ಸಾಲುಗಳು - ೧ (ನನ್ನ ಸ್ಟೇಟಸ್)

Submitted by partha1059 on Wed, 10/30/2013 - 20:56

ನನ್ನ ಸ್ಟೇಟಸ್ -  ಕೆಲವು ಸಾಲುಗಳು  

ಯುವಕನೊಬ್ಬನಿಗೆ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಅಪಾರ ಆಸಕ್ತಿ
ಕನ್ನಡವೆಂದರೆ ಪ್ರೇಮ.
ಅದಕ್ಕಾಗಿ ಆತ ಚಿಂತಿಸಿದ , ಕನ್ನಡಕ್ಕಾಗಿ ಏನಾದರು ಮಾಡಬೇಕು 
ಅನ್ನುವ ತುಡಿತ.
ಕನ್ನಡ ಪತ್ರಿಕೆ ಪ್ರಾರಂಬಿಸಿದ.
ಅಲ್ಲಿಯ ಅಡೆತಡೆಗಳು ತಾಂತ್ರಿಕ ವಿಷಯಗಳು ವ್ಯಾವಹಾರಿಕ ವಿಷಯಗಳು
ಇಂತಹುದೆ ವಿಷಯಗಳು ಮನವನ್ನು ತುಂಬುತ್ತಾ ಹೋಯಿತು.
ಕಡೆಗೊಮ್ಮೆ ಕನ್ನಡ ಹಾಗು ಕನ್ನಡ ಸಾಹಿತ್ಯ ಇಂತಹುವೆಲ್ಲ 
ಅವನ ಮನದೊಳಗಿನಿಂದ ಕರಗುತ್ತಾ ಹೋಯಿತು       ೩೦/೧೦/೧೩
-------------------------------------------------------

ರಸ್ತೆಗಳು ಸದಾ ನೆಲದ ಮೇಲೆ ಬಿದ್ದಿರುತ್ತದೆ 
ಅಂದುಕೊಂಡಿದ್ದೆ
.
ಫ್ಲೈ ಓವರ್ ಗಳು ಬಂದ ಮೇಲೇ ಅರ್ಥವಾಗಿದ್ದು
ರಸ್ತೆಗಳು ಆಕಾಶದಲ್ಲೂ ಇರುತ್ತವೆ              ೩೦/೧೦/೧೩

