ಸಾಲುಗಳು - ೨ (ನನ್ನ ಸ್ಟೇಟಸ್)
ಮಂಜ
====
ಮಂಜನಿಗೆ ಮದುವೆ ಏರ್ಪಾಡಾಗಿತ್ತು.
ದೂರದ ಊರಿನ ಒಂದಿಷ್ಟು ಗೆಳೆಯರಿಗೂ ಆಮಂತ್ರಣ ಪತ್ರಿಕೆ , ಒಳಗೊಂದು ಪತ್ರವಿಟ್ಟು, ಸ್ಟಾಂಪ್ ಹಚ್ಚಿ , ವಿಳಾಸ ಸ್ವಷ್ಟವಾಗಿ ಬರೆದ
'ನಿಮ್ಮ ಹೆಸರು ನಮ್ಮ ಮನದಲ್ಲಿದೆ
ಪ್ರೀತಿ ಹೃದಯದಲ್ಲಿದೆ "
ತರುಣ್ ತೇಜ್ ಪಾಲ್
============
ಗಡ್ಡ ಬೆಳ್ಳಗಾಗಿರುವ 'ತರುಣ' ತೇಜ್ 'ಫಾಲ್' !
ಹೊರೆ
=====
ಕಬ್ಬಿನ ಬೆಂಬಲ ಬೆಲೆ ಘೋಷಿಸುವಾಗ ಸರ್ಕಾರಕ್ಕೆ ಇಷ್ಟು ಕೋಟಿ ಹಣದ 'ಹೊರೆ' ತನ್ನ ಮೇಲೆ ಬೀಳುತ್ತದೆ ಎಂದು ಮಾಧ್ಯಮಗಳ ಮುಂದೆ ಗೋಳಾಡುವ ಸರ್ಕಾರ ಬಿದಾಯಿ ಶಾಧಿಬಾಗ್ಯದಂತ ರುಪಾಯಿಗೆ ಕೇಜಿ ಅಕ್ಕಿಯಂತಹ ಕಾರ್ಯಕ್ರಮಗಳನ್ನು ಘೋಷಿಸುವಾಗ ಅದನ್ನು 'ಹೊರೆ' ಎಂದು ಹೇಳುವದಿಲ್ಲ ಅನ್ನುವುದು ಆಶ್ಚರ್ಯವಲ್ಲವೆ ?
ರಕ್ಷಣೆ
====
ಮಠದ ಸ್ವಾಮಿಗಳನ್ನು ಅರೆಸ್ಟ್ ಮಾಡಿ ಕೇಸು ಹಾಕಲು ಉತ್ಸಾಹ ತೋರುವ ಸರ್ಕಾರಗಳು , ಕೆ ಪಿ ಎಸ್ ಸಿ ಅಂತಹ ಸಂಸ್ಥೆಯ ಆಡಳಿತ ಮಂಡಳಿಯನ್ನು ನ್ಯಾಯಲಯವೆ ಉಗಿಯುತ್ತಿರುವಾಗಲು, ಸ್ವತಃ ನಿಂತು ರಕ್ಷಣೆ ಕೊಡಲು ಮುಂದಾಗುವುದು , ಇದೆಂತ ಸರ್ಕಾರಗಳು ನಮ್ಮನಾಳುತ್ತಿವೆ!
ನುಡಿ
====
ಕನ್ನಡದಿ ಇಂಗ್ಲೀಷ್ ಕಿಂಚಿತ್ತು ಬೆರೆಸಲದು
ಸಿನ್ನುಗಳ ಲಿಸ್ಟಿನಲ್ಲಿ ಹೈಯೆಸ್ಟು ! ಅದರಿಂದ
ಫನ್ನಿಗೂ ಮಿಕ್ಸದಿರು ಸರ್ವಜ್ಞ !
- ನಾ ಕಸ್ತೂರಿ
ಸರ್ವಜ್ಞ
=====
ನೂರಾರು ವರ್ಷಗಳ ಹಿಂದೆ
ಸರ್ವಜ್ಞನೆಂಬುವ ಒಬ್ಬನಿದ್ದ ಕನ್ನಡ ನಾಡಿನೊಳಗೆ
ಇಂದು
ನೂರಾರು ಸರ್ವಜ್ಞರು ಇಹರು
ಕನ್ನಡ ನಾಡಿನ ಊರು ಊರಿನೊಳಗೆ!
ಕಡಗೋಲು ಸುತ್ತಿದರೆ..ಬೆಣ್ಣೆ ಬರುವುದೇ ತೇಲಿ?
=======================
ಬರೆಯಹೊರಟ ಬರಹಗಳೆಲ್ಲ
ಅರ್ಧಕ್ಕೆ ನಿಲ್ಲುತ್ತಿದೆ.
ಮನದಿ ಬರುವ ಚಿಂತನೆಗಳೆಲ್ಲ
ಮಧ್ಯದಲ್ಲಿ ಚದುರುತ್ತಿದೆ.
ಎಂತಹುದೋ
ಸೋಮಾರಿತನದ,
ನಿರ್ಲಕ್ಹ್ಯದ ಭಾವ
ಮನದಿ ತುಂಬಿ
ಸಾಕು ಬಿಡು ನೀನು ಬರೆದಿದ್ದು ಎಂದು ಅಣಕಿಸುತ್ತದೆ!
ಬಿಡಬೇಕು
ಬರೆಯುವದ ಬಿಡಬೇಕು!
ಹೆಪ್ಪು ಹಾಕಿದ ಹಾಲು
ಹೆಪ್ಪುಗಟ್ಟುವ ಮುನ್ನ
ಕಡಗೋಲು ಸುತ್ತಿದರೆ
ಬೆಣ್ಣೆ ಬರುವುದೇ ತೇಲಿ? !
ನಿಷ್ಠೆ
===
"GO TO HELL"
ಬಾಸ್ ಸಹನೆಗೆಟ್ಟು ಕಿರುಚಿದ,
ಕೆಲಸಗಾರ ಪಾಪ ತೀರ obedient
ಮನೆಗೆ ಹೋದ.
ಪೂಜೆ
====
ನಾನು ಬೇಡುವದರಿಂದ ಪೂಜಿಸುವದರಿಂದ ದೇವರು ನನಗೆ ಬೇಕಾದುದ್ದೆಲ್ಲವನ್ನು ಕೊಡುತ್ತಾನೆ ಎಂದು ಭಾವಿಸುವುದು ತಪ್ಪು.
ಬದಲಾಗಿ
ಆ ದೇವರು ನನಗೆ ಬೇಕಾದ ಎಲ್ಲವನ್ನು ಕೊಟ್ಟಿದ್ದಾನೆ ಅದಕ್ಕಾಗಿ ಕೃತಜ್ಞತಾ ಪೂರ್ವಕವಾಗಿ ಅವನನ್ನು ಪೂಜಿಸುತ್ತಿರುವೆ ಎಂದು ಭಾವಿಸುವುದು ಸರಿ.
ಸಮರ್ತನೆ ?
========
ಹಣ ದೋಚುವುದು ಹೋಗಲಿ ಏನೊ ಬಡತನ ಹೊಟ್ಟೆ ಪಾಡಿಗೆ ಕಳ್ಳತನ ಮಾಡುವರು ಎಂದು ಸಮರ್ಥಿಸಿಕೊಳ್ಳಬಹುದು.
ಆದರೆ ಭರ್ಬರತೆ ! ಅದೂ ಹೆಣ್ಣಿನ ಮೇಲೆ!
ಮಚ್ಚಿನಿಂದ ತಲೆಯ ಮೇಲೆ ಬೀಸಿರುವ ಹೊಡೆತ ತಲೆಯ ಬುರೆಡೆಯನ್ನು ಸೀಳಿ ಮೆದುಳಿಗೆ ಘಾಸಿಗೊಳ್ಳಿಸಿದೆ ಅನ್ನುತ್ತದೆ ಪತ್ರಿಕೆಯ ಸುದ್ದಿ!
ಇದು ಮಾನವತೆಯನ್ನು ಮೀರಿದ ಕೃತ್ಯವಲ್ಲವೇ !
ಕೇವಲ ಬಡತನ, ಹೊಟ್ಟೆಗಿಲ್ಲ ಅನ್ನುವುದು, ಅಥವ ಅನಕ್ಷರತೆಯೇ ಆಗಲಿ ಇಂತಹ ಕೃತ್ಯಕ್ಕೆ ಸಮರ್ಥನೆ ಆಗುವುದೇ!
