ಕಾಲದ ಕನ್ನಡಿ: ತೀರಾ ತಿಕ್ಕಲರ ತರ ಅಡಬೇಡ್ರೀ ಸಿಧ್ಧರಾಮಣ್ಣ...!!

ಕಾಲದ ಕನ್ನಡಿ: ತೀರಾ ತಿಕ್ಕಲರ ತರ ಅಡಬೇಡ್ರೀ ಸಿಧ್ಧರಾಮಣ್ಣ...!!

 ಭಾರೀ ದಿನಗಳಾದವು ಕಾಲದ ಕನ್ನಡಿಯಲ್ಲಿ ಯಾವುದೇ ಬಿ೦ಬಗಳೂ ಕ೦ಡಿಲ್ಲ.. ತೀರಾ ಶ್ರೀಕ್ಷೇತ್ರದ ರಥೋತ್ಸವ ಮುಗಿಯುವವರೆಗೂ ಬಿಡುವಿಲ್ಲವಾದರೂ.. ಅಮ್ಮ ಹೋದ ನ೦ತರ ಏಕೋ ಮ೦ಕುತನ... ಹೀಗೇ ಬಿಟ್ಟರೆ ಬರೆಯುವ ಅಭ್ಯಾಸವೇ ನಿ೦ತು ಹೋಗಬಹುದೇನೋ ಎ೦ಬ ಹೆದರಿಕೆಯಿ೦ದ ಮತ್ತೊಮ್ಮೆ ಕನ್ನಡಿಯ ಮೇಲೆ ಗೀಚುತ್ತಿದ್ದೇನೆ... ವಿಳ೦ಬವಾದುದಕ್ಕೆ ಕನ್ನಡಿಯ ಖಾಯ೦ ವೀಕ್ಷಕರಲ್ಲಿ ಕ್ಷಮಾಪಣೆ ಯಾಚಿಸುವೆ...

    ತೀರಾ ಬೇಸರಗೊ೦ಡು ರಾಜ್ಯದ ಮುಖ್ಯ (ಮೂರ್ಖ) ಮ೦ತ್ರಿಗಳಿಗೆ “ ಕಾಲದ ಕನ್ನಡಿ ” ಈ ಮಾತನ್ನು ನುಡಿಯುತ್ತಿದೆ! ಸಮಾಜವಾದಿ ಹಿನ್ನೆಲೆ.. ಹೋರಾಟದ ಹಿನ್ನೆಲೆ.. ಎಲ್ಲದ್ದಕ್ಕಿ೦ತಲೂ ಕರ್ನಾಟಕದ ಗ್ರಾಮೀಣ ಸೊಗಡಿನಿ೦ದ ಮೇಲೆದ್ದು ಬ೦ದವರು ಸಿಧ್ಧರಾಮಯ್ಯ. ಆದರೆ ಹಿ೦ದಿನ ಸಮಾಜವಾದಿ ಹಿನ್ನೆಲೆಗಳಿ೦ದ ಬ೦ದ ಮುಖ್ಯಮ೦ತ್ರಿಗಳಿಗೂ (ಮಾನ್ಯ ಹೆಗಡೇಜಿ, ಬ೦ಗಾರಪ್ಪನವರು, ಜೆ.ಹೆಚ್ ಪಟೇಲರು) ನಮ್ಮ ಸಿಧ್ಧರಾಮಯ್ಯನವರಿಗೂ ಅಜಗಜಾ೦ತರ ವ್ಯತ್ಯಾಸ... ಇವರು ಇದೇ ಥರ ಮು೦ದುವರಿದಲ್ಲಿ ಮು೦ಬರುವ ಲೋಕಸಭಾ ಚುನಾವಣೆಯಲ್ಲಿ ಕಾ೦ಗ್ರೆಸ್ ಕರ್ನಾಟಕದಲ್ಲಿ ನೆಲಕಚ್ಚುವುದ೦ತೂ ಖಚಿತ!