------------------------------------------------------------------
ನಿದ್ರಾಭಂಗ
=======
ರಾತ್ರಿಯ ನೀರವ ಮೌನ !
ಎಚ್ಚರವೂ ಅಲ್ಲ ನಿದ್ದೆಯೂ ಅಲ್ಲದ ಮಂಪರಿನ ಸ್ಥಿತಿ
ಎಲ್ಲಿಯೋ ದೂರದಲ್ಲಿರುವ ರಸ್ತೆಯಲ್ಲಿ ನಾಯಿಯೊಂದಕ್ಕೆ ಅದೇನು ’ಸತ್ಯ’ ಕಂಡಿತೋ , ಜೋರಾಗಿ ಬೊಗಳಲು ತೊಡಗಿತು.
ಆ ಬೊಗಳುವಿಕೆಗೆ ಕಾದಿದ್ದ, ಅಕ್ಕ ಪಕ್ಕದ ರಸ್ತೆಯಲ್ಲಿದ್ದ ನಾಯಿಗಳೆಲ್ಲ ವಿಚಿತ್ರವಾಗಿ ಬೊಗಳಲು , ಊಳಿಡಲು , ಕೂಗಲು ಪ್ರಾರಂಭಿಸಿದವು.
ಒಂದು ನಾಯಿಯ ಬೊಗಳುವಿಕೆಯಿಂದ ಸ್ಪೂರ್ತಿಗೊಂಡ ಮತ್ತೊಂದು ನಾಯಿ ತಾನು ಮತ್ಯಾವುದೋ ರಾಗದಲ್ಲಿ ಕೂಗುತ್ತಿತ್ತು. 
ಈ ರಸ್ತೆಯ ನಾಯಿಗಳ ಕೂಗಾಟ ದೂರ......ದೂರದಲ್ಲಿದ್ದ ರಸ್ತೆಯಲ್ಲಿ ಮಲಗಿದ್ದ ನಾಯಿಗಳ ಕಿವಿಗೂ ಬಿದ್ದಿತು, ಕಿವಿ ನಿಮಿರಿಸಿದವು
ಅವುಗಳಿಗೆ ಅರ್ಥವಾಗದು , ದೂರದ ಈ ನಾಯಿಗಳು ಏತಕ್ಕೆ ಕೂಗುತ್ತಿವೆ ಎಂದು
ಆದರೂ ಬಿಡಲಿಲ್ಲ ಅದೂ ಸಹ ತನ್ನ ಶಕ್ತ್ಯಾಯುಸಾರ ಜೋರಾಗಿ ಬೊಗಳಿತು
ಹೀಗೆ ನಿರಂತರವಾಗಿ ಬೊಗಳುತ್ತಿದ್ದ ನಾಯಿಗಳು , ತಮ್ಮ ಬೊಗಳುವಿಕೆಗೆ ಪ್ರತಿಕ್ರಿಯೆಗಳೆಲ್ಲ ಕಡಿಮೆಯಾದಂತೆ
ಉತ್ಸಾಹ ಕಳೆದುಕೊಂಡವು. ಕ್ರಮೇಣ ಮತ್ತೆ ಮೌನ ನೆಲಸಿತು.
ನನಗೆ ನಿದ್ರಾ ಭಂಗವಾಗಿ ಪೂರ್ಣ ಎಚ್ಚರವಾಯಿತು.
ಮತ್ತೆ ಮಲಗಲು ಪ್ರಯತ್ನಿಸುತ್ತ ಕಣ್ಣು ಮುಚ್ಚಿದೆ.
ನಿದ್ರೆ ಮಾಡಲು ಪ್ರಯತ್ನಿಸಿದೆ....
ಮಂಪರು..     
 ೩೦/೧೦/೧೩
--------------------------------------------------------------------------------------
ಸಿಂಹ
ಚಿನ್ನದ ಆಭರಣ ಖರೀದಿಯಿಂದ ಉತ್ತಮ ಗಿಫ್ಟ್ ಐಟಂ ಪಡೆಯುವಿರಿ. ಟಿ.ವಿ.ಗಾಗಿ ಜಾಹಿರಾತು ಚಿತ್ರಗಳಿಂದ ಅಪಾರ ಹಣ ಗಳಿಸುವಿರಿ. 
- ಇದು ಇಂದಿನ ಪ್ರಜಾವಾಣಿಯಲ್ಲಿ ಇರುವ ದಿನ ಭವಿಷ್ಯ. ಚಿನ್ನದ ಆಭರಣ ಖರೀದಿ ಸರಿ, ಉತ್ತಮ ಗಿಪ್ಟ್ ಐಟಮ್ ಪಡೆಯುವಿರಿ ಎಂದರೇನು. ಇಂದೆಂತಹ ಭವಿಷ್ಯ. ಹಿಂದೊಮ್ಮೆ,’ ಈ ದಿನ ಚಿತ್ರ ಮಂದಿರಕ್ಕೆ ಬೇಟಿ ಕೊಡುವಿರ’ ಎಂದು ಬರೆದಿದ್ದರು. ಮತ್ತ” ಈದಿನ ಐಟಿ ಕ್ಷೇತ್ರದಲ್ಲಿರುವರಿಗೆ ಲಾಭ’ ಎಂದಿರುತ್ತೆ. ಯಾವ ಪುಣ್ಯಾತ್ಮರು ಇಂತದ್ದನ್ನೆಲ್ಲ ಬರೆಯುತ್ತಾರೆ ಮತ್ತು ಅದನ್ನು ಪ್ರಕಟಿಸುತ್ತಾರೆ ಅನ್ನುವ ಆಶ್ಚ್ಯರ್ಯ ಉಂಟಾಗುತ್ತೆ. ಇವರು ಭವಿಷ್ಯದ ’ವಿಜ್ಞಾನ’ ಕಂಡು ಹಿಡಿದಾಗ ಐಟಿ ಕ್ಷೇತ್ರವಾಗಲಿ ಸಿನಿಮಾ ಅಗಲಿ ಇರಲೇ ಇಲ್ಲ. ಹಾಗಿದ್ದಾಗ ಇಂತಹ ’ಆಶ್ಚರ್ಯಕರವಾದ’ ವಿಷಯವನ್ನೆಲ್ಲ ಹೇಗೆ ಕಂಡು ಹಿಡಿಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಯೋಚಿಸಬೇಕಾದ ವಿಷಯ ಇದರಿಂದ ಯಾರಿಗೆ ಲಾಭ?. ಅರ್ಥವಾಗಲ್ಲ. 
ಇದೆಲ್ಲ ಏಕೆ ಬರೆಯಬೇಕಾಯಿತೆಂದರೆ. ಅದೇ ಪುಟದ ಕೆಳಗೆ , ವಾಚಕರವಾಣಿಯಲ್ಲಿ ಮತ್ತೊಂದು ಪ್ರಕಟಣೆಯಿದೆ, 
ಮಾಧ್ಯಮಗಳಲ್ಲಿ ಹೇಗೆ ಭವಿಷ್ಯ ಹೇಳಿ ದೇಶವನ್ನು ಹಾಳುಮಾಡುತ್ತಿರುವರೂ ಎಂದು, ತಿಳಿಸುತ್ತ ಟೀವಿಗಳಲ್ಲಿ ಭವಿಷ್ಯ ಹೇಳುವದನ್ನು ಪ್ರತಿಬಂದಿಸಬೇಕು ಅನ್ನುವ ಬರಹ.