ಸಮಾಜದಲ್ಲಿ ಆಗುತ್ತಿರುವ ಈ ಬದಲಾವಣೆ ಯಾಕೆ ಆಗುತ್ತಿದೆ ಮತ್ತು ಮತ್ತು ಹೇಗೆ
ಸಮಾಜ ಚಿಂತಕರು, ಸಾಹಿತಿಗಳು, ಪೋಲಿಸರು ಅಥವ ಮನೋ ವಿಜ್ಞಾನಿಗಳು ವಿವರಿಸಬಲ್ಲರೇ ?
ಅಂತರ್ಜಾಲದ ಮಿತ್ರರು ಯಾರಾದರು ವಿವರಿಸಬಲ್ಲಿರಾ?
- ಪಾರ್ಥಸಾರಥಿ
ಚಿತ್ರಕ್ಕು ಬರಹಕ್ಕು ಯಾವ ಸಂಬಂಧವೂ ಇಲ್ಲ :-) ಸುಮ್ಮನೆ ಹಾಕಿರುವುದು
ಚಿತ್ರ ಮೂಲ : http://4.bp.blogspot.com/-JhezUbYd2Sc/UBomHtURWkI/AAAAAAAACl8/W_ktIURWoY...
Comments
ಉ: ಸಾಲುಗಳು - ೨ (ನನ್ನ ಸ್ಟೇಟಸ್)
ಪಾರ್ಥ ಸಾರಥಿ ಯವರಿಗೆ ವಂದನೆಗಳು,
' ಸಾಲುಗಳು - 2 ( ನನ್ನ ಸ್ಟೇಟಸ್ )' ನಿಜ ! ನಿಮ್ಮದೆ ವಿಶಿಷ್ಟ ಬರವಣಿಗೆಯ ಆಕರ್ಷಕವಾದ ಶೈಲಿಯನ್ನು ಸಾದರ ಪಡಿಸುವಂತಹದು, ಹೊರೆ, ರಕ್ಷಣೆ, ನುಡಿ, ಸರ್ವಜ್ಞ, ನಿಷ್ಟೆ, ಪೂಜೆ ಎಲ್ಲವನ್ನೂ ಸಂಕ್ಷೀಪ್ತವಾಗಿ ವಿವರಿಸಿದರೂ ಗಹನವಾದ ಅರ್ಥ ಬಿಟ್ಟು ಕೊಡವಂತಹವು, ತಮ್ಮ ಅನಿಸಕೆಗಳೆಲ್ಲವೂ ಸರಿ, ಓದಿ ಖುಷಿಯಾಯಿತು ಜೊತೆಗೆ ವರ್ತಮಾನದ ಸ್ಥಿತಿ ನೆನೆದು ಬೇಸರವೂ ಆಯಿತು, ಧನ್ಯವಾದಗಳು
In reply to ಉ: ಸಾಲುಗಳು - ೨ (ನನ್ನ ಸ್ಟೇಟಸ್) by H A Patil
ಉ: ಸಾಲುಗಳು - ೨ (ನನ್ನ ಸ್ಟೇಟಸ್)
ಪಾಟೀಲರಿಗೆ ನಮಸ್ಕಾರಗಳು
ತಮ್ಮ ಪ್ರತಿಕ್ರಿಯೆ ಹಾಗು ಅನಿಸಿಕೆಗಳಿಗಾಗಿ ತಮಗೆ ವಂದನೆಗಳು
ಉ: ಸಾಲುಗಳು - ೨ (ನನ್ನ ಸ್ಟೇಟಸ್)
ಪಾರ್ಥರೆ, ಇನ್ನೇನು ಮಲಗಲು ಹೊರಡಬೇಕು ಅನ್ನುವಾಗ ನಿಮ್ಮ ಸ್ಟೇಟಸ್ ಕಣ್ಣಿಗೆ ಬಿತ್ತು. ಎಲ್ಲಾ ಸಾಲುಗಳೂ ಸೂಪರ್. ಕೆಲಸಗಾರ ಮನೆಗೆ ಹೋದ :) ಪ್ರೀತಿ ಹೃದಯದಲ್ಲಿದೆ :) ತೇಜ್ fall :) ಹಾಗೇ ಸರಕಾರಕ್ಕೆ ಕಬ್ಬಿನಿಂದಲೇ ಛಡಿಯೇಟು ಕೊಟ್ಟಿದ್ದೀರಿ!
