'ದೊಡ್ಡಾಂವ' -ಲಕ್ಷ್ಮೀಕಾಂತ ಇಟ್ನಾಳ

'ದೊಡ್ಡಾಂವ' -ಲಕ್ಷ್ಮೀಕಾಂತ ಇಟ್ನಾಳ

‘ದೊಡ್ಡಾಂವ’    - ಲಕ್ಷ್ಮೀಕಾಂತ ಇಟ್ನಾಳ

ಅವಳ ಹೆಸರು ಬರೆಯುವುವಾಗ ಕಂಪಿಸಿತು ಕೈ
ಅವಳ ಹೆಸರಿನ ಕಾಗದವನ್ನು
ಕಣ್ಣು ಮುಚ್ಚಿ ಕೆನ್ನೆಗೊತ್ತಿಕೊಳ್ಳುವಾಗ
ಮೈಯೆಲ್ಲ ಕಂಪನ, ರೋಮಾಂಚನ,
ದಮನಿ ದಮನಿಗಳಲ್ಲಿ ಸಂಚಲನ,
ತಪ್ಪಿದ ಕೈಕಾಲುಗಳ ನಿಯಂತ್ರಣ,
ಅದೇನೊ ಆಯಿತು,
‘ಥೂ’ ಹೊಲಸು!
ಮನವೆಲ್ಲ ಕಸಿವಿಸಿ,
ನನಗರಿವಿಲ್ಲದೆ ಕುಸಿದೆ.
ಖಿನ್ನತೆಯ ಪಾಪಪ್ರಜ್ಞೆ!
ಶಾಲೆಗೆ ಹೋಗುವಾಗ,
ನಾಚಿ, ಅಂಜುತ್ತ ಗೆಳೆಯನಿಗೆ
ಕಿವಿಯಲ್ಲಿ ನಡೆದುದನ್ನು ಉಸಿರಿದೆ,
ನಿನಗೂ ಆಯಿತೆ ಅದು!
ನಕ್ಕು ಹೇಳಿದ
ನೀನೀಗ ‘ದೊಡ್ಡಾಂವ'  ನಾದೆ.

Rating
No votes yet

Comments

Submitted by H A Patil Sun, 12/01/2013 - 18:19

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
'ದೊಡ್ಡಾಂವ' ಹದಿ ಹರೆಯದ ಹುಡುಗರ ಭಾವಗಳನ್ನು ಅವರಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಸ್ನೇಹಿತರ ಮಧ್ಯೆ ನಡೆವ ಅಭಿವ್ಯಕ್ತಿಗಳನ್ನು ಬಹಳ ಚೆನ್ನಾಗಿ ನಿರೂಪಿಸುವ ಕವನ, ಕವನದುದ್ದಕ್ಕೂ ಹೊಮ್ಮುವ ಮುಗ್ಧ ನಿರೂಪಣೆ ಹಿಡಿಸಿತು, ಉತ್ತಮ ಪ್ರಯೋಗದ ಕವನ ಧನ್ಯವಾದಗಳು.

Submitted by lpitnal Sun, 12/01/2013 - 20:43

In reply to by H A Patil

ಹಿರಿಯರಾದ ಪಾಟೀಲರವರೆ, ತಮ್ಮ ಮೆಚ್ಚುಗೆಯ ನುಡಿಗಳಿಗೆ, ಅರ್ಥವಂತಿಕೆಯ ಸಾಲುಗಳಿಗೆ ಸಾರ್ಥ್ಯಕ್ಯ ಮೂಡಿತು.ಧನ್ಯವಾದಗಳುಲ

Submitted by nageshamysore Sun, 12/01/2013 - 20:21

ನಮಸ್ಕಾರ ಇಟ್ನಾಳರೆ , 
.
'ದೊಡ್ದಾಕಿ' ಆದದ್ದನ್ನು ಸೆಲೆಬ್ರೇಟು ಮಾಡುವ ಹಾಗೆ 'ದೊಡ್ಡಾಂವ' ಆದಾಗ ಮಾಡುವುದಿಲ್ಲವಲ್ಲ :-)
.
ದೈಹಿಕ ಪ್ರಬುದ್ದತೆಯ ಮೊದಲ ಹೆಜ್ಜೆಯನ್ನು ಪ್ರಬುದ್ಧವಾಗಿ ಮತ್ತು ಅಷ್ಟೆ ಚುಟುಕಾಗಿ, ಸರಳವಾಗಿ ಹೇಳುವ ಕವನ. ಚೆನ್ನಾಗಿದೆ ಇಟ್ನಾಳರೆ :-)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by lpitnal Sun, 12/01/2013 - 20:51