ತಮ್ಮ ಪತ್ರಿಕೆಯಲ್ಲಿ ಬೇರೊಂದು ಮಾಧ್ಯಮದ ಟೀಕೆಯ ಅಭಿಪ್ರಾಯವನ್ನು ಪ್ರಕಟಿಸುತ್ತ ತಾವು ಅದೇ ಕೆಲಸ ಮಾಡಿದರೆ ಹೇಗೆ ?   ೨೯-೧೦-೧೩
------------------------------------------------------------------------------------------------------------------------------------
ನಮ್ಮ ಕಣ್ಣೆದುರೆ ಕೆಲವೊಮ್ಮೆ ಪವಾಡ ಘಟಿಸುತ್ತದೆ ನಾವದನ್ನು ಗಮನಿಸಬೇಕು ಅಷ್ಟೆ
ಇಂದು ಬೆಳಗ್ಗೆ ಮನೆಯಿಂದ ಆಫೀಸಿಗೆ ಹೊರಟೆ
ಎಂಟು ಕಿ.ಮೀ ನಡುವೆ ಐದು ಸಿಗ್ನಲ್ ದೀಪಗಳು
ಒಮ್ಮೆಯಾದರು ದ್ವಿಚಕ್ರಿಯನ್ನು ನಿಲ್ಲಿಸದೆ ಮನೆಯಿಂದ ಆಫೀಸಿಗೆ ತಲುಪಿದೆ
ಆಕಸ್ಮಿಕ ಅಂದುಕೊಂಡೆ...
ಸಂಜೆ ಆಫೀಸಿನಿಂದ ಮನೆಗೆ ಹೊರಟೆ 
ಆರು ಸಿಗ್ನಲ್ ದಾಟಿ ಮನೆ ಮುಂದೆ ಗಾಡಿ ನಿಂತಾಗ ಅಚ್ಚರಿ ಎನಿಸಿತು
ಮತ್ತೆ ಗಾಡಿ ನಡುವೆ ಎಲ್ಲಿಯೂ ನಿಂತಿರಲಿಲ್ಲ... 
ಎರಡು ಬಾರಿಯೂ ಎಲ್ಲ ಸಿಗ್ನಲ್ ಗಳು ನಾನು ಬರುವಾಗಲೆ ಮುಕ್ತ ಮಾರ್ಗ ಒದಗಿಸಿದವು
ಟ್ರಾಫಿಕ್ಕಿನ ಯಾವ ತಡೆಯು ನನ್ನ ಗಾಡಿಯನ್ನು ನಿಲ್ಲಿಸಲಿಲ್ಲ  ೨೬-೧೦-೧೩
--------------------------------------------------------------------------------------
.

