' ಸತ್ತುಹೋದ ಸಂಬಂಧಗಳು '

' ಸತ್ತುಹೋದ ಸಂಬಂಧಗಳು '

'ಸತ್ತುಹೋದ ಸಂಬಂಧಗಳು'

ಸತ್ತುಹೋದ ಸಂಬಂಧಗಳ
ಮುಂದೆ
ಅಳುತ ಕೂಡಲಾಗುವುದಿಲ್ಲ
ಏಕೆಂದರೆ ಅಲ್ಲಿ
ಪುನರುಜ್ಜೀವನ ಸಾಧ್ಯವಿಲ್ಲ
ಹೀಗಾಗಿ
ಅವುಗಳು ಸಾಗಿಬಂದ ಪಥವ
ನೆನಪಿಸಿಕೊಂಡು
ಒಂದು ಹೃತ್ಪೂರ್ವಕ ವಿದಾಯ
ಹೇಳಿ ಮುಂದುವರಿಯಬೇಕು
ಏಕೆಂದರೆ ಚಲನೆ
ಕಾಲ ಮತ್ತು ಜಗದ ನಿಯಮ

*

' ಉದಯ ರವಿ'

ಉದಯ ರವಿ ನಮ್ಮಲಿರುವ
ಕೃತಜ್ಞತಾ ಭಾವವನು
ಜಾಗೃತ ಗೊಳಿಸುವ ಒಂದು
'ಮಹಾ ಚೈತನ್ಯ'
ಆತ ನಮ್ಮ ದೇವ ದೈವ
ಎಲ್ಲವೂ ಹೌದು
ನಮ್ಮ ದೈನಂದಿನ ಬದುಕು
ಅವನ ಕರುಣೆ
ಆ ಬದುಕು ಭಿನ್ನವಾದುದು
ಜೊತೆಗೆ ಅದ್ಭುತವಾದುದು
ಅದೊಂದು
'ಅವಿಸ್ಮರಣೀಯ ಬದುಕು'

ನಾವು ಸೇವಿಸುವ ಗಾಳಿ
ಕುಡಿಯುವ ನೀರು
ಉಣ್ಣುವ ಅನ್ನ ಅನುಭವಿಸುವ
ಪ್ರತಿಯೊಂದು ಸಹ
ಸಂತಸದ ಕ್ಷಣಗಳು
ಎಲ್ಲವೂ ಆತನ ಕೊಡುಗೆಗಳೆ
ಇವುಗಳನ್ನು ನೆನೆದು
ಬದುಕದೆ ಹೊದರೆ ನಾವು
ಕೃತಘ್ನರು ಅಂದರೆ
ನಮ್ಮದೊಂದು ಕೃತಘ್ನ ಬದುಕು

*

Rating
No votes yet

Comments

Submitted by nageshamysore Sat, 11/30/2013 - 02:44

ಪಾಟೀಲರೆ, ಸಂಬಂಧಗಳ ನಶ್ವರತೆ ಮತ್ತು ಚಲನ ಶೀಲತೆಯ ಅನಿವಾರ್ಯತೆ ಕುರಿತ ಕಿರು ಕಾವ್ಯ ಚೆನ್ನಾಗಿ ಮೂಡಿಬಂದಿದೆ. ಅಂತೆಯೆ ಈ ಗ್ರಹದ ದೈನಂದಿನ ಅಳಿವು ಉಳಿವಿನ ರೂವಾತಿಯೆನಿಸಿದ ದಿನಕರನ ಉವಾಚ ಸಹ. ಎರಡು ಸಾಮಾನ್ಯ ವಸ್ತುಗಳೆ ಆದರೂ, ಅದನ್ನು ಹಿಡಿದಿಟ್ಟ ಸರಳ ರೀತಿಯಿಂದ ವಿಶೇಷವಾಗುತ್ತವೆ..
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by naveengkn Wed, 12/04/2013 - 08:50

ಚಲನಶೇಲತೆ ಜಗದ ನಿಯಮವೆಂದು ಸರಳವಾಗಿ ವಿವರಿಸಿದ್ದೀರಿ,,,,,,, ಜೊತೆಗೆ ರವಿಯ ಬಗೆಗಿನ ಅದ್ಭುತ ಬರಹ,,,,, ತತ್ವಯುತವಾಗಿ ಮೂಡಿ ಬಂದಿದೆ

Submitted by H A Patil Wed, 12/04/2013 - 14:35

In reply to by naveengkn

ನವೀನ ರವರಿಗೆ ವಂದನೆಗಳು
ಈ ಚುಟುಕುಗಳ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ ಅವುಗಳ ವಿಮರ್ಶೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು.