ಚಿಕ್ ಚಿಕ್ ವಿಷ್ಯ!

ಚಿಕ್ ಚಿಕ್ ವಿಷ್ಯ!

 

ಚಿಕ್ ಚಿಕ್ ವಿಷ್ಯ ಅಂತ ತಳ್ ಹಾಕ್ ಬೇಡಿ

ಒಂದ್ ನಿಮಿಷ ನನ್ ಮಾತ್ ಕೇಳಿ

 

ಹುಡುಗಿ ಜೊತೆ ನೆಡ್ಕೊಂಡ್ ಹೋಗ್ತಿದ್ದೆ ಕಣ್ರೀ

ಎದುರಿಗೆ ಇನ್ನೊಂದ್ ಹುಡುಗಿ ಹಾದು ಬರ್ತಿದ್ಲು

ಆಗ್ಲೇ ಧೂಳು ಕಣ್ಣಿಗೆ ಬಿತ್ತು ಕಣ್ರೀ

ಥಟ್ಟನೆ ಕಣ್ ಮಿಟಿಕಿಸಿದೆ ಅಷ್ಟೇ!

 

ಚಿಕ್ ಚಿಕ್ ವಿಷ್ಯ ಅಂತ ಹೇಳ್ಬ್ಯಾಡ್ ಕಣ್ರೀ

ಒಂದ್ ನಿಮಿಷ ನನ್ ಮಾತ್ ಕೇಳಿ

 

ಪಾರ್ಟಿಯಲ್ಲಿ ಹುಡುಗಿ ಜೊತೆ ಮಾತಾಡ್ತಿದ್ದೆ ಕಣ್ರೀ

ಹುಡುಗಿ ಮಾತ್ರ ತಲೆ ತಗ್ಗಿಸಿಕೊಂಡೇ ಇದ್ಲು

ಕೈ ತೊಳೆಯೋಕ್ಕೆ ಹೋದಾಗ ಕನ್ನಡಿ ನೋಡ್ಕೊಂಡೆ ಕಣ್ರೀ

ಮೀಸೆಗೆ ಮಜ್ಜಿಗೆ ಮೆತ್ಕೊಂಡಿತ್ತು ಅಷ್ಟೇ!

 

ಚಿಕ್ ಚಿಕ್ ವಿಷ್ಯ ಅಂತ ಹೇಳ್ಬ್ಯಾಡ್ ಕಣ್ರೀ

ಒಂದ್ ನಿಮಿಷ ನನ್ ಮಾತ್ ಕೇಳಿ

 

ಹುಡುಗೀಗೆ ಒಮ್ಮೆ ಐಸ್ಕ್ರೀಮ್ ಕೊಂಡೆ ಕಣ್ರೀ

ಬೆಂಚಿನ ಮೇಲೆ ಆಕೆ ಕಾದು ಕುಳಿತಿದ್ಲು

ಅವಳ ಕೈಯಲ್ಲಿ ಕೋನ್ ಕೊಡ್ತಿದ್ದೆ ಕಣ್ರೀ

ಎಲ್ಲೋ ಇದ್ದ ಸೀನು ವಕ್ಕರಿಸಿತ್ತು ಅಷ್ಟೇ!

 

ಚಿಕ್ ಚಿಕ್ ವಿಷ್ಯ ಅಂತ ಹೇಳ್ಬ್ಯಾಡ್ ಕಣ್ರೀ

ಒಂದ್ ನಿಮಿಷ ನನ್ ಮಾತ್ ಕೇಳಿ

 

ಆಫೀಸಿನಲ್ಲಿ ಊಟ ಬಿಸಿ ಮಾಡ್ತಿದ್ದೆ ಕಣ್ರೀ

ಆಕೆ ಬಂದು ತನ್ನ ಸರದಿಗೆ ನಿಂತಿದ್ಲು

ಆಕೆಗೆ ಜಾಗ ಬಿಟ್ಟು ಸ್ಮೈಲ್ ಮಾಡಿದೆ ಕಣ್ರೀ

ಹಸಿದ ಹೊಟ್ಟೆ ಗೊರ್ ಅಂತ ಸದ್ದು ಮಾಡಿತ್ತು ಅಷ್ಟೇ!

 

ಚಿಕ್ ಚಿಕ್ ವಿಷ್ಯ ಅಂತ ಹೇಳ್ಬ್ಯಾಡ್ ಕಣ್ರೀ

ಒಂದ್ ನಿಮಿಷ ನನ್ ಮಾತ್ ಕೇಳಿ

 

ಹುಡುಗಿಗೊಮ್ಮೆ ಹೂವಿನ ಬುಕೆ ಕೊಡ್ತಿದ್ದೆ ಕಣ್ರೀ

ಹೂವ ಪಡೆಯಲು ಆಕೆ ಕೈ ಚಾಚಿದ್ಲು

ನಸುನಗುತ ಸ್ಟೈಲಾಗಿ ಬುಕೆಯನ್ನು ನಾ ಚಾಚಿದೆ ಕಣ್ರೀ

ಥಟ್ಟನೆ ಬೆನ್ನಲ್ಲಿ ಕೆರೆತ ಕಂಡಿತ್ತು ಅಷ್ಟೇ!

 

ಚಿಕ್ ಚಿಕ್ ವಿಷ್ಯ ಅಂತ ಹೇಳ್ಬ್ಯಾಡ್ ಕಣ್ರೀ

ಒಂದ್ ನಿಮಿಷ ನನ್ ಮಾತ್ ಕೇಳಿ

 

ಕಾಲ್ಪನಿಕ ಹುಡುಗಿ ಬಗ್ಗೆ ಕವನ ಬರೀತಿದ್ದೆ ಕಣ್ರೀ

ಹೆಂಡತಿ ’ಸ್ವಲ್ಪ ಹೆಲ್ಪ್ ಬೇಕು ಬನ್ನಿ’, ಅಂದಿದ್ಲು

ನಿನ್ನ ಕಲ್ಪಿಸಿಕೊಂಡು ಬರೀತಿದ್ದೆ ಅನ್ಲಿಕ್ಕೆ ಹೋದೆ ಕಣ್ರೀ

ಹುಡುಗಿ ಬಗ್ಗೆ ಬರೀತಿದ್ದೆ ಅಂದೆ ಅಷ್ಟೇ!

 

ಚಿಕ್ ಚಿಕ್ ವಿಷ್ಯ ಅಂತ ಹೇಳ್ಬ್ಯಾಡ್ ಕಣ್ರೀ

ಒಂದ್ ನಿಮಿಷ ನನ್ ಮಾತ್ ಕೇಳಿ

 

Comments

Submitted by sathishnasa Mon, 10/07/2013 - 20:54

>> ನಿನ್ನ ಕಲ್ಪಿಸಿಕೊಂಡು ಬರೀತಿದ್ದೆ ಅನ್ಲಿಕ್ಕೆ ಹೋದೆ ಕಣ್ರೀ ಹುಡುಗಿ ಬಗ್ಗೆ ಬರೀತಿದ್ದೆ ಅಂದೆ ಅಷ್ಟೇ! << ಮುಂದೇನಾಯಿತು, ಯಾಕೆಂದರೆ ಇದು ಚಿಕ್ಕ ವಿಷ್ಯ ಅಲ್ಲ ...!! ....ಸತೀಶ್
Submitted by ಗಣೇಶ Tue, 10/08/2013 - 00:19

In reply to by sathishnasa

ಚಿಕ್ ವಿಷ್ಯಾನಾ ಇದೆಲ್ಲಾ!? ಒಂದಲ್ಲ ಹತ್ನಿಮಿಷ ಕಾದರೂ ಸತೀಶರೆ ಮುಂದೇನಾಯಿತು ಎಂದು ಭಲ್ಲೇಜಿ ಹೇಳೊಲ್ಲ. ಮುಂದಿನದು ಕಾಲ್ಪನಿಕ ಅಲ್ಲಾ..:)
Submitted by ಗಣೇಶ Sat, 10/12/2013 - 00:22

In reply to by bhalle

ಮಹಾ ಸಂಗ್ರಾಮ ನಿರೀಕ್ಷಿಸಿದ್ದೆ ಭಲ್ಲೇಜಿ.ನೀವು ಪುಣ್ಯವಂತರು. ನಮ್ಮಲ್ಲಾಗುತ್ತಿದ್ದರೆ -ನಿಮ್ ಹಿಂದೆ ಇಷ್ಟು ಜನ ಹುಡುಗೀರು ಬರೋದು ಬೋ ಸುಳ್ಳು. ಆದರೆ ಹಾಗೆ ಕಲ್ಪನೆ ಯಾಕೆ ಮಾಡಿದಿರಿ ಎಂದು ....:(

Submitted by nageshamysore Tue, 10/08/2013 - 08:44

ಭಲ್ಲೆ ಜಿ, ಏನೆ ಆಗಲಿ ನಿಮ್ಮ (ಅಥವ ನಿಮ್ಮವರ ಎನ್ನೋಣವೆ ?) ಧೈರ್ಯಕ್ಕೆ 'ಸೈಯ್, ಅನ್ನಬೇಕು :-) Sent from
Submitted by naveengkn Thu, 11/28/2013 - 17:11

ಭಲ್ಲೆ ಸರ್,,, ಚಿಕ್ ಚಿಕ್ ವಿಷ್ಯ,,,, ತುಂಬಾ ಚನ್ನಾಗಿದೆ,, ನಕ್ಕು ನಕ್ಕು ಸಾಕಾಯ್ತು,,, --ನವೀನ್ ಜೀ ಕೇ