KRRRRRRISH 3
ಗಾಡ್ ಅಲ್ಲಾ ಔರ್ ಭಗವಾನ್ ನೆ ಬನಾಯ ಇಕ್ ಇನ್ಸಾನ್..." KRRISH " http://www.youtube.com/watch?v=SPb8eCXMPe4
Krish 3 ಸಿನೆಮಾ ಹಿಟ್ ಆಗಬೇಕಾದರೆ ಇನ್ನೊಂದು " r " ಸೇರಿಸಬೇಕೆಂದು ನ್ಯುಮಾರಾಲೋಜಿಸ್ಟ್ ಹೇಳಿದ್ದರಂತೆ. ಸಿನೆಮಾ ಈಗ ಸೂಪರ್ ಹಿಟ್. ನನ್ನ ಈ ಬರಹ ಸೂಪರ್ ಹಿಟ್ ಅಲ್ಲದಿದ್ದರೂ ,೫೦ ಆದರೂ ಹಿಟ್ಸ್ ಪಡೆಯಲಿ ಅಂದು ಒಂದ್ನಾಲ್ಕು " r " ಎಕ್ಸ್ಟ್ರಾ ಸೇರಿಸಿದೆ.
ಹಾಲಿವುಡ್ನ ಸೂಪರ್ ಹೀರೋಗಳ ಸಿನೆಮಾಗಳನ್ನು ಮೀರಿಸುವಂತೆ " KRRISH 3 " ಮಾಡಿರುವ ರಾಕೇಶ್ ರೋಶನ್ಗೆ ಜೈ. ಚಿತ್ರದಲ್ಲಿ ಹೃತಿಕ್ನ ಡ್ಯಾನ್ಸ್, ಆಕ್ಟಿಂಗ್, ಫೈಟ್ ಎಲ್ಲವೂ ಸೂಪರ್ ಸೆ ಊಪರ್! ಹೃತಿಕ್ ಕೃಶ್ನ ತಂದೆಯ ಪಾತ್ರವನ್ನೂ(ಡಬಲ್ ರೋಲ್) ಚೆನ್ನಾಗಿ ನಿಭಾಯಿಸಿರುವನು.
ಕತೆ ಸಹ ವಿಶಿಷ್ಟ. ಮಾನವರ್!(ಮಾನವ+ಜಾನ್ವರ್), ಸೋಲಾರ್ ಪವರ್ ಬಗ್ಗೆ ಸಿನೆಮಾ ನೋಡಿಯೇ ತಿಳಿದುಕೊಳ್ಳಿ.
ಮಾತಿನಲ್ಲಿ, ಕಣ್ಣಲ್ಲಿ, ನಗುವಲ್ಲಿ ಕ್ರೌರ್ಯ ತುಂಬಿದ ವಿಲನ್ ಪಾತ್ರಧಾರಿ "ವಿವೇಕ್ ಒಬೆರಾಯ್" ಬೆರಳಲ್ಲೇ ಜಗತ್ತನ್ನಲ್ಲಾಡಿಸಬಲ್ಲ!
ಹೀರೋಯಿನ್ ಪ್ರಿಯಾಂಕಾಳಷ್ಟೇ ವಿಲನ್ ಕಂಗ್ನಾ ಮಿಂಚಿದ್ದಾಳೆ.
