ರಾಜ್ಕಪೂರ್ ದಿ ಶೋ ಮ್ಯಾನ್...!
ರಾಜ್ಕಪೂರ್ ದಿ ಶೋ ಮ್ಯಾನ್. ರಾಜ್ ಕಪೂರ್ ದಿ ಸೂಪರ್ ಸ್ಟಾರ್. ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮ ನಮ್ಮಲ್ಲಿ ಈಗ ಬರ್ತಾಯಿದೆ. ಅದಕ್ಕೆ ಎರಡು ಎಪಿಸೋಡ್ ಬರೆಯೋ ಅವಕಾಶ ಬಂದಿತ್ತು. ಕೊಂಚ ಅಳುಕಿನಿಂದಲೇ ಬರೆಯಲು ಪ್ರಾರಂಭಿಸಿದೆ ಸ್ಕ್ರಿಪ್ ಎಲ್ಲರಿಗೂ ಇಷ್ಟವಾಗಿದೆ. ಆ ಸ್ಕ್ರಿಪ್ಟ್ ನ ಯಥಾವತ್ತು ಕಾಪಿಯನ್ನ ಇಲ್ಲಿ ಲೇಖನ ರೂಪದಲ್ಲಿ ಇಲ್ಲಿ ಪೋಸ್ಟ್ ಮಾಡಿದ್ದೇನೆ. ಓದಿ, ಇಷ್ಟವಾದ್ರೆ ಹೇಳಿ...
-----
ರಾಜ್ಕಪೂರ್ ಬೆಳ್ಳಿಪರದೆಯ ಪ್ರಭಾವನ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಸಿನಿಮಾದಂತಹ ಈ ಮೋಹಕ ಜಗತ್ತಿನಲ್ಲಿ ಹೇಳಿದೆಲ್ಲ ಪ್ರೇಕ್ಷಕರ ಹೃದಯದಲ್ಲಿ ಉಳಿಯುತ್ತದೆಂಬ ಸತ್ಯ ರಾಜ್ಕಪೂರ್ ಅವರಿಗೆ ಕರಗತವಾಗಿತ್ತು. ಚಿತ್ರಗಳನ್ನ ಇಷ್ಟ ಪಡೋ ಪ್ರೇಕ್ಷಕರ ನಾಡಿ ಮಿಡಿತವೂ ಚೆನ್ನಾಗಿ ಬಲ್ಲವರಾಗಿದ್ದರು ರಾಜ್ಕಪೂರ್. ಅದೇ ಕಾರಣ್ಕಕೇನೆ ರಾಜ್ಕಪೂರ್ ಸಿನಿಮಾಗಳೂ ಈಗಲೂ ಜನರ ಮೆಚ್ಚುಗೆ ಪಡೆಯತ್ತವೆ.
ರಾಜ್ಕಪೂರ್ ಕನಸುಗಳ ಸುಂದರವಾಗಿದ್ದವು. ಅವುಗಳನ್ನ ಅನಾವರಣಗೊಳಿಸೋ ಕಲೆ ಕೂಡ ರಾಜ್ಕಪೂರ್ಗೆ ತುಂಬಾ ಚೆನ್ನಾಗಿ ಸಿದ್ಧಿಸಿತ್ತು. ಕಂಡ ಕನಸುಗಳನ್ನ ವಿಸ್ತಾರವಾಗಿ ತೆರೆಗೆ ತರೋದು ಅಷ್ಟೇ ಜಾಣ್ಮೆಯ ಕೆಲಸವೂ ಆಗಿತ್ತು. ಆದ್ರೆ, ರಾಜ್ ಕಪೂರ್ ಇಂಗ್ಲೀಷ್ ಚಿತ್ರಗಳ ಪ್ರಭಾವಕ್ಕೂ ಒಳಗಾದವ್ರು. ಅದು ಆಗಾಗ ಅವರ ಬ್ಲ್ಯಾಕ್ ಅಂಡ್ ವೈಟ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅವಾರಾ ಆ ಸಾಲಿನ ಒಂದು ಅದ್ಭುತ ಕಲಾಕೃತಿ..
