ಸಹಾಯ ಮಾಡುವಿರಾ?
ಕ್ರಿ.ಶ.1396 ಜನವರಿ 16 ರಂದು [ಯುವ ನಾಮ ಸಂವತ್ಸರ ಮಾಘ ಶುಕ್ಲ ಸಪ್ತಮಿ [ರಥ ಸಪ್ತಮಿ] ದಿನದಂದು ವಿಜಯ ನಗರ ಸಾಮ್ರಾಜ್ಯದ ಅರಸು ಎರಡನೇ ಹರಿಹರಮಹಾರಾಜನು ತುಂಗಾ ನದೀ ದಂಡೆಯಲ್ಲಿರುವ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ವೇದಾಂತ- ತರ್ಕ-ವ್ಯಾಕರಣ ಶಾಸ್ತ್ರಗಳಲ್ಲಿ ಪರಿಣಿತನಾದ ಮಾಧವಾಧ್ವರಿ ಎಂಬ ವಿದ್ವಾಂಸನಿಗೆ " ತವನಿಧಿ"ಎಂಬ ಗ್ರಾಮವನ್ನು ಹರಿಹರಪುರ ಎಂದು ಪುನರ್ನಾಮಕರಣಮಾಡಿ ಏಳು ಉಪಗ್ರಾಮಗಳ ಸಹಿತ ದಾನ ಮಾಡಿದನು ಎಂಬ ತಾಮ್ರ ಪತ್ರ ನಮ್ಮೂರಿನಲ್ಲಿದೆ. ಅದರ ವಿವರ ಕೂಡ ಇದೆ. ಆ ವಿದ್ವಾಂಸ ಮಾಧವಾಧ್ವರಿಯ ಚಿತ್ರಕ್ಕಾಗಿ ಎಲ್ಲೆಡೆ ತಡಕಾಡಿದೆ. ಲಭ್ಯವಾಗಿಲ್ಲ. ಈ ವಿದ್ವಾಂಸನ ಚಿತ್ರವನ್ನು ಒದಗಿಸಿಕೊಡುವವರಿಗೆ ಸೂಕ್ತ ಗೌರವಗಳೊಡನೆ ಬಹುಮಾನ ನೀಡಲಾಗುವುದು. ಸಂಶೋಧನಾ ವಿದ್ಯಾರ್ಥಿಗಳು ಅಥವಾ ಆಸಕ್ತರು ಪ್ರಯತ್ನ ಪಡುವಿರಾ? ಮಾಹಿತಿ ಲಭ್ಯವಾದಲ್ಲಿ vedasudhe@gmail.com ಗೆ ಮೇಲ್ ಮಾಡುವಿರಾ? ವಿಜಯ ನಗರ ಸಾಮ್ರಾಜ್ಯದ ಅರಸ ಎರಡನೇ ಹರಿಹರಮಹಾರಾಜನ ಚಿತ್ರ ಇಲ್ಲಿದೆ.
Rating
Comments
ಉ: ಸಹಾಯ ಮಾಡುವಿರಾ?
ಹರಿಹರಪುರ ಶ್ರೀಧರ್ ಅವರೆ, ಮೇಲಿನ ಚಿತ್ರ ವಿಜಯ ನಗರ ಸಾಮ್ರಾಜ್ಯದ ಅರಸ ಎರಡನೇ ಹರಿಹರಮಹಾರಾಜನ ಚಿತ್ರವಾ? ಇದೇ ಚಿತ್ರವನ್ನು ಕೆಲವರು ಕೃಷ್ಣದೇವರಾಯನ ಚಿತ್ರ (http://getaway2india.wordpress.com/2011/07/22/the-magnificent-ruins-of-h... ) ಎಂದು ಹಾಕಿರುವರು.
In reply to ಉ: ಸಹಾಯ ಮಾಡುವಿರಾ? by ಗಣೇಶ
ಉ: ಸಹಾಯ ಮಾಡುವಿರಾ?
ಇದು ಗೂಗಲ್ ಕೃಪೆ http://www.mangalorean.com/printarticle.php?arttype=article&artid=1673
ನಮ್ಮೂರಿನ ಬಗ್ಗೆ ಬರೀ ತಪ್ಪು ಮಾಹಿಯನ್ನೇ ಕೊಟ್ಟಿದ್ದಾರೆ.ಕೊಂಡಿ ನೋಡಿ.http://hassaninfo.net/index.php?option=com_content&view=category&layout=...
