ಸಂಪದದ apps ಈಗ ಐಪಾಡ್, ಐಫೋನಿನಲ್ಲೂ ಲಭ್ಯ
ಕಳೆದ ವರ್ಷ ಆಂಡ್ರಾಯ್ಡ್ ಮೊಬೈಲುಗಳಿಗೆ ಸಂಪದದ app ಹೊರ ತಂದಿದ್ದೆವು. ಈ ವರುಷ ರಾಜ್ಯೋತ್ಸವದ ಸಂದರ್ಭದಲ್ಲಿ ಐಪಾಡ್, ಐಫೋನಿನಲ್ಲೂ ಇದು ಲಭ್ಯವಾಗಿದೆ ಎಂಬುದು ಸಂತಸದ ವಿಷಯ. ಈಗ ಐಫೋನಿನಿಂದಲೇ ಸಂಪದದಲ್ಲಿ ಪ್ರಕಟವಾದ ಪುಟಗಳನ್ನು ಓದಬಹುದು. ಈ app ಡೌನ್ಲೋಡ್ ಮಾಡಿಕೊಳ್ಳಲು ಭೇಟಿ ಕೊಡಿ:
http://bit.ly/HPkF5j
ಸಂಪದದ ಮತ್ತೊಂದು app ಸಂಪದ ಶ್ರ್ಯಾವ್ಯ ಕೂಡ ಐಫೋನಿನಲ್ಲಿ ಈಗ ಲಭ್ಯವಿದೆ. ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಪುಟಕ್ಕೆ ಭೇಟಿ ಕೊಡಿ:
http://bit.ly/1cN9TdE
ಸಂಪದ ಶ್ರಾವ್ಯ ಇದುವರೆಗೂ ಸಂಪದಕ್ಕಾಗಿ ರೆಕಾರ್ಡ್ ಮಾಡಿದ ಸಂದರ್ಶನಗಳ ಮಾಲಿಕೆ. ನಿಮ್ಮ ಐಫೋನಿನಿಂದ ನೇರ ಈ ಸಂದರ್ಶನಗಳನ್ನು ಕೇಳಬಹುದಲ್ಲದೆ ಅವುಗಳ ಪಠ್ಯವನ್ನು ಓದಬಹುದಾದ ಸೌಲಭ್ಯವಿದೆ.
ಇದಲ್ಲದೆ ಸಂಪದದವರೇ ಆದ ಹಂಸಾನಂದಿಯವರು (ರಾಮಪ್ರಸಾದ್) ಬರೆದ ಪುಸ್ತಕ ॑ಹಂಸನಾದ॑ ಈಗ ನೇಟಿವ್ app ಮಾದರಿಯಲ್ಲಿ ಐಫೋನಿಗೆ ಲಭ್ಯ. ಪ್ರತಿನಿತ್ಯ ಒಂದು ಸುಭಾಷಿತವನ್ನು ಕನ್ನಡದ ಆಡುನುಡಿಯಲ್ಲಿ ನಿಮಗೆ ತಲುಪಿಸುವ ಕೆಲಸ ಈ app ಮಾಡುತ್ತದೆ. ತಪ್ಪದೆ ಡೌನ್ಲೋಡ್ ಮಾಡಿಕೊಳ್ಳಿ!
http://bit.ly/1eClQmu
ಮೇಲಿನ ಮೂರೂ ಅಪ್ಲಿಕೇಶನ್ನುಗಳಲ್ಲಿ in-app purchases ಅಥವ ಜಾಹೀರಾತು ಇಲ್ಲದಿರುವ ಆವೃತ್ತಿಯನ್ನು ಖರೀದಿಸುವ ಸೌಲಭ್ಯವಿದೆ. ಈ ಅಪ್ಲಿಕೇಶನ್ನುಗಳನ್ನು ಖರೀದಿಸಿದ ಹಣದಿಂದ ಸಂದಾಯವಾದ ಲಾಭವನ್ನು ಸಂಪದ ಹಾಗೂ ಇದಕ್ಕೆ ಸಂಬಂಧಪಟ್ಟ ಯೋಜನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಳಸಲಾಗುವುದು. ಜಗತ್ತಿನಾದ್ಯಂತ ಕನ್ನಡಿಗರು ಅಪ್ಲಿಕೇಶನ್ನುಗಳನ್ನು ಖರೀದಿ ಮಾಡಿ ಅದರ ಮೂಲಕ ಸಂಪದಕ್ಕೆ ಪ್ರೋತ್ಸಾಹ ನೀಡಬಹುದು.
