ಬೆಟ್ಟ ಹತ್ತೋಣ ಬನ್ನಿರೋ..
ಮಗಳಿಗೆ ಜಮಾಲಾಬಾದ್ ಕೋಟೆ ತೋರಿಸಬೇಕೆಂದು ಅನೇಕ ವರ್ಷಗಳಿಂದ ಬಯಸಿದ್ದೆನು. ಸಾಧ್ಯವಾಗಿರಲಿಲ್ಲ. ಕಳೆದ ಏಳನೇ ತಾರೀಕು ಮಂಗಳೂರು ಸಮೀಪ ಒಂದು ಫಂಕ್ಷನ್ ಮುಗಿಸಿ, ಎಂಟನೇ ತಾರೀಕಿಗೆ "ಗಡಾಯಿ ಕಲ್ಲು" ( ಜಮಾಲಾಬಾದ್ ಕೋಟೆಯನ್ನು ಸ್ಥಳೀಯರು ಕರೆಯುವುದು) ಹತ್ತುವುದು ಎಂದು ತೀರ್ಮಾನಿಸಿ ಬೆಂಗಳೂರಿಂದ ಹೊರಟೆನು.
"ಇತ್ತೀಚಿನ ದಿನದವರೆಗೆ ಮಳೆ ಬರುತ್ತಲಿತ್ತು. ಹುಲ್ಲು ಬಹಳವಿರುತ್ತದೆ, ಮುಂದಿನ ತಿಂಗಳು ಹೋಗುವುದು ಉತ್ತಮ" ಎಂದರೂ ನನ್ನ ನಿರ್ಧಾರ ಬದಲಿಸಲಿಲ್ಲ. ನಾನು, ನನ್ನ ಮಗಳು, ನನ್ನ ಎವರ್ ರೆಡಿ ಭಾವ, ಅವನ ಮಗ, ಇನ್ನೊಬ್ಬ ಭಾವನ ಎರಡು ಮಕ್ಕಳು ಹೋಗುವುದೆಂದು ತೀರ್ಮಾನವಾಯಿತು.
ಒಬ್ಬರು ಸಂಬಂಧಿ ಹೋಗಿ ಬರಲು ಕಾರು ರೆಡಿ ಮಾಡಿದರು, ಇನ್ನೊಬ್ಬರು "ಚಪಾತಿ- ಕೂರ್ಮ" ಬುತ್ತಿಕಟ್ಟಿ ಕೊಟ್ಟರು. ಎಂಟನೇ ತಾರೀಕು ಎಂಟು ಗಂಟೆಗೆ "ಗಡಾಯಿಕಲ್ಲಿಗೆ ಜೈ" ಎಂದು ಹೇಳಿ ನಮ್ಮ ಪ್ರಯಾಣ ಪ್ರಾರಂಭಿಸಿದೆವು.
ಕಾರಲ್ಲಿ ಹೋಗುವಾಗ ಮಕ್ಕಳ ಬಳಿ ಹೇಳಿದೆ-" ಮುಂದೆ ಈ ಬೆಟ್ಟ ಉಳಿಯುತ್ತೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಕೆಲ ರಾಜಕಾರಣಿಗಳು, ಅಧಿಕಾರಿಗಳು ಸೇರಿ ಅಭಿವೃದ್ಧಿ (ಚತುಷ್ಪಥ ರಸ್ತೆ?) ನೆಪದಲ್ಲಿ ಕಲ್ಲನ್ನು ಸೈಜ್ ಕಲ್ಲು ಮಾಡಿ ಚೀನಾಕ್ಕೆ ಸಾಗಿಸಿಯಾರು. ಈಗಲೇ ಕಣ್ತುಂಬಾ ನೋಡಿಕೊಳ್ಳಿ."
"ಹಾಗೆಲ್ಲಾ ಆಗಲು ನಾವು ಬಿಡುವುದಿಲ್ಲ" ಅಂದರು ಮಕ್ಕಳು.
