ಸುಮ್ನೆ ಹೀಗೆ-೧೮

ಸುಮ್ನೆ ಹೀಗೆ-೧೮

**ಮುಂಜಾನೆ**
ದಿನವಿಡೀ ನಲಿವಿನಲಿರುವೆನೆಂದು
ನಾ ಧೇನಿಸುತಲಿರಲು
ಅದಾಗಲೇ ಕಂಪಬೀರುತ
ನಸುಬೆಳಕಲಿ ಅಂದವಾಗಿ
ನಗುತ್ತಿತ್ತು ಉದಯ ಮಲ್ಲಿಗೆ !

** ಮುಸ್ಸಂಜೆ**
ಮಹತ್ವದ ಗುರಿಯನೊಂದು
ನಾ ಕನವರಿಸುತಿರಲು
ಅದಾಗಲೇ ಕಂಪಬೀರುತ
ನಸುಗತ್ತಲಲಿ ಚಂದವಾಗಿ
ನಗುತ್ತಿತ್ತು ಸಂಜೆ ಮಲ್ಲಿಗೆ !

Rating
No votes yet

Comments

Submitted by nageshamysore Sat, 10/05/2013 - 17:14

ಪ್ರೇಮಾಶ್ರಿಯವರೆ ಮುಂಜಾವು - ಮುಸ್ಸಂಜೆ ಎರಡೂ ಪ್ರೇರೇಪಣೆಯಾಗುವ 'ಸಂವಾದಿ-ದ್ವಂದ್ವ' ಚೆನ್ನಾಗಿದೆ :-)