ಎಂದಿನಂತೆ ಇವೆಲ್ಲವನ್ನೂ ಚೊಕ್ಕವಾಗಿ ನಿರ್ಮಿಸಿ, ನಾನು ಆಗಿಂದಾಗ್ಯೆ ವಿಧಿಸುತ್ತಿದ್ದ ಹಲವು ಮಾರ್ಪಾಡುಗಳನ್ನು ವ್ಯವಧಾನದಿಂದ ಸ್ವೀಕರಿಸಿ ನನ್ನ ಜೊತೆ ಕೆಲಸ ಮಾಡಿ ಈ ಕಲಿಕೆಯಲ್ಲಿ ಪಾಲ್ಗೊಂಡ ಸಾರಂಗದ ನನ್ನ ತಂಡಕ್ಕೆ ನಾನು ಋಣಿ. ಈ ಮೊಬೈಲ್ ಅಪ್ಲಿಕೇಶನ್ನು ಹೊರತರುವ ಮುನ್ನ ಬಹಳಷ್ಟು ಕಾಲ ವ್ಯಯ ಮಾಡಿ ಟೆಸ್ಟ್ ಮಾಡಿ ಸಹಾಯ ಮಾಡಿದ ಸುಮ ಬಸಿರಾಗಿದ್ದ ಸಮಯದಲ್ಲೂ ಇದನ್ನು ತುಂಬ ಆಸಕ್ತಿಯಿಂದ ಕೈಗೆತ್ತಿಕೊಂಡು ನಮಗೆ ನೆರವಾಗಿದ್ದಾರೆ. ಐಪಾಡ್ ಹಾಗು ಐಫೋನುಗಳಿಗೆ ಸಂಪದದ appಗಳು ಅಂತರರಾಷ್ಟ್ರೀಯ ಗುಣಮಟ್ಟದಷ್ಟು ಬೆಳೆಯುವಲ್ಲಿ ಇವರ ಕೊಡುಗೆ ಬಹಳಷ್ಟಿದೆ.
ಇನ್ನು ಮೊಬೈಲ್ ಫೋನುಗಳು ಹಾಗು ಟ್ಯಾಬ್ಲೆಟ್ಟುಗಳಲ್ಲಿ ಆಟಗಳನ್ನಾಡುವ ಆಸಕ್ತಿ ಇಟ್ಟುಕೊಂಡವರಿಗೆ ನಮ್ಮ ಸಾರಂಗ ತಂಡದ ಮತ್ತೊಂದು ಆಪ್ “ಇಂಡಿಯನ್ ಮೇಝ್” ಕೂಡ ಇತ್ತೀಚೆಗೆ ಲಭ್ಯವಾಗಿದೆ. ಇದನ್ನೂ ಒಮ್ಮೆ ಡೌನ್ಲೋಡ್ ಮಾಡಿ ಪ್ರಯತ್ನಿಸಿ ನೋಡಬಹುದು. ಜಾತ್ರೆಗಳಲ್ಲಿ ಸಿಗುತ್ತಿದ್ದ ಸ್ಟೀಲ್ ಗೋಲಿಗಳಿರುತ್ತಿದ್ದ ಪುಟ್ಟ ಪ್ಲಾಸ್ಟಿಕ್ ಆಟಿಕೆಯ ಡಿಜಿಟಲ್ ರೂಪಾಂತರ ಇದು. ಡೌನ್ಲೋಡ್ ಮಾಡಲು ಭೇಟಿ ಕೊಡಿ:
http://bit.ly/16UHzBb
ಗಮನಿಸಿ: ಆಂಡ್ರಾಯ್ಡ್ ಬಳಕೆದಾರರಿಗೆ ಮೇಲಿನ ಎಲ್ಲ ಅಪ್ಲಿಕೇಶನ್ನುಗಳು ಉಚಿತವಾಗಿ ಗೂಗಲ್ ಪ್ಲೇ ಸ್ಟೋರಿನಲ್ಲಿ ಮುಂಚಿನಿಂದ ಲಭ್ಯವಿದೆ:
- Printer-friendly version
- Log in or register to post comments
Comments
ಉ: ಸಂಪದದ apps ಈಗ ಐಪಾಡ್, ಐಫೋನಿನಲ್ಲೂ ಲಭ್ಯ
ನಾಡಿಗರೆ ನಮಸ್ಕಾರ,
.
ಮೂರು ಆಪ್ಸ್ ಅನ್ನು ಡೌನ್ಲೋಡ್ ಮಾಡಿಕೊಂಡ ನಂತರದ ಕೆಲವು ಗಮನಿಸಿದ ಅಂಶಗಳು ತಮ್ಮ ಅವಗಾಹನೆಗೆ:
.
