ಹೀಗೊಂದು ರೀತಿಯ ಕೋರ್ಟ ಆದೇಶ ಪಾಲನೆ...!

ಹೀಗೊಂದು ರೀತಿಯ ಕೋರ್ಟ ಆದೇಶ ಪಾಲನೆ...!

ಚಿತ್ರ

' ಎಪಲ್' ಹಾಗೂ' ಸ್ಯಾಮಸಂಗ್'ಮೊಬೈಲ್ ಕಂಪನಿಗಳು ಯಾರಿಗೆ ತಾನೆ ಪರಿಚಯವಿಲ್ಲಾ ? ಈ ಪ್ರಖ್ಯಾತ ಕಂಪನಿಗಳ ನಡುವೆ ಇರುವ ವ್ಯವಹಾರಿಕ ದ್ವೇಷ ಇತ್ತೀಚಿನದಲ್ಲಾ.

 ಯಾವಾಗಲೂ ತಮ್ಮತಮ್ಮ ಹೊಸ ಮಾದರಿಯ ಐ ಫೊನಗಳು ,ಸ್ಮಾರ್ಟ ಫೊನ್ ಗಳ ಬಿಡುಗಡೆಗೆ ಪೈಪೋಟಿ ನಡೆಸುತ್ತಲೆ ಇರುತ್ತವೆ.

 ಕೆಲವು ತಿಂಗಳಗಳ ಹಿಂದೆ  ಹೀಗೆ ಮಾರುಕಟ್ಟೆಗೆ ' ಸ್ಯಾಮಸಂಗ್ 'ಪರಿಚಿಯಿಸಿದ ಒಂದು ಮಾದರಿಯ ಫೊನ್, ತಾನು ಬಿಡುಗಡೆ ಮಾಡಿರುವ ಆವೃತ್ತಿಯ ನಕಲು ಮಾಡಿದೆ ಎಂದು ಕೋರ್ಟಿನಲ್ಲಿ

'ಸ್ಯಾಮಸಂಗ'ವಿರುದ್ಧ ' ಎಪಲ್ 'ಕಂಪನಿಯು ದಾವೆ ಹೂಡಿ ಜಯ ಗಳಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ.ಹಾಗಾಗಿ ಈ ಕಟ್ಲೆಯ ತಿರ್ಮಾನ ಮಾಡಿ ಕೋರ್ಟ 'ಸ್ಯಾಮಸಂಗ್' ಕಂಪನಿಗೆ ದಂಡ ವಿಧಿಸಿ 

ಒಂದು ಬಿಲಿಯನ್ ಡಾಲರ್ ನ್ನು( 100 ಕೋಟಿ ಡಾಲರ್) ಪರಿಹಾರವಾಗಿ ನೀಡಲು ಆದೇಶಿಸಿತು.

 ಈ ತಿಂಗಳ ದಿನಾಂಕ 23 ರಂದು ಬೆಳಿಗೆ 'ಎಪಲ್' ಕಂಪನಿ ಮುಖ್ಯಕಛೇರಿಯ ಬಳಿ 30 ಟ್ರಕ್ ಗಳು ಬಂದು ನಿಂತಾಗ ಅಲ್ಲಿನ ಸೆಕೂರಿಟಿ ಸಂಸ್ತೆಗೆ ಎನೋ ಗಾಭರಿ! .ಎಲ್ಲೋ ದಾರಿತಪ್ಪಿ ಇಲ್ಲಿಗೆ ಬಂದಿವೆ 

ಎಂದು ಅವರು ಯೋಚಿಸುವಷ್ಟರಲ್ಲಿ 'ಸ‍್ಯಾಮಸಂಗ್' ಕಂಪನಿಯ ಸಿ.ಇ.ಒ ರು 'ಎಪಲ್' ಕಂಪನಿಯ ಸಿ.ಇ.ಒ ಅವರಿಗೆ  ಫೊನಾಯಿಸಿ ನಮ್ಮ ಸಂಸ್ತೆಯಿಂದ ತಮ್ಮ ಸಂಸ್ತೆಗೆ ನಿಡಬೇಕಾಗಿರುವ

ಪರಿಹಾರ ಮೊತ್ತವನ್ನು ಕಳಿಸಿದ್ದೇವೆ ಎಂದು ತಿಳಿಸಿದರು.