ಮೊದಲೆರಡು ಸಿನೆಮಾಗಳ ಹಾಡುಗಳು ಸೂಪರ್ ಹಿಟ್ ಆದ್ದರಿಂದ ಈ ಸಿನೆಮಾದ ಹಾಡುಗಳ ಬಗ್ಗೆ ಬಹಳ ನಿರೀಕ್ಷೆಯಿತ್ತು. ಆ ಮಟ್ಟಕ್ಕಿಲ್ಲದಿದ್ದರೂ ಸಿನೆಮಾದಲ್ಲಿ ನೋಡುವಾಗ ಇಷ್ಟವಾಗುವುದು. ದೀಪಾವಳಿ ಹಬ್ಬದ ರಜೆ ಪಟಾಕಿ ಸುಟ್ಟು ವಾತಾವರಣ ಹಾಳುಮಾಡಬೇಡಿ. ಕೃಶ್ ೩ ನೋಡಿ.ಎರಡೂವರೆ ಗಂಟೆ ಪೂರ್ತಿ ಮನರಂಜನೆ. ಚಿತ್ರದ ಬಗ್ಗೆ ಪಾತ್ರಧಾರಿಗಳು ಏನನ್ನುತ್ತಾರೆ..ಇಲ್ಲಿ ನೋಡಿ-
http://www.dailymotion.com/video/x16mov9_krrish-3-miking-of-krrish-3-ful...
Comments
ಉ: KRRRRRRISH 3
ಹಾಗೆ 'gravity' ಎನ್ನುವ ೩-ಡಿ ಸಿನಿಮಾ ನಡೀತಿದೆ , ಅದನ್ನು ಹೋಗಿ ನೋಡಿ ಚೆನ್ನಾದ ಅನುಭವ !
In reply to ಉ: KRRRRRRISH 3 by partha1059
ಉ: KRRRRRRISH 3
ಪಾರ್ಥರೆ,
gravityನೇ ಇಲ್ಲದ "gravity" ಸಿನೆಮಾಕ್ಕೆ ಸೆಳೆಯುತ್ತಿದ್ದೀರಲ್ಲಾ! youtube ನಲ್ಲಿ ಸ್ವಲ್ಪ ನೋಡಿದೆ- ಉಸಿರು ಎದೆಬಡಿತ ಎಲ್ಲಾ ನಿಂತ ಅನುಭವ- ಇನ್ನು ಥಿಯೇಟರ್ನಲ್ಲಿ + ೩ ಡಿ ಏನಾಗಬಹುದು.... ಚೆನ್ನಾದ ಅನುಭವನಾ!? :)
ಉ: KRRRRRRISH 3
ಗಣೇಶ್ ಜಿ, ಟಾರ್ಗೆಟ್ ಹಿಟ್ ! ನನ್ನದೆ ಐವತ್ತನೆ ಹಿಟ್ - ನ್ಯೂಮರಾಲಜಿ ಕೆಲಸ ಮಾಡೆಬಿಡ್ತು ಅಂತ ಕಾಣುತ್ತೆ ! ಕ್ರಿಷ್ 3 ಜತೆ ನಿಮ ಕ್ರಿಷ್ 5 ಸಕ್ಸಸ್ಸು (6 R ಹಾಕಿದ್ದಿರಲ್ಲ ಅದಕ್ಕೆ ಕ್ರಿಷ್ 5)
In reply to ಉ: KRRRRRRISH 3 by nageshamysore
ಉ: KRRRRRRISH 3
ನಾಗೇಶರೆ,
ಈಗ ಪಾರ್ಟ್ ಟೈಮ್ "ನ್ಯೂಮಾರಾಲಜಿ" ಪ್ರಾರಂಭಿಸಿದ್ದೇನೆ. ಪಾರ್ಥರ "ಥುಸ್ ಪಟಾಕಿ"ಗೆ ಇನ್ನೂ ನಾಲ್ಕು "ಸ್" ಸೇರಿಸಲು ಹೇಳಿರುವೆ. :)
In reply to ಉ: KRRRRRRISH 3 by ಗಣೇಶ
ಉ: KRRRRRRISH 3
ಇದನ್ನ ನಾವ್ ಇವತ್ತು ಇಲ್ಲವೇ ನಾಳೆ ರಾತ್ರಿ ನೋಡುವೆವು .. ಗ್ರ್ಯಾವಿಟಿ ಸಹಾ ಸೂಪರ್ ಆಗಿದೆ . ಅದಾಗಲೇ ಅರ್ಧ ಯುಟುಬಲ್ಲಿ ಲೀಕ್ ಆಗಿದೆ ..!!