ಹೆಪ್ಪು ಹಾಕಿದ ಹಾಲು
ಹೆಪ್ಪುಗಟ್ಟುವ ಮುನ್ನ
ಕಡಗೋಲು ಸುತ್ತಿದರೆ
ಬೆಣ್ಣೆ ಬರುವುದೇ ತೇಲಿ? ! ಪಾರ್ಥರೆ ಮತ್ತೊಮ್ಮೆ ಸೂಪರ್ ಸೆ ಊಪರ್..
In reply to ಉ: ಸಾಲುಗಳು - ೨ (ನನ್ನ ಸ್ಟೇಟಸ್) by ಗಣೇಶ
ಉ: ಸಾಲುಗಳು - ೨ (ನನ್ನ ಸ್ಟೇಟಸ್)
ಗಣೇಶರೆ ನಮಸ್ಕಾರ
ತಮ್ಮ ಮೆಚ್ಚುಗೆಗೆ ವಂದನೆಗಳು
ಮತ್ತೂ ಒಂದು ವಿಶಯ ಗೊತ್ತಾಯ್ತು ವೆಂಕಟೇಶ್ ರವರಿಗೆ , ನೀವು ಮಲಗುತ್ತೀರಿ ರಾತ್ರಿ ಹೊತ್ತು ಅಂತ !
ಹಹ್ಹ ಹ್ಹ :)
In reply to ಉ: ಸಾಲುಗಳು - ೨ (ನನ್ನ ಸ್ಟೇಟಸ್) by partha1059
ಉ: ಸಾಲುಗಳು - ೨ (ನನ್ನ ಸ್ಟೇಟಸ್)
:)))))))))
ಉ: ಸಾಲುಗಳು - ೨ (ನನ್ನ ಸ್ಟೇಟಸ್)
ಪಾರ್ಥಾ ಸಾರ್,
1) ...
ಬಿಡಬೇಕು
ಬರೆಯುವದ ಬಿಡಬೇಕು!
..
ಇದು ಹೀಗಾಗಿರಬೇಕಿತ್ತೇನೊ :-)
ಬಿಡಬೇಕು
ಬರೆಯುವುದ 'ಬರೆದುಬಿಡಬೇಕು'
(ಇಂಗ್ಲೀಷಿನಲ್ಲಿ ಇದಕ್ಜೆ 'ರೈಟರ್ಸ್ ಬ್ಲಾಕ್'ಅನ್ನುತ್ತಾರೆ )
2. ಹಾಗೆಯೆ ನಿಮ್ಮ ತೇಜ್ಪಾಲ್ ಸಾಲಿಗೆ ನನ್ನದೊಂದು - 'ಕು'ಟುಕ
ಎಲ್ಲಾ ಮನ್ಮಥ ಲೀಲೆ
_______________
ಹಗರಣ,
ಬೆತ್ತಲಾದಾಗ,
ಕ್ಯಾಮರಾದಲಿ,
ಎಲ್ಲಾ 'ತೆಹಲ್ಕಾ', 'ತೆಹಲ್ಕಾ' ;
ತರುಣ,
ಮಸ್ತಿಯಾದಾಗ,
ಹೋಟೆಲು ಲಿಪ್ಟಿನಲಿ,
ತೇ(ಜ್ಪಾಲ್)-ಹಲ್ಕಾ, ಹಲ್ಕಾ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಸಾಲುಗಳು - ೨ (ನನ್ನ ಸ್ಟೇಟಸ್) by nageshamysore
ಉ: ಸಾಲುಗಳು - ೨ (ನನ್ನ ಸ್ಟೇಟಸ್)
ನಾಗೇಶ್ ನಮಸ್ಕಾರಗಳು
ಏನಾದರೇನು ಕಡೆಗೆ ಆಗುವದೇನು, ಭಾರತದ ಸಾವಿರ ಸಾವಿರ ಹಗರಣಗಳಲ್ಲಿ ಇದು ಒಂದಾಗಿ ಬಿಸಿ ಕಳೆದುಕೊಳ್ಳುತ್ತದೆ.
ಜನ ಮನ ಆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತದೆ !
ತಮ್ಮ ಕವನ ಚೆನ್ನಾಗಿದೆ !