ಸಾಕಪ್ಪಾ, ಸಾಕಪ್ಪಾ ಗೂಗಲ್ ಸಹವಾಸ ಸಾಕಪ್ಪಾ! ನಮ್ಮೂರು ನನಗೆ ಗೊತ್ತಿರುವುದರಿಂದ ಅಲ್ಲಿರುವ ಮಾಹಿತಿಗಳು ತಪ್ಪು, ಎಂದು ನನಗೆ ಗೊತ್ತು. ಬೇರೆಯವರು ಇದನ್ನೇ ಸರಿ ಅಂದುಕೊಳ್ಳುತ್ತಾರೆ.
In reply to ಉ: ಸಹಾಯ ಮಾಡುವಿರಾ? by hariharapurasridhar
ಉ: ಸಹಾಯ ಮಾಡುವಿರಾ?
ಅವಸರಮಾಡಬೇಡಿ ಶ್ರೀಧರ್ ಅವರೆ, ಗೂಗ್ಲ್ ಮೇಲೆ ಗೂಬೆ ಕೂರಿಸಬೇಡಿ. ಅದೇ ಗೂಗ್ಲ್ ಕೃಪೆಯಿಂದ ನಿಮ್ಮ ಹರಿಹರಪುರದ ಮಾಹಿತಿ ಇಲ್ಲಿದೆ- http://archive.is/xOGY6 -ಸರಿಯಿದೆಯಾ? ಹರಿಹರಪುರ ಚಿಕ್ಕಮಗಳೂರಿನ ಹತ್ತಿರವೂ ಒಂದಿದೆ..ಹೀಗೆ ಇನ್ನೂ ಕೆಲವಿರಬಹುದು.
In reply to ಉ: ಸಹಾಯ ಮಾಡುವಿರಾ? by ಗಣೇಶ
ಉ: ಸಹಾಯ ಮಾಡುವಿರಾ?
ಗಣೇಶ್, ನನಗೆ ತಿಳಿದುರುವಂತೆಯೇ ನಮ್ಮ ಸುತ್ತ ಮುತ್ತವೇ ಐದು ಹರಿಹರಪುರಗಳಿವೆ. ಆದರೆ ನಮ್ಮ ಊರಿಗೆ ನಿಜವಾಗಿಯೂ ಐತಿಹಾಸಿಕ ಮಹತ್ವವಿದೆ.ಮಾಧವಾಧ್ವರಿ ಎಂಬ ವಿದ್ವಾಂಸನೇ ಅದಕ್ಕೆ ಕಾರಣ. ಅವನ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗುತ್ತಿಲ್ಲ. ನಮ್ಮೂರನ್ನು ದಾನ ಪಡೆಯುವ ಮುಂಚೆ ಅವನು ಎಲ್ಲಿದ್ದ? ಎಂಬುದೂ ನನಗೆ ಪ್ರಶ್ನಾರ್ಹವಾಗಿದೆ.ನೀವು ಕೊಟ್ಟಿರುವ ಕೊಂದಿಯಲ್ಲಿ ನಮ್ಮೂರಿನ ಭಾಷೆಗಳು
Language : Kannada and Sanskrit, Tamil, Marathi, Marwari And Mahajani ಎಂದು ಇದೆ. ಇದನ್ನೂ ನೋಡಿದ್ದೆ. ಅದರಲ್ಲಿರುವ ಹಲವು ಅಂಶಗಳು ಇದ್ದೂ ಸೇರಿದಂತೆ ತಪ್ಪು ಮಾಹಿತಿಗಳೇ ಆಗಿವೆ.Marathi, Marwari And Mahajani ಈ ಮೂರು ಭಾಷೆಗಳಂತೂ ಯಾವ ಕಾಲದಲ್ಲೂ ನಮ್ಮೂರಿನಲ್ಲಿದ್ದ ಸುಳಿವಿಲ್ಲ. ನಮ್ಮೂರು ಹಾಸನ ದಿಂದ 30 ಕಿಲೋ ಮೀಟರ್ ಆಗುತ್ತೆ.Hariharapura is 21.3 km distance from its District Main City Hassan .