ಈಗ ಬೆಸ್ತು ಬೀಳುವ ಸಮಯ ' ಎಪಲ್ ' ಕಂಪನಿಯ ಮುಖ್ಯಸ್ಥರುಗಳದಾಗಿತ್ತು. ಕಾರಣ ಏನು ಗೋತ್ತೆ, ಟ್ರಕ್ಕುಗಳ ತುಂಬಾ 5 ಸೆಂಟ್ ನ ನಾಣ್ಯಗಳಿದ್ದವು.ಅವುಗಳನ್ನು ಕ್ರೇಟರ್ ಗಳಲ್ಲಿ ಸುರಿದು,

ತಾವು ಒಪ್ಪಂದದಂತೆ ತಮಗೆ ನೀಡುವ ಹಣವನ್ನ ಕೊಟ್ಟು ಕೋರ್ಟನ ಆದೇಶದಂತೆ ನಡೆದು ಕೊಂಡಿದ್ದೇವೆ ಎಂದು' ಸ್ಯಾಮಸಂಗ' ಕಂಪನಿಯ ಸಿ.ಇ.ಒ ತಿಳಿಸಿದ್ದಾರೆ.

ನಾಣ್ಯಗಳನ್ನು ಎಣಿಸಿ  ಒಂದು ಬಿಲಿಯನ್ ಡಾಲರ್ ಸರಿ ಇದೇಯೆ ಎಂದು ನೋಡುವ ಕಾರ್ಯ 'ಎಪಲ್ 'ಕಂಪನಿಯ ಮುಖ್ಯಸ್ಥರಿಗೆ  ಒಂದು ಅವಮಾನದ ಸಂಗತಿ ಯಾಗಿರಬಹುದೆ?

ಹೇಗಿದೆ  ನೋಡಿ ದ್ವೇಷ ಸಾಧಿಸುವ ಪರಿ ,ಅಲ್ಲವೆ?

ಚಿತ್ರ ಕೃಪೆ: ನ್ಯೂಸ್-ಹೋಂಡ.ನೆಟ್

ಲೇಖನ ಆಧಾರ :Samsung pays Apple $1 Billion sending 30 trucks full of 5 cent coins | News Hound

http://news-hound.ne...

Rating
No votes yet

Comments

Submitted by swara kamath Sat, 09/28/2013 - 15:52

In reply to by krishnarajb

ಫೆಸ್ ಬುಕ್ ನಲ್ಲಿ ನಿನ್ನೆಯ ದಿನ ಓದಿದ ನಂತರ ಈ ರೊಚಕ ಸುದ್ದಿಯ ಮೂಲ ಹುಡಿಕಿದೆ. ಇದನ್ನು 'ಸಂಪದ' ಸ್ನೇಹಿತರೊಂದಿಗೆ ಹಂಚಿಕೊಂಡರೆ
ಹೇಗೆ? ಎಂದು ಲೇಖನ ಪ್ರಕಟಿಸಿದೆ.ಲೇಖನಕ್ಕೆ ಸಂಬಂಧಿಸಿದ ಲಿಂಕ ಅನ್ನು ಸಹ ಬರೆದಿದ್ದೇನೆ. ನೀವು ಕೊಟ್ಟ ಲಿಂಕ ನೋಡಲಾಗುತ್ತಿಲ್ಲಾ. ಸೆಕೂರಿಟಿ ವಾರ್ನಿಂಗ್ ಬರುತ್ತಿದೆ. ವಂದನೆಗಳು........ರಮೇಶ್ ಕಾಮತ್

Submitted by makara Sat, 09/28/2013 - 08:03

ಕಾಮತ್ ಸರ್‌,
ನಮಸ್ಕಾರಗಳು. ಬಹಳ ದಿನಗಳ ನಂತರ ಸಂಪದದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಂತೋಷವೆನಿಸುತ್ತಿದೆ. ನೀವು ಬರೆದ ವಿಚಾರ ನಿಜವೋ ಸುಳ್ಳೋ ಅದು ಬೇರೆ ವಿಚಾರ ಆದರೆ ವಿಷಯವಂತೂ ಸ್ವಾರಸ್ಯಕರವಾಗಿದೆ. ಅವರವರ ತಾಕತ್ತುಗಳನ್ನು ಪ್ರದರ್ಶಿಸಿಕೊಳ್ಳಲು ಆ ಕಂಪನಿಗಳೋ ಅಥವಾ ಆ ಕಂಪನಿಗಳ ಬಗೆಗೆ ಒಲವಿರುವವರೋ ಹರಿಯಬಿಟ್ಟಿರುವ ದಂತಕಥೆಯಿದಾಗಿರಬಹುದು.
ವಂದನಗೆಳೊಂದಿಗೆ, ಶ್ರೀಧರ್ ಬಂಡ್ರಿ

Submitted by swara kamath Sat, 09/28/2013 - 16:30

In reply to by makara

ಶ್ರೀಧರ ಬಂಡ್ರಿಯವರೆ ತಮ್ಮ ಈ ಆಪ್ತ ಪ್ರತಿಕ್ರಿಯೆಗೆ ನಮಸ್ಕಾರಗಳು.

