' ಬದುಕು '
ಚಿತ್ರ
ಬದುಕು ಎನ್ನುವುದು
ವ್ಯರ್ಥ ತಿರಸ್ಕೃತ
ದೂರುಗಳ ಒಂದು
ಡಸ್ಟಬಿನ್
*
ಬದುಕು ನಮ್ಮ ಜೀವನದ
ಘಟನೆಗಳ
ಒಂದು ಸಾದಿಲ್ವಾರ ಪಟ್ಟಿ
ಇಲ್ಲಿ ನನಸಾಗ ಬೇಕಿರುವ
ಕನಸುಗಳಿವೆ
ಸಾಧಿಸ ಬೇಕಾದ ಗುರಿಗಳಿವೆ
ಜ್ಞಾತಾಜ್ಞಾತ ಅರ್ಹರಿಗೆ
ಸಲ್ಲಿಸ ಬೇಕಾದ
ಕೃತಜ್ಞತೆಗಳಿವೆ ಇದನ್ನೊಂದು
ಕೃತಜ್ಞತಾ ಪಟ್ಟಿಗಳ
ಸರಪಳಿ ಎನ್ನಬಹುದು
*
ಬದುಕು ಎಂದಗೂ
ಮುಗಿಯದ ದೂರುಗಳ
ಸರಿಪಡಿಸಲಾಗದ
ಲೋಪ ದೋಷಗಳ
ಒಂದು 'ಅಕ್ಷಯ ಪಾತ್ರೆ'
ಅವುಗಳನ್ನು
ಜೀವನಾನುಭವಗಳಿಂದ
ಕಠಿಣ ಪರಶ್ರಮಗಳಿಂದ
ಮತ್ತೂ ಪ್ರಾಮಾಣಿಕ
ದುಡಿಮೆಯಿಂದ ಮಾತ್ರ
ಸರಿಪಡಿಸ ಬಹುದು
*
Rating
Comments
ಉ: ' ಬದುಕು '
ಪಾಟೀಲರೆ, ಬದುಕೆಂಬ ಜಾದೂ ಪೆಟ್ಟಿಗೆಯ ಅಗಾಧತೆಯ ಬಗ್ಗೆ ಬರೆಯಹೊರಟಷ್ಟೂ ಮತ್ತೂ ಮಿಕ್ಕಿರುವುದು ಬದುಕಿನ ವೈಶಿಷ್ಟ್ಯ. ಈ ಪುಟ್ಟ ಕವನದಲ್ಲಿ ಅದರ ಕೆಲವು ಎಳೆಗಳನ್ನು ಬಿಡಿಸಿಡುವ ಯತ್ನ ಚೆನ್ನಾಗಿ ಮೂಡಿ ಬಂದಿದೆ. ಒಂದೆಡೆ 'ಡಸ್ಟುಬಿನ್' ಅನಿಸುವ ಬದುಕಿನ ರೌದ್ರ ಮತ್ತೊಂದೆಡೆ 'ಕೃತಜ್ಞತೆ'ಗೆ ಅರ್ಹನಾಗುವ ಹರಿಕಾರನಾಗುವುದು, ತನಗೆ ಬೇಕಾದ್ದನ್ನು ಮೊಗೆದು ಪಡೆಯಬಲ್ಲ 'ಸರಿ-ತಪ್ಪು'ಗಳ ಅಕ್ಷಯ ಪಾತ್ರೆಯಾಗುವುದು - ಎಲ್ಲವು ಬದುಕಿನ ವೈವಿಧ್ಯ, ಸೋಜಿಗಗಳೆ.
- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
In reply to ಉ: ' ಬದುಕು ' by nageshamysore
ಉ: ' ಬದುಕು '
ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ತಮ್ಮ ಅನಿಸಿಕೆಗಳು ಸರಿಯಾಗಿವೆ, ಬದುಕು ನಾವು ನೋಡುವ ರೀತಿಯಲ್ಲಿ ಅರ್ಥವನ್ನು ಬಿಚ್ಚಿಡುತ್ತ ಹೋಗುತ್ತದೆ. ಹೀಗಾಗಿ ಬದುಕು ನನಗೆ ಕುತೂಹಲದ ವಸ್ತು, ಕವನದ ವಿಶ್ಲೇಷಣೆಗೆ ಧನ್ಯವಾದಗಳು.
ಉ: ' ಬದುಕು '
ಪಾಟೀಲರಿಗೆ ನಮಸ್ಕಾರ. ತಮ್ಮ ಈ ಚುಟುಕುಗಳು ತುಂಬಾ ಅರ್ಥಗರ್ಭಿತ ವಾಗಿದೆ.
ಈ ಪ್ರಪಂಚದಲ್ಲಿ ಕೆಲವರು ತಾಮಸ ಗುಣಗಳಿಂದ ಬದುಕಿದರೆ,ಕೆಲವರು ರಜೋಗುಣಗಳಿಂದ ಬದುಕನ್ನು ಸವೇಸುತ್ತಾರೆ.ಮತ್ತುಳಿದ ಕೆಲವೇ ಕೆಲವರು ಸಾತ್ವೀಕ ಗುಣದಿಂದ ಬದುಕಿ ಜಗತ್ತಿನಲ್ಲಿ ಹೆಜ್ಜೆಯ ಗುರುತನ್ನು ಉಳಿಸಿ ಹೋಗುತ್ತಾರೆ.ಹಾಗೆ, ಈ ಬದುಕಿನ ನಿಘಂಟಿನಲ್ಲಿ ಈ ಮೂರನೆ ವಿಭಾಗಕ್ಕೆ ಸೇರಿದ ವ್ಯಕ್ತಿಗಳು ಸದಾ ಪ್ರಕಾಶಿಸುತ್ತಿರುತ್ತಾರೆ.......ವಂದನೆಗಳು
In reply to ಉ: ' ಬದುಕು ' by swara kamath
ಉ: ' ಬದುಕು '
ರಮೇಶ ಕಾಮತರಿಗೆ ವಂದನೆಗಳು
ಈ ಚುಟುಕುಗಳನ್ನು ಸತ್ವ ರಜ ಮತ್ತೂ ತಮೋಗುಣಗಳ ಅಡಿಯಲ್ಲಿ ಬಹಳ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಿರಿ, ನಿಮ್ಮ ವಿಶ್ಲೇಷಣಾ ಶೈಲಿ ಹಿಡಿಸಿತು, ಧನ್ಯವಾದಗಳು.