ಬ್ರಹ್ಮಾನಂದಂ ಪರಮಾನಂದಂ..!
ಬ್ರಹ್ಮಾನಂದಂ. ಟಾಲಿವುಡ್ ಕಂಡ ಗಿನ್ನಿಸ್ ದಾಖಲೆ ನಟ. 700 ಚಿತ್ರಗಳಲ್ಲಿ ಅಭಿನಯಿಸಿದ ಖ್ಯಾತಿ. ಇದೇ ದಾಖಲೆಯ ನಂಬರ್ ಗಳೇ ಬ್ರಹ್ಮಾನಂದಂ ಎಂಬ ನಟನನ್ನ ಗಿನ್ನಿಸ್ ದಾಖಲೆ ಪುಸ್ತಕ್ಕೆ ಸೇರಿಸಿದ್ದು. ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣವೂ ಇದೆ. ಎಂದೂ ಸಂದರ್ಶಿಲು ಸಾಧ್ಯವೂ ಆಗದಂತಹ ನಟ ಬ್ರಹ್ಮಾನಂದಂ ಎಂಬ ಮಾತು ಮಾಧ್ಯಮ ವಲಯದಲ್ಲಿದೆ. ಮಾಧ್ಯಮದವರೆಂದ್ರೆ, ಹತ್ತಿರಕ್ಕೂ ಬಿಟ್ಟುಕೊಳ್ಳದ ಏಕೈಕ ರಿಯಲ್ ಪ್ರೊಫೆಸರ್. ಆದರೆ, ಈ ಮಹಾನ್ ಹಾಸ್ಯ ನಟರನ್ನ ನೋಡುವ ಅವಕಾಶ ಒದಗಿ ಬಂದಿತ್ತು. ಸಂದರ್ಶಿಸೋ ಅವಕಾಶವೇನೂ ಸಿಗಲಿಲ್ಲ. ಹಾಗೆ ಸಿಗದೆ ಇರೋ ಅವಕಾಶದಲ್ಲೂ ಬೇಸರದ ಬದಲು, ನಗು ಚಿಮ್ಮುಂತಾಯಿತು. ಆ ಕತೆ ಹೇಳ್ತಿನಿ ಕೇಳಿ..
12 ಗಂಟೆ ಸಮಯ. ಬ್ರಹ್ಮಾನಂದಂ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಾರೆಂಬ ಸುದ್ದಿ ಕಳೆದ ಎರಡು ದಿನದಿಂದಲೂ ಇತ್ತು. ಅದರಂತೆ, ಇಂದು ಹಲವು ವಾಹಿನಿಯಲ್ಲಿ ಬ್ರಹ್ಮಾನಂದಂ ಸುದ್ದಿಯದ್ಧೆ ಸದ್ದು. ಈ ಸದ್ದು-ಗದ್ದಲದ ಮಧ್ಯೆ, ಯಶವಂತ್ ಪುರದ ನಿರ್ಮಾಣ ಹಂತದ ಒಂದು ಬೃಹತ್ ಕಾಂಪ್ಲೆಕ್ಸ್ ನಲ್ಲಿ ಸದ್ದಿಲ್ಲದೇ ಶೂಟಿಂಗ್ ನಡೀತಾಯಿತ್ತು. ಅಲ್ಲಿಗೆ ಹೋದಾಗ ಹೆಚ್ಚೇನೂ ಥ್ರಿಲ್ಲ್ ಅನಿಸಲಿಲ್ಲ. ಕೋಣೆಯೊಂದರಲ್ಲಿ, ಚಿತ್ರೀಕರಣ. ಹಲವು ನಟ-ನಟಿಯರು. ಪೋಷಕ ಕಲಾವಿದರೇ ಇವರೆಲ್ಲ ಆಗಿದ್ದರು. ನಾಯಕ ಕಾಣಲಿಲ್ಲ. ಇವರ ಮಧ್ಯೆ ನಾಯಕ ನಟಿ ಎರಿಕಾ ಫರ್ನಾಂಡಿಸ್ ಇದ್ದರು. ಇವರನ್ನ ಚೇಡಿಸುವಂತೆ, ಕುಳ್ಳ ಕುಮಾರ ಬ್ರಹ್ಮಾನಂದಂ ಕಂಡ್ರು. ಖುಷಿ ಏನೂ ಆಗಲಿಲ್ಲ. ಬ್ರಹ್ಮಾನಂದಂ ತೆರೆ ಮೇಲೆ ಹೇಗಿದ್ದಾರೋ. ಹಾಗೆ ಇಲ್ಲೂ ಕಂಡ್ರು. ಇದರಿಂದ ಪರಮ ಆಶ್ಚರ್ಯವೇನೂ ಆಗಲಿಲ್ಲ. ಆದ್ರೆ, ಇವರ ಅಭಿನಯ ಕಂಡು ನಗುತ್ತಿದ್ದವರು, ಅಲ್ಲಿಯ ಸೆಟ್ ಬಾಯ್ಸ್, ಲೈಟ್ ಬಾಯ್ಸ್..ದುಡ್ಡು ಹಾಕಿದ ನಿರ್ಮಾಪಕ ವಿಜಯ್ ಕುಮಾರ್ ಅವ್ರೂ ನಗ್ತಾಯಿದ್ದರು.
