ಮೈಸೂರಿನ - "ಪರಂಪರೆ"

ಮೈಸೂರಿನ - "ಪರಂಪರೆ"

ಚಿತ್ರ

ಸಾಮಾನ್ಯವಾಗಿ ಒಂದು ಮಾತನ್ನು   ಹಲವರ ಬಾಯಲ್ಲಿ ಇತ್ತೀಚಿನ ದಿನಗಳಲ್ಲಿ ಕೇಳ ಬಹುದು " ಯಾರಿಗೆ ಬೇಕ್ ಸಾರ್ ವೇದ,ಉಪನಿಷತ್ತು? ಅದರ ಬದಲು  ಆರ್ಕೆಸ್ಟ್ರಾ ಇಡಿಸಿ,ಆಗ ನೋಡಿ ಜನ ಹೇಗೆ ಸೇರ್ತಾರೇ ಅಂತಾ!" ಈ ಮಾತು ಸುಳ್ಳಾ? ಆದರೆ ಈ ಮಾತನ್ನು ಸುಳ್ಳುಮಾಡುವ ಅದ್ಭುತ ಪ್ರಯತ್ನ ಒಂದು ಮೈಸೂರಿನಲ್ಲಿ    ನಡೆದಿದೆ.ಅದರ ಹೆಸರು "ಪರಂಪರೆ" 

ಹೆಸರೇ ಹೇಳುವಂತೆ ನಮ್ಮ  ಧರ್ಮ, ಸಂಸ್ಕೃತಿ ಪರಂಪರೆಯನ್ನುಳಿಸಲು ಒಂದು ಪ್ರಯತ್ನ. ವರ್ಷದಲ್ಲಿ ಹಲವಾರು ಉಪನ್ಯಾಸಗಳು. ರಾಮಾಯಣ , ಮಹಾಭಾರತ, ಗೀತೆ, ವೇದ, ಉಪನಿಷತ್ತು.......ಹೀಗೆ ಹಲವು ವಿಷಯಗಳ ಬಗ್ಗೆ ಉಪನ್ಯಾಸದ ಏರ್ಪಾಡು ಮಾಡುತ್ತಾರೆ. "ಪರಂಪರೆ" ಸಂಸ್ಥೆಗೆ 1200 ಕ್ಕಿಂತ ಹೆಚ್ಚು ಸದಸ್ಯರಿದ್ದಾರೆ. ಎಲ್ಲರ ವಿಳಾಸ, ಮೊಬೈಲ್ ನಂಬರ್, ಈ ಮೇಲ್ ವಿಳಾಸವು ಅದರ ಸಂಯೋಜಕರಾದ ಶ್ರೀ ಕೃಷ್ಣಕುಮಾರರ ಹತ್ತಿರವಿದೆ. ಒಂದು ಕಾರ್ಯಕ್ರಮವನ್ನು ಯೋಜಿಸಿದನಂತರ ಈ ಎಲ್ಲಾ 1200 ಜನರಿಗೆ ಆಮಂತ್ರಣವು  ಈಮೇಲ್ , SMS,ಮತ್ತು ಅಂಚೆ ಮೂಲಕ ತಲುಪುತ್ತದೆ. ಕೆಲವು ಸಂಯೋಜಕರಿಗೇ ವಾಪಸ್ ಕೂಡ ಬರುತ್ತವೆ. ಆದರೂ ಸುಮಾರು 700 ರಿಂದೆ 800 ಜನ ಸದಸ್ಯರು ತಪ್ಪದೆ ಸಮಯಕ್ಕೆ ಸರಿಯಾಗಿ ಹಾಜರಾಗಿ ಉಪನ್ಯಾಸವನ್ನು ಕೇಳುತ್ತಾರೆ.