Rating
No votes yet

Comments

H A Patil

Thu, 10/31/2013 - 19:46

ಪಾರ್ಥ ಸಾರಥಿ ಯವರಿಗೆ ವಂದನೆಗಳು
" ನನ್ನ ಸಾಲುಗಳು - ನನ್ನ ಸ್ಟೇಟಸ್ " ಒಂದು ಭಿನ್ನ ಆದರೆ ಅಷ್ಟೆ ಕೌತುಕಪೂರ್ಣವಾದ ಬರಹ, ಬರಹದಲ್ಲಿ ಒಂದು ಹೊಸ ಶೈಲಿಯಿದೆ ಅರ್ಥವಿದೆ ಮುಖ್ಯವಾಗಿ ಚಿಂತನೆಗೆ ಹಚ್ಚುತ್ತದೆ. ಯುವಕನೊಬ್ಬನ ಕನ್ನಡ ಪ್ರೇಮ, ರಸ್ತೆಗಳು, ನಿದ್ರಾ ಭಂಗ. ಸಿಂಹ ಮತ್ತು ನಿಮ್ಮ ಕಣ್ಣೆದುರೇ ಘಟಿಸುವ ಪವಾಡಗಳು ಎಲ್ಲ ಭಿನ್ನ ಅನುಭವ ನೀಡುವಂತಹವು, ನನಗೊಂದು ಡೌಟು, ನೀವು ಬೆಳಿಗ್ಗೆ ಆಫೀಸಿಗೆ ಹೋಗಿ ಮರಳಿ ಮನೆಗೆ ಬರುವಾಗ ಎಂಟು ಕಿ.ಮೀ.ದೂರದ ರಸ್ತೆಯಲ್ಲಿ ಒಮ್ಮೆಯೂ ನಿಮ್ಮನ್ನು ಸಿಗ್ನಲ್ ದೀಪ ತಡೆಯಲಿಲ್ಲ ಎಂಬುದು ಅಚ್ಚರಿಯ ಸಂಗತಿ, ಬೆಂಗಳೂರಿ ನಂತಹ ಟ್ರಾಫಿಕ್ ಗಿಜಿ ಗಿಜಿಯ ಮಹಾನಗರದಲ್ಲಿ ಇದು ಸಾದ್ಯವಾದದ್ದಾದರೂ ಹೇಗೆ? ಇದೊಂದು ಬೆಂಗಳೂರು ಟ್ರಾಫಿಕ್ ಕುರಿತು ಬರೆದ ವಿಡಂಬನೆಯೆ ? ಧನ್ಯವಾದಗಳು

ಪಾಟೀಲರೆ ನಮಸ್ಕಾರಗಳು
ಕಡೆಯ ತಮ್ಮ ಪ್ರಶ್ನೆಗೆ ಮೇಲಿನ ಬರಹದಲ್ಲಿ ಈ ಸಾಲನ್ನು ಗಮನಿಸಿ
"ನಮ್ಮ ಕಣ್ಣೆದುರೆ ಕೆಲವೊಮ್ಮೆ ಪವಾಡ ಘಟಿಸುತ್ತದೆ ನಾವದನ್ನು ಗಮನಿಸಬೇಕು ಅಷ್ಟೆ "
ತಮಗೆ ದೀಪಾವಳಿಯ ಶುಭಾಷಯಗಳು
ವಂದನೆಗಳೊಡನೆ
ಪಾರ್ಥಸಾರಥಿ