1951 ರಲ್ಲಿ ತೆರೆಗೆ ಬಂದಿದ್ದ ಆವಾರಾ ಚಿತ್ರ ರಾಜ್ಕಪೂರ್ ಅಭಿನಯಕ್ಕೆ ಭಾರತೀಯ ಚಿತ್ರರಂಗದ ಚಾರ್ಲಿ ಚಾಪ್ಲಿನ್ ಎಂಬ ಹೆಸ್ರು ತಂದು ಕೊಡ್ತು..ನಿರ್ದೇಶನ ಮತ್ತು ನಿರ್ಮಾಣದ ಈ ಎರಡೂ ಜವಾಬ್ದಾರಿ ಹೊತ್ತ ರಾಜ್ ಕಪೂರ್, ನಾಯಕ ನಟ್ರೂ ಆಗಿದ್ದರು. ಇನ್ನೂ ವಿಶೇಷವೆಂದ್ರೆ, ರಾಜ್ಕಪೂರ್ ಅವರ ಇಡೀ ಫ್ಯಾಮಿಲಿ ಈ ಚಿತ್ರದಲ್ಲಿ ಅಭಿನಯಿಸಿತ್ತು. ತಂದೆ ಪೃಥ್ವಿ ರಾಜ್ ಕಪೂರ್, ಸೋದರ ಶಶಿ ಕಪೂರ್ ಚಿತ್ರದಲ್ಲಿ ಕಾಣಿಸಿಕಕೊಂಡ್ರು. ಅಷ್ಟೇ ಅಲ್ಲ, ಪೃಥ್ವಿ ರಾಜ್ ಕಪೂರ್ ತಂದೆ, ದೇವನ್ ಬಶ್ವಂತ್ ಕಪೂರ್
ಅವ್ರ ಈ ಚಿತ್ರದಲ್ಲಿ ಒಂದು ಕ್ಯಾಮಿಯೋ ರೋಲ್ ಕಾಣಿಸಿಕೊಂಡ್ರು.
ಶ್ರೀ420 ಚಿತ್ರದಲ್ಲೂ ಆವಾರಾ ಸಿನಿಮಾ ಝಲಕ್ ಇತ್ತು. ಅದು ಪಾತ್ರ ಪೋಷಣೆಯಲ್ಲಿ. ಚಾರ್ಲಿ ಚಾಪ್ಲಿನ್ ಅಭಿನಯದ ಲಿಟಲ್ ಟ್ರ್ಯಾಂಪ್ನ ಹಿಂದಿ ರೂಪದಂತೆ ಈ ಚಿತ್ರ ಕಂಡ್ರೂ, ಇದು ಪಕ್ಕಾ ರಾಜ್ಕಪೂರ್ ಸಿನಿಮಾ.ರಾಜ್ಕಪೂರ್ ಇಲ್ಲೊಬ್ಬ 420. ಮೋಸ ಮಾಡೋದೇ ರಾಜ್ ಕಾಯಕ. ಆದ್ರೆ, ರಾಜ್ ಕಪೂರ್ ಇಲ್ಲೊಬ್ಬ ಅನಾಥ. ಈ ಅನಾಥನಿಗೆ ಇಲ್ಲೊಬ್ಬ ಚೆಲುವೇನೂ ಸಿಗ್ತಾಳೆ. ಅವರೇ ಮಿಸ್ ನರ್ಗಿಸ್. ಈ ಜೋಡಿಯ ಈ ಚಿತ್ರ ಆಗಿನ ಟೈಮನ ಅತಿ ದೊಡ್ಡ ಬಾಕ್ಸ್ ಆಫೀಸ್ ಹಿಟ್ ಸಿನಿಮಾನೇ ಆಗಿತ್ತು...
ರಾಜ್ಕಪೂರ್ ಕಪ್ಪು-ಬಿಳುಪಿನ ಲೋಕದಿಂದ ಕಲರ್ಗೂ ಬಂದ್ರು. ತಮ್ಮ ಆ ಎಲ್ಲ ಕನಸುಗಳನ್ನ ಇಲ್ಲಿ ತುಂಬಾ ಸಾಕಾರಗೊಳಿಸಿದ್ರು. ಬೆಳ್ಳಿ ತೆರೆ ಮೇಲೆ ಕಲರ್..ಕಲರ್ ಕತೆಗಳನ್ನ ಹೇಳುತ್ತಲೇ, ಸಂಗಮ್ ದಂತಹ ಚಿತ್ರದ ಮೂಲಕ ಮೊದಲ ಭಾರಿ ತ್ರಿಕೋನ ಪ್ರೇಮ ಕತೆ ಹೇಳಿದ್ರು. ಇದು ಇವರ ಪಾಲಿಗೆ ಮೊದಲ ಕಲರ್ ಸಿನಿಮಾ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಅದ್ಭುತ ಚಿತ್ರ. ವೈಜಯಂತಿ ಮಾಲಾ, ರಾಜೇಂದ್ರ ಕುಮಾರ್ ಹಾಗೂ ರಾಜ್ಕಪೂರ್ ಜೋಡಿಯ ಈ ಚಿತ್ರ,ಈಗಲೂ ಒಂದು ಕ್ಲಾಸಿಕ್ ಚಿತ್ರಕೃತಿ ಎನಿಸಿಕೊಳ್ಳುತ್ತದೆ..