                    ಇಂತಾ ಒಂದು ಕಾರ್ಯಕ್ರಮದಲ್ಲಿ ಹಾಸನದ ವೇದ ಭಾರತಿಯ ಸದಸ್ಯರು ಪಾಲ್ಗೊಳ್ಳುವ ಒಂದು ಅವಕಾಶ ಸಿಕ್ಕಿತ್ತು. ಕಳೆದ 16.9.2013 ರಿಂದ  22.9.2013 ರವರಗೆ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಉಪನ್ಯಾಸ ಮಾಲಿಕೆ ಏರ್ಪಾಡಾಗಿತ್ತು. ಕೊನೆಯ ದಿನ ಹಾಸನದ ವೇದಭಾರತೀ ಸದಸ್ಯರಿಂದ ಅಗ್ನಿಹೋತ್ರ ಪ್ರಾತ್ಯಕ್ಷಿಕೆ ನಡೆದರೆ, ಅಗ್ನಿಹೋತ್ರದ ಅರ್ಥ ವಿವರಣೆಯು  ಶ್ರೀ ಸುಧಾಕರ ಶರ್ಮರಿಂದ ನಡೆಯಿತು. ಅದರ ನಂತರ  ಸಂಸ್ಕೃತ ಸೌರಭ ಮತ್ತು ವೇದ ಪಠಣ ಕಾರ್ಯಕ್ರಮಗಳು. ಕೊನೆಯಲ್ಲಿ  ಶ್ರೋತೃಗಳ ಪ್ರಶ್ನೆಗಳಿಗೆ ಶರ್ಮರ ಉತ್ತರ.  ಒಂದು ಅಪರೂಪದ ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಅನುಭವ.ಸೇರಿದ್ದ ಸುಮಾರು 800 ಜನ ಶ್ರೋತೃಗಳು ಸುಮಾರು ಮೂರು ಗಂಟೆ ಗಳ ಕಾಲ ಕಾರ್ಯಕ್ರಮದಲ್ಲಿ  ಶಿಸ್ತುಬದ್ಧವಾಗಿದ್ದು ವೇದದ ಸವಿಯನ್ನು ಅನುಭವಿಸಿದರು. ಇಂತಾ ಕಾರ್ಯಕ್ರಮಗಳು ಎಲ್ಲಾ ಊರುಗಳಲ್ಲೂ ನಡೆದರೆ ನಮ್ಮ ಪರಂಪರೆಯ ಉತ್ಥಾನವಾಗುವುದರಲ್ಲಿ ಸಂಶಯವಿಲ್ಲ.

Rating
No votes yet

Comments

Submitted by makara Wed, 09/25/2013 - 08:42

ಹರಿಹರಪುರ ಶ್ರೀಧರ್ ಸರ್,
>>ಇಂತಾ ಕಾರ್ಯಕ್ರಮಗಳು ಎಲ್ಲಾ ಊರುಗಳಲ್ಲೂ ನಡೆದರೆ ನಮ್ಮ ಪರಂಪರೆಯ ಉತ್ಥಾನವಾಗುವುದರಲ್ಲಿ ಸಂಶಯವಿಲ್ಲ.>>+೧
ಕಾರ್ಯಕ್ರಮದ ಫೋಟೋ ಮತ್ತು ವಿವರಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by hariharapurasridhar Wed, 09/25/2013 - 09:21

In reply to by makara

ಧನ್ಯವಾದಗಳು,ಶ್ರೀಧರ್. ನೀವು ಅದ್ಭುತವಾದ ಬರಹಗಳನ್ನು ಬರೆಯುತ್ತಿದ್ದೀರಿ. ಕಣ್ಣಾಣಿಸುವುದನ್ನು ಬಿಟ್ಟರೆ ಪ್ರತಿಕ್ರಿಯೆ ನೀಡುವಷ್ಟೂ ವ್ಯವಧಾನವಿಲ್ಲ. ಏನೋ ನೂರೆಂಟು ಕಾರ್ಯಕ್ರಮಗಳ ಜಂಜಾಟ. ಬೇಸರಿಸದಿರಿ.

Submitted by makara Wed, 09/25/2013 - 10:02

In reply to by hariharapurasridhar

ಶ್ರೀಧರ್ ಸರ್,
ಇದರಲ್ಲಿ ಬೇಸರಿಸುವಂತಹ ವಿಚಾರವೇನೂ ಇಲ್ಲ. ಓದುಗರ ನಾಡಿ ಮಿಡಿತವು ಲೇಖನಕ್ಕೆ ಬೀಳುವ ಹಿಟ್‌ಗಳನ್ನು ನೋಡಿ ಅಳೆಯಬಹುದು. ಲೇಖನಕ್ಕೆ ಪ್ರತಿಕ್ರಿಯಿಸುವುದಕ್ಕಿಂತ ನೀವು ಸಮಾಜದ ಒಳಿತಿಗಾಗಿ ಶ್ರಮ ಪಡುತ್ತಿರುವುದು ಹೆಚ್ಚು ಸಂತಸದ ವಿಷಯವಾಗಿದೆ. ಪುಟಗಟ್ಟಲೆ ಬರೆಯುವುದಕ್ಕಿಂತ ಅಣುವಿನಷ್ಟು ಕಾರ್ಯಪ್ರವೃತ್ತರಾಗುವುದು ಮೇಲಲ್ಲವೇ? ಸಮಾಜಮುಖಿಯಾಗಿರುವ ನಿಮ್ಮ ಹಾಗೂ ನಿಮ್ಮ ಗುರುಗಳಾದ ಪಂಡಿತ ಸುಧಾಕರ ಶರ್ಮರ ಕಾರ್ಯಕ್ರಮಗಳಯ ಹೆಚ್ಚೆಚ್ಚು ಯಶಸ್ವಿಯಾಗಲಿ ಮತ್ತು ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವ ಪ್ರೇರಕ ಶಕ್ತಿಯಾಗಲಿ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಗಣೇಶ Mon, 09/30/2013 - 00:01

ಶ್ರೀಧರರೆ, ಸಭೆಯಲ್ಲಿ ಎಲ್ಲಾ "ಊರು ಬಿಟ್ಟು ಕಾಡು ಬಾ" ಅನ್ನುವ ನನ್ನ ವಯಸ್ಸಿನವರೇ ಕಾಣಿಸುತ್ತಿದ್ದಾರೆ :)

Submitted by hariharapurasridhar Mon, 09/30/2013 - 09:26

In reply to by ಗಣೇಶ

ಅದೇ ನಮ್ಮ[ನಿಮ್ಮ] ದೌರ್ಭಾಗ್ಯ. ನಾನೂ ಕಾಡು ಬಾ ಎನ್ನುವ ವಯೋಮಾನದವನೇ.ನಿಮ್ಮ ವಯಸ್ಸು ತಿಳಿದುಕೊಳ್ಲೋಣ ,ಎಂದು ಪ್ರೊಫೈಲ್ ನೋಡಲು ಪ್ರಯತ್ನಿಸಿದೆ. ವಯಸ್ಸು ಗೊತ್ತಾಗಲಿಲ್ಲ. ನಿಮ್ಮ ಮುಖ ಪರಿಚಯಕ್ಕಾದರೂ ನಿಮ್ಮ ಇಂದಿನ ಫೋಟೊ ಮೇಲ್ ಮಾಡಿ. ಮುಂದೆ ನಿಮ್ಮೊಡನೆ ವ್ಯವಹರಿಸಲು ಸರಿಯಾಗುತ್ತದೆ. ನಿಮ್ಮನ್ನು ನೋಡದೆ ಬಂದಿರುವ ಅಭಿಪ್ರಾಯವೆಂದರೆ ನೀವು 40ರೊಳಗಿನವರಿರಬಹುದು.

Submitted by Shreekar Mon, 09/30/2013 - 11:42

In reply to by hariharapurasridhar

"....ನಿಮ್ಮ ವಯಸ್ಸು ತಿಳಿದುಕೊಳ್ಲೋಣ ,ಎಂದು ಪ್ರೊಫೈಲ್ ನೋಡಲು ಪ್ರಯತ್ನಿಸಿದೆ....."

ಎಲ್ಲಾ ಓಕೆ, ಕುತೂಹಲ ಯಾಕೆ? :-))))

ಸಂಪದ ಪುಟಗಳಲ್ಲೇ ಈ ಹಿಂದೆ ತಮ್ಮ ವಯಸ್ಸಿನ ರಹಸ್ಯವನ್ನು ಬಿಚ್ಚಿದ್ದಾರೆ, ಗಣೇಶಣ್ಣ.

MD ಪದವಿಗೆ ಪ್ರವೇಶಿಸುತ್ತಿರುವ ಮಗಳಿದ್ದಾಳೆ !