In reply to by nageshamysore

ಪ್ರಿಯ ಲೇಖಕ ನಾಗೇಶಜಿ, ಲಕ್ಷ್ಮೀಕಾಂತ ಇಟ್ನಾಳರ ವಂದನೆಗಳು. ತಮ್ಮ ವಿಮರ್ಶೆಯ ನುಡಿಗಳಿಗೆ ಧನ್ಯ. ಮನುಷ್ಯ ಮುಗ್ಧತೆಯಿಂದ, ಪ್ರಬುದ್ಧನಾಗಿ, ಬುದ್ಧನಾಗುವ ಮೆಟ್ಟಿಲು ಇದು. ನಿಸರ್ಗ ಸಹಜವಾದರೂ ಈ ಪ್ರಕ್ರಿಯೆಗೆ ಅದೆಷ್ಟು ಜವಾಬ್ದಾರಿಗಳಿವೆ. ನೇರಾ ನೇರ ನಿಸರ್ಗ ನಿಯಮಗಳ ರಾಯಭಾರಿಯತ್ವ.ವಾರಸುದಾರಿಕೆಯ ಪಾಳೆಗಾರಿಕೆ, ವರ್ತಮಾನ, ಇತಿಹಾಸ ಭವಿಷ್ಯದ ಭವಿತವ್ಯದ ಮೂಲ ಕಾರಣಬಿಂದು. ಕಾಲಪುರುಷನ ಕಾರಣಿಕತ್ವ.ಮತ್ತೊಮ್ಮೆ ಧನ್ಯವಾದಗಳು.

Submitted by ಗಣೇಶ Mon, 12/02/2013 - 00:25

:) ಇಟ್ನಾಳರೆ, ಹಲ ಸಮಯದ ನಂತರದ ಭೇಟಿ. ನೀವು ಹೊಸದಾಗಿ ಪ್ರೊಫೈಲ್ ಪ್ರಾರಂಭಿಸಿದ್ದರಿಂದ ನಿಮ್ಮ ಹಳೇ ಲೇಖನ/ಕಾವ್ಯಗಳ ಕೊಂಡಿಯೇ ಕಳಚಿದಂತೆ. "ಲೇಖಕರ ಮತ್ತಷ್ಟು ಬರಹಗಳು" ನಲ್ಲಿ ಮೂರೇ ಕವನಗಳು ಕಾಣಿಸುವುದು. ಉಳಿದವಕ್ಕೆ- http://sampada.net/blog/%E0%B2%85%E0%B2%AE%E0%B3%8D%E0%B2%AE-%E0%B2%B9%E...

Submitted by lpitnal Mon, 12/02/2013 - 09:05

In reply to by ಗಣೇಶ

ಅತ್ಮೀಯ ಗಣೇಶ ಜಿ, ವಂದನೆಗಳು. ತಾವು ಸರಿಯಾಗಿ ಗುರುತಿಸಿದಿರಿ, ನನಗೆ ನನ್ನ ಐಡಿ, ಪಾಸ್ ವರ್ಡ್ ಮರೆತು ಹೋಗಿ, ಎಷ್ಟೇ ಪ್ರಯತ್ನ ಪಟ್ಟರೂ ನನಗೆ ಅದು ಬ್ರಹ್ಮಗಂಟಾಗಿ ಪರಿಣಮಿಸಿತು. ಎಟ್ ಲೀಸ್ಟ್ ಗೆಳೆಯರ ಬರಹಗಳನ್ನು ಓದಿದಾಗ ಪ್ರತಿಕ್ರಯಿಸಿಲೂ ಬಾರದೇ ತಿಂಗಳುಗಟ್ಟಲೇ ಸಂಕಟಪಟ್ಟೆ. ಈ ನಡುವೆ ಇ ಮೇಲ್ ಮಾಡಿ ನನ್ನ ಪಾಸ್ ವರ್ಡ್ ನೆನಪಿಸಲು ಕಳುಹಿಸಿದ್ದೆ. ಅದರ ಡೈರೆಕ್ಷನ್ ಗಳು ನನಗೆ ಅರ್ಥವಾಗಲಿಲ್ಲ. ಹೀಗಾಗಿ ಬೇರೆಯೇ ಪ್ರೊಫೈಲ್ ಮಾಡಿದೆ ನೋಡಿ ಸ್ನೇಹಿತರೆ, ನನ್ನ ಬರಹಗಳನ್ನು ನಾನು ನನ್ನ ಬ್ಲಾಗರ್ ಬ್ಲಾಗಗಳಲ್ಲಿ ಶೇಖರಿಸಿ ಇಟ್ಟುಕೊಂಡಿರುವುದರಿಂದ ಈಗ ಇಲ್ಲಿನ ಬರಹಗಳನ್ನು ಅನಿವಾರ್ಯವಾಗಿ ಮರೆಯಬೇಕಾಗಿ ಬಂದದ್ದು ನನ್ನ ದುರದೃಷ್ಟ ಅಷ್ಟೆ ಸರ್. ನನಗೆ ಸಾಫ್ಟವೇರ್ ಹೆಚ್ಚು ಗೊತ್ತಿಲ್ಲ. ಹೇಳಿಕೊಟ್ಟಿದ್ದಷ್ಡನ್ನು ಆಪರೇಟ್ಟ ಮಾಡುತ್ತಲಿರುತ್ತೇನೆ. ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಬರಹಗಳ ಕುರಿತು ಕಾಳಜಿ ಮೆಚ್ಚುವಂತಹದ್ದು. ತಮಗೆ ಮತ್ತೊಮ್ಮೆ ದನ್ಯವಾದಗಳು.