ಮನದ ಬಯಕೆಗಳು (ಶ್ರೀ ನರಸಿಂಹ 72)
ಸಹಜ ಮೆಚ್ಚಿದುದನ್ನೆಲ್ಲ ಮನಸು ಪಡೆಯಲಿಚ್ಚಿಸುವುದು
ಅರ್ಹನಿಹೆನೆನದಕೆಂಬುದ ನೀ ಮೊದಲರಿಯಬೇಕಿಹುದು
ಪಡೆಯ ಬಯಸದಿರು ನೀ ಮೆಚ್ಚಿದುದ ಒತ್ತಾಯದಿಂದ
ಪಡೆದರೂ ನಿನದನು ನೆಮ್ಮದಿಯು ದೊರಕದದರಿಂದ
ಸದ್ವಿಚಾರ,ಸದ್ಬಯಕೆಗಳನೇ ಹೊಂದಿರಬೇಕು ಮನವು
ಅಸಹಜ ಬಯಕೆಗಳಿಂದಲಾಗುವುದು ಮನ ಮಲಿನವು
ಬಯಕೆಯೊಳಗಿರಿಸಿ ಹೊರಗಿಲ್ಲವೆನ್ನಲದು ಕಪಟತೆಯೂ
ಒಳ,ಹೊರಗೆ ಬಯಕೆಗಳ ತ್ಯಜಿಸಲದುವು ಸಾಧನೆಯೂ
ತನುವಿಗಂಟುವ ಕೊಳೆಯ ಜಲದಿಂದಲಿ ತೊಳೆದು ತೆಗೆವಂತೆ
ಮಲಿನ ಮನವ ತೊಳೆಯೆ ಶ್ರೀನರಸಿಂಹನ ಜಪವೆ ಜಲದಂತೆ
Rating
Comments
ಉ: ಮನದ ಬಯಕೆಗಳು (ಶ್ರೀ ನರಸಿಂಹ 72)
ಸತೀಶ್ ಅವರೆ,
ಮನೋನಿಗ್ರಹದ ಕುರಿತಾಗಿ ಸರಳವಾಗಿ ಚೆನ್ನಾಗಿ ಹೇಳಿದ್ದೀರ.
ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ
In reply to ಉ: ಮನದ ಬಯಕೆಗಳು (ಶ್ರೀ ನರಸಿಂಹ 72) by makara
ಉ: ಮನದ ಬಯಕೆಗಳು (ಶ್ರೀ ನರಸಿಂಹ 72)
ಧನ್ಯವಾದಗಳು ಶ್ರೀಧರ್ ರವರೆ......ಸತೀಶ್