@ ಗಣೇಶಣ್ಣ,

ಇತ್ತೀಚಿಗೆ, ಸರಕಾರೀ BMC ಯಲ್ಲಿ ಮೆಡಿಸಿನ್ MD ಮಾಡಿದವರೊಬ್ಬರು ಯೆಣೆಪೋಯಾ ಮೆಡಿಕಲ್ ಕಾಲೇಜಿನ ಶಿಕ್ಷಕಿಯಾಗಿ ಸೇರಿದ್ದಾರೆ. ಅವರು ತಿಳಿಸಿದ್ದು:- MD ಪ್ರವೇಶ ಪರೀಕ್ಷೆಗೆ ಟ್ಯೂಶನ್ ಪಡೆದರೆ ಹೆಚ್ಚಿನ ಅಂಕ ಗಳಿಸುವುದು ಸಾಧ್ಯ. ಅವರು ಕೊಟ್ಟಾಯಂ ನಲ್ಲಿ ಖಾಸಗಿ ಪಾಠಕ್ಕೆ ಹೋಗಿದ್ದರಂತೆ. ಮಂಗಳೂರಿನಲ್ಲೂ ಮೆಡಿಕಲ್ ಟ್ಯೂಶನ್ ಹೇಳಿಕೊಡುವ ಸ್ಫೂರ್ತಿ ಟ್ಯುಟೋರಿಯಲ್ ಇದೆ.

Submitted by ಗಣೇಶ Tue, 10/01/2013 - 00:21

In reply to by Shreekar

ಕಲಿಯುವವರಿಗೆ ಪ್ರೋತ್ಸಾಹ, ಸಲಹೆ, ಮಾರ್ಗದರ್ಶನ ನೀಡುವ ಶ್ರೀಕರ್‌ಜಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಎಂಡೀಗೂ ಕೋಚಿಂಗ್ ಕ್ಲಾಸ್‌ಗಳಿವೆ, ಒಂದೆರಡು ವರ್ಷ ಎಮ್ ಡಿ ಸೀಟ್‌ಗಾಗಿ ಓದುವುದರಲ್ಲೇ ಕಳೆಯುತ್ತಾರೆ, ಟ್ಯೂಶನ್‌ಗಾಗಿಯೇ ಕೆಲವರು ಬೆಂಗಳೂರಿಗೆ ಬಂದು ರೂಮ್ ಮಾಡಿ ಇರುತ್ತಾರೆ, ಎಂದೆಲ್ಲಾ ನನಗೆ ಗೊತ್ತೇ ಇರಲಿಲ್ಲ. ಮಗಳನ್ನೂ ಕೋಚಿಂಗ್ ಕ್ಲಾಸ್‌ಗೆ ಸೇರಿಸಿರುವೆ. ವಾರದ ೨-೩ ದಿನ ಬೆಳಗ್ಗೆ ೮ರಿಂದ ರಾತ್ರಿ ೮ರವರೆಗೂ ಇರುತ್ತದೆ. ಇಷ್ಟ ಪಟ್ಟು ಓದುತ್ತಿರುವಳು. ಮುಂದೇನಾಗುತ್ತೋ ದೇವರಿಚ್ಛೆ.

Submitted by Shreekar Tue, 10/01/2013 - 22:27

In reply to by ಗಣೇಶ

@ ಗಣೇಶಣ್ಣಾ,

IQ ಗಿಂತ EQ (emotional quotient )ಹೆಚ್ಚು ಮುಖ್ಯವೆಂದು ಹೇಳುತ್ತಾರೆ.

ಇದು ನಿಮ್ಮ ಸುಪುತ್ರಿಯಲ್ಲಿದೆ ಎಂಬುದಕ್ಕೆ ಪುರಾವೆ ಎಂದರೆ ತನಗೆ ಬೇಕಾದ ವಿಷಯದಲ್ಲಿ ಸೀಟು ಸಿಗಲಿಲ್ಲವೆಂದಾಗ compromise ಮಾಡಲು ಇಚ್ಛಿಸದೆ ಇನ್ನೊಮ್ಮೆ ಪರೀಕ್ಷೆಗೆ ತಯಾರಿ ಮಾಡುವ ನಿರ್ಧಾರ ತೆಗೆದುಕೊಂಡದ್ದು.

ಶುಭವಾಗಲಿ !

Submitted by ಗಣೇಶ Tue, 10/01/2013 - 00:27

In reply to by hariharapurasridhar

ನಿಮ್ಮ ಮುಖ ಪರಿಚಯಕ್ಕಾದರೂ ನಿಮ್ಮ ಇಂದಿನ ಫೋಟೊ ಮೇಲ್ ಮಾಡಿ. -ಶ್ರೀಧರ್ ಅವರೆ, ಗಿಡ ಮರ ಬಳ್ಳಿ ಹೂ, ಪಕ್ಷಿ ಪ್ರಾಣಿ ಯಾವುದರ ಫೋಟೋ ಕೇಳಿ. ತೆಗೆಯುವೆ. ನನ್ನ ಫೋಟೋ ತೆಗೆದದ್ದೇ ಇಲ್ಲ. ಒಂದು ಇದೆ- ವೋಟರ್ಸ್ ಐಡಿದ್ದು- ನನ್ನ ಫೋಟೋ ಎಂದರೆ ನನ್ನ ಮನೆಯಾಕೆಯೇ ನಂಬುವುದಿಲ್ಲ. :)

