ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ!
ಅದೇಕೋ ಏನೊ, ನಾನು ಸಿನಿಮಾ ಹಾಡುಗಳನ್ನು ಕೇಳುವಾಗ ಕೆಲವೇ ಕೆಲವು ಹಾಡುಗಳು ಮಾತ್ರ ನನಗೆ ಬಹಳ ಇಷ್ಟವಾಗುತ್ತಿದ್ದವು. ನಾನು ೩ ವರುಷದವನಾಗಿನಿಂದ ಸುಮಾರು ೨೦ ವರುಷಗಳ ಕಾಲ ಸಿನಿಮಾ / ಶಾಸ್ತ್ರೀಯ ಸಂಗೀತ (ಕರ್ಣಾಟಕ ಮತ್ತು ಹಿಂದೂಸ್ತಾನಿ ಎರಡೂ ಶೈಲಿಗಳು) ಕೇಳುತ್ತಿದ್ದೆ (ಅಥವಾ ಕಿವಿಯ ಮೇಲೆ ಬೀಳುತ್ತಿತ್ತೆಂದರೆ ಸರಿಯೇನೋ). ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಪಿ.ಯು.ಸಿ / ಕಾಲೇಜು ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿದ್ದದ್ದು - ರೇಡಿಯೋದಲ್ಲಿ ರಾತ್ರಿ ಹತ್ತೂವರೆಯಿಂದ ಹನ್ನೊಂದರವರೆಗೆ ಆಲ್ ಇಂಡಿಯ ರೇಡಿಯೊ ಉರ್ದು ಸರ್ವಿಸ್ ಕೇಂದ್ರದಲ್ಲಿ ಪ್ರಸಾರವಾಗುತ್ತಿದ್ದ ಹಳೆಯ ಅಂದರೆ ೫೦-೬೦ರದಶಕದ ಹಿಂದಿ ಚಿತ್ರಗೀತೆಗಳು, ಹನ್ನೊಂದರಿಂದ ಹನ್ನೊಂದೂವರೆವರೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಂತರ ಹನ್ನೊಂದೂವರೆಯಿಂದ ಒಂದೂವರೆವರೆಗೆ ಆಕಾಶವಾಣಿ ರಾಷ್ಟ್ರೀಯ ಪ್ರಸಾರಣ್ ಸೇವಾ ಕೇಂದ್ರದಿಂದ ಮತ್ತೆ ಹಳೆಯ ಹಿಂದಿ ಚಿತ್ರಗೀತೆಗಳು ಹೀಗೆ. ಪರೀಕ್ಷೆಗೆ ಓದುತ್ತಿದ್ದಾಗಲೂ ಹಿನ್ನೆಲೆಯಲ್ಲಿ ರಾತ್ರಿಯೆಲ್ಲಾ ಟ್ರಾನ್ಸಿಸ್ಟರ್ ಹಾಡುತ್ತಲೇ ಇರುತ್ತಿತ್ತು. ಎಷ್ಟೋ ಬಾರಿ ಅದನ್ನು ಆರಿಸಲು ಮರೆತು ಬೆಳಿಗ್ಗೆ ಎದ್ದಾಗ ಆರಿಸಿದ್ದೂ ಉಂಟು!
