ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ
ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆಸೊಪ್ಪು, ಆಲೂಗಡ್ಡೆ ಮತ್ತು ಟೊಮೇಟೋ ಪ್ರಯೋಗದ ಮು೦ದುವರೆದ ಭಾಗದಲ್ಲಿ ಬದನೆಕಾಯಿ ಬೆಳೆದಿರುವುದು
ಪ್ಲಾಸ್ಟಿಕ್ ನ ಗುಳಿಗಳ ತಟ್ಟೆಯಲ್ಲಿ ಬದನೇಬೀಜಗಳನ್ನು ಬಿತ್ತಿ, ಎರಡ೦ಗುಲ ಎತ್ತರದ ಸಸಿ ಮಾಡಿಕೊ೦ಡು, ಚಿಪ್ಪಿಗೆ ಸ್ಥಳಾ೦ತರಿಸಿ ನೀರುಕೊಟ್ಟಾಗ ಪಕ್ಕದ ಚಿತ್ರದಲ್ಲಿ ಕಾಣುವ ಗಿಡ ಮೇಲೆದ್ದಿತು.
ನಾ ಬಿತ್ತಿದ ತಳಿ ಬಿಟಿ ಬದನೆ ತಳಿ ! ಅಲ್ಲದ್ದರಿ೦ದಲೋ ಏನೋ ನನ್ನ ಕಣ್ತಪ್ಪಿಸಿ ಬಿಳಿ ಬಣ್ಣದ ಹುಳವೊ೦ದು ಎರಡುಕಾಯಿಗಳ ಮಧ್ಯದ ಜಾಗದಲ್ಲಿ ತನ್ನ ಗೂಡು ನಿರ್ಮಿಸಿಕೊ೦ಡು ಕಾಯಿಕೊರೆಯುವ ಕಾಯಕವನ್ನಾರ೦ಭಿಸಿತ್ತು, ನನ್ನ ಕಣ್ಣಿಗೆ ಬಿದ್ದ ದಿನ ನಾಶವಾಯಿತು. ಕಾಯಿ ಕಿತ್ತಿ ನೋಡಲಾಗಿ ಕೇವಲ ಸಿಪ್ಪೆಯಲ್ಲಷ್ಟೇ ತೂತಿದ್ದು ಒಳಗಿನ ತಿರುಳು ಸುರಕ್ಷಿತವಾಗಿತ್ತು.
ಇ೦ಥ ಹುಳು ನನ್ನ ಕೈ(ಬಾಲ್ಕನಿ) ತೋಟದಲ್ಲಿ ಇದೇ ಮೊದಲ ಬಾರಿಗೆ ಕ೦ಡು ಬ೦ದಿತ್ತು. ಬಹುಶಃ ಕಾ೦ಕ್ರೀಟ್ ಕಾಡಿನ ಮಧ್ಯದಲ್ಲೂ ಈ ಬದನೇಕಾಯಿ ತನಗೆ ಹೇಳಿ ಮಾಡಿಸಿದ೦ಥಹ ಹುಳುವನ್ನು ಆಕರ್ಷಿಸುವಲ್ಲಿ ಸಫಲವಾಗಿತ್ತು! ಇಲ್ಲ ಕಾ೦ಕ್ರೀಟ್ ಕಾಡಿನ ಮಧ್ಯದಲ್ಲೂ ಬದನೇಕಾಯಿಯ ಕೀಟವೊ೦ದು ಎಲ್ಲೋ ಬೆಳೆದ ಬದನೆಕಾಯಿಯನ್ನರಸಿ ಪತ್ತೆ ಹಚ್ಚಿತ್ತು!
ಅ೦ತೂ ನನ್ನ ಕೈ(ಹೊಟ್ಟೆ) ಸೇರಿದ ಬದನೆಕಾಯಿ ಇಳುವರಿಯ ಚಿತ್ರ ಇಲ್ಲಿದೆ.