1. ಆಪ್ಸ್ ತೆರೆದಾಗ 'ಎಲ್ಲಾ ಪುಟಗಳು' ಕಾಣಿಸುವುದಿಲ್ಲ. ಮಿಕ್ಕದ್ದೆಲ್ಲ ಕಾಣಿಸುತ್ತದೆ (ಉದಾಹರಣೆ : ಆಯ್ದಲೇಖನ, ಶ್ರಾವ್ಯ, ಪುಸ್ತಕ ವಿಮರ್ಶೆ ಇತ್ಯಾದಿ). ಎಲ್ಲಾ ಪುಟ ನೋಡಲು ವಿಶೇಷ ಟ್ರಿಕ್ ಏನಾದರೂ ಇದೆಯೆ ಅಥವಾ ತಂತ್ರಾಂಶದ ದೋಷವೊ ಗೊತ್ತಾಗಲಿಲ್ಲ
2. ಪ್ರತಿ ಬಾರಿ ತೆರೆದಾಗಲೂ 'ಕೊಳ್ಳುವುದರ ಕುರಿತು' ಮಾಹಿತಿ ಬರುತ್ತಲೆ ಇರುತ್ತದೆ. ನಾನು ಮೂರನ್ನು ಖರೀದಿಸಿದ್ದರೂ, ಈ ಮೆಸೇಜು ಮತ್ತೆ ಪುನರಾವರ್ತಿಸುತ್ತಲೆ ಇರುತ್ತದೆ. ಆಪಲ್ ಪಾಸ್ವರ್ಡ್ ಹಾಕಿ ಒಳನುಗ್ಗಿದರೆ, ನಂತರ ಈಗಾಗಲೆ ಕೊಂಡು ಆಗಿರುವ ಕಾರಣ ಮತ್ತೆ ಕೊಳ್ಳುವ ಅಗತ್ಯವಿಲ್ಲ ಎಂದು ಮತ್ತೆ ಡೌನ್ಲೋಡ್ ಮಾಡುತ್ತದೆ (ಜಾಹೀರಾತುರಹಿತ ಅವೃತ್ತಿ). ಆ ಮೆಸೇಜು ಕ್ಯಾನ್ಸಲ್ ಮಾಡಿದರೆ ಜಾಹಿರಾತಿನ ಆವೃತ್ತಿಯೆ ಮುಂದುವರೆಯುತ್ತದೆ. ಬಹುಶಃ ಕೊಂಡನಂತರ ಅದು ಮರುಕಳಿಸದಂತೆ ಏನಾದರೂ ಫ್ಲಾಗ್ ಹಾಕುವ ಸಾಧ್ಯತೆಯಿದ್ದರೆ ಒಳಿತು.
3. ದಿನದ ಸಂದೇಶ ಮೊದಲ ಬಾರಿ ಸರಿಯಾಗಿ ತೋರಿಸಿತು. ನಂತರ ಸ್ವಲ್ಪ ತೊಡಕು ಕಾಣಿಸಿತು. ಮತ್ತೆ ಸರಿಯಾಗಿ ಗಮನಿಸಿ ನೋಡಿ ತೊಡಕಿದ್ದರೆ ತಮ್ಮ ಗಮನಕ್ಕೆ ತರುತ್ತೇನೆ.
.
ನಾನು ಈ ನಡುವಳಿಕೆಯನ್ನು ಐಪೋನ್4 ಮತ್ತು ಐಪ್ಯಾಡ್ (ಮೊದಲ ಆವೃತ್ತಿ) ಎರಡರಲ್ಲೂ ಗಮನಿಸಿದ್ದೇನೆ. ಬಹುಶಃ ಆಪಲ್ಲಿನ ತಂತ್ರಾಂಶ ಆವೃತ್ತಿಯ ಮೇಲೆ ಆಧರಿಸಿದೆಯೆಂದು ಕಾಣುತ್ತದೆ.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಸಂಪದದ apps ಈಗ ಐಪಾಡ್, ಐಫೋನಿನಲ್ಲೂ ಲಭ್ಯ by nageshamysore
ಉ: ಸಂಪದದ apps ಈಗ ಐಪಾಡ್, ಐಫೋನಿನಲ್ಲೂ ಲಭ್ಯ
ನಾಗೇಶ್, ನೀವು ಗಮನಕ್ಕೆ ತಂದಿರುವ ಕೆಲವು ವಿಷಯಗಳು ಬಹಳ ಉಪಯುಕ್ತ. ಕೂಡಲೆ ಇದನ್ನು ನನ್ನ ತಂಡದ ಗಮನಕ್ಕೆ ತರುವೆ. ಮುಂದಿನ ವಾರ ಹೊರತರುತ್ತಿರುವ ಹೊಸ ಆವೃತ್ತಿಯಲ್ಲಿ ಇದನ್ನು ಸರಿಪಡಿಸುವ ವ್ಯವಸ್ಥೆ ಮಾಡಿಸುವೆ. ವಂದನೆಗಳು! ಇದೇ ರೀತಿ ನಿಮ್ಮ ಸಲಹೆಗಳನ್ನು ಕಳುಹಿಸುತ್ತಿರಿ.