ಅಪ್ಪ ಹಾಗು ಅಜ್ಜಿಯ ಹಾಗೆ ನನ್ನನ್ನೂ ಕೊಲ್ಲುವರು ಎನ್ನುತ್ತಾರಂತೆ ರಾಹುಲ್ ಗಾಂಧಿ. ಇದು:

ಅಪ್ಪ ಹಾಗು ಅಜ್ಜಿಯ ಹಾಗೆ ನನ್ನನ್ನೂ ಕೊಲ್ಲುವರು ಎನ್ನುತ್ತಾರಂತೆ ರಾಹುಲ್ ಗಾಂಧಿ. ಇದು:

Submitted by H A Patil Sat, 10/26/2013 - 19:32

ಮಾನ್ಯರೆ ವಂದನೆಗಳು
ರಾಹುಲ್ ಗಾಂಧಿ ತಮ್ಮ ಗಮನಕ್ಕೆ ಬಂದಿದ್ದನ್ನು ಹೇಳಿದ್ದಾರೆ, ಆತನಿನ್ನೂ ರಾಜಕೀಯಕ್ಕೆ ಹೊಸಬ ಜೊತೆಗೆ ಅನನುಭವಿ ಹೀಗಾಗಿ ಆತನಲ್ಲಿ ರಾಜ ತಾಂತ್ರಿಕ ನಿಪುಣತೆ ಕಡಿಮೆಯಿದೆ, ಆತನ ಹೇಳಿಕೆಗಳು ಅವರ ಪಕ್ಷಕ್ಕೆ ಅದರ ಇಮೇಜಿಗೆ ಧಕ್ಕೆ ತರುತ್ತಿವೆ, ಜೊತೆಗೆ ಆತನಿಗೆ ದಕ್ಷ ಸಲಹೆಗಾರರ ಅವಶ್ಯಕತೆಯಿದೆ. ಈ ಸಂಕೀರ್ಣ ವ್ಯವಸ್ಥೆಯ ನಮ್ಮ ದೇಶದ ನಾಡಿ ಮಿಡಿತ ಆತನಿಗಿನ್ನೂ ಅರ್ಥವಾಗಿಲ್ಲ, ರಾಜೀವ ಗಾಂಧೀ ಗಾದರೋ ಈ ನೆಲದ ಪರಿಚಯವಿತ್ತು, ಸಮರ್ಥ ತಾಯಿಯಿದ್ದಳು ಸಲಹೆಗಾರರಿದ್ದರು. ಆದಷ್ಟು ಬೇಗನೆ ಈ ದೇಶ ಆತನಿಗರ್ಥವಾಗಲಿ ಸಮರ್ಥ ರಾಜಕಾರಣೀಯಾಗಲಿ ಎನ್ನುವ ಆಶಯದೊಂದಿಗೆ