"ನಿಮ್ಮ ವಿರೋಧ ಯಾರು ಕ್ಯಾರ್ ಮಾಡುತ್ತಾರೆ. ಬೆಂಗಳೂರಲ್ಲಿ ಒಂದು "ದೊಡ್ಡಬೆಟ್ಟಹಳ್ಳಿ" ಅಂತ ಊರಿದೆ. ಅಲ್ಲಿದ್ದ ದೊಡ್ಡ ಕಲ್ಲಿನ ಬೆಟ್ಟದಿಂದಾಗಿ ಆ ಹೆಸರು. ಬೆಟ್ಟದ ಮೇಲೆ ಒಂದು ಗುಡಿಯೂ ಇದೆ. ಆ ಬೆಟ್ಟದ ಮೇಲೆ ನಿಂತರೆ "ಯಲಹಂಕ" ಪೂರ್ತಿ ಕಾಣುತ್ತಿತ್ತು ಅಂತ ಹೇಳುತ್ತಿದ್ದರು. ಆ ಕಲ್ಲು ಕಟ್ ಮಾಡಿ ದಿನಾ ಲಾರಿಯಲ್ಲಿ ಸಾಗಣೆಯಾಗುತ್ತಿದೆ. ಸಮೀಪದ ಕೆರೆ ಕಸಕಡ್ಡಿ ಹಾಕಿ ಮುಚ್ಚುತ್ತಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಆ ಊರು ಬೆಟ್ಟವಿಲ್ಲದ "ದೊಡ್ಡಬೆಟ್ಟಹಳ್ಳಿ"ಯಾಗುವುದು.
ಹಿಂದಿನ ಕಾಲದವರು ಸ್ಥಳೀಯ ಕಲ್ಲು ಮಣ್ಣಿಂದ ಗುಡಿ- ದೇವಸ್ಥಾನಗಳನ್ನು ಕಟ್ಟಿ, ಅದಕ್ಕೆ ಸಂಬಂಧಿಸಿ ಸುತ್ತಲೂ ಪವಿತ್ರ ಮರಗಳು, ಸಮೀಪದಲ್ಲಿ ಕೆರೆ, ನಾಗರ ಬನ..ಹೀಗೇ ಜನತೆಯ ಮತ್ತು ಊರಿನ ಒಳಿತಿಗಾಗಿ ಕಟ್ಟುತ್ತಿದ್ದರು. ಈಗಿನ ಮಾರ್ಬ್ಲ್ ಮೊಸಾಯಿಕ್ಗಳಿಗೆ ಒಗ್ಗಿದ ಭಕ್ತರು ಅಲ್ಲಿಗೆ ಹೋಗುವುದು ಕಮ್ಮಿ. ಆದಾಯ ಕಮ್ಮಿಯಿದ್ದಾಗ ಗುಡಿ ಪಾಳು ಬೀಳುತ್ತಿರುವುದು. ಆವಾಗ ಆ ಗುಡಿಯ ಆಢಳಿತಕ್ಕೆ ಅಲ್ಲಿನ ಜಮೀನು ಮಾಫಿಯಾದ ಒಡೆಯನೋ, ಏರಿಯಾದ ಪುಡಿ ರೌಡಿಯೋ, ಅಥವಾ ರಾಜಕಾರಣಿಯೋ ಸೇರಿಕೊಳ್ಳುವರು. ಗುಡಿಯ ಜೀರ್ಣೋದ್ಧಾರವಾಗುವುದು. ನೆಲಗೋಡೆಯೆಲ್ಲಾ ಮಾರ್ಬ್ಲ್ ಮೊಸಾಯಿಕ್ಗಳಾಗುವುದು. ಸುತ್ತಲಿನ ಮರಗಿಡಗಳ ಸಾಗಣೆಯಾಗಿ ಇನ್ನೆರಡು ಜನಪ್ರಿಯ ದೇವತೆಗಳ ಸ್ಥಾಪನೆಯಾಗುವುದು. ನಾಗರ ಬನಹೋಗಿ, ನಾಗರ ಕಲ್ಲು, ನವಗ್ರಹಗಳು ದೇವಸ್ಥಾನದೊಳಗೆ ಜನರಿಗೆ ಸುತ್ತುಹಾಕಲು ಅನುವಾಗುವಂತೆ ಸೇರಿಕೊಳ್ಳುವವು. ಕೆರೆಯಲ್ಲಿ ನೀರಿಲ್ಲ, ಪಾಳುಬಿದ್ದಿದೆ ಎಂದು ಹೇಳಿ, ಅದನ್ನು ಮುಚ್ಚಿ ಅಲ್ಲಿ ಕಲ್ಯಾಣ ಮಂಟಪ ಸೈಡಲ್ಲಿ ಉದ್ದಕ್ಕೂ ಕಮರ್ಷಿಯಲ್ ಅಂಗಡಿಗಳು ಬರುವವು. ಉದ್ದ ಗಡ್ಡಬಿಟ್ಟು ಅದೇ ಪುಡಿ ರೌಡಿ ಅಲ್ಲಿನ ಸ್ವಾಮಿಯಾಗಲೂಬಹುದು....." ಕೇಳುವವರಿರುವಾಗ ನನ್ನ ಭಾಷಣ ಜೋರಾಗಿ ಸಾಗಿತ್ತು. ಅಷ್ಟರೊಳಗೆ ಕೋಟೆ ಬುಡಕ್ಕೆ ಬಂದಿದ್ದೆವು.
