ಅವಳು
ಅಂದು ಯಾಕೋ ಗೊತ್ತಿಲ್ಲ,ನನ್ನಲ್ಲಿ ನಾನು ಇರಲಿಲ್ಲ,ಎಲ್ಲಿಗೋ ಪಯಣ ಸಾಗಬೇಕಿತ್ತು,ಬಸ್ ಸ್ಟಾಪಿನಲ್ಲಿ ನಿಂತಿದ್ದೆ,ಮರೆಯದಿದ್ದರೂ ಅವಳ ನೆನಪು ದೂರವಿತ್ತು.ಅಂದು ಅದೇ ಬಸ್ ಸ್ಟಾಪಿಗೆ ಅವಳು ಬಂದಳು ಅದು ಕೂಡಾ ಯಾಕೋ ಗೊತ್ತಿಲ್ಲ,ಎದೆಯಲ್ಲಿ ಮಿಂಚೊಂದು ಕಣ್ಣಿನಂಚಿಗೆ ಬಡಿಯಿತು,ಅದ್ಯಾಕೋ ಕಾಲು ನಿಂತಲ್ಲಿ ನಿಲ್ಲಲಿಲ್ಲ,ತಲೆ ಮೇಲೇಳಲಿಲ್ಲ, ಎದೆಬಡಿತ ಕಡಿಮೆಯಾಗಲೇ ಇಲ್ಲ ಕಣ್ಣು ಮಾತ್ರ ಅವಳೆಡೆಗೆ ಎಳೆಯುತಿತ್ತು,ಅಂ'ತೂ' ಬಸ್ಸು ಬಂದಿತ್ತು,ಸೀಟು ಮಾತ್ರ ನನ್ನೇ ನೋಡಿದಂತಿತ್ತು ಅವಳನ್ನು ದೂರ ಉಳಿಸುವ ಯೋಚನೆ ಅದರದಾಗಿತ್ತು ಎಂಬುದು ಮನವರಿಕೆಯಾಯ್ತು, ನಿಜವಾಯ್ತು,ಅವಳು ಆ ಕಡೆ ನಾನು ಈ ಕಡೆ ಅಂದು ಕಿಟಕಿ ಗಾಜು ಇರದಿದ್ದರೆ ಆ ಕ್ಷಣ ನನ್ನ ಬದುಕು ಶೂನ್ಯ ಎಂಬುದೇ ಸತ್ಯ,ಕಣ್ಣು ಕಿಟಕಿ ಗಾಜಿನ ಕಡೆಗೆ ಎಳೆಯಿತು,ಅವಳ ಅಸ್ಪಷ್ಟ ರೂಪ ಹೃದಯದಲ್ಲಿ ಸ್ಪಷ್ಟವಾಯಿತು.ಎಂದಾದರು ಅವಳು ನನ್ನೆಡೆಗೆ ನೋಡುವಳೇ! ಎಂಬುದು ಮೂಢಯೋಚನೆಯಾಯ್ತು.ಹಾಗೊಮ್ಮೆ ಹೀಗೊಮ್ಮೆ ತಿರುಗಿ ನೋಡೋಣವೆಂದರೆ ಈ ಹಾಳು ಜನ್ಮಕ್ಕೆ ಸುತ್ತಲಿನ ಜಗತ್ತಿನ ಅರಿವಿನ ಪರಧಿ ಜಾಸ್ತಿ,ಅದೇ ಗುಂಗಿನಲ್ಲಿ ಅದೇಷ್ಟೋ ಬಾರಿ ಅವಳನು ನೋಡುವ ಅದೃಷ್ಟ ತಪ್ಪಿತ್ತು,ಇದನ್ನೆಲ್ಲಾ ಮೀರಿ ಬರುವ ಹಂಬಲ ಪ್ರಬಲವಾದರೂ ಅದು ಎಂದಿಗೂ ಬಲವಾಗಲೇ ಇಲ್ಲಾ...! ಇರಲಿ ಬಿಡು,ನೋಡೋಣ ಕಾಯೋಣ ಅದೆಂತಹುದೇ ಇರಲಿ ಮೀರಿ ನಡೆಯೋಣ,ಇನ್ನಷ್ಟು ದಿನ ಅವಳು ಇದೇ ರೀತಿ ನನ್ನಲ್ಲಿರಲಿ.........? ಮುಂದುವರಿಯಲಿ........!?
Comments
ಉ: ಅವಳು
ಕಾಯುವುದು ಭ್ರಮೆಯಾಗದಿರಲಿ,,,,
ವಾಸ್ತವದಲ್ಲಿ ನಿಮ್ಮೊಂದಿಗೆ ಆಕೆ ಇರಲಿ,,,
ಸುಂದರ ಬರಹ, ಶುಭವಾಗಲಿ ನಿಮಗೆ ---ನವೀನ್ ಜೀ ಕೇ