ಹೀಗೊಮ್ಮೆ ಅಂದರೆ ಸುಮಾರು ೨೫ ವರುಷಗಳಹಿಂದೆ ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಂದು ಆಲೋಚನೆ ಬಂತು - ಏಕೆ ನನಗಿಷ್ಟವಾದ ಹಾಡುಗಳ ಪಟ್ಟಿ ಮಾಡಬಾರದು? ಆಮೇಲೆ ಅವುಗಳನ್ನು ಯಾವುದಾದರೂ ಕ್ಯಾಸೆಟ್ ಅಂಗಡಿಗಳಲ್ಲಿ ಕೊಟ್ಟು ರೆಕಾರ್ಡ್ ಮಾಡಿಸಿಕೊಂಡರೆ, ನನಗಿಷ್ಟವಾದದ್ದನ್ನು ನನಗೆ ಬೇಕೆನಿಸಿದಾಗ ಕೇಳಬಹುದಲ್ಲ? -ಎಂದು (ಆ ಕಾಲದಲ್ಲಿ ಅದೊಂದೇ ಬಗೆಯಾಗಿತ್ತು; ಇನ್ನೂ ಕಂಪ್ಯೂಟರ್ ಯುಗ ಹೆಚ್ಚು ರೂಢಿಯಲ್ಲಿ ಬಂದಿರಲಿಲ್ಲ). ಸರಿ - ದೆಹಲಿ ಬರುವುದರೊಳಗೆ ಪಟ್ಟಿ ಸಿದ್ಧವಾಗಿತ್ತು. ಅದನ್ನು ಅವಲೋಕಿಸಿದರೆ ಸುಮಾರು ಹಾಡುಗಳ ರಾಗ ಒಂದೇ ರೀತಿಯದ್ದೇನೋ ಅನಿಸುತ್ತಿತ್ತು. ಆಮೇಲೆ ವೃತ್ತಿ ಜೀವನದ ದೊಂಬರಾಟದ ಸಮಯದಲ್ಲಿ ಆ ಪಟ್ಟಿಯಲಿರುವ ಹಾಡುಗಳನ್ನು ರೆಕಾರ್ಡ್ ಮಾಡಿಸುವ ಸಂದರ್ಭ ಒದಗಿ ಬರಲೇ ಇಲ್ಲ. ಆದರೆ ಆ ಪಟ್ಟಿ ಬೆಳೆಯುತ್ತಲೇ ಹೋಗುತ್ತಿತ್ತು.
೧೫ ವರುಷದ ಹಿಂದೆ, ಒಮ್ಮೆ ಹೈದರಾಬಾದಿಗೆ ತರಬೇತಿಗೆಂದು ಹೋಗಿದ್ದಾಗ ಬಸ್ಸಿನಲ್ಲಿ ಹಿರಿಯರೊಬ್ಬರ ಪರಿಚಯವಾಯಿತು. ನಾನು ಹಳೆಯ ಚಿತ್ರಗಳ ಹಾಡುಗಳನ್ನೆ ಗುನುಗುನಿಸುತ್ತಿದ್ದನ್ನು ಗಮನಿಸಿದ ಆ ಹಿರಿಯರು ನಿಮಗೆ ಹಳೆಯ ಸಿನಿಮಾ ಹಾಡುಗಳೆಂದರೆ ಬಹಳ ಇಷ್ಟವೇ ಎಂದು ಮಾತಿಗೆಳೆದರು. ಹೀಗೇ ಮಾತಿನಲ್ಲಿ ಅವರೆಂದದ್ದು - ೫೦-೬೦ರ ದಶಕದ ಹಾಡುಗಳು ೯೦ರ ದಶಕದಲ್ಲೂ ಜನಮಾನಸದಲ್ಲಿ ಉಳಿಯುವುದಕ್ಕೆ ಕಾರಣ - ಆಗಿನ ಕಾಲದ ಸಂಗೀತ ನಿರ್ದೇಶಕರು ರಾಗ ಸಂಯೋಜನೆಯಲ್ಲಿ ಹೆಚ್ಚಾಗಿ ಶಾಸ್ತ್ರೀಯ ರಾಗಗಳನ್ನು ಅವುಗಳ ಶುದ್ಧ ರೂಪದಲ್ಲಿ ಬಳಸುತ್ತಿದ್ದದ್ದು ಮತ್ತು ಗಾಯಕ / ಗಾಯಕಿಯರು ಹಾಡುವಾಗ ಹಿನ್ನೆಲೆ ವಾದ್ಯಗಳ ಆರ್ಭಟ ಇಲ್ಲದೇಇದ್ದದ್ದು.
ಇದು ನನ್ನಲ್ಲಿ ಬೆಳೆಯುತ್ತಲೇ ಇದ್ದ ಪಟ್ಟಿಯಲ್ಲಿ ಆ ಹಾಡುಗಳ ರಾಗಯಾವುದಿರಬಹುದೆಂದು ಹುಡುಕಲು ಹಚ್ಚಿತು. ಆ ಸಮಯಕ್ಕಾಗಲೇ ನಗರಗಳಲ್ಲಿ ಇಂಟರ್ ನೆಟ್ ಸಾಕಷ್ಟು ವ್ಯಾಪಿಸಿದ್ದರಿಂದ ಅದು ಹೆಚ್ಚು ಸಮಯ ಹಿಡಿಯಲಿಲ್ಲ. ಈ ಹುಡುಕಾಟದಿಂದ ನಾನು ಕಂಡುಕೊಂಡ ಅಚ್ಚರಿಯ ಅಂಶವೆಂದರೆ ನನ್ನ ಪಟ್ಟಿಯಲ್ಲಿದ್ದ ಹಾಡುಗಳಲ್ಲಿ ಸುಮಾರು ಮುಕ್ಕಾಲುವಾಸಿಯವು ಹಿಂದೋಳ ಅಥವಾ ಮಾಲಕೌಂಸ್ ರಾಗ ಆಧಾರಿತವಾಗಿದ್ದವು! ಉದಾಹರಣೆಗೆ -
ಕನ್ನಡದಲ್ಲಿ - ನಾಂದಿ ಚಿತ್ರದ ’ಚಂದ್ರಮುಖೀ ಪ್ರಾಣಸಖೀ ಚತುರೆಯೆ ನೀ ಹೇಳೇ...’; ಸ್ಕೂಲ್ ಮಾಸ್ಟರ್ ಚಿತ್ರದ ’ಭಾಮೆಯ ನೋಡಲು ತಾ ಬಂದ...’
ತಮಿಳಿನಲ್ಲಿ - ಬಾಗ್ಯಲಕ್ಷ್ಮಿ ಚಿತ್ರದ ’ಮಾಲೈ ಪೊಳುದಿನ್ ಮಯಕತ್ತಿಲೇ ನಾನ್...’;ವೈದೇಹಿ ಕಾತ್ತಿರುಂದಾಳ್ ಚಿತ್ರದ ’ಅಳಗು ಮಲರಾಡ ...(ಅದರ ಕನ್ನಡದ ರೀಮೇಕ್ ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಚಿತ್ರದ ’ಮುರಿದಿರುವ ಕೊಳಲು ನುಡಿಸುವರಾರು..."), ಮೋಟಾರ್ ಸುಂದರಂ ಚಿತ್ರದ - ಮನಮೇ ಮುರುಗನಿನ್ ಮಯಿಲ್ ವಾಹನಮ್
ತೆಲುಗಿನಲ್ಲಿ - ಲವಕುಶ ಚಿತ್ರದ ’ರಾಮಕಥನು ವಿನುರಯ್ಯಾ..’ ಅನಾರ್ಕಲಿ ಚಿತ್ರದ ’ರಾಜಶೇಖರಾ ನೀಪೈ....’ ಸುವರ್ಣ ಸುಂದರಿ ಚಿತ್ರದ ’ಪಿಲ್ವಕುರಾ ಅಲುಗಕುರಾ..’
ಹಿಂದಿಯಲ್ಲಿ - ನವರಂಗ್ ಚಿತ್ರದ ’ಆಧಾ ಹೈ ಚಂದ್ರಮಾ ರಾತ್ ಆಧೀ..(ಈ ಒಂದು ಹಾಡನ್ನು ನೋಡುವುದಕ್ಕಾಗಿ ಪಿಯುಸಿಯಲ್ಲಿದ್ದಾಗ ಕ್ಲಾಸಿನ ೨ ಪಿರಿಯಡ್ ಚಕ್ಕರ್ ಹಾಕಿ ಮಾರ್ನಿಂಗ್ ಷೋನಲ್ಲಿ ನವರಂಗ್ ಚಿತ್ರ ನೋಡಿದ್ದೆ!) ಮತ್ತು ’ತೂ ಛುಪೀ ಹೈ ಕಹಾ...’ ಬೈಜೂ ಬಾವ್ರಾ ಚಿತ್ರದ ’ ಮನ್ ತಡಪತ್ ಹರಿದರ್ಶನ್ ಕೊ ಆಜ್...’ ಸುರ್ ಸಂಗಮ್ (ತೆಲುಗಿನ ಶಂಕರಾಭರಣಮ್ ಚಿತ್ರದ ರೀಮೇಕ್) ಚಿತ್ರದ ’ಆಜ್ ಸುರ್ ಕೆ ಪಂಛೀ ಗಾಯೆ..’, ದೇವ್ ಕನ್ಯಾ ಚಿತ್ರದ ’ಪಗ್ ಘುಂಗರೂ ಬೋಲೆ ಛನನನಛನ್...’ ಮೆಹರ್ಬಾನ್ ಚಿತ್ರದ ’..ಸಾವನ್ ಕಿ ರಾತ್ ಕಾರಿ ಕಾರಿ..’