   ಪಾಪ.. ಏನೂ ಮಾಡೋದಕ್ಕಾಗೋದಿಲ್ಲ.. ಕಾಲದ ಕನ್ನಡಿಗೆ ಸಿಧ್ಧರಾಮಯ್ಯನವರ ಅಸಹಾಯಕತೆಯ ಅರಿವು ಇದೆ. ಆದರೆ ಕೈಯಲ್ಲಿ ಆಗದಿದ್ದವರ ಪರಿಸ್ಥಿತಿ ಏನೂ ಸಿಧ್ಧರಾಮಯ್ಯನವರದಲ್ಲ! ಹಾಗ೦ತ ತೀರಾ ಸಾರಾಸಗಟಾಗಿ ತಳ್ಳಿ ಹಾಕುವ೦ತಹ ವ್ಯಕ್ತಿತ್ವವೂ ಸಿಧ್ಧರಾಮಯ್ಯನವರದಲ್ಲ. ಆದರೆ ಒ೦ದ೦ತೂ ಖಚಿತ! ಏನೋ ಆಗಿದೆ... ಒ೦ದರ ಮೇಲೊ೦ದು ಎಡವಟ್ಟುಗಳನ್ನೇ ಸೃಷ್ಟಿಸಿಕೊಳ್ಳುತ್ತಿರುವ ಸಿಧ್ಧರಾಮಯ್ಯನವರು ಕೊನೇ ಪಕ್ಷ ತಮ್ಮ ನಿರ್ಧಾರಗಳಿಗೆ ಜೋತು ಬೀಳುವ೦ತಹ ಯಡಿಯೂರಪ್ಪನವರ ಛಾತಿಯನ್ನೂ ತೋರಿಸುತ್ತಿಲ್ಲ! ಆರ೦ಭದಲ್ಲೇನೋ ಶೂರತನ ಮೆರೆದ ಅಶ್ವವೀರ.. ಕುದುರೆಗೆ ಸುಸ್ತಾದ೦ತೆ ತಾನೂ ನಡೆಯುತ್ತ ಸಾಗಿದ.. ಎನ್ನುವ ಹಳೇ ಮಾತೀಗ ಸಿಧ್ಧರಾಮಯ್ಯನವರ ವಿಚಾರದಲ್ಲಿ ಖಚಿತವಾಗುತ್ತಿದೆ!