ಜಿಸ್ ದೇಸ್ಮೆ ಗಂಗಾ ಬೆಹತಿ ಹೈ. ಇದು ರಾಜ್ ಕಪೂರ್ ಕನಸಿನ ಮತ್ತೊಂದು ಸಿನಿಮಾ. ಆದ್ರೆ, ನಿರ್ದೇಶನದ ಹೊಣೆಯನ್ನ ರಾಧು ಕರ್ಮಾಕರ್ ಅವರಿಗೆ ಕೊಟ್ಟಿದ್ದರು ರಾಜ್ ಕಪೂರ್. ನಟನೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನ ಅಷ್ಟೆ ಹೊತ್ತಿದ್ದರು. ಅಂದುಕೊಂಡಂತೆ ಚಿತ್ರವೂ ತೆರೆಗೆ ಬಂದಿತು. ಜನ ಕೂಡ ಇದನ್ನ ತುಂಬಾ ಮೆಚ್ಚಿದರು. ಸಿನಿಮಾ ಪ್ರದರ್ಶನ ಕಾಣೋ ವೇಳೆನೇ ಇದೊಂದು ಹಿಟ್ ಚಿತ್ರ ಎಂದು ಹೇಳಿ ಬಿಟ್ಟಿದ್ದರು. ಅಷ್ಟು ಒಳ್ಳೆಯ ಈ ಚಿತ್ರದಲ್ಲಿ, ನಟಿ ಪದ್ಮಿನಿ, ಖಳನಾಯಕ ಪ್ರಾಣ ಅಭಿನಯಿಸಿದ್ದರು. ರಾಜ್ಕಪೂರ್ ಅಂತೂ ಎಲ್ಲರ ಹಾಟ್ ಫೇವರಿಟ್ ಅನಿಸಿಕೊಂಡ್ರು...
ಮೇರಾ ನಾಮ್ ಜೋಕರ್. ರಾಜ್ ಕಪೂರ್ ಚಿತ್ರ ಬದುಕನ್ನ ನುಂಗಿ ಬಿಟ್ಟ ಚಿತ್ರ. ಸಾಕಷ್ಟು ಹಿಟ್ ಚಿತ್ರಗಳನ್ನ ಕೊಟ್ಟಿದ್ದ ರಾಜ್ಕಪೂರ್, ಮೇರಾ ನಾಮ್ ಜೋಕರ್ ಚಿತ್ರದಿಂದ ಎಲ್ಲವನ್ನೂ ಕಳೆದುಕೊಂಡ್ರು. ನಟನೆ-ನಿರ್ದೇಶನ-ನಿರ್ಮಾಣ ಹೀಗೆ ಎಲ್ಲವನ್ನೂ ಮಾಡಿಕೊಂಡು ಬರೋಬ್ಬರಿ 6 ವರ್ಷಗಳವರೆಗೆ ಈ ಚಿತ್ರದ ಮೇಲೆ ಕೆಲಸ ಮಾಡಿದ್ರು. ಅದರ ಫಲ ಸಿಕ್ಕಿದೇನೂ. ಅತಿ ದೊಡ್ಡ ಫ್ಲಾಪ್ ಚಿತ್ರ ಎಂಬ ಕಳಂಕ...
