ಶಿವನಿಗೆ ಜೋಗುಳ
ಚಿತ್ರ
ಶಿವನಿಗೆ ಜೋಗುಳ
ಮಲಗು ಮಲಗೆಲೆ ಕಂದಾ ಜೋ! ಜೋ !
ಮಲಗು ಎನ್ನಾನಂದಾ ಜೋ! ಜೋ !
ನಿದ್ದೆಯೂರದು ಚೆಂದ ಜೋ! ಜೋ !
ಮುದ್ದು ಕಂದಾ ಮಲಗು ಜೋ! ಜೋ !
ಶುದ್ಧ ಚಿತ್ತನೆ ಮಲಗು ಜೋ! ಜೋ !
ನಿತ್ಯ ಸಿದ್ಧನೆ ಮಲಗು ಜೋ! ಜೋ !
ಉತ್ತಮರೊಳುತ್ತಮನೆ ಜೋ! ಜೋ !
ಸಚ್ಚಿದಾನಂದನೇ ಜೋ! ಜೋ !
ನಿನಗಾಗಿ ಜಗದುದಯ ಜೋ ಜೋ !
ನಿನಗಾಗಿ ಜಗದ ಲಯ ಜೋ ಜೋ !
ಪರಬ್ರಹ್ಮನೈ ನೀನು ಜೋ ಜೋ !
ಶಿವ ನೀನು! ಶಿವ ನೀನು! ಜೋ ಜೋ !
ಕಂದಾ! ಪರಂಜ್ಯೋತಿ ಜೋ ಜೋ !
ಪುಣ್ಯಾತ್ಮನಚ್ಯುತನೆ ಜೋ ಜೋ !
ಶಿವ ನೀನು! ಶಿವ ನೀನು! ಜೋ ಜೋ !
ಶಿವ ನೀನು ಜೋ! ಶಿವ ನೀನು ಜೋ!
ಜೋ ಜೋ ಜೋ!
೧೭-೧೨-೧೯೨೬
ಮೂಲ: ಕಣಜ
ಪುಸ್ತಕ: ಮರಿ ವಿಜ್ಞಾನಿ
ಲೇಖಕರು: ಕುವೆಂಪು
ಪ್ರಕಾಶಕರು: ಉದಯರವಿ ಪ್ರಕಾಶನ ಮೈಸೂರು
ಚಿತ್ರ ಮೂಲ :https://encrypted-tbn3.gstatic.com/images?q=tbn:ANd9GcRGOxf69GJSzncuvHiL...
Rating
Comments
ಉ: ಶಿವನಿಗೆ ಜೋಗುಳ
ಪಾರ್ಥಸಾರಥಿ ಯವರಿಗೆ ವಂದನೆಗಳು
' ಶಿವನಿಗೆ ಜೋಗುಳ' ಪದ್ಯ ಚೆನ್ನಾಗಿದೆ, ಇದನ್ನು ನಿಮ್ಮ ಸ್ವರಚನೆಯೆಂದೆ ಭಾವಿಸಿದ್ದೆ ಆದರೆ ಕೊನೆಗೆ ನೋಡಿದಾಗ ಇದು ಕುವೆಂಪು ರಚನೆಯಂದು ನಮೂದಿಸಿರುವುದು ಕಂಡು ಬಂತು, ಕುವೆಂಪುರವರ ಸುಂದರ ಕೃತಿಯೊಂದನ್ನು ನಮಗೆ ನೀಡಿದ್ದೀರಿ ಧನವ್ಯವಾದಗಳು.
In reply to ಉ: ಶಿವನಿಗೆ ಜೋಗುಳ by H A Patil
ಉ: ಶಿವನಿಗೆ ಜೋಗುಳ
ಪಾಟೀಲರಿಗೆ ನಮಸ್ಕಾರಗಳು
ನಾನು ಸಹ ಅಚನಕ್ಕಾಗಿ ಓದಿದಾಗ ಕುವೆಂಪುರವರ ಕವನ ಎಂದು ಆಶ್ಚರ್ಯಪಟ್ಟೆ. ಅದು ತಾರೀಖಿ ಗಮನಿಸಿ. ೧೯೨೬ ರಷ್ಟು ಹಳೆಯದು. ಎಲ್ಲರ ಗಮನಕ್ಕೆ ತರಲು ಹಾಕಿದ್ದೆ, ಆದರೆ ಎಷ್ಟು ಜನ ಕಡೆಯವರೆಗೂ ನೋಡುವರು ಗೊತ್ತಿಲ್ಲ :-)
ಇದು ಇವನೆ ಕಾಲ ಕಳೆಯಲು ಬರೆದಿರುವ ಎಂದು ಸುಮ್ಮನಾಗಿಬಿಡುವರು ... ಕಡೆಯವರೆಗೂ ನೋಡದೆ ...
ಸುಮ್ಮನೆ ತಮಾಷಿಗೆ ಹೇಳಿದೆ ..:-)