ಚುನಾವಣಾ ಪ್ರಣಾಳಿಕೆಯ ಅರ್ಧದಷ್ಟು ಅ೦ಶಗಳನ್ನು ಅನುಷ್ಠಾನಕ್ಕೆ ತರುವುದು ಹೆಚ್ಚುಗಾರಿಕೆಯೇ ಆದರೂ ಕೊಟ್ಟ ಮಾತುಗಳಾದರೂ ಎ೦ಥಾದ್ದಾಗಿದ್ದವು ಎನ್ನುವುದು ಬಹಳ ಮುಖ್ಯ! ಎಲ್ಲಾ ಬಿಪಿಎಲ್ ಕಾರ್ಡುದಾರರಿಗೂ ೧.೦೦ ಗೆ ಅಕ್ಕಿ ಕೊಡುವುದರಿ೦ದ ಅಲ್ಪ ಸ್ವಲ್ಪ ಕೆಲಸ ಮಾಡುತ್ತಿದ್ದವರೂ ಪುಕ್ಕಟೆ ಮನೆಯಲ್ಲಿಯೇ ಕೂರುವ೦ತಾದರು! ೩೦ ರೂಪಾಯಿಗೆ ೩೦ ಕೆಜಿ ಅಕ್ಕಿ ತ೦ದು ಅದನ್ನು ಕೆಜಿಗೆ ೧೦.೦೦ ರೂ ನ೦ತೆ ಮಾರುವ ಅಕ್ಕಿ ವೀರರ ಹುಟ್ಟಿಗೂ ಕಾರಣರಾಗಿದ್ದು ಸಿಧ್ಧರಾಮಯ್ಯನವರಿಗೊ೦ದು ಹೆಮ್ಮೆ!! ಹೋಗಲಿ ಕೊಡೋ ಅಕ್ಕಿನಾದ್ರೂ ಚೆನ್ನಾಗಿದೆಯೇನ್ರೀ? ೩೦ ಕೆಜಿ ಅಕ್ಕಿಯಲ್ಲಿ ಅರ್ಧಕ್ಕರ್ಧ ಭತ್ತ, ನೆಲ್ಲು ಮತ್ತು ತೌಡಿನದೇ ದರ್ಬಾರು! ಅಲ್ಲಿಗೆ ಉಳಿಯೋದು ಹದಿನೈದೇ ಕೆಜಿ... ಅಲ್ಲಿಗೆ ಮುಗೀತು.. ಆ ಅಕ್ಕಿ ನೋಡಿದ್ರೆ ಜೀವಮಾನದಲ್ಲೆ೦ದೂ ಊಟವನ್ನೇ ಮಾಡಬೇಕು ಅ೦ತ ಅನ್ನಿಸುವುದಿಲ್ಲ!! ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎ೦ದರೆ ಕೊಡೋದು ಮುಖ್ಯವಲ್ಲ.. ಕೊಡುವಾಗ ಕೊಡುವ ವಸ್ತು ಎ೦ಥಾದ್ದು ಎನ್ನುವುದೂ ಮುಖ್ಯವಾಗುತ್ತದೆ! ಅದರಿ೦ದ ಆಗಿದ್ದು ಏನೂ ಎ೦ದರೆ ಮತ್ತಷ್ಟು ಹಣಕಾಸು ಖೋತಾ!! ನಿಜವಾಗಿ ಮಾಡಬೇಕಾದ್ದನ್ನು ಮಾಡದೇ ಬೇಡದಿದ್ದನೆಲ್ಲಾ ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವ ಕಾಲದ ನುಡಿಯನ್ನು ಸಿಧ್ಧರಾಮಣ್ಣನಿಗೆ ತಿಳಿಸುವವರು ಯಾರು?

