ನಮನ
ಚಿತ್ರ
ನಮನ
ಎಲ್ಲವೂ ಪರಿಪೂರ್ಣ
ಹೊರಗಿನ ದೃಷ್ಯಗಳನ್ನು ನೋಡಲು ಕಣ್ಣಿನ ವ್ಯವಸ್ಥೆ
ಹೊರಗಿನ ಶಬ್ದಗಳನ್ನು ಕೇಳಲು ಕಿವಿಯ ವ್ಯವಸ್ಥೆ
ಮಾತುಗಳನ್ನಾಡಲು ನಾಲಿಗೆ ಶ್ವಾಸ ದ್ವನಿಪೆಟ್ಟಿಗೆ...
ನಡೆದಾಡಲು ಅನುಕೂಲಕ್ಕೆ ತಕ್ಕಂತೆ ಕೈ ಕಾಲುಗಳು
ಸ್ವಯ ಶಕ್ತಿ ಉತ್ಪಾದಿಸಲು ಬೇಕಾದ ಜೀರ್ಣಾಂಗ ರಕ್ತಪರಿಚಲನೆ
ಎಲ್ಲವನ್ನು ಅರ್ಥಮಾಡಿಕೊಳ್ಲಲು ಅನುವಾಗುವಂತೆ ಮೆದುಳು
ಹುಟ್ಟಿನಿಂದ ಸಾವಿನವರೆಗೂ ಒಂದೇ ಕ್ಷಣ ನಿಲ್ಲದಂತೆ ಹೃದಯಮಿಡಿತ
ಇಷ್ಟೆಲ್ಲ ಶಿಸ್ತುಬದ್ಧವ್ಯವಸ್ಥೆಯ ಒಳಗೆ 'ಜೀವ' ಎಂಬ ಅಗೋಚರ ಶಕ್ತಿ,
ಅಂತಹ 'ನಾನು' ಹೊರಗೆ ಹೋದೊಡನೆ ಕುಸಿಯುವ ವ್ಯವಸ್ತ್ಯೆ..
ಅತ್ಯಂತ ತರ್ಕಬದ್ದ, ನೀಲನಕ್ಷೆಯೊಡನೆ ರಚಿತ ಎನ್ನಿಸುವ
ಒಂದು ಅಪೂರ್ವ ವ್ಯವಸ್ಥೆ ಯಾವುದೇ ಸಂಕಲ್ಪವಿಲ್ಲದೆ ಸ್ವಯಂಭೂವಾಗಿ
ತನ್ನಿಂದ ತಾನೆ ಸೃಷ್ಟಿಯಾಯಿತು ಅನ್ನುವದಾದರು ಹೇಗೆ.
ಇಂತಹ ಒಂದು ಅಪೂರ್ವ ಸೃಷ್ಟಿಗೆ ಕಾರಣನಾಗಿರುವ
ಅವನೋ/ಅವಳೋ/ ಅದೋ
ಅಂತಹ ದಿವ್ಯ ಶಕ್ತಿಗೆ ನನ್ನ ನಮನ
ಚಿತ್ರಮೂಲ : ನಮಸ್ಕಾರ
Rating
Comments
ಉ: ನಮನ
ಪಾರ್ಥರೆ, ನಿಮ್ಮ ಮಾತು ನಿಜ ಪಂಚೇಂದ್ರಿಯಗಳಿಗೆ ನಿಲುಕದ ಆದರೆ ಮನೋಗೋಚರವಾದ ಆ ಶಕ್ತಿಗೆ ಎಲ್ಲರೂ ನಮಿಸಲೇ ಬೇಕು. ಏಕೆಂದರೆ, Philosophy begins where Science Ends ಎಂದು ಮಹಾನ್ ವಿಜ್ಞಾನಿಯೊಬ್ಬ ಹೇಳಿದ್ದಾನೆ.
ಉ: ನಮನ
ಪಾರ್ಥಾ ಸಾರ್,
ಇಷ್ಟೆಲ್ಲಾ ವ್ಯವಸ್ಥೆಯನ್ನು ಕಣ್ಣಿಗೆ ಕಾಣದ ಜೀನ್ಸುಗಳ ರೂಪದಲ್ಲಿಟ್ಟು ಪೀಳಿಗೆಯಿಂದ ಪೀಳಿಗೆಗೆ ನಿರಂತರ ಸಾಗಿಸುತ್ತ, ಅದು ತಂತಾನೆ ನಡೆದುಕೊಳ್ಳುವ ವ್ಯವಸ್ಥೆ ಮಾಡಿರುವ ಆ ಸೂಪರ್ ಸೈಂಟಿಸ್ಟ್ (ಪರಬ್ರಹ್ಮವೆನ್ನಿ, ದೇವರೆನ್ನಿ, ಪ್ರಕೃತಿಯೆನ್ನಿ -ಹೆಸರಿನಲ್ಲೇನಿದೆ) - ಖಂಡಿತಾ ನಮನಾರ್ಹ (ಅದಕ್ಕಿಂತ ಬೇರೇನು ಮಾಡಲು ಸಾಧ್ಯವಿದೆ ನಮಗೆ ಅನ್ನುವುದು ಬೇರೆ ವಿಷಯ)
ಉ: ನಮನ
ನಮಿಸಲೇ ಬೇಕು " ಅನ್ಯಥಾ ಶರಣಂ ನಾಸ್ತಿ...." .....ಸತೀಶ್
ಉ: ನಮನ
'ಅದು' ಅವನೂ ಹೌದು, ಅವಳೂ ಹೌದು, ಅದೂ ಹೌದು.
ಉ: ನಮನ
ಪಾರ್ಥ ಸಾರಥಿ ಯವರಿಗೆ ವಂದನೆಗಳು
' ನಮನ ' ಈ ಜಗದ ಸೃಷ್ಟಿಗೆ ಕಾರಣ ಯಾರು ಎಂಬುದು ಇನ್ನೂ ಯಾರಿಗೂ ತಿಳಿಯದ ಸತ್ಯ <<<< ಅವನೊ, ಅವಳೊ, ಅದೊ ಅಂತಹ ದಿವ್ಯಶಕ್ತಿಗೆ ನಮನ ನಿಜ! ಕೊನೆಗೆ ನಮ್ಮ ವೈಚಾರಿಕತೆ ಆ ದಿವ್ಯ ಶಕ್ತಿಗೆ ಮಣಿಹಯಲೆ ಬೇಕು, ಅರ್ಥಪೂರ್ಣ ಕವನ ಜೊತೆಗೆ ಚಿತ್ರ ಕೂಡ. ಧನ್ಯವಾದಗಳು.