ಮಂಗಳೂರಿಂದ ಉಜಿರೆ/ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ಬೆಳ್ತಂಗಡಿ ಸೇತುವೆ ದಾಟಿದ ಮೇಲೆ ಒಂದು ಕ್ರಾಸ್ ರೋಡ್ ಬರುವುದು. ಎಡಕ್ಕೆ ತಿರುಗಿ ಅಂದಾಜು ೭-೮ ಕಿ.ಮೀ ಸಾಗಿದರೆ ಮಹಾಧ್ವಾರ ಕಾಣಿಸುವುದು. ಅದನ್ನೂ ಸುತ್ತಿ ಬಳಸಿ ಸ್ವಲ್ಪ ಮುಂದೆ ಹೋದರೆ ಬೆಟ್ಟ ಹತ್ತುವ ಮೆಟ್ಟಲುಗಳು ಕಾಣಸಿಗುವುದು. ರಸ್ತೆ ಬದಿಯಲ್ಲಿ ವಾಹನವನ್ನು ಪಾರ್ಕ್ ಮಾಡಿದರಾಯಿತು. ಅಲ್ಲೊಬ್ಬ ಗಾರ್ಡ್ ಬರುವನು. ವಿಳಾಸ, ಮೊಬೈಲ್ ನಂಬರ್ ಅವನ ಬುಕ್ನಲ್ಲಿ ಎಂಟರ್ ಮಾಡಿ, ದೊಡ್ಡವರಿಗೆ ೨೦ ರೂ, ಮಕ್ಕಳಿಗೆ ೧೦ ರೂನಂತೆ ಹಣ ಕಟ್ಟಿದರಾಯಿತು-ಮೇಲೆ ಹೋಗಲು ಪರ್ಮಿಶನ್ ಸಿಗುವುದು. ಬೆಟ್ಟ ಹತ್ತೋಣ ಬನ್ನಿ.
(ಇನ್ನೂ ಇದೆ)
Comments
ಉ: ಬೆಟ್ಟ ಹತ್ತೋಣ ಬನ್ನಿರೋ..
ನಾನು ಬೆಳ್ತಂಗಡಿಯಲ್ಲಿ ತಹಸೀಲ್ದಾರನಾಗಿದ್ದಾಗ ಪ್ರಥಮ ಬಾರಿಗೆ ಪ್ರವೇಶ ಶುಲ್ಕ ರೂ. 5/- ನಿಗದಿಸಿ ಅರಣ್ಯ ಇಲಾಖೆ ಆದೇಶ ಮಾಡಿದ್ದನ್ನು ಜನರು ಪ್ರತಿಭಟಿಸಿದ್ದರು. ಈಗ ಅದು ಇಪ್ಪತ್ತು ರೂ. ಆಗಿದೆಯೇ? ಚಾರಣಿಗರಿಗೆ ಒಳ್ಳೆಯ ಪ್ರದೇಶವದು.
In reply to ಉ: ಬೆಟ್ಟ ಹತ್ತೋಣ ಬನ್ನಿರೋ.. by kavinagaraj
ಉ: ಬೆಟ್ಟ ಹತ್ತೋಣ ಬನ್ನಿರೋ..