Submitted by ಗಣೇಶ Sun, 10/27/2013 - 22:02

ಪಾಟೀಲರೆ,
>>ಆತನಿನ್ನೂ ರಾಜಕೀಯಕ್ಕೆ ಹೊಸಬ ಜೊತೆಗೆ ಅನನುಭವಿ! ರಾಜೀವ್ ಗಾಂಧಿಗಾದರೊ ಈ ಮಾತು ಅನ್ವಯಿಸುತ್ತಿತ್ತು. ೧೯೮೦ರಲ್ಲಿ ಸಂಜಯ್ ಗಾಂಧಿ ಅಪಘಾತದಲ್ಲಿ ನಿಧನರಾದಾಗ, ಒತ್ತಾಯದಿಂದ ಎಳತಂದುದು. ೮೪ರಲ್ಲೇ ಇಂದಿರಾ ಗಾಂಧಿ ಕೊಲೆಯಾದಾಗ ಪ್ರಧಾನಿ ಪಟ್ಟಕೇರಿಸಿಯೇಬಿಟ್ಟರು!
೯೧ರಲ್ಲಿ ರಾಜೀವ್ ಗಾಂಧಿಯ ಕೊಲೆಯಾದರೂ, ರಾಹುಲ್ ಪಾಲಿಟಿಕ್ಸ್‌ಗೆ ಎಂಟರ್ ಆದುದು ೨೦೦೪ ರಲ್ಲಿ ಅಮೇಠಿ ಎಂ.ಪಿಯಾಗಿ. ೨೦೦೭ ರಲ್ಲಿ ಕಾಂಗ್ರೆಸ್‌ನ ಜನರಲ್ ಸೆಕ್ರೆಟರಿಯಾದನು. ೨೦೧೩ರಲ್ಲಿ ಕಾಂಗ್ರೆಸ್ ವೈಸ್ ಪ್ರೆಸಿಡೆಂಟ್ ಆದ. ಇನ್ನೂ ಹೊಸಬನಾ? ಅನನುಭವಿಯಾ?
>>ಆದಷ್ಟು ಬೇಗನೆ ಈ ದೇಶ ಆತನಿಗರ್ಥವಾಗಲಿ ಸಮರ್ಥ ರಾಜಕಾರಣೀಯಾಗಲಿ ಎನ್ನುವ ಆಶಯದೊಂದಿಗೆ!
-ದೇಶ ತುಂಬಾ ಬೇರೆ ಸಮರ್ಥರು ಯಾರೂ ಇಲ್ಲವೇ? ನೀವೇ ಅಂದಂತೆ "ಹೊಸಬ, ಅನನುಭವಿ, ದೇಶ ಅರ್ಥವಾಗದವ, ಅಸಮರ್ಥ"ನ ನಿರೀಕ್ಷೆಯಲ್ಲೇ ಇರುವಿರಲ್ಲಾ!?

Submitted by ಗಣೇಶ Sun, 10/27/2013 - 23:30

ಪಾಟೀಲರೆ, >>ಆತನಿನ್ನೂ ರಾಜಕೀಯಕ್ಕೆ ಹೊಸಬ ಜೊತೆಗೆ ಅನನುಭವಿ! ರಾಜೀವ್ ಗಾಂಧಿಗಾದರೊ ಈ ಮಾತು ಅನ್ವಯಿಸುತ್ತಿತ್ತು. ೧೯೮೦ರಲ್ಲಿ ಸಂಜಯ್ ಗಾಂಧಿ ಅಪಘಾತದಲ್ಲಿ ನಿಧನರಾದಾಗ, ಒತ್ತಾಯದಿಂದ ಎಳತಂದುದು. ೮೪ರಲ್ಲೇ ಇಂದಿರಾ ಗಾಂಧಿ ಕೊಲೆಯಾದಾಗ ಪ್ರಧಾನಿ ಪಟ್ಟಕೇರಿಸಿಯೇಬಿಟ್ಟರು! ೯೧ರಲ್ಲಿ ರಾಜೀವ್ ಗಾಂಧಿಯ ಕೊಲೆಯಾದರೂ, ರಾಹುಲ್ ಪಾಲಿಟಿಕ್ಸ್‌ಗೆ ಎಂಟರ್ ಆದುದು ೨೦೦೪ ರಲ್ಲಿ ಅಮೇಠಿ ಎಂ.ಪಿಯಾಗಿ. ೨೦೦೭ ರಲ್ಲಿ ಕಾಂಗ್ರೆಸ್‌ನ ಜನರಲ್ ಸೆಕ್ರೆಟರಿಯಾದನು. ೨೦೧೩ರಲ್ಲಿ ಕಾಂಗ್ರೆಸ್ ವೈಸ್ ಪ್ರೆಸಿಡೆಂಟ್ ಆದ. ಇನ್ನೂ ಹೊಸಬನಾ? ಅನನುಭವಿಯಾ? >>ಆದಷ್ಟು ಬೇಗನೆ ಈ ದೇಶ ಆತನಿಗರ್ಥವಾಗಲಿ ಸಮರ್ಥ ರಾಜಕಾರಣೀಯಾಗಲಿ ಎನ್ನುವ ಆಶಯದೊಂದಿಗೆ! -ದೇಶ ತುಂಬಾ ಬೇರೆ ಸಮರ್ಥರು ಯಾರೂ ಇಲ್ಲವೇ? ನೀವೇ ಅಂದಂತೆ "ಹೊಸಬ, ಅನನುಭವಿ, ದೇಶ ಅರ್ಥವಾಗದವ, ಅಸಮರ್ಥ"ನ ನಿರೀಕ್ಷೆಯಲ್ಲೇ ಇರುವಿರಲ್ಲಾ!?

ಗಣೇಶ ರವರಿಗೆ ವಂದನೆಗಳು
ತಮ್ಮ ಪ್ರತಿಕ್ವರಿಯೆ ಓದಿದೆ <<< ಹೊಸಬ ಅನನನುಭವಿ ......ಇರುವಿರಲ್ಲ >>>. ೊಂದು ದೃಷ್ಟಿಯಿಂದ ನೋಡಿದರೆ ನಿಮ್ಮ ಅಭಿಪ್ರಾಯ ಸರಿ. ತಮ್ಮ ಅನಿಸಿಕೆಯಲ್ಲಿ ರಾಜೀವ ಮತ್ತು ರಾಹುಲ ಗಾಂದಿ ಯವರ ರಾಜಕೀಯದಲ್ಲಿ ಅಲಂಕರಿಸಿದ ಹುದ್ದೆಗಳ ವಿವರ ನೀಡಿದ್ದೀರಿ, ಅದೆಲ್ಲ ಸರಿ. ಅವುಗಳನ್ನು ಪರಿಗಣನೆಗೆ ತೆಗೆದುಕೊಂಡು ನೋಡಿದರೂ ರಾಜೀವ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ. ಆತ ತನ್ನ ತನ್ನ ತಮ್ಮನ ಮರಣದ ನಂತರ ರಾಜಕೀಯ ಪ್ರವೇಶಿಸಿದರೂ ರಾಜಕೀಯ ಸೂಕ್ಷ್ಮ ಗ್ರಾಹಿತ್ವ ಆತನಿಗಿತ್ತು, ಆ ಯುವಕನಿಗೆ ಆಧುನಿಕ ಭಾರತದ ಕನಸಿತ್ತು, ಟೆಲಿವಿಜನ್ ಮತ್ತು ಟೆಲಿಫೋನ್ ರಂಗದಲ್ಲಿ ( ಸ್ಯಾಮ್ ಪಿತ್ರೋಡಾ ರಂತಹ ಜೀನಿಯಸ್ ಗಳನ್ನು ಬಳಿಸಿಕೊಂಡು ) ಮಾಡಿದ ಕ್ರಾಂತಿ ನಮ್ಮ ನಿಮ್ಮೆಲ್ಲರ ಮುಂದಿದೆ, ಈ ರಾಹುಲ ಗಾಂಧಿ ಪ್ರತಿನಿಧಿಸುವ ಪಕ್ಷದ ಸ್ಥಿತಿ ಏನಾಗಿದೆಯೆಂದರೆ ಅವರಿಗೆ ಒಂದು ಸೆಕ್ಯೂಲರ್ ಮುಖ ಬೇಕು, ಅವರ ಕುಟುಂಬ ಹೊರತು ಪಡಿಸಿ ಬೇರೆಡೆ ನಾಯಕನನ್ನು ಹುಡುಕುವ ಮನಸ್ಥಿತಿಯಲ್ಲಿ ಅವರು ಹಿಂದೆಯೂ ಇರಲಿಲ್ಲ ಈಗಲೂ ಇಲ್ಲ. ಹಾಗಾಗಿಯೆ ಪ್ರಣಬ್ ಮುಖರ್ಜಿಯನ್ನು ರಾಷ್ಟ್ರಪತಿ ಹುದ್ದೆಗೆ ಏರಿಸಿ ರಾಹುಲ ಗಾಂದಿ ಪ್ರಧಾನಿ ಹುದ್ದೆಗೇರುವ ಮಾರ್ಗವನ್ನು ಮುಕ್ತ ಗೊಳಿಸಲಾಯಿತು. ಇಂತಹ ಹೀನ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಈ ಮೊದಲೆ ಹೇಳಿದಂತೆ << ಹೊಸಬ ಅನನುಭವಿ ದೇಶ ಅರ್ಥವಾಗದವ >> ಎನ್ನುವ ಆಶಯವನ್ನು ವ್ಯಕ್ತ ಪಡಿಸ ಬೇಕಾಯಿತು. ಇಂದಿನ ರಾಜಕೀಯದಲ್ಲಿ ಶೂನ್ಯತೆ ಆವರಿಸಿದ ಸಂಧರ್ಭದಲ್ಲಿ ರಾಹುಲ ಗಾಂಧಿ ಒಬ್ಬ ಸಮರ್ಥನಾಗಲಿ ಎನ್ನುವ ಸದಾಶಯ ಬಿಟ್ಟರೆ ಮತ್ತೇನು ಅಭಿಪ್ರಾಯ ವ್ಯಕ್ತ ಪಡಿಸಲು ಸಾಧ್ಯ. ತಮ್ಮ ಆರೋಗ್ಯಕರ ಪ್ರತಿಕ್ರತಿಯೆಗೆ ಧನ್ಯವಾದಗಳು.