ಆದರೆ ನನ್ನ ಪಟ್ಟಿಯಲ್ಲಿ ಇನ್ನೂ ಕಾಲುವಾಸಿ ಹಾಡುಗಳು ಹಿಂದೋಳ / ಮಾಲಕೌಂಸ್ ಅಲ್ಲದಿದ್ದರೂ ಇಷ್ಟವಾಗುತ್ತಿದ್ದವು. ಅವುಗಳ ರಾಗ ಯಾವುದೆಂದು ಹುಡುಕಿದಾಗ ಕಂಡದ್ದು ಅವು
ಮೋಹನ / ಭೂಪ್ - ಅವಳಿ ಜವಳಿ ಚಿತ್ರದ ’ಸರಸದ ಈ ಪ್ರತಿ ನಿಮಿಷಾ..’ ಆಟೋರಾಜ ಚಿತ್ರದ ’... ನನ್ನ ಆಸೆ ಹಣ್ಣಾಗೀ ನನ್ನ ಬಾಳ ಕಣ್ಣಾಗೀ..’ , ಹಿಂದಿಯ ಭಾಭಿ ಕಿ ಚೂಡಿಯಾನ್ ಚಿತ್ರದ ’ಜ್ಯೋತ್ ಕಲಶ್ ಛಲಕೇ..’ ರುಡಾಲಿ ಚಿತ್ರದ ಭೂಪೇನ್ ಹಜ಼ಾರಿಕರ ..ದಿಲ್ ಭೂಮ್ ಭೂಮ್ ಕರೇ...’ ಇತ್ಯಾದಿ
ಆಭೇರಿ / ಭೀಮ್ ಪಲಾಸ್ - ಗೆಜ್ಜೆ ಪೂಜೆ ಚಿತ್ರದ ’ಪಂಚಮ ವೇದ ಪ್ರೇಮದ ನಾದ..’ ಬಭ್ರುವಾಹನ ಚಿತ್ರದ ’ಈ ಸಮಯ ಆನಂದಮಯಾ.., ಹಿಂದಿಯ ಫಕೀರಾ ಚಿತ್ರದ ’ದಿಲ್ ಮೆ ತುಝ್ಹೇ ಬಿಠಾ ಕೆ’ ಶರ್ಮೀಲಿ ಚಿತ್ರದ ’ಖಿಲ್ ತೆ ಹೈ ಗುಲ್ ಯಹಾನ್..ಇತ್ಯಾದಿ.
ಇವು ಹಿಂದೋಳ / ಮಾಲಕೌಂಸ್ ನನಗೆ ಇಷ್ಟವಾಗಲು ಕಾರಣವೇನಿರಬಹುದೆಂಬ ಪ್ರಶ್ನೆಯ ಉತ್ತರದ ಹುಡುಕಾಟದಲ್ಲಿದ್ದಾಗ ಸಂಪದದಲ್ಲಿ ಹಿರಿಯ ಸಂಪದಿಗ ಹಂಸಾನಂದಿಯವರು ಸೊಗಸಾಗಿ ವಿಶ್ಲೇಷಿಸಿ ಬರೆದ ಕಣಾಟಕ ಸಂಗೀತದ ರಸಾನುಭವ http://sampada.net/blog/hamsanandi/05/03/2007/3347 ; ಮೋಹನ, ಹಿಂದೋಳ ರಾಗಗಳ ಮತ್ತು ರಾಗಗಳ ಗ್ರಹ ಭೇದದಿಂದ ವ್ಯುತ್ಪನ್ನವಾಗುವ ಜನ್ಯರಾಗಗಳ ಮೇಲಿನ ಲೇಖನಗಳನ್ನು ಓದಿದೆ. ಅದರಲ್ಲಿ ಮತ್ತು ವೈಕಿ ಪೀಡಿಯ ಲೇಖನಗಳಲ್ಲಿ ಹಿಂದೋಳ - ಮೊಹನ ರಾಗಗಳು ಒಂದೇ ಜಾತಿಯವಾಗಿದ್ದು - ಔಡವ-ಔಡವ(pentatonic symmetrical - ಆರೋಹಣ-ಅವರೋಹಣಗಳೆರಡರಲ್ಲೂ ೫ ಸ್ವರಗಳು ಮಾತ್ರ), ಕೇವಲ ಒಂದು ಸ್ವರವನ್ನು ವ್ಯತ್ಯಾಸ ಮಾಡುವುದರಿಂದ ಹಿಂದೋಳದಿಂದ ಮೋಹನ, ಶುದ್ಧ ಧನ್ಯಾಸಿ, ಶುಧ್ಧ ಸಾವೇರಿ ಮತ್ತು ಮಧ್ಯಮಾವತಿ ರಾಗಗಳನ್ನು ಹೇಗೆ ಪಡೆಯಬಹುದೆಂಬ ವಿವರ ಸಿಕ್ಕಿತು.