1970 ರಲ್ಲಿ ಬಂದಿದ್ದ ಮೇರಾ ನಾಮ್ ಜೋಕರ್, ಬರೊಬ್ಬರಿ 2 ಗಂಟೆ 55 ನಿಮಿಷದ ಒಂದು ಸುದೀರ್ಘ ಚಿತ್ರವೇ ಆಗಿತ್ತು. ಇದೇ ಕಾರಣಕ್ಕೋ ಏನೋ. ಚಿತ್ರವನ್ನ ಜನ ಸ್ವೀಕರಿಸಲಿಲ್ಲ. ಆದ್ರೆ, ತೆರೆಗೆ ಬಂದು ಹೋದ್ಮಲೇ, ಇದೊಂದು ಕ್ಲಾಸಿಕ್ ಸಿನಿಮಾ ಎಂದ್ರು ಆಗಿನ ಮಂದಿ. ಆಗಲೇ ರಾಜ್ ಕಪೂರ್ ಎಲ್ಲವನ್ನೂ ಕಳೆದುಕೊಂಡಾಗಿತ್ತು. ಹಾಗಂತ ಸಿನಿಮಾ ಪ್ರೀತಿಯೇನೂ ಕಮ್ಮಿಯಾಗಿರಲಿಲ್ಲ. ಮೂರು ವರ್ಷದ ಬಳಿಕ 1973 ರಲ್ಲಿ ಬಾಬಿ ಚಿತ್ರ ಮಾಡಿದ್ರು. ಇದು ಕೈ ಕೊಡಲಿಲ್ಲ. ರಾಜ್ ಕಪೂರ್ ಅವರ ಕೈಹಿಡಿತು. ಬಿಗ್ ಹಿಟ್ ಸಿನಿಮಾ ಆಗಿ ಹೊಸ ಉತ್ಸಾಹ ಮೂಡಿಸಿತು..
ಬಾಬಿ ಚಿತ್ರದ ಯಶಸ್ಸು ರಿಷಿ ಕಪೂರ್ ಹಾಗೂ ಡಿಂಪಲ್ ಕಪಾಡಿಯಾರನ್ನ ಚಿತ್ರರಂಗಕ್ಕೆ ಕೊಟ್ಟಿತ್ತು. ಭಾರತೀಯ ಚಿತ್ರರಂಗದ ಮೊದಲ ಟೀನೇಜ್ ಚಿತ್ರವೆಂಬ ಹೆಗ್ಗಳಿಕೆಗೂ ಇದು ಪಾತ್ರವಾಯಿತು.ಈ ಚಿತ್ರದ ವಿಶೇಷತೆಗಳಲ್ಲಿ, ಹಾಡುಗಳೂ ಅಷ್ಟೇ ಪ್ರಮುಖವಾಗಿದ್ದವು. ಈ ಚಿತ್ರದ ಮೂಲಕವೇ ರಾಜ್ಕಪೂರ್ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರಿಂದ ಮೊದಲ ಭಾರಿ ಸಂಗೀತ ಮಾಡಿಸಿದ್ದರು...ಇದಕ್ಕೆ ಕಾರಣವೂ ಇದೆ. ಅದನ್ನೂ ನೋಡೋಣ...
----
ರಾಜ್ ಕಪೂರ್ ತಮ್ಮ ಚಿತ್ರಗಳಲ್ಲಿ ಕತೆಗೆ ಮಹತ್ವ ಕೊಡ್ತಿದ್ದರು. ಸ್ಕ್ರೀನ್ ಪ್ಲೇಗೂ ಅಷ್ಟೇ ಒತ್ತು ಕೊಡ್ತಿದ್ದರು. ಇದಲ್ಲದೇ ರಾಜ್ ಕಪೂರ್ ಸಿನಿಮಾಗಳಲ್ಲಿ ಹಾಡುಗಳೂ ಮಹತ್ವದ ಪಾತ್ರವನ್ನೂ ನಿರ್ವಹಿಸುತ್ತಿದ್ದವು. ಕಾರಣ, ರಾಜ್ ಕಪೂರ್ ಕಟ್ಟಿದ ಟೀಮೇ ಅಷ್ಟು ಪ್ರತಿಭಾವಂತರಿಂದ ಕೂಡಿತ್ತು. ಸಂಗೀತ ನಿರ್ದೇಶಕರಾದ ಶಂಕರ್-ಜೈಕಿಶನ್ ಖಾಯಂ ಸಂಗೀತ ನಿರ್ದೇಶಕರೇ ಆಗಿದ್ದರು. ರಾಜ್ ಕಪೂರ್ ಚಿತ್ರ ಜೀವನದ ಜತೆ..ಜತೆಗೆನೇ ಇವ್ರೂ ನಡೆದು ಬಂದರು...