ಎಂಬ ಅಂಶ ಇದೆ. ನಾನು ಈಗಾಗಲೇ ಈ ಸೈಟ್ ಕೂಡ ನೋಡಿದ್ದೆ. ನಮ್ಮಂತವರು ಕೊಟ್ಟ ಅಂಶಗಳನ್ನೇ ತಾನೇ ಗೂಗಲ್ ಹುಡುಕುವುದು. ಮೊನ್ನೆ ಒಂದು ಅಂಶವನ್ನು ಹುಡುಕುತ್ತಿದ್ದೆ. ನಮ್ಮ ದೇಶದಲ್ಲಿ ಎಷ್ಟು ಜನರಿಗೆ ಶೌಚಾಲಯ ಇಲ್ಲ ಎಂಬ ಅಂಶ -ಒಂದು ಕಡೆ ನಮ್ಮದೇಶದಲ್ಲಿ 130 ಕೋಟಿಜನರಿಗೆ ಶೌಚಾಲಯ ಇಲ್ಲ ಎಂಬ ಮಾಹಿತಿ ಇದೆ. ಅರೆ, ಜನಸಂಖ್ಯೆಯೇ 130 ಕೋಟಿ ಇಲ್ಲ. ನಮ್ಮ ದೇಶದಲ್ಲಿ ಶೌಚಾಲಗಳೆ ಇಲ್ಲ ಎಂದಾಯ್ತು. ಈಗಂತೂ ಎಲ್ಲರೂ ಮಾಹಿತಿಯನ್ನು ತುಂಬುವವರೇ ಆಗಿ, ಯಾವುದು ಸತ್ಯ, ಯಾವುದು ಸುಳ್ಳು, ಎಂಬುದು ನಮ್ಮ ವಿವೇಚನೆಗೆ ಬಿಟ್ಟಿದ್ದಾಗಿದೆ.ನಾನು ಹಾಕಿರುವ ಚಿತ್ರವನ್ನೇ ನೋಡಿ ಒಂದು ಕಡೆ ಹರಿಹರ-೨ ಆದರೆ ಒಂದು ಕಡೆ ಕೃಷ್ನದೇವರಾಯ. ಅಲ್ಲವೇ? ನಾನೇನೂ ಗೂಗಲ್ ನ್ನು ತಿರಸ್ಕರಿಸುತ್ತಿಲ್ಲ. ಇಂದಿನ ತಂತ್ರಜ್ಞಾನದಲ್ಲಿ ಇಂತಾ ಎಷ್ಟೋ ತಪ್ಪು ಮಾಹಿತಿಗಳು ವಿಜೃಂಬಿಸುತ್ತವೆ. ಮುಂದೊಂದು ಕಾಲಕ್ಕೆ ಇದೇ ಸತ್ಯವಾಗುವ ಅಪಾಯ ಇಲ್ವಾ ಗಣೇಶ್ ಅವರೇ?
In reply to ಉ: ಸಹಾಯ ಮಾಡುವಿರಾ? by hariharapurasridhar
ಉ: ಸಹಾಯ ಮಾಡುವಿರಾ?
ಹಿಂದೆ ಸಂಪದದಲ್ಲಿ ಅಕ್ಷರ ತಪ್ಪಾಗಿ ಟೈಪ್ ಮಾಡಿದರೆ ತಿದ್ದುವ ಅವಕಾಶವಿತ್ತು. ಈಗ ಇಲ್ಲ. ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ ಕೊಂಡಿ ಎಂಬಲ್ಲಿ ಕೊಂದಿ ಎಂತಲೂ, ಇದೂ ಎಂಬ ಜಾಗದಲ್ಲಿ ಇದ್ದೂ ಎಂತಲೂ ಆಗಿದೆ. ಇನ್ನೂ ಕೆಲವು ಅಕ್ಷರ ದೋಷಗಳಿರಬಹುದು. ದಯಮಾಡಿ ತಿದ್ದಿಕೊಂಡು ಓದಿ.
ಉ: ಸಹಾಯ ಮಾಡುವಿರಾ?