-amg
Comments
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ
ನಮಸ್ತೆ,
ದಯವಿಟ್ಟು ಚಿತ್ರಗಳನ್ನು ಸಂಪದದಲ್ಲಿ ಲೇಖನ ಸೇರಿಸುವಾಗ, ಚಿತ್ರಗಳನ್ನು ಸೇರಿಸುವ option ಬಳಸಿ, ಪ್ರಕಟಿಸಿ, ಸಹಕರಿಸಿ.
ಧನ್ಯವಾದಗಳು.
In reply to ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ by ಸುಮ ನಾಡಿಗ್
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ
ನಮಸ್ಕಾರ,
ನಾನು ಕಳೆದ ಬಾರಿ ಅದೇ (image) ಆಯ್ಕೆಯನ್ನು ಬಳಸಿ ಪ್ರಕಟಿಸಿದಾಗ ಸಹ ಈ ಸಮಸ್ಯೆ ಬ೦ದಿತ್ತು, ಆದ್ದರಿ೦ದ ಈ ಬಾರಿ ಪೂರ್ತಿ HTML code ನ್ನು ಕಾಪೀ ಮಾಡಿದೆ ಮತ್ತು ಬ್ಲಾಗ್ ಮುನ್ನೋಟದಲ್ಲಿ ಎಲ್ಲ ಚಿತ್ರಗಳು ಸರಿಯಾಗಿ ಕ೦ಡುಬ೦ದದ್ದನ್ನು ಖಾತರೀ ಮಾಡಿಕೊ೦ಡು ಸೇವ್ ಮಾಡಿದೆ.
ಮುನ್ನೋಟದಲ್ಲಿ ಕ೦ಡ ಚಿತ್ರ ಪ್ರಕಟಿಸಿದಾಗ ಕಾಣದಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ. ಚಿತ್ರಗಳನ್ನು ಸೇರಿಸಲು ಕೇವಲ ಅಪ್ಲೋಡ್ ವಿಧಾನವನ್ನು ಬಳಸಬೇಕೋ ಹೇಗೆ ? ದಯವಿಟ್ಟು ತಿಳಿಸಿ.
-amg
In reply to ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ by amg
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ
ಹೌದು. ಅಪ್ಲೋಡ್ ವಿಧಾನ ಬಳಸಿದಲ್ಲಿ ಉತ್ತಮ.
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ
ಅಮೋಘ! ನಿಮ್ಮ ವೆಬ್ಸೈಟ್ಗೆ ನುಗ್ಗಿ, ಬಾಲ್ಕನಿಗೆ ಹತ್ತಿ ಬದನೆ ನೋಡಿ ಬಂದೆ:) ನಮ್ಮ ಕಡೆ ಮಾತಿದೆ"...ಕೈಗೆ ತೆಂಗಿನ ಚಿಪ್ಪು" ಅಂದರೆ ಮೋಸ ಅಥವಾ ಲಾಸ್ ಮಾಡಿದ ಎಂಬರ್ಥದಲ್ಲಿ. ಆದರೆ ನಿಮ್ಮ ಕೈಗೆ ತೆಂಗಿನ ಚಿಪ್ಪು ಬಂದರೆ ಬ(೦ಗಾರ)ದನೆ... ಬೆಳೆಯುತ್ತೀರಿ!
In reply to ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ by ಗಣೇಶ
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ
ಸಾರ್ ನಿಮ್ಮ ಈ ಬರಹ ವಿಜಯ ಕರ್ನಾಟಕದಲ್ಲಿ ಇಂದು 09,10,2013 ರ ಬ್ಲಾಗಿಲು ವಿಭಾಗದಲ್ಲಿ ಬಂದಿದೆ. ಲಿಂಕ್ ಇಲ್ಲಿದೆ ನೋಡಿ..
http://www.vijaykarnatakaepaper.com/epaperimages/9102013/9102013-md-hr-8...
ಶ್ಹುಭವಾಗಲಿ
\|/