ರಾಜ್ಕಪೂರ್ ಭಾರತೀಯ ಚಿತ್ರರಂಗಕ್ಕೆ ಮಹಾನ್ ಪ್ರತಿಭೆಗಳನ್ನ ಪರಿಚಯಿಸಿದ್ದಾರೆ. ಅವರಲ್ಲಿ ಸಂಗೀತ ನಿರ್ದೇಶಕರಾದ ಶಂಕರ್-ಜೈಕಿಶನ್ ಮೊದಲಿಗ್ರು. ಇವರ ಟ್ಯೂನ್ಗೆ ಅದ್ಭುತ ಸಾಹಿತ್ಯಗಳನ್ನ ಕೊಟ್ಟವರು ಹಸರತ್ ಜೈಪುರಿ ಹಾಗೂ ಶೈಲೇಂದ್ರ. ಇವ್ರೂ ಕೂಡ ರಾಜ್ ಕಪೂರ್ ಪರಿಚಯಿಸಿದ ಪ್ರತಿಭಾವಂತ ಚಿತ್ರ ಸಾಹಿತಗಳೇ. ಇವರ ಹೊಸ ಕಲ್ಪನೆಯಗಳಲ್ಲಿ ಮೇರಾ ನಾಮ್ ಜೋಕರ್ ಚಿತ್ರದ ಹಾಡುಗಳು ಮೂಡಿ ಬಂದವು..
ಆದ್ರೆ, ಈ ಎಲ್ಲ ಹಾಡುಗಳ ಚೆಂದಗೆ ಮೂಡಿ ಬರೋವಲ್ಲಿ ರಾಜ್ ಕಪೂರ್ ಶ್ರಮವೂ ಅಷ್ಟೇ ಇರುತಿತ್ತು. ಸಂಗೀತ ಮತ್ತು ಸಾಹಿತ್ಯಕ್ಕೆ ತಕ್ಕನಾಗಿಯೇ ರಾಜ್ಕಪೂರ್ ಸೆಟ್ ಗಳನ್ನ ಹಾಕಿಸುತ್ತಿದ್ರು. ಸಾಲುಗಳಲ್ಲಿ ಅಡಗಿರೋ ಭಾವವನ್ನ ತೆರೆ ಮೇಲೆ ತರೋಕೆ ಬೇಕಾದ ಎಲ್ಲ ದೃಶ್ಯ ಕಾವ್ಯವನ್ನೂ ರಾಜ್ ಕಪೂರ್ ಸಿನಿಮಾಗೋಸ್ಕರವೇ ಸೃಷ್ಠಿಸುತ್ತಿದ್ದರು..
ರಾಜ್ಕಪೂರ್ ಕಪ್ಪು ಬಿಳುಪಿನಲ್ಲೂ ಇದೇ ಕಮಾಲ್ ಮಾಡಿದ್ದರು. 1951 ರಲ್ಲಿ ನಿರ್ದೇಶನ ಮಾಡಿದ್ದ ಆವಾರದಲ್ಲೂ ರಾಜ್ ಕಪೂರ್ ಒಳ್ಳೆ ಒಳ್ಳೆ ಹಾಡುಗಳನ್ನೇ ಕೊಟ್ಟಿದ್ದರು. ಅವುಗಳಲ್ಲಿ ಗಾಯಕ ಮುಖೇಶ್ ಹಾಡಿದ್ದ, ‘ಆವಾರಾ ಹೂ’ ಗೀತೆ ವಿದೇಶದಲ್ಲೂ ತನ್ನ ಗುಂಗು ಹಿಡಿಸಿತ್ತು. ಇದರಲ್ಲಿ ಬರೋ ಸೆಟ್ ಅಂತೂ ಇಡೀ ಮಾರುಕಟ್ಟೆಯೊಂದರ ಚಿತ್ರಣವನ್ನೇ ಕಟ್ಟಿಕೊಟ್ಟಿತ್ತು..
ಶ್ರೀ 420 ಚಿತ್ರವಂತೂ ಒಂದು ಅದ್ಬುತ ಕಲ್ಪನೆಯ ಸಿನಿಮಾ. ಎಲ್ಲವೂ ಸೆಟ್ನಲ್ಲೀ ನಿರ್ಮಾಣಗೊಂಡ ಚಿತ್ರವಂದ್ರೂ ತಪ್ಪಿಲ್ಲ. ಕಪ್ಪು ಸುಂದರಿಯನ್ನ ಕಂಡ ಅನುಭವ ನೀಡಿದ ಶ್ರೀ420 ನಲ್ಲಿ, ಶೈಲೇಂದ್ರ ಬರೆದ ‘ಮೇರಾ ಜೂತಾ ಹೈ ಜಪಾನಿ’ ಹಾಡೂ, ಆಲ್ ಟೈಮ್ ಹಿಟ್ ಸಾಂಗ್ ಆಗಿಯೇ ಉಳಿದಿದೆ.