ಇನ್ನು ಆಭೇರಿ / ಭೀಮ್ ಪಲಾಸ್ ಏಕೆ ಇಷ್ಟವಾಯಿತೆಂಬ ಪ್ರಶ್ನೆಯ ಉತ್ತರಹುಡುಕುವುದಕ್ಕಾಗಿ ಆ ರಾಗದ ಸ್ವರಗಳನ್ನು ಗಮನಿಸಿದೆ - ಇನ್ನೊಂದು ಆಶ್ಚರ್ಯ - ಆಭೇರಿ / ಭೀಮ್ ಪಲಾಸ್ ರಾಗಗಳ ಆರೋಹಣ ಸ್ವರಗಳು ಶುಧ್ಧ ಧನ್ಯಾಸಿಯದೇ ಆಗಿದ್ದು, ಅವರೋಹಣದ ಸ್ವರಗಳು ಮಾತ್ರ ಖರಹರಪ್ರಿಯ ರಾಗದ್ದವು. ಅಂದರೆ ಇದೊಂದು ಔಡವ-ಸಪ್ತಕ ರಾಗ. ಆಭೇರಿ / ಭೀಮ್ ಪಲಾಸ್ ಗಳ ಆರೋಹಣ /ಶುಧ್ಧ ಧನ್ಯಾಸಿ (ಹಿಂದೂಸ್ತಾನಿಯ ರಾಗ ’ಧನಿ’)ಯ ಸ್ವರಗಳಿಗೂ, ಹಿಂದೋಳ/ಮಾಲಕೌಂಸ್ ಸ್ವರಗಳಿಗೂ ಒಂದು ಸ್ವರದಲ್ಲಿ ಮಾತ್ರ ವ್ಯತ್ಯಾಸ - ಅದರಿಂದಲೇ, ಆ ರಾಗ ಹಾಡುಗಳನ್ನು ಕೇಳುವಾಗ ಅವುಗಳಲ್ಲಿ ಹಿಂದೋಳ/ಮಾಲಕೌಂಸ್ ಗಳ ಸಾಮ್ಯತೆಇದೆಯೇನೋ ಅನ್ನಿಸುತ್ತಿತ್ತು. ಇದನ್ನೇ ಹಂಸಾನಂದಿಯವರು ’ಪ್ಯಾಟ್ರನ್ ಮ್ಯಾಚಿಂಗ್’ ಎಂದು ಅವರ ಲೇಖನದಲ್ಲಿ ವಿವರಿಸಿದ್ದಾರೆ.