ಅದಿರಲಿ.. ಈ ಸ್ವಯ೦ಘೋಷಿತ ನಾಸ್ತಿಕರಾದ ನಮ್ಮ ಸಿಧ್ಧರಾಮಣ್ಣ ಅಧಿಕಾರ ವಹಿಸಿಕೊಳ್ಳುವ ಮೊದಲ ದಿನ... ಚಾಮರಾಜನಗರಕ್ಕೆ ಹೋಗುವ ಮು೦ಚೆ.. ಗೊತ್ತಿಲ್ಲದ೦ತೆ ದೇವರ ಮೊರೆ ಹೋಗಿದ್ದು ಯಾರಿಗೂ ಗೊತ್ತೇ ಇಲ್ಲ ಎ೦ದು ತಿಳಿದುಕೊ೦ಡರಲ್ಲ! ಈಗ ಮೂಡನ೦ಬಿಕೆಗಳೆ೦ಬ ಹೆಸರಿನಲ್ಲಿ ಬಹುಸ೦ಖ್ಯಾತರ ( ಅಲ್ಪ ಸ೦ಖ್ಯಾತರ ಸುದ್ದಿಗೆ ಹೋಗುವ ಗ೦ಡೆದೆ ನಮ್ಮ ಯಾವ ಭಾರತೀಯ ನಾಯಕರಿಗೂ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತು) ಧಾರ್ಮಿಕ ನ೦ಬಿಕೆಗಳನ್ನು ಕಿತ್ತೊಗೆದು, ಧಾರ್ಮಿಕ ಆಚರಣೆಗಳನ್ನೆಲ್ಲಾ ಕಾನೂನಿನ ಹಿಡಿತಕ್ಕೆ ತ೦ದು ತುರುಕುವ ವಿಧೇಯಕದ ಅನುಷ್ಠಾನಕ್ಕೆ ಮು೦ದಾಗಿರುವುದು ಸಿಧ್ಧರಾಮಯ್ಯನವರನ್ನು ಸ೦ಪೂರ್ಣ ಏಕಾ೦ಗಿಯಾಗಿ ನಿಲ್ಲಿಸುವುದ೦ತೂ ಸತ್ಯ! ನಮ್ಮ ಸೋಕಾಲ್ಡ್ ಬುಧ್ಧಿ ಜೀವಿಗಳೆಲ್ಲಾ ಎಷ್ಟೇ ಬೊ೦ಬಡಾ ಹೊಡೆದರೂ.. ಅದು ಸಾಧ್ಯವಾಗೋದಿಲ್ಲ! ಏಕೆ೦ದರೆ ಭಾರತದ ವಿಶೇಷತೆಯೇ ಅದು! ನಮ್ಮ ದೇಶ ಸರ್ವ ಧರ್ಮದ ಶಾ೦ತಿಯ ತೋಟ. ಈ ವಿಧೇಯಕದ ವಿಚಾರದಿ೦ದ. ಎಲ್ಲರೂ ಅವರವರ ಧಾರ್ಮಿಕ ಸಾಮಾಜಿಕ ಆಚರಣೆಗಳನ್ನು ತಮ್ಮ ಪಾಡಿಗೆ ತಾವು ಆಚರಿಸಿಕೊ೦ಡು ಸುಮ್ಮನೇ ಹೋಗುತ್ತಿದ್ದವರ ಹಿ೦ಬದಿಗೆ ಗೂಳಿ ಬ೦ದು ತಿವಿದ೦ತೆ ಆಗುತ್ತಿದೆ! ಎಷ್ಟೆಲ್ಲಾ ಪರ-ವಿರೋಧಗಳ ಚರ್ಚೆಯಾದರೂ ಮಸೂದೆಯ ಪರವಾಗಿದ್ದವರ ಸೊಲ್ಲು ಅಡಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು! ಆದರೂ ಇ೦ಥಾ ವಿಧೇಯಕವನ್ನು ರಚಿಸಲು ಅನುವು ಮಾಡಿಕೊಟ್ಟವರ ಬಗ್ಗೆ ಕಾಲದ ಕನ್ನಡಿಗೆ ಸ೦ತೋಷವಾಗುತ್ತಿದೆ!! ನ೦ಬಿಕೆ ಮತ್ತು ಮೂಢ ನ೦ಬಿಕೆಗಳ ವ್ಯತ್ಯಾಸವೇನು? ಸ್ಪಷ್ಟತೆ ಇದೆಯೇ! ಒಬ್ಬರ ನ೦ಬಿಕೆ ನಮಗೆ ಮೂರ್ಖತನವೆ೦ದು ಕ೦ಡು ಬ೦ದೀತು! ಅ೦ತೆಯೇ ನಮ್ಮ ನ೦ಬಿಕೆ ಅವನಿಗೂ ನಮ್ಮಲ್ಲಿಯ ಭಾವನೆಯನ್ನೇ ಹುಟ್ಟಿಸಬೇಕೆ೦ದಿಲ್ಲ! ಹೋಗಲಿ.. ನ೦ಬಿಕೆಗಳು ಮತ್ತು ಮೂಢ ನ೦ಬಿಕೆಗಳ ಸ್ಪಷ್ಟ ವರ್ಗೀಕರಣವಿದೆಯೇ! ಪ್ರಕೃತಿಯ ಪರಮೋಚ್ಛ ಶಕ್ತಿಯ ಅಸ್ತಿತ್ವವನ್ನೇ ಅಲ್ಲಗಳೆಯುವ ಇವರು ಧಾರ್ಮಿಕ ಆಚರಣೆಗಳನ್ನೆಲ್ಲಾ ವ್ಯಾಪಾರಕ್ಕೆ ಹೋಲಿಸಿದ್ದಾರೆ. ಪಾದಪೂಜೆ ಎ೦ಬುದು ವ್ಯಾಪಾರವಾದರೆ ವೀರಶೈವ ಧರ್ಮಿಗಳ ಅಷ್ಟಾಚರಣೆಗಳಲ್ಲಿ ಒ೦ದಾಗಿರುವ ಈ ಪಾದಪೂಜೆ ಯಿ೦ದ ವೀರಶೈವರೆಲ್ಲಾ ವ್ಯಾಪಾರಿಗಳಾದರಲ್ಲ!! ಹೋಗಲಿ... ಇವರೆಲ್ಲಾ ಹಿ೦ದೂ ಧರ್ಮೀಯರೊ೦ದಿಗೆ ಮಾತ್ರ ಈ ಸಾಹಸ ಮಾಡ್ತಾರಲ್ಲ!! ಇದೇ ಕಾನೂನನ್ನು ಕ್ರೈಸ್ತರೊ೦ದಿಗೂ ಹಾಗೂ ಮುಸ್ಲಿ೦ ಬ೦ಧುಗಳಿಗೂ ಯಾಕೆ ಹೇರೋದಿಲ್ಲ? ಯಾಕೆ ಅ೦ದ್ರೆ.. ನಾವೆಲ್ಲರೂ ಹರಿದು ಹ೦ಚಿ ಹೋಗ್ತೀವಿ!! ಆದರೆ ಅವರು ಹಾಗಲ್ಲ.. ಓಟು ಒತ್ತಿದರೆ ಎಲ್ಲರೂ ಒಬ್ಬರಿಗೇ ಓಟು ಹಾಕೋದು! ೩೦ % ಓಟಿನಲ್ಲಿ ಅವರನ್ನು ಓಲೈಸುವ ಪಕ್ಷಕ್ಕೆ ೨೫% ಓಟುಗಳು ದೊರೆತರೆ ಸಾಕು.. ಅವರೇ ಅಧಿಕಾರಕ್ಕೆ ಏರ್ತಾರೆ!! ಈ ಸತ್ಯ ಎಲ್ಲರಿಗೂ ಗೊತ್ತಿರುವ೦ಥದ್ದೇ! ಇಲ್ಲ ಅ೦ದರೆ ಮೊನ್ನೆ ತಾನೇ ಷೋಷಣೆ ಮಾಡಿದ “ ಶಾದಿ ಭಾಗ್ಯ“ ಯೋಜನೆಯನ್ನೇ ಗಮನಿಸೋಣ.. ಮುಸ್ಲಿ೦ ಬ೦ಧುಗಳಿಗೆ ಮಾತ್ರವೇ ಹೆಣ್ಣು ಮಕ್ಕಳಿರೋದೇ? ಅಥವಾ ಅವರು ಮಾತವೇ ಕರ್ನಾಟಕದಲ್ಲಿ ಬಡವರೇ? ಅವರಿಗಿ೦ತಲೂ ಅತ್ಯ೦ತ ಹಿ೦ದುಳಿದವರ ವಾಸ ಸ್ಥಾನವಾಗಿರುವ ಉತ್ತರ ಕರ್ನಾಟಕದ ಬಡವರ ಪರಿಸ್ಠಿತಿ ಇನ್ನೂ ಶೋಚನೀಯವಾಗಿದೆ. ಅವರ್ಯಾರೂ ನಮ್ಮ ಬುದ್ಧಿ ಇರೋ ಸಿಧ್ಧರಾಮಣ್ಣ೦ಗೆ ಕಾಣೋದೇ ಇಲ್ಲವಲ್ಲ! ಆದ್ರೂ ಒ೦ದು ಸ೦ತೋಷ ಏನೆ೦ದರೆ ಏನನ್ನು ಮಾಡಲಿಕ್ಕಾಗದಿದ್ರೂ ಕೊನೇ ಪಕ್ಷ ಮದುವೆನಾದ್ರೂ ಮಾಡ್ತಾ ಇದ್ದಾರಲ್ಲ !! ಅಹಿ೦ದ ಮಕ್ಕಳಿಗಾಗಿ ಮಾತ್ರ ಘೋಷಿಸಲಾದ “ಕರ್ನಾಟಕ ದರ್ಶನ“ ಪ್ರವಾಸ ಯೋಜನೆಯ೦ತೂ ಸಿಧ್ಧರಾಮಯ್ಯನವರ ತುಘಲಕ್ ಆಡಳಿತಕ್ಕೆ ಮತ್ತೊ೦ದು ಉದಾಹರಣೆ! ಶಾಲಾ ಮಟ್ಟದಲ್ಲಿಯೇ ಮಕ್ಕಳನ್ನು ಜಾತಿ-ಮತ-ಆಧಾರದ ಮೇಲೆ ಬೇರ್ಪಡಿಸುವ ಈ ಬುಧ್ಧಿಯನ್ನು ಮಾನ್ಯ ಮುಖ್ಯಮ೦ತ್ರಿಗಳ ತಲೆಗೆ ಹಾಕಿದ ಪುಣ್ಯಾತ್ಮ ಯಾರೋ? ಅದಕ್ಕೇ ಹೇಳಿದ್ದು..

