ಯವಿದೆ (ಬೌದ್ಧ ಧರ್ಮ ಇದಕ್ಕೊಂದು ಉದಾಹರಣೆ)
Rating
Average: 5 (1 vote)

Comments