Submitted by partha1059 Tue, 10/01/2013 - 08:01

In reply to by ಗಣೇಶ

ಗಣೇಶರೆ
ವೋಟರ್ಸ್ ಐಡೀದು ಪೋಟೊ ಇದೆ ಅಂದರಲ್ಲ ಬಿಡಿ, ಕಡೆಗೆ ಅಪರೂಪಕ್ಕೆ ತೆಗೆದಿದ್ದು ಎಂದು, ಯಾರೊ ನಿಮ್ಮನ್ನು ಹಿಂದಿನಿಂದ‌ ತೆಗೆದಿದ್ದ ಪೋಟೋ ಹಾಕಬೇಡಿ ಸದ್ಯ!
ಹರಿಹರಿಪುರ‌ ಶ್ರೀದರರೆ
ನಿಮ್ಮನ್ನು ನಾಗರಾಜರನ್ನು ನೊಡುವಾಗ‌ ನನಗೆ ಹೊಟ್ಟೆಕಿಚ್ಚು, ಮನಸಿಗೆ ಹಿತವೆನಿಸುವ‌ ಕಾರ್ಯಗಳಲ್ಲಿ ಪ್ರವ್ಱುತ್ತರಾಗಿ ಎಲ್ಲಿ ಬೇಕೊ ಅಲ್ಲಿ ಸುತ್ತಾಡುತ್ತ ತೊಡಗಿಕೊಂಡಿದ್ದೀರಿ.
ನನಗೆ ಸಧ್ಯಕ್ಕಂತು ಅದು ಸಾದ್ಯವಿಲ್ಲ
ಸಾದ್ಯವಾದ ದಿನ‌ ನಿಮ್ಮ ಜೊತೆ ಸೇರಿಬಿಡುತ್ತೇನೆ ಬಿಡಿ
ಆಗ‌ ಗಣೇಶರು ನನ್ನನ್ನು ಕಾಡಿಗಟ್ಟಬಹುದು, ಕಾಡು ಬಾ ಅನ್ನುತಿದೆ ಹೋಗು ಎಂದು :‍)
ಆದರೆ ಕಾಡು ಎಲ್ಲಿದೆ ಸಧ್ಯ !

Submitted by Shreekar Tue, 10/01/2013 - 22:35

In reply to by ಗಣೇಶ

ವೋಟರ್ಸ್ ಐಡಿ ಚಿತ್ರ ಚೆನ್ನಾಗಿಲ್ಲದಿದ್ದರೆ ಬೇಡ ಬಿಡಿ.

ಪಾನ್ ಕಾರ್ಡ್, ವಾಹನಚಲಾವಣೆ ಪರವಾನಗಿ, ರೇಶನ್ ಕಾರ್ಡ್ ಇವುಗಳಲ್ಲಿನ ಚಿತ್ರ ಹಾಕಬಹುದಲ್ಲವೇ ! :-))))

Submitted by hariharapurasridhar Sat, 10/05/2013 - 16:22

In reply to by ಗಣೇಶ

ಈಗ ನಿಮ್ಮನ್ನು ನೋಡಲೇ ಬೇಕೆನಿಸುತ್ತಿದೆ, ಗಣೇಶರೇ.ಅಂದಾಜಿನಲ್ಲಿ 45-55 ರ ಮಧ್ಯೆಯಲ್ಲಿ ನೀವಿರಬಹುದೇನೋ. ನಿಮ್ಮ ಮುಖ ದರ್ಶನ ಮಾಡಿಸೀ ಮಾರಾಯ್ರೆ, ಮೇಲ್ ಮಾಡಿದ್ರೂ ಪರವಾಗಿಲ್ಲ ಮುಖಾನ. ಪಾರ್ಥರೇ, ಪುರಸೊತ್ತಾದಾಗ ನಮ್ಮೊಡನೆ ಬನ್ನಿ. ಪಾಪ, ನಾಗರಾಜರು ಅನಾರೋಗ್ಯವನ್ನು ಲೆಕ್ಕಿಸದೆ ಮೈಸೂರಿಗೆ ಬಂದಿದ್ರು.ಇನ್ನೂ ಪೂರ್ಣ ಚೇತರಿಸಿಕೊಂಡಿಲ್ಲ. ನಿತ್ಯವೂ ನಮ್ಮನೆಯಲ್ಲಿ ನಡೆಯುವ ವೇದಾಭ್ಯಾಸ ಮತ್ತು ಅಗ್ನಿಹೋತ್ರಕ್ಕೆ ಬರುತ್ತಿದ್ದರು.ಈಗ ಬಂದು ಹತ್ತು ದಿನಗಳ ಮೇಲಾಯ್ತು.ಅದಕ್ಕಾಗಿ ನಾವುಗಳೇ ಅವರ ಮನೆಗೆ ನಾಳೆ ಭಾನುವಾರ[6.10.13] ಹೋಗಿ ಅವರ ಮನೆಯಲ್ಲೇ ಅಗ್ನಿಹೋತ್ರ ಮಾಡುತ್ತೇವೆ. ಬರ್ತೀರಾ?