ಈ ನನ್ನ ರಾಗ/ಸ್ವರಾನ್ವೇಷಣೆಯಿಂದ ನಾನು ಕಂಡುಕೊಂಡ ಅಂಶವೆಂದರೆ ನಾನು ಕೇಳುವ ಸಂಗೀತದಲ್ಲಿ ಈ ಔಡವ ರಾಗಗಳಿದ್ದರೆ ಅವು ನನಗೆ ಥಟ್ಟನೆ ಇಷ್ಟವಾಗುತ್ತವೆ ಎಂದು (ಮೊದಲ ನೋಟದಲ್ಲೇ ಪ್ರೇಮವುಂಟಾಗುವಂತೆ!!!). ಇದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಯ ಹುಳ ಈಗ ನನ್ನನ್ನು ಕಾಡತೊಡಗಿತು! ಸರಿ, ನನಗೆ ಮೊಟ್ಟ ಮೊದಲು ಇಷ್ಟವಾದಂತಹ ಸಂಗೀತ (ಹಾಡು, ವಾದ್ಯ ಸಂಗೀತ) ಯಾವುದಾಗಿತ್ತೆಂದು ಹುಡುಕಲು ನನ್ನ ನೆನಪಿನಾಳಕ್ಕೆ ಧುಮುಕಿದೆ. ಅದು ಯಾವುದೆಂದರೆ - ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಮಧ್ಯಾಹ್ನ ಪ್ರಸಾರವಾಗುತ್ತಿದ್ದ (ಈಗಲೂ ಪ್ರಸಾರವಾಗುತ್ತಿರುವ) ’ವನಿತಾ ವಿಹಾರ’ ಕಾರ್ಯಕ್ರಮದ ಶೀರ್ಷಕ ವಾದ್ಯಸಂಗೀತ - ಸಿಗ್ನೇಚರ್ ಟ್ಯೂನ್ ! ಸರಿ, ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಾಣಾಧಿಕಾರಿಯಾಗಿರುವ ನನ್ನ ಮಿತ್ರನಿಗೆ ಮಿಂಚಂಚೆ ಕಳುಹಿಸಿದೆ - ಆ ವಾದ್ಯ ಸಂಗೀತದ ರಾಗ ಯಾವುದೆಂದು ತಿಳಿದುಕೊಳ್ಳಲು. ಇಂದು ಬೆಳಿಗ್ಗೆ ಉತ್ತರ ಬಂದಾಗ ನನಗೆ ಪರಮಾಶ್ಚರ್ಯ!!! - ಆ ವಾದ್ಯ ಸಂಗೀತವೂ ಹಿಂದೋಳ ರಾಗದ ಆಧಾರಿತವಾಗಿದೆ!!!
ಕಡೆಗೂ ನನ್ನ ಹಿಂದೋಳ / ಮಾಲಕೌಂಸ್ ಹುಚ್ಚಿಗೆ ಮೂಲ ಕಂಡುಕೊಂಡೆ! ಅದು ನಾನು ಬಹುಶಃ ೩ ವರುಷದವನಾಗಿದ್ದಾಗಿನಿಂದ ಕೇಳುತ್ತಿದ್ದ ಆ ವನಿತಾ ವಿಹಾರದ ಸಿಗ್ನೇಚರ್ ಟ್ಯೂನ್! ನನಗೆ ಸಂಗೀತ ಜ್ಞಾನವು ಸೊನ್ನೆಯಾಗಿದ್ದರೂ ನನ್ನ ಮಿದುಳು ಮೊಟ್ಟಮೊದಲು ಅಚ್ಚೊತ್ತಿಕೊಂಡ ರಾಗ ಈ ಹಿಂದೋಳ / ಮಾಲಕೌಂಸ್!
ಇಲ್ಲಿಗೆ ಮುಗಿಯಲ್ಲಿಲ್ಲ - ನನಗೇಕೆ ಈ ಪೆಂಟಾಟೋನಿಕ್ ರಾಗಗಳೇ ಹಿಡಿಸಬೇಕು - ಇದರಲ್ಲಿ ನನ್ನ ಮೆದುಳಿನ ಪಾತ್ರವೇನು - ಎಂಬ ಹೊಸ ಹುಳ ಹೊಕ್ಕಿಸಿಕೊಂಡೆ!
ಅದನ್ನು ಮುಂದಿನ ಭಾಗದಲ್ಲಿ ಬರೆಯುತ್ತೇನೆ -”ಸಂಗೀತ ಮತ್ತು ಮೆದುಳು-ನರ ವಿಜ್ಞಾನ ಇತ್ಯಾದಿ’
- ಕೇಶವ ಮೈಸೂರು
Comments
ಉ: ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ!
In reply to ಉ: ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ! by partha1059
ಉ: ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ!
In reply to ಉ: ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ! by partha1059
ಉ: ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ!
In reply to ಉ: ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ! by Shreekar
ಉ: ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ!
In reply to ಉ: ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ! by ಗಣೇಶ

In reply to ಉ: ನನ್ನ ಹಿಂದೋಳ / ಮಾಲಕೌಂಸ್ ಹುಚ್ಚು - ಹೀಗೊಂದು someಶೋಧನೆ! by keshavmysore