ಅಯ್ಯೋ .., ನೀವು ಮೊದಲೇ ಹೇಳಬಾರದಿತ್ತೆ... "ಏಯ್ ಯಾರ ಹತ್ರ ಶುಲ್ಕ ಕೇಳುತ್ತಿ? ನಾನು ಇಲ್ಲಿನ ತಹಸೀಲ್ದಾರ್(ಆಗಿದ್ದ) ನಾಗರಾಜರ ಕಡೆಯವನು" ಅಂತ ರೋಪ್ ಹಾಕಬಹುದಿತ್ತು..:)
ನೀವಂದಂತೆ ಚಾರಣಿಗರಿಗೆ ಒಳ್ಳೆಯ ಪ್ರದೇಶ. ಜಾಸ್ತಿ ಕಷ್ಟವೂ ಇಲ್ಲ. ಸುಂದರ ದೃಶ್ಯಗಳನ್ನು ನೋಡಲು ಸಾಕಷ್ಟು ಸಮಯ ಸಿಗುವುದು. ರಾತ್ರಿಯೊಳಗೆ ಹಿಂದಿರುಗಲೂಬಹುದು.
ಹೈದರ್-ಟಿಪ್ಪು ಬಗ್ಗೆ ನೀವು ಬರೆದ ಲೇಖನ ಓದಿದ್ದೆ. ಈ ಲೇಖನ ಸಿದ್ದಪಡಿಸುವಾಗಲೂ ಟಿಪ್ಪು ಯಾವಾಗ ಈ ಗುಡ್ಡವನ್ನು ವಶಪಡಿಸಿದ್ದು, ಯಾವಾಗ ಇದು ಬ್ರಿಟಿಷರ ವಶವಾಯಿತು, ಮಂಗಳೂರ ಕ್ರಿಶ್ಚಿಯನ್ನರು... ಇತ್ಯಾದಿ ಬಗ್ಗೆ ಓದಿದ್ದೆ.
ಇತಿಹಾಸ ನಾವು ಓದಿದ ತರಹವೇ ಇರಲಿ. ಟಿಪ್ಪು ನಮ್ಮ ಹೆಮ್ಮೆಯ ಹುಲಿಯಾಗೇ ಇರಲಿ.
ಉ: ಬೆಟ್ಟ ಹತ್ತೋಣ ಬನ್ನಿರೋ..
ಬನ್ನಿ ಹತ್ತೋಣ!
ನಾನು ಸಿದ್ದ.
.
.
ಎಂದು ನಮ್ಮನ್ನೆಲ್ಲ ಹುರುದುಂಬಿಸಿ ನೀವು ಕೆಳಗೆ ಏನೋ ತಿನ್ನುತ್ತ ಕುಳಿತುಕೊಳ್ಳಬೇಡಿ
:)
In reply to ಉ: ಬೆಟ್ಟ ಹತ್ತೋಣ ಬನ್ನಿರೋ.. by partha1059
ಉ: ಬೆಟ್ಟ ಹತ್ತೋಣ ಬನ್ನಿರೋ..
ಪಾರ್ಥರೆ, ಮಕ್ಕಳಿಗೆ ನನ್ನ ಮೇಲೆ ಬಹಳ ಪ್ರೀತಿ. ತಿನಿಸುಗಳ ಚೀಲ, ನೀರಿನ ಬಾಟಲ್ ಯಾವುದೂ ಹೊರುವ ಕಷ್ಟ ನನಗೆ ಬೇಡ ಅಂತ ಅವರೇ ಹೊತ್ತುಕೊಂಡರು ಅಂದುಕೊಂಡಿದ್ದೆ. ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆ, ನಿಮ್ಮ ಹಾಗೇ ಮಕ್ಕಳಿಗೂ ನನ್ನ ಮೇಲೆ ಡೌಟು ಬಂದಿತ್ತಾಂತ ಯೋಚನೆ...
In reply to ಉ: ಬೆಟ್ಟ ಹತ್ತೋಣ ಬನ್ನಿರೋ.. by ಗಣೇಶ
ಉ: ಬೆಟ್ಟ ಹತ್ತೋಣ ಬನ್ನಿರೋ..
ಗಣೇಶ್ ಅಣ್ಣ ಮತ್ತು ನಾವ್ ಏಕ ಕಾಲದಲ್ಲಿ ಮಂಗಳೂರು ಕಡೆ ಹೋದದ್ದು ಅಚಾನಕ್ ಅಸ್ಟೆ ...!!