ಪಾರ್ಥ ಸಾರಥಿ ಯವರಿಗೆ ವಂದನೆಗಳು,
ತಮ್ಮ ಮರು ಪ್ರತಿಕ್ರಿಯೆ ಓದಿದೆ, ' ನಮ್ಮ ಕಣ್ಣೆದುರೆ ಕೆಲವು ಪವಾಡಗಳು ಘಟಿಸುತ್ತವೆ ನಾವದನ್ನು ಗಮನಿಸ ಬೇಕು ' ಹೌದು ಆದರೆ ಬೆಂಗಳೂರಿನಲ್ಲಿ ಈ ಪವಾಡ ಸಾಧ್ಯವೆ ? ಎನ್ನುವ ಸಂಶಯ ನನ್ನನ್ನು ಕಾಡಿತು ಅದಕ್ಕೆ ಆ ರೀತಿ ಬರೆದೆ, ಹೌದು ಪವಾಡಗಳು ಯಾಕೆ ಘಟಿಸ ಬಾರದು ? ಘಟಸಬೇಕು ಅಂದರೆ ಜೀವನದಲ್ಲಿ ಒಂದು ರೀತಿಯ ಥ್ರಿಲ್ ಇರುತ್ತದೆ, ತಮಗೂ ಮತ್ತು ಎಲ್ಲ ಸಂಪದಿಗರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ಗಣೇಶ

Fri, 11/01/2013 - 00:20

ಪಾರ್ಥರೆ, ನನಗೆ ಗೊತ್ತಾಯಿತು! ದಸರಾ ರಜಾದಿನ ಎಂದಿನಂತೆ ಹೊರಟು ಆಫೀಸಿಗೆ ಹೋದ್ರಿ.:) ಸಾಲು ಸಾಲು ರಜಾ ಇದ್ದಾಗ ಟ್ರಾಫಿಕ್ ಸಿಗ್ನಲ್‌ಗಳು ನಿದ್ರಿಸುತ್ತವೆ.
ಹೆಚ್ಚಿನ ಕಡೆ ಈ ಟ್ರಾಫಿಕ್ ಸಿಗ್ನಲ್‌ನಿಂದಾಗಿಯೇ ತೊಂದರೆಗಳು ಜಾಸ್ತಿಯಾಗುವುದು. ಬಿ.ಇ.ಎಲ್ ಸರ್ಕಲ್ ಹಾಗೂ ಗಂಗಮ್ಮ ಸರ್ಕಲ್‌ಗಳಲ್ಲಿ ಆರಾಮ ವೆಹಿಕಲ್‌ಗಳು ಹೇಗೋ ಎಡ್ಜಸ್ಟ್ ಮಾಡಿಕೊಂಡು ಹೋಗುತ್ತಿದ್ದವು. ಕೆಲವೊಮ್ಮೆ ಟ್ರ‍ಾಫಿಕ್ ಪೋಲೀಸರ ಅಗತ್ಯ ಬೀಳುತ್ತಿತ್ತು. ಈಗ ಎರಡೂ ಕಡೆ ಸಿಗ್ನಲ್ ಹಾಕಿದ್ದಾರೆ. ಉದ್ದಕ್ಕೂ ಮತ್ತಿಕೆರೆವರೆಗೆ ಟ್ರಾಫಿಕ್ ಜಾಮ್. ಅಲ್ಲಿಂದ ಮುಂದೇ ಟೋಲ್ ಗೇಟ್ ಟಾಟಾ ಇನ್ಸ್ಟಿಟ್ಯೂಟ್ ಸಿಗ್ನಲ್...... ಹೇಳಿ ಪ್ರಯೋಜನವಿಲ್ಲ.. :(
ಬಿ.ಇ.ಎಲ್ ಸರ್ಕಲ್ ಸಿಗ್ನಲ್ ‌ನಲ್ಲಿ ಒಂದು ಕಡೆ- ರೆಡ್ ಲೈಟ್ ಆದ ಮೇಲೆ ಯೆಲ್ಲೋ ಲೈಟ್ ಬಂದಾಗ,ಎಲ್ಲರೂ ಗಾಡಿ ಸ್ಟಾರ್ಟ್ ಮಾಡಿ ಹೊರಟರೆ ಪುನಃ ರೆಡ್ ಲೈಟ್!! ರಸ್ತೆಯ ಉದ್ದಕ್ಕೂ ೨-೩ ಸಿಗ್ನಲ್ ಎಲ್ಲಾ ಕಡೆ ನೋಡಿರಬಹುದು. ರಸ್ತೆಯ ಅಗಲಕ್ಕೆ ಎರಡು ಸಿಗ್ನಲ್ ಇಲ್ಲಿನ ವಿಶೇಷ.
ಪಾರ್ಥರೆ, ನನ್ನ ಸ್ಕೂಟರನ್ನ ಅಷ್ಟು ದೂರದಿಂದ ನೋಡಿದಾಗಲೇ "ರೆಡ್ ಲೈಟ್" ಉರಿಯುವುದು ನೋಡಿ ನೋಡಿ ಅಭ್ಯಾಸವಾಗಿರುವ ನನಗೆ, ಅಕಸ್ಮತ್ತಾಗಿ ಗ್ರೀನ್ ಲೈಟ್ ಕಾಣಿಸಿತೆಂದರೇ ಪವಾಡ ಸಂಭವಿಸಿದಂತೆ ಅನಿಸುವುದು.
ಅಂದಹಾಗೆ ನಿಮ್ಮ ಟಿ.ವಿ ಜಾಹಿರಾತು ಚಿತ್ರ ನೋಡಲು ಕಾತರನಾಗಿದ್ದೇನೆ. ಚಿನ್ನದ ಆಭರಣ ಖರೀದಿ ಜಾಹೀರಾತಿರಬಹುದೇ? :)

