ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)

ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)

ಥುಸ್ ಪಟಾಕಿ! (ಮಕ್ಕಳಿಗಾಗಿ ಕವನ)

ನಡೆದುಹೊರಟಿದ್ರು ಎದುರ್ ಮನೆ ತಾತ
ರಸ್ತೆ ಮಕ್ಳಿಗೆಲ್ಲ ತಾತ ಅಂದ್ರೆ ಏರ್ತಿತ್ತು ಪಿತ್ತ! 

ಮೆತ್ತಗೆ ಹಿಂದ್ ಹೋಗಿ ಕಾಲತ್ರ ಪಟಾಕಿ ಇಟ್ರು
"ಢಾಂ" ಅನ್ನೋದ್ನೆ  ಕಾಯುತ್ತ ಕಿವಿ ಮುಚ್ಚಿ ನಿಂತ್ರು ! 

ಪಟಾಕಿ ಮಾಡಿದ್  ಸದ್ದಿಗೆ ಹುಡುಗ್ರೆಲ್ಲ ಬೆಚ್ಚು ,
ತಾತ ಹಿಂದೇನೂ ನೋಡ್ದೆ ನಡೆದಾಗ ಹುಡುಗ್ರೆಲ್ಲ ಪೆಚ್ಚು!

ಹುಡುಗ್ರಿಗೆ ನಿಜ  ವಿಷಯ ತಿಳಿದಿಲ್ಲ  ಪಾಪ ,
ತಾತಂಗೆ ಶತಕಿವುಡು ಕಿವಿ ಕೇಳ್ಸಲ್ಲ ಪಾಪ
 

Rating
No votes yet

Comments

Submitted by ಗಣೇಶ Mon, 11/04/2013 - 22:24

:) :) ಪಾರ್ಥರೆ, ಮಕ್ಕಳಿಗಾಗಿ ಕವನ ಎಂದಿದ್ದೀರಿ-ನಿಮ್ಮ ಕವನ ನೋಡಿ ಮಕ್ಕಳು, ಕಿವಿ ಚೆನ್ನಾಗಿರೋ ನಮ್ಮಂತಹ ತಾತನ ಹಿಂದೆ ಪಟಾಕಿ ಇಟ್ಟರೆ!

Submitted by venkatb83 Wed, 11/06/2013 - 18:05

In reply to by kavinagaraj

ನಾವ್ ಪಟಾಕಿ ಹೊಡೆದದ್ದು ಬಹು ಕಡಿಮೆ - ಈಗ್ಗೆ ೧೦ ವರ್ಷಗಳ ಹಿಂದೆ ಕೊನೆಯಾಯ್ತು . ಮೊದಲು ಚಿಕ್ಕವನಿದ್ದಾಗ ಹಳ್ಳಿಯಲ್ಲಿ ಅಕ್ಕ ಪಕಕ್ ಗುಡಿಸಲು ಹಾಗಾಗಿ ಪಟಾಕಿ ಹಚ್ಚಲು ಆಗುತ್ತಿರಲಿಲ್ಲ . ಆಮೇಲೆ ಟೀವಿಲಿ ನೋಡಿ -ಓದಿ ಪಟಾಕಿ ಹೊಡೆಯೋದ್ರಿಂದ ಆಗುವ ವಾಯು ಮಾಲಿನ್ಯ, ನೆಲ ಮಾಲಿನ್ಯ (ದೀಪಾವಳಿ ನಂತರ ಬೀದಿಗಳನ್ನು ನೋಡಿದರೆ ಕಲರ್ ಕಲರ್ ಒನ್ಲಿ ಯಾಶ್ ಕಲರ್ ) .ಚೆ ಛೆ ಅನ್ನಿಸಿತು .. ಹಣತೆ ಬೆಳಗಿ ದೀಪಾವಳಿ ..
ಅಸ್ಟೇ ..
ಈಗ ಪಟಾಕಿ ಹೊಡೆಯುವವರನ್ನು ಅದರಲ್ಲೂ ವಿದ್ಯಾವಂತರು -ಪಟಾಕಿ ಸರಕ್ಕೆ ಬೆಂಕಿ ಹಚ್ಚಿ ಹೊಡೆವುದು ಕಂಡಾಗ ಮನ ಕೊರಗುವುದು ಮರುಗುವುದು .. ;(((
ಹಾಗಯೇ ಈ ಒಂದು ವಾರ ಬೀದಿ ಮತ್ತು ಸಾಕಿದ ನಾಯಿಗಳ ಪಾಡು ಹೇಳೋದು ಹೇಗೆ ?
ಅವುಗಳ ಧೈರ್ಯ ಕುಗ್ಗಿ ಹೃದಯ ಬಡಿತ ಹೆಚ್ಚಿ ಊಟ ನೀರು ಬಿಟ್ಟು ನಿತ್ರಾಣ ಆಗುವವು .. ಬೇಕಾದ್ರೆ ನೀವೇ ನೋಡಿ ...
ಈ ದಿನಗಳಲ್ಲಿ ವಯಸ್ಸಾದವರು ಏನು ನಮ್ಮಂತ ಯುವಕರಿಗೆ ಈ ಶಬ್ದ ಕೇಳಿ ಕಿರಿಕಿರಿ ಅನ್ನಿಸುವುದು . ಮೊನ್ನೆ ನಮ್ಮನೆ ಹತ್ರ ಮಧ್ಯ ರಾತ್ರಿ ಪಟಾಕಿ ಅದೂ ಜೋರ್ ಶಬ್ದ ಮಾಡಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟವರಿಗೆ ಅಗೌರವ ತೋರಿದ್ದು ವಿದ್ಯಾವಂತರೇ -ನಾವ್ ಹೋಗಿ ಬಯ್ದಾಗ ತಮ್ಮ ಮನೆ ಒಳ ಹೊಕ್ಕರು ..
ದೀಪಾವಳಿ ಮೊದಲು ನಂತರ ತಮಿಳುನಾಡಲ್ಲಿ ಅಗ್ನಿ ದುರಂತ ಮಾಮೂಲಿ ;((
ಇದೆಲ್ಲ ಬೇಕಾ?
ಶುಭವಾಗಲಿ
\।/