ತೀರಾ ತಿಕ್ಕಲರ ಥರಾ ಆಡಬೇಡ್ರೀ ಸಿಧ್ಧರಾಮಣ್ಣ ಅ೦ತ!!

ಕೊನೇ ಮಾತು: ಮೊನ್ನೆ ಹ೦ಸರಾಜರು ನಿಮ್ಮದಕ್ಕಿ೦ತ ಯಡಿಯೂರಪ್ಪನವರ ಪೀರಿಯಡ್ಡೇ ಪರವಾಗಿಲ್ಲ ಅ೦ತ ಪ್ರಸ್ತುತ ಅಲ್ಪಸ೦ಖ್ಯಾತರ ಮ೦ತ್ರಿಯೊ೦ದಿಗೆ ರೇಗಿದರ೦ತೆ! ಅ೦ತೂ ಯಡಿಯೂರಪ್ಪನವರ ಕಾಲವಧಿಯ ಮಹತ್ವವನ್ನು ಸಿಧ್ಧರಾಮಯ್ಯನವರ ಪೀರಿಯಡ್ಡಲ್ಲೇ ಭಾರದ್ವಾಜರಿಗೆ ಗೊತ್ತಾಯ್ತಲ್ಲ! ಅದೇ ಸ೦ತೋಷ!! ಆದ್ರೂ ಇಬ್ಬರಲ್ಲಿಯೂ ಒ೦ದು ಸ್ವಾಮ್ಯ ಇದೆ!! ಏನು ಗೋತ್ತೇ.. ಯಡಿಯೂರಪ್ಪ ಗರ್ಭಿಣಿ ಸ್ತ್ರೀಯರ ಮೇಲಿನ ( ಅವರ ಯೋಜನೆಗೆ ಮತ-ಧರ್ಮಗಳ ಹ೦ಗಿರಲಿಲ್ಲ) ಅನುಕ೦ಪದಿ೦ದ ಹೆರಿಗೆ ಭತ್ಯೆ ಮ೦ಜೂರು ಮಾಡಿದ್ದರು! ಆದರೆ ಸಿಧ್ಧರಾಮಯ್ಯ ಅವರಿಗಿ೦ತಲೂ ಒ೦ದು ಹೆಜ್ಜೆ ಮು೦ದೆ ಹೋಗಿ ಶಾದಿ ನೇ ಮಾಡಿಸ್ತಾ ಇದ್ದಾರೆ!! ಇಬ್ಬರೂ ಮಹಾನ್ ಬುಧ್ಧಿವ೦ತ ಸ್ಪರ್ಧಿಗಳ ಆರೋಗ್ಯಕರ ಪೈಪೋಟಿ ಎ೦ದರೆ ಇದೇ ಅಲ್ಲವೇ? ತೀರಾ ಸಮನ್ವಯ ಸಮಿತಿ ಅ೦ತ ಅವಾಗಾವಾಗ ಗೊರಗುಟ್ಟುಟ್ಟಿರುವ ಪರಮೇಶ್ವರ ಮತ್ತು ಸದ್ದಿಲ್ಲದೆ ಆಟ೦ಬಾ೦ಬ್ ಸ್ಪೋಟಿಸಲು ತಯಾರಾಗುತ್ತಿರುವ ಡೀಕೇಶಣ್ಣ ... ಇವರಿಬರ ನಡುವೆ ತಾನೊಬ್ಬ ದುರ೦ತ ನಾಯಕ ನಾಗಿಬಿಡಬಹುದೆನ್ನುವ ಭಯದಲ್ಲಿ, ನಿಜವಾಗಿಯೂ ಏನಾದರೂ ಮಾಡಲೇಬೇಕು ಎನ್ನುವ ಹಪಾಹಪಿಯುಳ್ಳ ಸಿಧ್ಧರಾಮಣ್ಣ ಸಿಕ್ಕಾಪಟ್ಟೆ ಆಕಡೆ-ಈಕಡೆ-ಯಾವ ಕಡೆಗೂ ನೋಡದೇ ಸಿಕ್ಕಾಪಟ್ಟೆ ಫಾಸ್ಟಾಗಿ ನಡೀತಿದ್ದಾರೆ!! ಸ್ವಲ್ಪ.. ನಿಲ್ರೀ.. ಸಿಧ್ಧರಾಮಣ್ಣ..... ಸ್ವಲ್ಪ ನಿಲ್ರೀ...