ಅವರು ನೋಡಿದ್ದು ಜಮಾಲಾಬಾದ್ ಕೋಟೆ...
ನಾವ್ ನೋಡಿದ್ದು ಮೂಡಬಿದ್ರಿ - ಬೆಳ್ಮಣ್ಣು ,ಸಚೇರಿಪೇಟೆ ,ಶಿರ್ವ (ಫೇಸ್ಬುಕ್ನ ಶ್ರೀಯುತ ಪುಷ್ಪರಾಜ್ ಚೌಟ ಅವರ ಊರು )-ಉಡುಪಿಗೆ ಬಂದು -ಅಲ್ಲಿಂದ ಬೆಂಗಳೂರಿಗೆ ಬಂದದ್ದಾಯ್ತು ..!!
ಜಮಾಲಾಬಾದ್ ಕೋಟೆ ಹೆಸರು ಕೇಳಿರುವೆ , ಅಲ್ಲಿಗಿನ್ನೂ ಹೋಗಿಲ್ಲ, ನಮ್ಮ ರಾಯಚೂರು ಕೋಟೆಗೆ ಒದಗಿದ ದುಸ್ತಿತಿ ಕಣ್ಣಾರೆ ನೋಡಿರುವೆ , ಅದು ಇಲ್ಲಿಯೂ ಆಗದೆ ಇರಲಿ ..!
ಸಚಿತ್ರ ಲೇಖನ ಸೂಪರ್ , ಆದರೆ ಯಾರ್ಯಾರದೋ ಪೋಟೋ ಹಾಕಿರುವಿರಿ ..!!
ಈಗ ಹೇಗಿದೆ ಅಂದರೆ ನಿಮ್ಮದೇ ಪೋಟೋ ಹಾಕಿದರೂ ನಂಬಲು ನಾವ್ ತಯಾರಿಲ್ಲ್ಲ - ಥೇಟ್ ನಾ ಬರೆದ ' ನಾನೇ ರ್ರೀ ಗಣೇಶ್ ' ಬರಹದ ತರಹ ..!!
ಇನ್ನೇನು ಕೆಲವು ದಿನಗಳಲಿ ನಿಮ್ಮ ನನ್ನ ಜೊತೆಗೆ ನಿಂತು ತೆಗೆದ ಚಿತ್ರವನ್ನೇ ಇಲ್ಲಿ ಹಾಕುವ .. ನೀವ್ ಇಷ್ಟ ಪಟ್ಟರೆ ..!!
ಶುಭವಾಗಲಿ
\।/
In reply to ಉ: ಬೆಟ್ಟ ಹತ್ತೋಣ ಬನ್ನಿರೋ.. by venkatb83
ಉ: ಬೆಟ್ಟ ಹತ್ತೋಣ ಬನ್ನಿರೋ..
ಸಪ್ತಗಿರಿವಾಸಿಯವರೆ, ಮಂಗಳೂರು ಬಸ್ಸಲ್ಲಿ ಸಿಕ್ಕಿರುತ್ತಿದ್ದರೆ, ನಿಮ್ಮನ್ನೂ ಜಮಾಲಾಬಾದ್ ಕೋಟೆಗೆ ಕರಕೊಂಡು ಹೋಗಬಹುದಿತ್ತು. :)
ಬೆಟ್ಟ ಹತ್ತುವಾಗ ನೀವು ಬರೆದ ಚಾರಣ ಲೇಖನ ನೆನಪಾಗಿತ್ತು. (ಕೊಂಡಿ ಕೊಡೋಣ ಎಂದು ಹುಡುಕಿದರೆ ಸಿಗಲಿಲ್ಲ.) ಮೂರ್ತಿಯವರು ಬರೆದ ಹಾಗೆ ಒಳ್ಳೆಯ ಸುದ್ದಿ ಏನಾದರೂ ಇದೆಯಾ...?
In reply to ಉ: ಬೆಟ್ಟ ಹತ್ತೋಣ ಬನ್ನಿರೋ.. by ಗಣೇಶ
ಉ: ಬೆಟ್ಟ ಹತ್ತೋಣ ಬನ್ನಿರೋ..