ಆದ್ರೆ, ಇದೇ ಚಿತ್ರದ ಪ್ಯಾರ್ ಹೂ ಇಕರಾರ್ ಹೂ ಹಾಡು, ರಾಜ್ ಕಪೂರ್ ಅದ್ಭುತ ಕಲ್ಪನೆಗೆ ಹಿಡಿದ ಕೈಗನ್ನಡಿಯಂತಿದೆ. ಎಂದೂ ನಿರೀಕ್ಷಿಸದೇ ಇರೋ ರೋಮ್ಯಾಂಟಿಕ್ ಫೀಲ್ ಈ ಹಾಡಲ್ಲಿದೆ. ಛತ್ರಿ ಕೆಳಗೆ ನಿಂತು ಪ್ರಣಯದಲ್ಲಿ ಕಳೆದು ಹೋಗುವ, ರಾಜ್ ಕಪೂರ್ ಹಾಗೂ ನರ್ಗಿಸ್ ಈ ಹಾಡಿನ ಪ್ರಮುಖ ಆಕರ್ಷಣೆ. ಇದೇ ಹಾಡಲ್ಲಿ ನರ್ಗಿಸ್ ಕೊಡುವ ಪ್ರತಿ ಎಕ್ಸ್ಪ್ರೆಷನ್ ಮನೋಜ್ಷ ಅಭಿನಯಕ್ಕೆ ಶಾಶ್ವತ ಸಾಕ್ಷಿಯಾಗಿ ಕಾಣಿಸುತ್ತದೆ..
ಸಂಗಮ್ ಚಿತ್ರದ ಎಲ್ಲ ಹಾಡುಗಳು ಈಗಲೂ ಹಿಟ್. ಆಗಿನ ಕಾಲದವ್ರು. ಈಗಿನ ಕಾಲದವ್ರು ಅಂತ ವಿಂಗಡನೆ ಮಾಡೋದೇ ಬೇಡ. ಈಗಿನ ಯುವಕರಿಗೂ ಇಷ್ಟಾಗುತ್ತವೆ ಸಂಗಮ್ ಚಿತ್ರ ಗೀತೆಗಳು.
ಬಾಬಿ ಚಿತ್ರದ ಗೀತೆಗಳೂ ಇದೇ ರೀತಿ ಸಂಗೀತ ಪ್ರೇಮಿಗಳಲ್ಲಿ ಗುಂಗು ಹಿಡಿಸಿದ್ದವು. ಆದ್ರೆ, ಬಾಬಿ ಚಿತ್ರದಿಂದಲೇ ರಾಜ್ ಕಪೂರ್ ಸಂಗೀತ ನಿರ್ದೇಶಕರನ್ನ ಬದಲಿಸಿದ್ರು. ಕಾರಣ, ಜೈಕಿಶನ್ ನಿಧನರಾದ್ರು. ಆ ಒಂದು ಕಾರಣಕ್ಕೆ ರಾಜ್ ಕಪೂರ್ ತಂಡದಲ್ಲಿ ಲಕ್ಷ್ಮೀಕಾಂತ್ ಪ್ಯಾರೇ ಲಾಲ್ ಬಂದ್ರು. ಅವರು ಮೊದಲು ಸಂಗೀತ ನೀಡಿರೋ ಬಾಬಿ ಚಿತ್ರದ ಅಷ್ಟೂ ಹಾಡುಗಳೂ ಟೀನೇಜ್ ಲವ್ ಸ್ಟೋರಿಗೆ ಹೊಸದೊಂದು ಫೀಲ್ ಕೊಟ್ಟವು...
