ಭಾರತೀಯ ವೈದ್ಯರಂಗದ ಪಿತಾಮಹ "ಸುಶೃತ"
ಸುಶೃತ(ಕ್ರಿ.ಪೂ.೨,೫೬೦ ಹಾಗೂ ೨,೪೮೭)
ಪ್ರಾಚೀನಭಾರತದ ಶಸ್ತ್ರವೈದ್ಯ. ಪ್ರಾಚೀನ ಭಾರತದ ಶಸ್ತ್ರವೈದ್ಯ ನಿಪುಣ ಸುಶೃತಾಚಾರ್ಯರು, ಸುಮಾರು ೪,೦೦೦ ವರ್ಷಗಳ ಹಿಂದೆ ಅಂದರೆ, ಕ್ರಿ. ಪೂ. ೨,೫೬೦ ಹಾಗೂ ೨,೪೮೭ ರ ಕಾಲಘಟ್ಟದಲ್ಲಿ ಇದ್ದರೆಂದು ಊಹಿಸಬಹುದಾಗಿದೆ. ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅದರಲ್ಲೇ ತಮ್ಮ ಅಮೋಘ ಕಾಣಿಕೆಯನ್ನು ಇತ್ತವರು. ಅವರು ಬರೆದ "ಸುಶೃತ ಸಂಹಿತೆ", ವೈದ್ಯನೆರವಿನ ಬಹು ಉಪಯುಕ್ತವಾದ, ಆರೋಗ್ಯ ಸಂಬಂಧದ ವಿಚಾರಗಳಿಗೆ ಸಲಹೆ, ಪರಿಹಾರ ನೀಡುವ ಒಂದು 'ಖಣಿ' ಎಂಬುದು ಅವರ ವಿಚಾರಧಾರೆ.
'ಸುಶೃತ' ರ ಬಾಲ್ಯ ಮತ್ತು ವಿದ್ಯಾಭ್ಯಾಸ
ವಿಶ್ವಾಮಿತ್ರನೆಂಬ ಋಷಿಯೋ ಅಥವಾ, ರಾಜನೋ, ಗಾಂಧರದೇಶದಲ್ಲಿ ವಾಸಿಸುತ್ತಿದ್ದ ಅತ್ಯಂತ ಜನಪ್ರಿಯ ವ್ಯಕ್ತಿಯ ಮಗನೆಂದು ಗ್ರಂಥಗಳಿಂದ ತಿಳಿದುಬರುವ ವಿಚಾರ. ಸುಶೃತ ಎಂಬ ಪದದ ಹತ್ತಿರವಾಗಿ ಅನೇಕ ಹೆಸರುಗಳನ್ನು ಈಗಿನ ಆಫ್ಗಾನಿಸ್ಥಾನದಲ್ಲಿ ನಾವು ಪತ್ತೆಹಚ್ಚಬಹುದು. ಅಲ್ಲಿನ ಬುಡಕಟ್ಟಿನ ಅನೇಕ ಜನರ ಹೆಸರು, ಸುಶೃತ್, ಸುರಾಟ್, ಸೌರುಟಿ, ಸುಹ್ರಾದಿ, ಇತ್ಯಾದಿಗಳಿವೆ. ಬಹುಶ: ಈ ನಾಮಧೆಯಗಳು, 'ಸುಶೃತ ನಾಮ' ದ ಬೇರೆಬೇರೆ ರೂಪಗಳೆಂದು ಕೆಲವು ವಿದ್ವಾಂಸರ ಅಂಬೋಣ.
ಸುಶೃತರ ವ್ಯಕ್ತಿತ್ವ
ಸುಶೃಚಾರ್ಯರು ಒಳ್ಳೆಯ ಅಜಾನುಬಾಹು. ಉದ್ದ ಕಿವಿಗಳು, ತೆಳುವಾದ ನಾಲಗೆ, ಸಮರ್ಪಕವಾದ ತುಟಿ, ಹೊಳೆಯುವ ದಂತಪಂಕ್ತಿಗಳು, ಮುಖ, ತೆಜಃಪುಂಜವಾದ ಕಣ್ಣುಗಳು, ಸುಂದರವಾದ ನಾಸಿಕ, ನೋಡಿದ ಕೂಡಲೆ ಗೌರವ, ಸಂತೋಷನೀಡುವ ಒಟ್ಟಾರೆ ವ್ಯಕ್ತಿತ್ವ. ಅದಕ್ಕೆ ಪೂರಕವಾದ, ಮೃದು ಮಾತು, ಕಷ್ಟಸಹಿಷ್ಣುತೆ, ಕೆಲಸದಲ್ಲಿ ಉತ್ಸಾಹ, ಮಾತಿನಲ್ಲಿ ವಿನಯ, ಅಸಾಧಾರಣವಾದ ಜ್ಞಾಪಕಶಕ್ತಿ, ಎದ್ದು ಕಾಣುತ್ತಿತ್ತು.