ತುಂಬಾ ದಿನಗಳಿಂದ ನಾನು ಸಂಪದ ಲೇಖನ ಗಳನ್ನು ಓದುತ್ತಿರುತ್ತಿದ್ದರೂ ಪ್ರತಿಕ್ರಿಯೆಗಳನ್ನು ಬರೆಯುತ್ತಿರಲಿಲ್ಲಾ. ಆ ಉದಾಸ ಮನೋಭಾವ ಯಾಕೆ ಉಂಟಾಯಿತೊ? ನನಗೇ ಬೇಸರ ಎನಿಸಿತು.ನಾನು ಬರೆದ ಈ ಲೇಖನಕ್ಕೆ ನನಗೆ ಇನ್ನಷ್ಟು ಮಾಹಿತಿ ದೊರಕಿದ ಪ್ರಕಾರ 'ಸ್ಯಾಮಸಂಗ್' ಕಂಪನಿಗೆ 'ಪೆಟೆಂಟ'ಕುರಿತು ಸೌತ್ ಕೊರಿಯಾದಲ್ಲಿ ಮಾತ್ರ ಸೋಲುಂಟಾಯಿತು.ಹಾಗಾಗಿ ಅವರು ಅಷ್ಟು ತೀವ್ರ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಯಲ್ಪಟ್ಟಿದೆ .ಅದರ ಸತ್ಯಾಸತ್ಯೆತೆ ಅಥವ ಸುದ್ದಿ ನಿರಾಕರಣೆ ಬಗ್ಗೆ ನಾನು ಬರೆದ ಲಿಂಕ ನಲ್ಲಿ ಇಂದು ಕಾಣುತ್ತಿಲ್ಲಾ. ವಂದನೆಗಳು......ರಮೇಶ್ ಕಾಮತ್

Submitted by Shreekar Mon, 09/30/2013 - 15:48

In reply to by kavinagaraj

ಕಾಮತ್ ಮಾಮ್,

ನಿಮ್ಮ ಬರಹ ಚೆನ್ನಾಗಿದೆ.

ಕತೆ ಮಾತ್ರ ಸುಳ್ಳು ಎಂದು hoax -slayer.com ವಿವರವಾಗಿ ಹೇಳಿದೆ.

ಇನ್ನು, ಇವಿಷ್ಟು ನಾಣ್ಯಗಳನ್ನು ಎಣಿಸುವದಕ್ಕೆ ಎಷ್ಟು ಕಾಲ ಬೇಕು ಎಂದುಕೊಂಡರೆ, ಅದೇನೂ ಅಷ್ಟು ಕಷ್ಟವಲ್ಲ -- ತೂಕದ ಮೇಲೆ ಇಲೆಕ್ಟ್ರೋನಿಕ್ ತಕ್ಕಡಿಯಲ್ಲಿ ತೂಗಿ ಎಷ್ಟುಮೊತ್ತವೆಂದು ತಿಳಿಯುವುದು ಸುಲಭ

Submitted by swara kamath Mon, 09/30/2013 - 19:51

In reply to by Shreekar

ಆಹ್ಹಾ! ತಾವು ಕಾಮತ್ ಮಾಮ್ ಅಂತ ಬರೆದಾಗಲೇ ಮನಸ್ಸಿಗೆ ಖುಷಿ ಕೊಟ್ಟಿತು ಶ್ರೀಕರ್ ಅವರೆ,

ನನಗೂ ಸುಳ್ಳು ಅನಿಸಿದರೂ ,ಮೇಲಿನ ಲಿಂಕ ನಲ್ಲಿ ಬರೆದ ಸುದ್ಧಿಯು ತುಂಬಾ ರೋಚಕತೆಯಿಂದ ಕೂಡಿತ್ತಾದ್ದರಿಂದ ಸಂಪದ ಸ್ನಹಿತರ ಅಭಿಪ್ರಾಯಗಳು ಹೊರ ಹೊಮ್ಮಲೆಂದು ಈ ಲೇಖನ ಹಾಕಿದೆ....... ವಂದನೆಗಳು.