ಹೀಗೊಂದು ಊರು !

ಹೀಗೊಂದು ಊರು !

ಸಾಮಾನ್ಯವಾಗಿ ನಮ್ಮ ಹಳ್ಳಿಗಳು ಅಂದ್ರೆ ಟಾರ್ ಇಲ್ಲದ ರಸ್ತೆಗಳು,, ಗಲ್ಲಿ ಗಲ್ಲಿಗಳಲ್ಲಿ ತಿಪ್ಪೆಗುಂಡಿಗಳು.., ಆಲದ ಮರದ ಕೆಳಗೆ ಕಾಡು ಹರಟೆ ಹೊಡೆಯುತ್ತ ಕೂತ ಯುವ ಜನರು, ಅಧೋಗತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹಂಚು ಹಾರಿ ಹೋಗಿರುವ, ಪಾಳು ಬಿದ್ದ ಶಾಲಾ ಕಟ್ಟಡಗಳು.. ಈ ನೋಟ ಕರ್ನಾಟಕದಾಂದ್ಯಂತ ಹಳ್ಳಿಗಳಲ್ಲಿ ಕಂಡು ಬರುವ ಸರ್ವೇಸಾಮಾನ್ಯ ದ್ರುಶ್ಯ,,.. ಆದ್ರೆ ಇಲ್ಲೊಂದು ಹಳ್ಳಿ ಇಡಿ ನಾಡಿಗೆ ಮಾದರಿ ಎನ್ನುವಂತದ್ದು...

ಈ ಹಳ್ಳಿಯ ಹೆಸರು ಬಡಗಂಡಿ,, ಇರೋದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನಲ್ಲಿ.. ಇ ಊರಲ್ಲೆಲ್ಲೂ ಕೊಳಚೆಯನ್ನುವ ಮಾತೆ ಇಲ್ಲ,, ರಸ್ತೆಗಳೆಲ್ಲ ಶುಭ್ರ,, ಊರಿನಲ್ಲೆ ಒಳ್ಳೆಯ ಭದ್ರವಾದ ಕಟ್ಟಡವುಳ್ಳ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಎಲ್ಲಾ ಪ್ರಾಥಮಿಕ ಸೌಲಭ್ಯ ವುಳ್ಳ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ,, ಇದೆಲ್ಲಕಿಂತ ಹೆಚ್ಚಾಗಿ,, ಇ ಊರಲ್ಲಿ ದುರ್ಬಿನ್ ಹಾಕೊಂಡ್ ಹುಡುಕಿದ್ರು ಒಬ್ಬೆ ಒಬ್ಬ ನಿರುದ್ಯೋಗಿ ಕಣ್ಣಿಗೆ ಕಾಣಲ್ಲ.. !! ಹೀಗೂ ಉಂಟೇ ಎಂದು ಮೂಗಿನ ಮೇಲೆ ಬೆರಳಿಡ್ಬೆಡಿ...ಇದೆಲ್ಲವು ಸಾಧ್ಯವಾದದ್ದು ಇಲ್ಲಿನ ಒಬ್ಬೆ ಒಬ್ಬ ವ್ಯಕಿಯಿಂದ,, ಅವರೆ ವಿಧಾನ ಪರಿಷತ್ ಸದಸ್ಯ ಎಸ್. ಆರ್‍. ಪಾಟೀಲ ರಿಂದ. ಇದೇ ಊರಿನಲ್ಲಿ ಹುಟ್ಟಿ ಬೆಳೆದ ಪಾಟೀಲರು ತಮ್ಮ ಹುಟ್ಟೂರಿನ ಋಣ ತೀರಿಸಿದ್ದು ಹೀಗೆ. ಬಾಗಲಕೋಟೆ, ಬೆಳಗಾವಿ, ಬಿಜಾಪುರ ಪ್ರಾಂತ್ಯದಲ್ಲಿ ರೈತರ ಮುಖ್ಯ ಬೆಳೆ ಕಬ್ಬು. ಬೆಳೆದ ಕಬ್ಬನ್ನು ನುರಿಸಲು ಮಹಾರಾಷ್ಟ್ರ ಕ್ಕೆ ಹೋಗುತ್ತಿದ್ದೆ ಜನರ ಬವಣೆ ನಿವಾರಿಸಲು, ಪಾಟೀಲ-ರ ನೇತ್ರತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದೆ ಬೀಳಗಿ ಶುಗರ್ ಮಿಲ್ಸ್. ಬಡಗಂಡಿಯ ಹೆಚ್ಚಿನ ಯುವಕರು ಇ ಕಾರ್ಖಾನೆಯಲ್ಲೆ ಕೆಲಸ ಮಾಡುತ್ತಾರೆ. ಇಷ್ಟಕ್ಕೆ ನಿಲ್ಲದೆ ಪಾಟೀಲರು ಊರಿನಲ್ಲಿ ಔದ್ಯೊಗಿಕ ತರಬೇತಿ ಕೇಂದ್ರವೊಂದನ್ನು (ಐ.ಟಿ.ಐ) ತೆರೆದು ಅಲ್ಲಿನ ಯುವಕರಿಗೆ ಉದ್ಯೊಗವಕಾಶ ಹೆಚ್ಚುಸುವಲ್ಲಿ ಸಹಾಯ ಮಾಡಿದ್ದಾರೆ. ಗ್ರಾಮದ ನೈರ್ಮಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲೂ ಪಾಟೀಲರು ಯಶಸ್ವಿಯಾಗಿದ್ದಾರೆ. ಇಷ್ಟೆಲ್ಲ ಆದರೂ ಎಲೆ ಮರೆಯ ಕಾಯಿಯಂತೆ ತಮ್ಮ ಕಾಯಕವನ್ನು ಮುಂದುವರಿಸಿರುವ ಎಸ್. ಆರ್‍. ಪಾಟೀಲರು ಅಭಿನಂದನೀಯರು...

ಉತ್ತರ ಕರ್ನಾಟಕದ ರಾಜಕಾರಣಿಗಳು ಅಂದ್ರೆ ಸೋಮಾರಿಗಳು, ಬೆಂಗಳೂರಿನಲ್ಲಿ ಸೈಟು,ಮನೆ ಮಾಡೊದ್ರಲ್ಲೆ ಹೆಚ್ಚು ಆಸಕ್ತರು ಅನ್ನೊ ಆರೊಪ ಇರುವಾಗ, ಎಸ್. ಆರ್‍. ಪಾಟೀಲ ಅಂಥವರು ಹೆಚ್ಚು ಪ್ರಸ್ತುತ ವೆನ್ನಿಸುತ್ತಾರೆ. ಗಣಿ ಧನಿಗಳ ಅಬ್ಬರದಲ್ಲಿ, ರಿಯಲ್ ಎಸ್ಟೇಟ್ ನ ಕೊಚ್ಚೆಯಲ್ಲಿ ಬಿದ್ದು ಗಬ್ಬೆದ್ದಿರೋ ರಾಜ್ಯ ರಾಜಕೀಯಕ್ಕೆ ಇವರು ಒಂಥರಾ exception.

ಇಂಥವರ ಸಂಖ್ಯೆ ಕರ್ನಾಟಕದೆಲ್ಲೆಡೆ ಜಾಸ್ತಿ ಆದರೆ, ನಮ್ಮ ನಾಡು ನಿಜವಾಗಿಯೂ ರಾಮ ರಾಜ್ಯ ವಾದೀತು..

Rating
No votes yet

Comments