ರಾಜ್ಕಪೂರ್ ಚಿತ್ರಗಳನ್ನ ಪ್ರಚಾರ ಮಾಡಿಸಿದಷ್ಟೇ, ಹಾಡುಗಳನ್ನ ತುಂಬಾ ಚೆನ್ನಾಗಿ ಜನರಿಗೆ ತಲುಪಿಸುತ್ತಿದ್ದರು. ತಮ್ಮ ಆರ್.ಕೆ.ಫಿಲ್ಮ್ ಸ್ಟುಡಿಯೋ ಎದುರು ಪಾರ್ಟಿಗಳನ್ನ ಕೊಟ್ಟು ಅಲ್ಲಿ ತಮ್ಮ ಹೊಸ ಸಿನಿಮಾದ ಹಾಡುಗಳನ್ನ ಫ್ಲೇ ಮಾಡ್ತಿದ್ದರು. ಅದನ್ನ ಕೇಳಲು ಬಂದ ಭಿಕ್ಷುಕರೂ ಆ ಹಾಡುಗಳನ್ನ ಕೇಳಿಕೊಂಡು ಎಲ್ಲಡೆ ಹಾಡುತ್ತಿದ್ದರು. ಹೀಗೆ ರಾಜ್ ಕಪೂರ್ ಹಾಡುಗಳನ್ನ ಪ್ರಮೋಟ್ ಮಾಡ್ತಿದ್ದರು..
---
ರಾಜ್ಕಪೂರ್ ಸದಾ ಕ್ರೀಯಾಶೀಲ ಮನುಷ್ಯ. ತಮ್ಮ ಕೊನೆಯ ದಿನಗಳವರೆಗೂ ಸಿನಿಮಾದಲ್ಲಿಯೇ ತೊಡಗಿಕೊಂಡಿದ್ದವರು. ಇಡೀ ಫ್ಯಾಮಿಲಿಯೇ ಚಿತ್ರರಂಗದಲ್ಲಿ ಇದ್ದಿದರಿಂದಲೇ ರಾಜ್ ಕಪೂರ್ ಜತೆಗೆ ಮಕ್ಕಳು ಸಿನಿಮಾರಂಗಕ್ಕೆ ಬಂದ್ರು. ಮೊಮ್ಮಕಳು ಆಗಲೇ ಚಿತ್ರದ ಬಗೆಗಿನ ಉತ್ಸುಕತೆ ಹೆಚ್ಚಿಸಿಕೊಂಡಿದ್ದರು.ಆದ್ರೆ ರಾಜ್ ಕಪೂರ್ ಸಾಯೋ ಮುನ್ನ, ಪುತ್ರ ರಿಷಿ ಕಪೂರ್ ಅವ್ರ ಹೀನಾ ಚಿತ್ರ ನಿರ್ಮಾಣದ ಯೋಜನೆ ಮತ್ತು ಯೋಚನೆ ಮಾಡಿದ್ದರು....
ರಾಜ್ಕಪೂರ್ ರಾಮ್ ತೇರಿ ಗಂಗಾ ಮೈಲಿ ಥರವೇ ಮತ್ತೊಂದು ಚಿತ್ರವನ್ನೂ ಮಾಡಿದ್ರು. ಅದು ಹೀನಾ. 1991 ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರದ ಕಲ್ಪನೆಯ ಹಿಂದೆ ಇದ್ದವ್ರು ರಾಜ್ ಕಪೂರ್. ಇಂಡೋ ಪಾಕ್ ಪ್ರೇಮ ಕತೆ ಆಧರಿಸಿದ ಈ ಚಿತ್ರವನ್ನ, ರಾಜ್ ಕಪೂರ್ ಅವ್ರೇ ಡೈರೆಕ್ಟ್ ಮಾಡಬೇಕಿತ್ತು. ಆದ್ರೆ, ಅದು ಸಾಧ್ಯವಾಗಲೇಯಿಲ್ಲ....
ಅಸ್ತಮಾ ರೋಗದಿಂದ ಬಳಲುತ್ತಿದ್ದ ರಾಜ್ ಕಪೂರ್, 1988 ರ ವೇಳೆನೆ ಹೀನಾ ಚಿತ್ರದ ಕಲ್ಪನೆಯನ್ನ ರೆಡಿ ಮಾಡಿಕೊಂಡಿದ್ದರು. ಆದ್ರೆ, ರಾಜ್ ಕಪೂರ್, 1988 ಜೂನ್ -2 ರಂದು ಅಸ್ತಮಾ ರೋಗ ಸಂಬಂಧಿ ತೊಂದರೆಯಿಂದ, 63 ನೇ ವಯಸ್ಸಿಗೆ ತೀರಿ ಹೋದ್ರು.
