ಕನ್ನಡಾಂಬೆಯು ಎದ್ದು ನಾಲಗೆಗೆ ಬರಲಿ

ಕನ್ನಡಾಂಬೆಯು ಎದ್ದು ನಾಲಗೆಗೆ ಬರಲಿ

ಆನನದಿ ಕುಣಿದಾಡು ಮೌನಘನಚೇತನವೆ!

ಪ್ರಾಣದೊಳು ಪದವಿರಿಸಿ ಮನವ ಸಂಸ್ಕರಿಸಿ.

ಅಣುರೇಣುತೃಣಕಾಷ್ಠವನುರಣಿಸಿ ಬಾ ಎದೆಗೆ

ಝಣಝಣಿಪ ಓಂಕಾರಬೀಜವಂಕುರಿಸಿ.

 

ಧ್ಯಾನಾಗ್ನಿಕುಂಡದಲಿ ಜ್ಞಾನಾಗ್ನಿ ಪ್ರಜ್ವಲಿಸಿ

ಅನವದ್ಯ ಭಾವಗಳು ಹವಿಯಾಗಿ ಸುಡಲಿ.

ಮೌನಭಾಂಡದ ಒಳಗೆ ಚೆನ್ನುಡಿಯ ರಸಪಿಡಿದು

ಕನ್ನಡಾಂಬೆಯು ಎದ್ದು ನಾಲಗೆಗೆ ಬರಲಿ.

 

ಹೃದಯ ಕಮಲದ ಒಳಗೆ ಮಧುರಹನಿಗಳು ತುಂಬಿ

ಪದಗರ್ಭದೊಳಹೊಕ್ಕು ಫಲವಾಗಿ ಬರಲಿ.

ಮೊದಲ ನುಡಿಗಳ ತೊದಲು ಮೃದುಲತದ್ಭವವಾಗಿ

ವದನವರಳಿಸಿ ಮುದದಿ ಹೊರಹೊಮ್ಮುತಿರಲಿ.

 

ಡಿ.ನಂಜುಂಡ

30/10/2013

 

 

Rating
No votes yet

Comments

Submitted by nageshamysore Sat, 11/02/2013 - 04:49

In reply to by partha1059

ನಂಜುಂಡರವರೆ, ಪಾರ್ಥಾ ಸಾರ್ ಹೇಳಿದ ಕನ್ನಡಿಗರ ಜತೆಗೆ, ಕೇಳಿದ ಕನ್ನಡಾಂಬೆಯು ಖುಷಿಪಟ್ಟು ಕುಣಿಯೊ ಹಾಗಿದೆ. ನಾಲಿಗೆಯನ್ನು ದಾಟಿ ಹಾಳೆಯ ಮೇಲು ನರ್ತಿಸುತ್ತಿದೆ ನಿಮ್ಮ ಕವನದ ಮೂಲಕ :-)