ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ಕರ್ಮಗಳೆಂಬ ಬಲೆಯ ಹರಡಿಹನು ದೇವ ಜಗದೊಳಗೆ
ಕರ್ಮದೊಳು ಸಿಲುಕಿಸುವನೆಲ್ಲರನಿರಿಸಿ ಮಾಯೆಯೊಳಗೆ
ಉಸುಕಿನೊಳು ಸಿಲುಕಿ ಮಿಸುಕಾಡಲದು ಒಳ ಸೆಳವಂತೆ
ಬಿಡಿಸಿಕೊಳ್ಳಲೆತ್ನಿಸೆ ಬಿಗಿವುದು ನಿನ್ನ ಕರ್ಮಬಂಧಗಳಂತೆ
ಕರ್ಮಗಳು ತನ್ನವೆಂದು ತಿಳಿದರವು ಬಂಧ ಎನಿಸುವುದು
ಫಲದಪೇಕ್ಷೆಯ ನೀ ಬಿಡಲು ಕರ್ಮ ಬಂಧವೆಂಬುದಿರದು
ಕರ್ಮಗಳಾವುದಾದರೂ ಇರಲಿ, ಬರಲಿ ಬಾಳಿನ ಪಥದಲ್ಲಿ
ಎಲ್ಲ ಕರ್ಮಗಳು ದೈವಾಜ್ಞೆ ಎಂಬುದರರಿವಿರಲಿ ಮನದಲ್ಲಿ
ಕೆಸರಿನೊಳು ಉದ್ಬವಿಪ ಕಮಲಕೆಂದಿಗೂ ಕೆಸರು ಸೋಂಕದಂತೆ
ನಂಬಿದರೆ ನೀ ಶ್ರೀ ನರಸಿಂಹನನು ಕರ್ಮ ಬಂಧಗಳು ಇರದಂತೆ
Rating
Comments
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
..ಉಸುಕಿನೊಳು ಸಿಲುಕಿ ಮಿಸುಕಾಡಲದು ಒಳ ಸೆಳವಂತೆ
ಬಿಡಿಸಿಕೊಳ್ಳಲೆತ್ನಿಸೆ ಬಿಗಿವುದು ನಿನ್ನ ಕರ್ಮಬಂಧಗಳಂತೆ ..
..ಫಲದಪೇಕ್ಷೆಯ ನೀ ಬಿಡಲು ಕರ್ಮ ಬಂಧವೆಂಬುದಿರದು..
ಕವನ ಇಷ್ಟವಾಯಿತು.
In reply to ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74) by ಗಣೇಶ
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ಧನ್ಯವಾದಗಳು ಗಣೇಶ್ ರವರೇ .....ಸತೀಶ್
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ಕೆಸರಿನೊಳು ಉದ್ಬವಿಪ ಕಮಲಕೆಂದಿಗೂ ಕೆಸರು ಸೋಂಕದಂತೆ.
ಈ ಸಾಲು ನನ್ನ ಮನಕ್ಕೆ ತುಂಬಾ ಹಿಡಿಸಿದೆ. ಮಾನವ ದೇವರನ್ನು ಸ್ಮರಿಸುತ್ತಾ ಈ ಸಂಸಾರದಲ್ಲಿ ಇದ್ದರೂ ಇಲ್ಲದಂತೆ ಇರಬೇಕೆನ್ನುವುದು.
ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಹೇಳಿದಂತೆ ಈ ಸಂಸಾರ ಬಂಧನದಲ್ಲಿದ್ದುಕೊಂಡೇ ಪ್ರತಿಕ್ಷಣವು ದೇವರ ಧ್ಯಾನ ಮಾಡುತ್ತಿರಬೇಕು ಕೂತಾಗ, ನಿಂತಾಗ, ಕೆಲಸ ಮಾಡುತ್ತಿರುವಾಗ ಇಷ್ಟದೇವರನ್ನು ಸ್ಮರಿಸುತ್ತಿರಬೇಕು. ಈ ಭವಬಂಧನವು ಪರಮಾತ್ಮ ನಮಗಿಟ್ಟ ಪರೀಕ್ಷೆ.ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ರಮಿಸೋನು ಪರಮಾತ್ಮನೇ ಎನ್ನುವಂತೆ.ಅವನ ಸ್ಮರಣೆಯಲ್ಲಿಯೇ ಮುನ್ನಡೆದು ಜೀವನ ಸಾಗಬೇಕು.
In reply to ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74) by ashwin jamadagni
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ಧನ್ಯವಾದಗಳು ಅಶ್ವಿನ್ ರವರೇ, ನಿಮ್ಮ ಮಾತು ನಿಜ ಅನವರತ ಅವನ ಧ್ಯಾನದಲ್ಲಿರುವುದೆ ಭವ ಬಂಧನದಿಂದ ಪಾರಾಗಲು ಇರುವ ಸುಲಭ ಮಾರ್ಗ......ಸತೀಶ್
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ಸತೀಶರೇ, ಸುಂದರ ಪದಜೋಡಣೆಯಿಂದ ಹೊರಸೂಸಿದ ಸುಂದರ ಸಾರ - ಭಟ್ಟಿಯಿಳಿಸಿದ ರಸಪಾಕದಂತೆ ಸವಿಯೆನಿಸಿತು.
In reply to ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74) by kavinagaraj
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ನಿಮ್ಮ ಹೃದಯ ಸ್ಪರ್ಶಿ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗರಾಜ್ ರವರೇ ....ಸತೀಶ್
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ತುಂಬಾ ಅರ್ಥಪೂರ್ಣವಾಗಿದೆ , 'ಫಲದಪೇಕ್ಷೆಯ ನೀ ಬಿಡಲು ಕರ್ಮ ಬಂಧವೆಂಬುದಿರದು' ಸತ್ಯದ ಮಾತು ..
In reply to ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74) by Vinutha B K
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ಧನ್ಯವಾದಗಳು ವಿನುತಾ ರವರೇ.....ಸತೀಶ್
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ಅರ್ಥಪೂರ್ಣ ಕವನ
In reply to ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74) by partha1059
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ಧನ್ಯವಾದಗಳು ಪಾರ್ಥಸಾರಥಿಯವರೇ....ಸತೀಶ್
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ನಿಮ್ಮ ಈ ಕವನವೂ ತುಂಬಾ ಇಷ್ಟವಾಯಿತು. ವಂದನೆಗಳು
In reply to ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74) by sunilkumara.ms
ಉ: ಕರ್ಮವೆಂಬ ಉಸುಕು (ಶ್ರೀ ನರಸಿಂಹ-74)
ಧನ್ಯವಾದಗಳು ಸುನಿಲ್ ರವರೇ .....ಸತೀಶ್