ಆದ್ರೆ, ರಾಜ್ ಕಪೂರ್ ಹೋಗುತ್ತಿದ್ದಂತೆ, ಎಲ್ಲೆಡೆ ಆಗ ಶೋ ಮ್ಯಾನ್ ಆಟ್ ಮುಗಿಸಿದ ಅನುಭವ. ಈ ಅನುಭವದಲ್ಲಿಯೇ ಇರೋ ಪ್ರೇಕ್ಷಕರಿಗೆ, ಈಗ ಮೊಮ್ಮಗ ರಣಬೀರ್ ಕಪೂರ್ ಅಜ್ಜನ ಪ್ರತಿ ಬಿಂಬದಂತೆ ಕಾಣುತ್ತಿದ್ದಾರೆ.
ರಣ್ಬೀರ್ ಕಪೂರ್ ಅಭಿನಯ ರಾಜ್ ಕಪೂರ್ ಅಭಿನಯವನ್ನ ಹೋಲುವಂತಿದೆ. ಅಜ್ಜನ ಪಾತ್ರವನ್ನೇ ನೋಡಿ ಬೆಳೆದ ರಣ್ಬೀರ್ ಕಪೂರ್ ರಕ್ತದಲ್ಲಿಯೇ ಅಭಿನಯ ಅಡಗಿದೆ. ಒಪ್ಪಿಕೊಂಡ ಅಷ್ಟೂ ಸಿನಿಮಾಗಳನ್ನ ಪಾತ್ರಗಳ ಲೆಕ್ಕ ಹಾಕಿದ್ರೆ, ಎಲ್ಲವೂ ಭಿನ್ನ...ವಿಭಿನ್ನ. ಅದಕ್ಕೇನೆ ಬಾಲಿವುಡ್ ಈಗ ರಣ್ಬೀರ್ ಕಪೂರ್ನನ್ನ ಬಾಲಿವುಡ್ನ ಮುಂದಿನ ಸೂಪರ್ ಸ್ಟಾರ್ ಅಂತ ಬಣ್ಣಿಸುತ್ತಿದೆ. ಇದುವೇ ಅಲ್ಲವೇ.ರಾಜ್ ಕಪೂರ್ ಫ್ಯಾಮಿಲಿಯ ಸಿನಿಮಾ ಪ್ರೀತಿ..
Comments
ಉ: ರಾಜ್ಕಪೂರ್ ದಿ ಶೋ ಮ್ಯಾನ್...!
Raj kapoor was a very great artiste. His earlier films were revolving around the common man. His innocent looking performances stole every ones heart. It may be around 1967. I remember ,a nondescript Raj kapoor wearing a half pant and sitting with real nondescript medicos like us and drinking a chaay in a small hotel in mysore tells a lot of him. He is ,not as was the one and only show man of Bolly wood. Hats off to u -ilke u always did in your films
ಉ: ರಾಜ್ಕಪೂರ್ ದಿ ಶೋ ಮ್ಯಾನ್...!
>>>>ರಣ್ಬೀರ್ ಕಪೂರ್ ಅಭಿನಯ ರಾಜ್ ಕಪೂರ್ ಅಭಿನಯವನ್ನ ಹೋಲುವಂತಿದೆ..
-ಮೇರಾ ಜೂತಾ ಹೆ ಜಪಾನಿ, ಆವಾರಾ ಹೂಂ...ರಾಜ್ ಕಪೂರ್ ಸಿನೆಮಾ ಹಾಡುಗಳಿಗೆ ಇತ್ತೀಚೆಗೆ ರಣಬೀರ್ ಕಪೂರ್ ೧೯ನೇ ಸ್ಕ್ರೀನ್ ಅವಾರ್ಡ್ ಫಂಕ್ಷನ್ (೨೦೧೩) ನಲ್ಲಿ ಡ್ಯಾನ್ಸ್ ಮಾಡಿದ್ದರು. ರಾಜ್ ಕಪೂರಂತೆ ಕಾಣಿಸುತ್ತಲಿದ್ದರು,ಡ್ಯಾನ್ಸ್ ಸಹ ಹಾಗೇ ಮಾಡಿದರು.
ರಣಬೀರ್ ಕಪೂರ್‌ನ ಇತ್ತೀಚಿನ ಚಿತ್ರ ’ಬದ್ತಮೀಜ್ ದಿಲ್’ನ ಹಾಡಿಗೆ ರಾಜ್ ಕಪೂರ್ ಅಭಿನಯ ಇಲ್ಲಿದೆ- http://www.youtube.com/watch?v=7QyLRhj6RXo :)