Submitted by ಗಣೇಶ Thu, 10/10/2013 - 23:35

In reply to by hariharapurasridhar

----ನಾಗರಾಜರು ಅನಾರೋಗ್ಯವನ್ನು ಲೆಕ್ಕಿಸದೆ ಮೈಸೂರಿಗೆ ಬಂದಿದ್ರು.ಇನ್ನೂ ಪೂರ್ಣ ಚೇತರಿಸಿಕೊಂಡಿಲ್ಲ.-> ಕವಿ ನಾಗರಾಜರೆ ಹಾಗೂ ಹರಿಹರಪುರ ಶ್ರೀಧರ್ ಅವರೆ, ಸಮಾಜ ಸೇವೆ ಒಪ್ಪಿದೆ. ಆದರೆ ಅನಾರೋಗ್ಯವನ್ನು ಲೆಕ್ಕಿಸದೇ ಮಾಡುವುದು ತಪ್ಪು. --------- ಗಣೇಶರೇ.ಅಂದಾಜಿನಲ್ಲಿ 45-55 ರ ಮಧ್ಯೆಯಲ್ಲಿ ನೀವಿರಬಹುದೇನೋ. ನಿಮ್ಮ ಮುಖ ದರ್ಶನ ಮಾಡಿಸೀ ಮಾರಾಯ್ರೆ, ಮೇಲ್ ಮಾಡಿದ್ರೂ ಪರವಾಗಿಲ್ಲ ಮುಖಾನ. ----->ಮಧ್ಯದಲ್ಲಿಲ್ಲ..ಬಲಕೊನೆಗೆ ಇನ್ನುಸ್ವಲ್ಪ ಹೊತ್ತಿನಲ್ಲಿ ಇನ್ನೂ ಹತ್ತಿರವಾಗುವೆನು. ಮುಖಾನ ಮೇಲ್ಮಾಡಿರುವೆ.:)

Submitted by swara kamath Fri, 10/11/2013 - 19:58

In reply to by hariharapurasridhar

ನಮಸ್ಕಾರ ಶ್ರೀಧರರೆ, ಮೈಸೂರಿನಲ್ಲಿ ನಲ್ಲಿ ಜರಗುತ್ತಿರುವ ಈ' ಪರಂಪರೆ' ಕಾರ್ಯಕ್ರಮ ನಮ್ಮ ಶಿವಮೊಗ್ಗ ದವರೆಗೆ ಹಬ್ಬಲಿ.ಆ ಮೂಲಕ ವೇದದ್ಯಾಯಿ ಶ್ರೀ ಸುಧಾಕರ ಶರ್ಮ ರ ಉಪನ್ಯಾಸ ಕೇಳುವ ನಮಗೂ ಅವಕಾಶ ದೊರೆಯಲಿ ಎಂದು ಅಪೇಕ್ಷಿಸುತ್ತೇನೆ. ಸ್ನೇಹಿತರಾದ ಕವಿನಾಗಾಜರ ಅನಾರೋಗ್ಯದ ಕುರಿತು ಬರೆದಿರುವಿರಿ.ಅವರು ಆದಷ್ಟುಬೇಗನೆ ಗುಣಮುಖರಾಗಿ ತಮ್ಮ ಎಂದಿನ ಕಾರ್ಯದಲ್ಲಿ ನಿರತರಾಗಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇನೆ.....ವಂದನೆಗಳು...... ರಮೇಶ ಕಾಮತ್.