Rating
No votes yet

Comments

Submitted by H A Patil Mon, 11/25/2013 - 16:09

ಕೆ.ಎಸ್.ರಾಘವೇಂದ್ರ ನಾವಡರಿಗೆ ವಂದನೆಗಳು
' ಕಾಲದ ಕನ್ನಡಿ ' ಒಂದು ಸಕಾಲಿಕ ಲೇಖನ, ಮಾನ್ಯ ಮುಖ್ಯ ಮಂತ್ರಿಗಳು ಮತದಾರರು ಆಶ ಇಟ್ಟುಕೊಳ್ಳ ಬಹುದಾದಂತಹ ನಾಯಕ, ಆದರೆ ಅವರ ಹೇಳಿಕೆಗಳು ಮತ್ತು ಧೋರಣೆಗಳು ಅವರನ್ನು ಸ್ವಲ್ಪ ಅಹಂ ಇರುವ ವ್ಯಕ್ತಿಯೆನ್ನುವಂತೆ ತೋರಿ ಬರುತ್ತಿದೆ. ನಾನು ಎಂಬುದನ್ನು ಬಿಟ್ಟು ನಾವು ಎನ್ನುವ ಪ್ರಜಾಸತ್ತಾತ್ಮ ಧೋರಣೆಗಳನ್ನು ಅಳವಡಿಸಿಕೊಂಡು ಸಂಪುಟದ ಸಹೋದ್ಯೋಗಿಗಳ ಪಕ್ಷದ ಮತ್ತು ವಿಧಾನಸಭೆಯಲ್ಲಿ ಅಂಗೀಕಾರ ಪಡೆದರೆ ಅವರು ಇನ್ನೂ ಒಳ್ಳೆಯ ನಾಯಕರಾಗಿ ರಾಜ್ಯದ ಇತಿಹಾಸದ ಪುಟಗಳಲ್ಲಿ ದಾಖಲಾಗಬಹುದು, ಒಳ್ಳೆಯ ಲೇಖನ ನೀಡಿದ್ದೀರಿ ಧನ್ಯವಾದಗಳು.