" (ಕೊಂಡಿ ಕೊಡೋಣ ಎಂದು ಹುಡುಕಿದರೆ ಸಿಗಲಿಲ್ಲ.) "
http://bit.ly/191x9Rr
ಗಣೇಶ್ ಅಣ್ಣ - ನನ್ನ ಚಾರಣದ ಬಗೆಗಿನ ನಿಮ್ಮ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆಯಲ್ಲಿ , ನಾ ನಿಮ್ಮನ್ನು ಏಕವಚನದಲ್ಲಿ 'ಗಣೇಶ್' ಎಂದು ಸಂಬೋಧಿಸಿರುವೆ . ನೀವ್ ನನಗೆ ಮೊದಲಿಂದಲೂ ಪರಿಚಯವಿದ್ದ -ಗಣೇಶ್ ಅವರು ಎಂದು ಗೊತ್ತಿರಲಿಲ್ಲ, ಆ ಅಚಾತುರ್ಯ ಈಗ ಮತ್ತೊಮ್ಮೆ ಆ ಬರಹ ನೋಡಿದಾಗ ಅರಿವಿಗೆ ಬಂತು .. ಮುಜುಗರ ಆಯ್ತು ...:(
ನಾನು ಹೋಗಿದ್ದು ಬಂದಿದ್ದು ರಾತ್ರಿಯೇ -ಹೋಗ್ವಾಗ ಬಸ್ಸು , ಬರ್ವಾಗ ಸತತ 14 ಘಂಟೆ ಚಲಿಸುವ ದೀರ್ಘ ಪ್ರಯಾಣದ ರೈಲು ಕಾರವಾರ ಎಕ್ಸ್ಪ್ರೆಸ್..!!
>>> @ ಮೂರ್ತಿಗಳು -ಮತ್ತು ಗಣೇಶ್ ಅಣ್ಣ
ಸ . ವಾ ಗೆ ಇನ್ನೂ ನಿಸ್ಚಿತಾರ್ಥವೇ ಆಗಿಲ್ಲ ..!!
ಹುಡುಗಿ ನೋಡಿದ್ಡಸ್ಟೆ , ಮಾತು ಕಥೆ ಆಡಲಿಕ್ಕಿದೆ ..!!
ನಿಸ್ಚಿತಾರ್ಥ ಮತ್ತು ಮದುವೆಗೆ ಸಕಲ ಸಂಪದಿಗರನ್ನೂ ಆಹ್ವಾನಿಸುವೆ . ಒಂಥರಾ ಮದ್ವೆ ಸಮಾರಂಭ ಮತ್ತು ಸಂಪದ ಸಮ್ಮಿಲನ ಮಾಡುವ ಆಶೆ .. ಅದ್ಕೆ ಬಹುಶ ಇನ್ನೊಂದು ವರ್ಷ ಆಗಬಹುದು ..!!
ನನ್ನಿ
ಶುಭವಾಗಲಿ
\|/
In reply to ಉ: ಬೆಟ್ಟ ಹತ್ತೋಣ ಬನ್ನಿರೋ.. by venkatb83
ಉ: ಬೆಟ್ಟ ಹತ್ತೋಣ ಬನ್ನಿರೋ..
ಇಲ್ಲಿ ನೀವು "ಗಣೇಶ್" ಅಂತ ಸಂಭೋದಿಸಿದ್ದಕ್ಕೇ ಬೇಸರಿಸುತ್ತಿರುವಿರಿ! ಏಕವಚನನೋ,ಬಹುವಚನವೋ.. ನನಗೇನೂ ಬೇಸರವಿಲ್ಲ..ನೀವೆಲ್ಲಾ ನನ್ನ ಸ್ನೇಹಿತರೇ..
-ನಿಶ್ಚಿತಾರ್ಥ ಮತ್ತು ಮದುವೆಗೆ ಸಕಲ ಸಂಪದಿಗರನ್ನೂ ಆಹ್ವಾನಿಸುವೆ . ನಿಶ್ಚಿತಾರ್ಥಕ್ಕೆ ನಾವೆಲ್ಲಾ ಬಂದರೆ ಹೆಣ್ಣಿನ ಕಡೆಯವರು ಹೆದರಿಯಾರು..:) ಮದುವೆಗೆ ಆಹ್ವಾನಿಸಿದರೆ ಸಾಕು.
ಉ: ಬೆಟ್ಟ ಹತ್ತೋಣ ಬನ್ನಿರೋ..