ಗಣೇಶರೆ ನಿಮ್ಮ ಅನಿಸಿಕೆ ನಿಜ‌ ಹಲವಾರು ಸಿಗ್ನಲ್ ದೀಪಗಳು ಅನವಶ್ಯ ವಾಗಿ ಹಾಕಿರುವಂತೆ ತೋರುತ್ತದೆ ಅದಕ್ಕೆ ಕಾರಣವನ್ನು ಊಹಿಸಬಹುದು. ಯಾವುದೋ ಕಂಪನಿಗೆ ಇಷ್ಟು ಸಿಗ್ನಲ್ ದೀಪಗಳು, ಹಾಗು ಸೋಲರ್ ಪಾನಲ್ ಮಾರಬೇಕಿರುತ್ತದೆ , ಪೋಲಿಸರಿಗೆ ಇಷ್ಟು ಸಾವಿರ‌ ಸಿಗ್ನಲ್ ದೀಪಗಳು ಕೊಳ್ಳಲು ಸೂಚನೆ ಹೋಗುತ್ತದೆ. ಅದಕ್ಕಾಗಿ ಜಾಗಗಳನ್ನು ಗುರುತಿಸಿ ಅನ್ನುತ್ತಾರೆ ಆಗ‌ ಬೇಕೊ ಬೇಡವೋ ಕೆಲವು ಸರ್ಕಲ್ ಗೆ ಸಿಗ್ನಲ್ ದೀಪ‌ ಬೀಳುತ್ತದೆ, ಎಂದಿನಂತೆ ಸಂಕಟಪಡುವರೆ ಬೆಂಗಳೂರಿನ‌ ಪ್ರಜೆಗಳು !
ಹಾಗೆ ನಿದ್ರಾಭಂಗದ‌ ಕತೆಯನ್ನು ಇಂದಿನ‌ ಸಾಮಾಜಿಕ‌ ಪರಿಸ್ಥಿತಿಗಾಗಿ ಬರೆದಿದ್ದೆ, ವೈಶ್ಣವ‌ ದೀಕ್ವ್ಹೆ, ನಂತರದ‌ ಗಲಾಟೆ, ಮನುಸ್ಮ್ಱುತಿಯ‌ ದಹನದ‌ ಆದೇಶ ನಂತರದ‌ ಶಾಂತಿ ಎಲ್ಲವನ್ನು ಯೋಚಿಸುವಾಗ‌ ಈ ಕತೆಗೂ ಅದಕ್ಕು ಸಾಮ್ಯ ನನಗೆ ಕಾಣಿಸಿತು ಹಾಗಾಗಿ :‍)
ತಮಗೆ ಹಾಗು ಎಲ್ಲ ಸಂಪದಿಗರಿಗೆ ಕರ್ನಾಟಕ‌ ರಾಜ್ಯೋತ್ಸವದ‌ ಶುಭಾಶಯಗಳು