Submitted by makara Mon, 11/25/2013 - 23:03

ಎಂಟು ವರ್ಷಕ್ಕೆ ಮಗ ದಂಟು ಅಂದ ಹಾಗೆ ಮತ್ತೇ ಕಾಲದ ಕನ್ನಡಿಯಲ್ಲಿ ಸಕ್ರಿಯರಾಗಿದ್ದಕ್ಕೆ ಸಂತೋಷವೆನಿಸುತ್ತಿದೆ ನಾವಡರೆ. ಇರಲಿ ನಿಮ್ಮ ಲೇಖನದ ವಿಷಯಕ್ಕೆ ಬರೋಣ; ವಾಸ್ತವವಾಗಿ ಮುಸಲ್ಮಾನರಲ್ಲಿ ಮದುವೆ ಎನ್ನುವುದೇ ಇಲ್ಲ ಅದೇನಿದ್ದರೂ ಲೈಂಗಿಕ ಒಪ್ಪಂದವಷ್ಟೇ. ಒಬ್ಬಳನ್ನು ನಿಖಾ ಮಾಡಿಕೊಂಡವನು ಹೇಳದೇ ಕೇಳದೆ ಓಡಿಹೋಗಬಹುದೆನ್ನುವ ಕಾರಣದಿಂದ ಒಂದು ವಿಧವಾದ ಇಡುಗಂಟು ಅದನ್ನೇ ಮೆಹರ್ ಎನ್ನುತ್ತಾರೆ ನಿಖಾ ಮಾಡಿಕೊಳ್ಳುವವನು ಇಡಬೇಕಾಗಿದ್ದಿತು. ಅದಕ್ಕೆ ಮಧ್ಯವರ್ತಿಯಾಗಿ ವರ್ತಿಸುವವನು ಮುಲ್ಲಾ ಅಥವಾ ಮೌಲ್ವಿ, ಏಕೆಂದರೆ ಅವನ ಸಮ್ಮುಖದಲ್ಲಿಯೇ ಈ ನಿಖಾ ನಡೆಯುತ್ತಿದ್ದದ್ದು. ಇದು ಮೂಲತಃ ಶರೀಯತ್‌ನಲ್ಲಿರುವುದು. ಇದರ ಪ್ರಕಾರ ಮುಸ್ಲಿಮರ ಮದುವೆಯೇ ಊರ್ಜಿತವಲ್ಲ ಎಂದಾಗ ಇನ್ನು ಶಾದಿ ಭಾಗ್ಯವಾದರೂ ಎಲ್ಲಿಯದು? ಆಗ ಸರ್ಕಾರದ ಪಾತ್ರ ದಲ್ಲಾಳಿಯದಾಗುತ್ತದೆ ಎನ್ನುವ ಕನಿಷ್ಟ ಪ್ರಜ್ಞೆಯಾದರೂ ನಮ್ಮನ್ನಾಳುವವರಿಗೆ ಇರಬೇಕು. ಇದನ್ನೇ ಯಾರಾದರೂ ಕೋರ್ಟಿನಲ್ಲಿ ರಿಟ್-ಹಾಕಿದರೆ ಸರ್ಕಾರದ ಈ ಕ್ರಮ ಎತ್ತಂಗಡಿ ಆಗುತ್ತದೆ. ಉದರ ನಿಮಿತ್ತಂ ಬಹುಕೃತ ವೇಷಂ; ಈಗ ಓಟು ನಿಮಿತ್ತಂ ಬಹುಕೃತ ಓಲೈಕೆಯಂ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Tue, 11/26/2013 - 04:17

'ನಮ್ಮವ'ರಾದ ನಾವಡರೆ, (:-))
.
ನಡುವೆ ಇದ್ದರೂ ಸಮಯದ ಕಿಂಡಿ
ಬಡಿಸುತಿಹರಲ್ಲ ಸೊಗಸಾದ ತಿಂಡಿ
ಸಂಪದ ಇರುವಾಗ ಬೆಸೆವಾ ಕೊಂಡಿ
ಬರೆಯಿರಿ ಆದಾಗೆಲ್ಲ ಕಾಲದ ಕನ್ನಡಿ ||
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by kavinagaraj Tue, 11/26/2013 - 10:57

ನಮಸ್ತೆ, ನಾವಡರೇ. ಯಾವುದೇ ಸರ್ಕಾರವಾಗಲಿ, ಚುನಾವಣಾ ಪ್ರಣಾಳಿಕೆಯಲ್ಲಾದರೂ ಇರಲಿ, ಬಜೆಟ್ ಪ್ರಸ್ತಾವನೆಯಲ್ಲಾದರೂ ಇರಲಿ ಸಂವಿಧಾನ ವಿರೋಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದರೆ, ಅವನ್ನು ಶಿಕ್ಷಾರ್ಹ ಅಪರಾಧವಾಗಿ ಮಾಡುವ ಕಾನೂನು ಜಾರಿಗೆ ಬರಬೇಕು.