ನಾನು ಸಿದ್ದ ಗಣೇಶ್ ರವರೇ ನೋಡೋಣ ಈಗಲಾದರು ನಿಮ್ಮ " ದರ್ಶನ " ಆಗುವುದೇನೋ..... ಸತೀಶ್
In reply to ಉ: ಬೆಟ್ಟ ಹತ್ತೋಣ ಬನ್ನಿರೋ.. by sathishnasa
ಉ: ಬೆಟ್ಟ ಹತ್ತೋಣ ಬನ್ನಿರೋ..
ಸತೀಶರೆ, ನೀವು ಬರುತ್ತೀರಾದರೆ ನಾನು ಪುನಃ ಬೆಟ್ಟ ಹತ್ತಲು ರೆಡಿ..
ಉ: ಬೆಟ್ಟ ಹತ್ತೋಣ ಬನ್ನಿರೋ..
ಗಣೇಶರೆ,
ಬೆಟ್ಟ ಕರುಗಿತೋ ಇಲ್ಲಾ ನೀವೇ ಕರಿಗಿದ್ದೀರೋ ಈ ಜಮಾಲಾಬಾದ್ ಬೆಟ್ಟ ಹತ್ತಿ ಇಳಿದು :)
In reply to ಉ: ಬೆಟ್ಟ ಹತ್ತೋಣ ಬನ್ನಿರೋ.. by makara
ಉ: ಬೆಟ್ಟ ಹತ್ತೋಣ ಬನ್ನಿರೋ..
ಶ್ರೀಧರ್ಜಿ, ಅಲ್ಲಾ.. ಬೆಟ್ಟ ಹತ್ತಿ ಇಳಿದರೂ... ನನ್ನ ತೂಕ ಹಾಗೇ ಇದೆ! ಪಾಪ ಬೆಟ್ಟ...:(
ಉ: ಬೆಟ್ಟ ಹತ್ತೋಣ ಬನ್ನಿರೋ..
ಗಣೇಶ್ ಜಿ, ತುಂಬಾ ಇಷ್ಟವಾಗಿದ್ದು : 1. ಇನ್ನೂ ಇದೆ 2. ಆಪರೇಷನ್ ಗಣೇಶ್ ಹಂಟ್ ಸುದ್ದಿ 3. ಸಪ್ತಗಿರಿಗಳ ಬ್ರಹ್ಮಚರ್ಯಾಶ್ರಮದಿಂದ ಗೃಹಸ್ಥಾಶ್ರಮಕ್ಕೆ ಕಾಲೂರಿಸಲು (ಕಾಲೆಳೆಯಲು?) ಹುನ್ನಾರ. ಮುಂದಿನ ಭಾಗದಲ್ಲಿ ಕೋಟೆಯ ಫೋಟೊ ಬದಲು ಇದಕ್ಜೆ ಸಂಬಂಧಪಟ್ಟ ಪೋಟೊಗಳೆಲ್ಲ ಬಂದರೆ ಥ್ರಿಲ್ಲಿಂಗಾಗಿರುತ್ತದೆ !
In reply to ಉ: ಬೆಟ್ಟ ಹತ್ತೋಣ ಬನ್ನಿರೋ.. by nageshamysore
ಉ: ಬೆಟ್ಟ ಹತ್ತೋಣ ಬನ್ನಿರೋ..
ಇನ್ನೂ ಇದೆ ...!!
ಯಾವುದೇ ಸಂಗತಿ ರಹಸ್ಯವಾಗಿದ್ದರೇನೇ ಮಜಾ .. ಕುತೂಹಲ ..!!
ಅದು ಬಟಾ ಬಯಲಾದರೆ ಎಂತು ಸ್ವಾರಸ್ಯ?
ಅದ್ಕೆ ಗಣೇಶ್ ಅಣ್ಣ ಮತ್ತು ನನ್ನ ಸಮ್ಮಿಲನ ಬಗ್ಗೆ ಇಲ್ಲಿ ಬರೆಯುವ ಚಿತ್ರ ಸೇರಿಸುವ ಬಗ್ಗೆ ಗೊಂದಲವಿದೆ ..
ನೋಡುವ ...!! ಏನಾಗುತ್ತೆ ಅಂತ .>!!!
ಶುಭವಾಗಲಿ
\|/