ಕ್ರಿಶ್ಹ್ ೩ ಬಗ್ಗೆ ಬಹುತೇಕ ಎಲ್ಲ ಪತ್ರಿಕೆಗಳು ಟೀವಿಯವರು ಸಹಾ ಒಳ್ಳೆ ವಿಮರ್ಶೆ ಬರೆದಿರುವರು .
ಈ ಹಿಂದೆ ರೋಬೋ - ಎಂದಿರನ್ ಮೂಲಕ ಅದರ ತಾಂತ್ರಿಕ -ಗ್ರಾಫಿಕ್ಸ್ ಬಳಕೆ ಮೂಲಕ ಭಾರತದತ್ತ ಎಲ್ಲರ ಚಿತ್ತ ಹರಿದಿತ್ತು , ಈಗಲೂ ರೋಬೋ ಸಿನೆಮಾದ ಕ್ಲೈಮ್ಯಾಕ್ಸ್ ನೋಡುವಾಗ http://www.youtube.com/watch?v=QHrOh6yXva4 ಆದು ಹಾಲಿವುಡ್ ಗೆ ಸರಿ ಸಮ ಅಥವಾ ಹೆಚ್ಚೇ ಇದೇ ಅನ್ನಿಸುವುದು ..
ಇನ್ನು ಈ ಕ್ರಿಸ್ಶ್ ೩ ಇದರ ಹಿಂದಿನ ಕ್ರಿಶ್ಹ್ ಸಾಹಸ ದೃಶ್ಯಗಳು ಹೃತಿಕ್ ದೈಹಿಕ ಕಸರತ್ತು ಆ ಶ್ರಮ ನೋಡುವಾಗ ಅವರ ತಾಳ್ಮೆ ತಾದ್ಯತ್ಮತೆ ಮೆಚ್ಚಬೇಕಾದ್ದೆ . ಇದನ್ನು ಟಾಕೀಸಲ್ ನೋಡಿದರೇನೇ ಮಜಾ .. ನಕಲಿ ಸಿ ಡಿ ಬೇಡ ..
ಅಂತೂ ನಮಗೂ ಒಬ್ಬ ಸೂಪರ್ ಹೀರೋ ಇರುವನು ಮತ್ತದು ಒಬ್ಬನೇ -ಕ್ರಿಶ್ ಮಾತ್ರ ..!!
ಶುಭವಾಗಲಿ
\।/
In reply to ಉ: KRRRRRRISH 3 by venkatb83
ಉ: KRRRRRRISH 3
>>ಇದನ್ನು ಟಾಕೀಸಲ್ ನೋಡಿದರೇನೇ ಮಜಾ .. ನಕಲಿ ಸಿ ಡಿ ಬೇಡ ..
-ಸಪ್ತಗಿರಿವಾಸಿಯವರೆ, ನಾನೂ ಅದನ್ನೇ ಹೇಳುವುದು. ಸಿನೆಮಾದ ಟಿಕೆಟ್ ರೇಟು ನೋಡಿದರೆ..ಸಿ ಡಿನೇ ವಾಸಿ ಅನಿಸುವುದು.:)
ಆಗಾಗ ನೋಡುವ ಬದಲು ೨-೩ ತಿಂಗಳಿಗೊಮ್ಮೆ ನೋಡಿದರಾಯಿತು-ಆದರೆ ಥಿಯೇಟರ್ನಲ್ಲೇ..ಅದೂ ಮಾಲ್ನದ್ದು.
>>ಅಂತೂ ನಮಗೂ ಒಬ್ಬ ಸೂಪರ್ ಹೀರೋ ಇರುವನು ಮತ್ತದು ಒಬ್ಬನೇ -ಕ್ರಿಶ್ ಮಾತ್ರ ..!! ಉಲಗತ್ತಿಲ್ಲ್ ಒರೇ ಒರು ಸೂಪರ್ ಸ್ಟಾರ್ ಅದ್ ರಜನೀಸಾರ್! ರಜನಿ-ಕ್ರಿಶ್ ಸೇರಿದರೆ!!