ಶ್ರೀಧರ್, ನಾನು ಒಮ್ಮೆ ಆ ತಾಪ್ರಪತ್ರವನ್ನು ನೋಡಬಹುದೇ? ನೀವು ಉಲ್ಲೇಖಿಸಿದ ಸಂದರ್ಭದಲ್ಲಿ ವಿಜಯನಗರದ ಸ್ಥಾಪನೆಗೆ ಭೂಮಿಪೂಜೆ ಪಂಪಾಕ್ಷೇತ್ರದಲ್ಲಿ ಆಯಿತು. ಹರಿಹರ ಬುಕ್ಕರು ವಿದ್ಯಾರಣ್ಯರ ಆಶ್ರುಯಕ್ಕೆ ಬಂದ ಸಮಯವದು. ಆ ಸಮಯದಲ್ಲಿ ನೀವು ಹೇಳಿದಂತೆ ಆಗಿರುವ ಬಗ್ಗೆ ಪರಾಮರ್ಶಿಸಬೇಕು. ನನ್ನ ವಿದ್ಯಾರಣ್ಯ ಲೇಖನದಲ್ಲಿ ಉಲ್ಲೇಖಿತ ಭಾಗವಿದು: ೧೭ನೆಯ ಶತಮಾನದ ಕವಿ ಲಿಂಗಣ್ಣನ 'ಕೆಳದಿನೃಪ ವಿಜಯ'ದಲ್ಲಿ ಈ ಸ್ಥಳದ ಮಹಿಮೆ ಕುರಿತು ಹೀಗೆ ಹೇಳಲಾಗಿದೆ: 'ಪೂರ್ವದೊಳ್ ಸೂರ್ಯವಂಶಜನಾದ ತ್ರಿಶಂಕು ಮಹಾರಾಯಂ ಪಂಪಾಕ್ಷೇತ್ರಕ್ಕೆ ಬಂದು ಈ ವಿರೂಪಾಕ್ಷಲಿಂಗಂ ಪ್ರಾದುರ್ಭವಲಿಂಗವೋ ಪ್ರತಿಷ್ಠಾಲಿಂಗವೋ ಯೆಂದು ಕೇಳಿದಲ್ಲಿ ಈ ಲಿಂಗಂ ಜ್ಯೋತಿರ್ಮಯವಾದ ಲಿಂಗಂ, ಈ ಲಿಂಗದ ಮಹಿಮೆಯಂ ಪೇಳ್ವುದಕ್ಕೆ ಬ್ರಹ್ಮದೇವರಿಗಾದರೂ ಅಸಾಧ್ಯಮೆಮ್ಮಪಾಡೇನೆನಲಾಗಿ ಆ ಮಾತಂ ಕೇಳ್ದು, ಆ ತ್ರಿಶಂಕು ಮಹಾರಾಯಂ ಪ್ರತಿಷ್ಠಾಲಿಂಗವೋ ಯೆಂದು ಕೇಳ್ದ ದೋಷನಿವೃತ್ತಿಗೋಸುಗಂ ಕೃಷ್ಣವೇಣೀ ನದೀತೀರಮಾರಭ್ಯ ಸೇತುಪರ್ಯಂತಂ ಮೂರುವರೆ ಕೋಟಿರಾಜ್ಯವನೀ ವಿರೂಪಾಕ್ಷದೇವರ್ಗೆ ಧಾರೆಯನೆರೆದನೆಂದು ಸ್ಥಳದವರ್ಪೇಳಲ್ ಆ ಮಾತಂ ಕೇಳ್ದಾ ವಿದ್ಯಾರಣ್ಯರ್ ಹರಿಹರಬುಕ್ಕರಂ ಕರೆದು ಈ ರಾಜ್ಯಕ್ಕೆಲ್ಲಂ ವಿರೂಪಾಕ್ಷಸ್ವಾಮಿಯೇ ಕರ್ತಂ, ನೀಂ ಆ ದೇವರ ಭಕ್ತರಾಗಿ ವರ್ತಿಸುತ್ತುಂ ಶ್ರೀ ವಿರೂಪಾಕ್ಷನೆಂದೊಪ್ಪವಂ ಹಾಕಿ ನಡೆಕೊಂಡು ಸದ್ಧರ್ಮದಿಂ ರಾಜ್ಯವನಾಳಿಕೊಂಡಿರ್ಪುದೆಂದು ಕಟ್ಟಳೆಯಂ ರಚಿಸಿ ಆ ಹರಿಹರಗೆ ಹರಿಹರರಾಯನೆಂದು ಪೆಸರಿಟ್ಟು ವಿದ್ಯಾನಗರಮೆಂಬ ಪಟ್ಟಣಮಂ ನಿರ್ಮಾಣಂ ಮಾಡಿಸುವ ಕಾಲದಲ್ಲಿ. . ' ಲಿಂಕ್: http://vedajeevana.blogspot.in/2013/01/blog-post_19.html
In reply to ಉ: ಸಹಾಯ ಮಾಡುವಿರಾ? by kavinagaraj
ಉ: ಸಹಾಯ ಮಾಡುವಿರಾ?
ನಾಗರಾಜ್ ಅವಶ್ಯವಾಗಿ ತೋರಿಸುವೆ