Submitted by partha1059 Mon, 10/28/2013 - 15:51

ಅಪ್ಪ ಹಾಗು ಅಜ್ಜಿಯ ಹಾಗೆ ನನ್ನನ್ನೂ ಕೊಲ್ಲುವರು ಎನ್ನುತ್ತಾರಂತೆ...

ಬಹುಶಃ ಆ ಭಯಕ್ಕೆ ಪ್ರಧಾನಿ ಪಟ್ಟವೇರಲು ಹಿಂಜರಿಯುತ್ತಿರುವರೂ ಎನ್ನುವಿರಾ? ಗಣೇಶರು ಹೇಳಿದಂತೆ ೧೧೦ ಕೋಟಿ ಜನರಲ್ಲಿ ಅಂತಹ ಅನನುಭವಿಯ ಹೊರತಾಗಿ ಯಾರು ಅರ್ಹರೇ ಎಲ್ಲವೇ ? . ಬೇರೆ ಪಕ್ಷ ಬಿಡಿ ಕಡೆಗೆ ಕಾಂಗ್ರೆಸಿನ್ನಲ್ಲಿ ಸಹ ಪ್ರಧಾನಿ ಪಟ್ಟವೇರಲು ಅವನನ್ನು ಹೊರತು ಪಡಿಸಿ ಯಾರು ಸಿದ್ದರಿಲ್ಲ ಅನ್ನುವದಾದರೆ , ಪಕ್ಷವನ್ನು ಗೆಲ್ಲಿಸಿ ಎಂದು ಏಕಾದರು ಕೇಳಬೇಕು ಅರ್ಥವಾಗುತ್ತಿಲ್ಲ.

Submitted by ಗಣೇಶ Tue, 10/29/2013 - 23:57

(ಬಹುಷಃ ನಾನು ಎರಡು ಸಲ ಒತ್ತಿದ್ದಕ್ಕೆ ಇದು ಖಾಲಿಯಾಗಿ ನನ್ನ ಕಂಪ್ಯೂಟರ್‌ನಲ್ಲಿ ಕಾಣಿಸುತ್ತಿತ್ತು. ಅದಕ್ಕೇ ಭರ್ತಿ ಮಾಡುತ್ತಿರುವೆ )
ಪಾಟೀಲರು ಪ್ರತಿಕ್ರಿಯೆ ನೀಡುತ್ತಾ- "ತಮ್ಮ ಆರೋಗ್ಯಕರ ಪ್ರತಿಕ್ರತಿಯೆಗೆ ಧನ್ಯವಾದಗಳು." ಪ್ರತಿಕ್ರಿಯೆ ಇರಬಹುದು. ಆದರೆ ಆರೋಗ್ಯಕರ ಎಂದೇಕೇ..? ನನ್ನ ಇತರ ಪ್ರತಿಕ್ರಿಯೆಯಿಂದ ಯಾರಿಗಾದರೂ "ಅನಾರೋಗ್ಯ"ವಾಗಿದೆಯಾ?:)
**********
ಸಂಪದದಲ್ಲಿ "ಸಮೀಕ್ಷೆ" ಚೆನ್ನಾಗಿದೆ. ಪ್ರತಿದಿನದ ಮುಖ್ಯನ್ಯೂಸ್‌ಗೆ +ಸಮೀಕ್ಷೆಗೆ ಒಂದು ಕಾಲಂ ಇದ್ದರೆ- ದಿನದಿನದ ವರ್ತಮಾನದ ಬಗ್ಗೆ ಸಂಪದಿಗರ ಪ್ರತಿಕ್ರಿಯೆ ಅರಿಯಬಹುದು.