ಈ ನಗೆಯ ಅಲೆಯಲ್ಲಿ ಹೊರಗಡೆ ಬಂದ್ರು ಬ್ರಹ್ಮಾನಂದಂ. ಅಲ್ಲಿಗೆ ಶಾರ್ಟ್ ಮುಗಿದಿತ್ತು. ಮುಗಿದಿತ್ತು ಅನ್ನೋದಕ್ಕಿಂತಲೂ ಇವರ ಒಂದು ದಿನ ಕೆಲಸವೂ ಕಂಪ್ಲೀಟ್ ಆಗಿತ್ತು. ಹಾಗೆ ನಮ್ಮ ಮುಂದೆ ಹಾದು ಹೋದ ಬ್ರಹ್ಮಾನಂದಂ. ನಮ್ಮನ್ನ ತಮ್ಮ ಬಳಿ ಕರೆದು ಕೊಂಡ್ರು. ಬಳಿಕ ಹೇಳಿದ್ದು ಒಂದೇ ಮಾತು. ಡೋಂಟ್ ಆಸ್ಕ್ ಎನಿ ಕ್ವಶ್ಚನ್. ವಾಟ್ ಐ ಟೆಲ್ ಯು ದಟ್ ಈಜ್ ಫೈನಲ್. ಇಷ್ಟು ಹೇಳಿ ಕೈಯಲ್ಲಿದ್ದ ಮೈಕ್ ಕೇಳಿದರು. ಆದ್ರೆ, ನನ್ನ ಇರಾದೆ ಬೇರೆ ಇತ್ತು. ಹೇಗೋ ಸಿಕ್ಕಿದ್ದಾರೆ. ಚಿಟ್ ಚಾಟ್ (ಸಂದರ್ಶನ) ಮಾಡಿಯೇ ಬಿಡೋಣ ಎಂಬ ಆಸೆ. ಆದರೆ, ಸಾಯಲಿ, ಅದು ಆಗಲೇ ಇಲ್ಲ. ಬ್ರಹ್ಮಾನಂದಂ ಈ ಸಲ ಮೈಕ್ ಕೇಳಿಲ್ಲ. ಕಿತ್ತು ಕೊಂಡ್ರು. ಇವರ ಈ ವರ್ತನೆಯಲ್ಲೂ ನಗುಯಿತ್ತು. ಇದರಿಂದ ಬೇಸರವೂ ಆಯಿತು. ಏನ್ ಮನುಷ್ಯರೀ ಇವಾ..ಅಂತ ಮನಸ್ಸಿನಲ್ಲಿಯೇ ಅಂದುಕೊಂಡೆ. ಅಷ್ಟು ಅಂದು ಕೊಳ್ಳುವದರಲ್ಲಿಯೇ, ರೆಡಿ...ರೆಡಿ. ಅಂತ ಕ್ಯಾಮೆರಾ ಮುಂದೆ ಕುಳಿತ ಬ್ರಹ್ಮಾನಂದಂ ಮಾತನಾಡಲು ಅಣಿಯಾಗಿದ್ದರು. ಅವರು ಅಂದುಕೊಂಡಂತೇನೆ ಮಾತು ಆರಂಭಿಸಿದರು. ತೆಲುಗು ಭಾಷೆಯಲ್ಲಿಯೇ ಕನ್ನಡ ಪ್ರೇಕ್ಷಕರಿಗೆ ನಮಸ್ಕಾರ ಹೇಳಿದ್ರು. ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಯಲ್ಲಿ ತುಂಬಾ ಹೋಲಿಕೆಯಿದೆ ಎಂದರು..