venkatb83

Fri, 11/01/2013 - 15:55

ಮೊದಲಿಗೆ ಸರ್ವ ಸಂಪದಿಗರಿಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು ..
ಗುರುಗಳೇ -ಸಿಗ್ನಲ್ ಎಲ್ಲಿಯೂ ತಡೆ ಹಾಕದೆ ಈ ರೀತಿ ಹೋದಾಗ ಅಚ್ಚರಿ ಆಗೋದು ಖಚಿತ .. ನಾನೂ ಒಮ್ಮೊಮ್ಮೆ ಆಫೀಸು ಬಿಟ್ಟು ಬಸ್ಸಲ್ಲಿ ಹೋಗ್ವಾಗ ೩- ೪ ಕಡೆ -ಅದರಲ್ಲೂ ಫೋರಂ , ಆಡುಗೋಡಿ ,ಶಾಂತಿನಗರ ಡಬಲ್ ರೋಡ್ ತರಹದ ಜಾಗಗಳಲ್ಲಿ ಫ್ರೀ ಎಂಟ್ರಿ ಸಿಕ್ಕಾಗ ಖುಷಿಯೋ ಖುಷಿ - ೨ -೩ ಸಾರಿ ಈ ರೀತಿ ಆಗಿದೆ ..!!
@ ಗಣೇಶ್ ಅಣ್ಣ , ದಿನ ನಿತ್ಯ ನಾವ್ ನೀವ್ ಓಡಾಡುವ ಆ ಬೀ ಈ ಎಲ್ಲು ಸರ್ಕಲ್ ಮತ್ತು ಗಂಗಮ್ಮ ಸರ್ಕಲ್ ಗೆ ಸಿಗ್ನಲ್ ಅವಶ್ಯಕತೆ ಇರಲಿಲ್ಲ ,ಇದ್ದಾರೆ ಅದು ಬೀ ಈ ಎಲ್ ಮಾರ್ಕೆಟ್ ಮುಂಚೆ ಬರೋ ಚಿಕ್ಕ ರಸ್ತೆಗೆ ಇತ್ತು .... ಅದರಲ್ಲೂ ಈ ಬೀ ಈ ಎಲ್ ಸರ್ಕಲ್ ದಾಟೋದು ಮತ್ತು ಯೆಶ್ವನ್ತಪುರ ಸರ್ಕಲ್ ದಾಟೋದು ಸಖತ್ ಕಷ್ಟ , ಕಾರಣ ಅತಿ ಅಗಲವಾದ ಸರ್ಕಲ್ -ಯಾರು ಯಾವ್ ಕಡೆ ಬರ್ತಾರೆ ಅನ್ನೋದೇ ಗೊತ್ತಾಗೊಲ್ಲ ..
ನಮಗೆ ಟ್ರಾಫಿಕ್ ಜಾಮ್ ಬಿಸಿ ಇಲ್ಲ -ಕಾರಣ ನಾವ್ ಬರೋದು ೯ಗಂಟೆ ಮೇಲೆ ಬೆಳಗ್ಗೆ , ಮತ್ತು ರಾತ್ರಿ ಮನೆಗೆ ವಾಪಸ್ಸು ೧೦ ಗಂಟೆಗೆ -- ಆದ್ರೆ ಹಬ್ಬ ಹರಿದಿನಗಳಲ್ಲಿ ಈ ಮೆಜೆಸ್ಟಿಕ್ಕಲ್ಲಿ ಮಾತ್ರ ರಸ್ಶ್ -ರಶ್ .. ನಿನ್ನೆ ರಾತ್ರಿ ಆಫೀಸು ಬಿಟ್ಟು ಮೆಜೆಸ್ತಿಕ್ಕಿಂದ ನಾ ಮನೆಗೆ ಹೋದಾಗ ಬೆಳಗ್ಗೆ ೨-೩೦ ಗಂಟೆ ..!!
ನಮ್ ಕಡೆ ಮೆಟ್ರೋ ಈಗಿಲ್ಲ -ಜಾಲಹಳ್ಳಿ ಕ್ರಾಸ್ -ಯಶವಂತಪುರ -ಮಲ್ಲೇಶ್ವರಂ -ಮೆಜೆಸ್ಟಿಕ್ ಮೆಟ್ರೋ ಶುರು ಆದರೆ ನಾವ್ ಹ್ಯಾಪಿ ..!!
ಶುಭವಾಗಲಿ
\।/