ಮಾತು ಡಾಕ್ಟರ್ ರಾಜ್ ಕುಮಾರ ಅವರ ಮಹಾನ್ ನಟನೆವರೆಗೂ ಬಂತು. ಪುನಿತ್ ಅಭಿನಯದ ನಿನ್ನಿಂದಲೇ ವರೆಗೂ ತಂದರು. ಕಾರಣ, ಪುನಿತ್ ಅಭಿನಯದ ನಿನ್ನಿಂದಲೇ ಚಿತ್ರದಲ್ಲಿಯೇ ಬ್ರಹ್ಮಾನಂದಂ ಅಭಿನಯಿಸಿದ್ದು. ಮೊದಲನೇಯ ಕನ್ನಡ ಚಿತ್ರವೋ.ಎರಡನೇ ಕನ್ನಡ ಚಿತ್ರವೋ. ಲೆಕ್ಕ ನನಗೂ ಗೊತ್ತಿಲ್ಲ. ಆದ್ರೆ, ಕನ್ನಡಕ್ಕೆ ಬಂದ ಖುಷಿ ಕೆಲವರಲ್ಲಿ ಇತ್ತು. ನಮಗೆ ಇವರ ಕನ್ನಡಕ್ಕೆ ಬಂದಿರೋ ಸುದ್ದಿಯದ್ದೆ ಹಿಗ್ಗು. ಈ ಹಿಗ್ಗಿನ ಮಧ್ಯೆ ತೇಲುತ್ತಿರೋವಾಗ್ಲೆ ಬ್ರಹ್ಮಾನಂದಂ ಮಾತು ಪೂರ್ಣ ಮಾಡಿದ್ದರು. ಅದೇನ್ ತಿಳಿಯಿತೋ ಅವರಿಗೆ, ನನ್ನ ಗಲ್ಲ ಮುಟ್ಟಿ ಸಂತಸದ ನಗೆ ಬೀರು ಹೊರಟೆ ಹೋದ್ರು. ಈ ಸಂದರ್ಭದಲ್ಲಿ ನನಗೆ ಏನೂ ಅನಿಸಲಿಲ್ಲ. ಬ್ರಹ್ಮಾನಂದಂ ಅವರ ಜೊತೆಗೆ ಆದ ಈ ಅನುಭವ ಹಂಚಿಕೊಂಡ ಮೇಲೆ ಅದರ ಖುಷಿ ಹೆಚ್ಚಿದ್ದು. ಅದೇ ಸಂತೋಷದಲ್ಲಿಯೇ ಬರೆಯಬೇಕು ಅನಿಸಿತು. ಬರೆದಿದ್ದೇನೆ. ಮೋಸ್ಟಲಿ ನನ್ನ ಅನುಭವ ನಿಮಗೆ ರುಚಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಹಂಚಿಕೊಳ್ಳಬೇಕು ಅನಿಸಿತು ಅಷ್ಟೆ...
-ರೇವನ್ ಪಿ.ಜೇವೂರ್
Comments
ಉ: ಬ್ರಹ್ಮಾನಂದಂ ಪರಮಾನಂದಂ..!
ರೇವನ್ ಅವರೇ ಬ್ರಹ್ಮಾನಂದಂ ಅವರ ಬಗ್ಗೆ ಹೇಳೋದಾದ್ರೆ ಅವರಿಗೆ ಅಲ್ಲಿ ತೆಲುಗಲ್ಲಿ ಯಾವುದೇ ದೊಡ್ಡ ಸ್ಟಾರ್ಗೆ ಇರುವ ವ್ಯಾಲ್ಯು ಇದೆ ಮರ್ಯಾದೆ ಸಿಗುತ್ತೆ, ಅವರು ಸುಮ್ಮನೆ ತೆರೆ ಮೇಲೆ ಬಂದರೆ ಸಾಕು ನಗು ಉಕ್ಕಿ ಹರಿಯುತ್ತೆ.. ಅವರ ಬಹುತೇಕ ಸಿನೆಮಾ ನಾ ನೋಡಿರುವೆ.. ಭಾಶ್ಹೆ ಬಗ್ಗೆ ಅರಿವಿರದವರು ಸಹಾ ಅವರ ಮ್ಯಾನರಿಸಮ್ ಕಾರಣ ನಕ್ಕು ಸುಸ್ತಾಗುವರು..
ಸದಾ ಬ್ರೆಕಿಂಗ್ ಸುದ್ಧಿಗಾಗಿ ಕಾತರಿಸುವ ಮಾಧ್ಯಮ ಜನರ ಗಾಸಿಪ್ ಇತ್ಯಾದಿ ಕಾರಣ ಅವರು ಯಾವತ್ತೂ ಮಾಧ್ಯಮದವರ ಮುಂದೆ ಅಸ್ಟಾಗಿ ಬರೋಲ್ಲ...
ಈಗವರು ಹಿಂದಿಗೂ ಹೋಗಿರ್ವರು ..ಕನ್ನಡಕ್ಕೂ ಬಂದಿದ್ದು ಕೇಳಿ ಸಂತಸ ಆಯ್ತು..
\|/