'ಭಗವಾನ್ ದಿವೋದಾಸ' ರು ಸುಶೃತರ ಗುರುಗಳು
ಆಯುರ್ವೇದ, ಶಲ್ಯ, ಶಾಲಾಕ್ಯ-ಚಿಕಿತ್ಸೆಗಳಲ್ಲಿ ಶಿಕ್ಷಣಪಡೆಯಲು ಬೇರೆಬೇರೆಕಡೆಗಳಿಂದ ವಿದ್ಯಾರ್ಥಿಗಳು ಅವರಬಳಿಗೆ ಬರುತ್ತಿದ್ದರು. ಅವರಲ್ಲಿ 'ಔಷಧಸೇನವ', 'ಔತರಣ', 'ಔರಭ್ಯ', 'ಪೌಷ್ಕಲಾವತ', 'ಕರವೀರ', ಮತ್ತು 'ಗೋಪುರರಕ್ಷಕ' ರಿದ್ದರು. ಅವರೆಲ್ಲಾ ಸುಶೃತರ ಸಹಪಾಠಿಗಳು. ಕರುಣಾಳು ದಿವೋದ್ಯಾಸರು, ಶಕರಾನ ವಂಶಸ್ತರು. ಅಬ್ಜದೇವತೆಯ ವರಪ್ರಸಾದದಿಂದ ಕಾಶೀರಾಜನ ಪರಂಪರೆಯಲ್ಲಿ ಜನ್ಮತಾಳಿದ ವಿಚಾರಧಾರೆಗಳನ್ನು ಮಂಡಿಸಿದ್ದಾರೆ. " ಮುದಿತನ, ರೋಗರುಜಿನ, ಮರಣಗಳನ್ನು ನಿವಾರಿಸಿದ ಧನ್ವಂತರಿಯಾದ ನಾನು 'ಶಲ್ಯ ಚಿಕಿತ್ಸೆ,' ಪ್ರಧಾನವಾದ ಸಿದ್ಧಾಂತಗಳನ್ನೂ, ಪರಿಕರಗಳನ್ನೂ, ಹಾಗೂ ವಿಶೇಷ ಮಾಹಿತಿಗಳನ್ನು ಉಪದೇಶಕೊಡಲು, ಪುನಃ ಕಾಶೀರಾಜನ ಮಗನಾಗಿಜನಿಸಿ, ಈ ಲೋಕಕ್ಕೆ ಬಂದಿದ್ದೇನೆ," ಎಂದು ಒಂದುಕಡೆ ಹೇಳಿಕೊಂಡಿದ್ದಾರೆ.
'ಸುಶೃತಸಂಹಿತ'
ಆಚಾರ್ಯ ಸುಶೃತರು 'ಪುನರ್ ನಾಸಾಂಗ ರಚನೆ', 'ಅಂಗೋಸ್ಥಿ', 'ವಿಚ್ಛೇದನ', 'ಗುಲ್ಮೋನ್ಮೂಲನ', ಗರ್ಭಾಶಯದಿಂದ ಮೃತಗರ್ಭದ ಶಿಶುವನ್ನು ಚಿರಂತನವಾಗಿ ಹೊರಗೆ ತೆಗೆಯುವುದು, 'ಮೂತ್ರಾಶಯದಲ್ಲಿ ಅಶ್ಮರಿ', 'ಭಗಂಧರ', 'ರಕ್ತಾರ್ಶಸ್', 'ಅಂತ್ರವೃದ್ಧಿ', ಮುಂತಾದ ರೋಗಗಳ ಮೇಲೆ ನಡೆಸಿದ ಪ್ರಯೋಗ ಮತ್ತು ಶಸ್ತ್ರಚಿಕಿತ್ಸೆ ಗಳನ್ನು ಓದಿ ಅಭ್ಯಸಿಸಿದ ಇಂದಿನ 'ಪಾಶ್ಚಾತ್ಯಶಾಸ್ತ್ರಜ್ಞರು,' ಹೊಗಳಿದ್ದಾರೆ. 'ಪುನರ್ನಾಸಾಂಗ ರಚನೆ', ಎಂದರೆ ಮೂಗಿನ ಆಕಾರವನ್ನು ತಿದ್ದುವುದು. 'ಅಂಗೋಸ್ಥಿ', 'ವಿಚ್ಛೇದನ.' ಮೂಳೆಗಳು ಮತ್ತು ಅಂಗಂಗಗಳನ್ನು ಕತ್ತರಿಸಿ ತೆಗೆಯುವುದು. 'ಗುಲ್ಮೋಸ್ತೂಲನ ಗೆಡ್ಡೆ' ಗಳನ್ನು ತೆಗೆದು ಭಗಂಧರ -ತುಂಬಾ ನೋವನ್ನುಂಟು ಮಾಡುವ ಒಂದು ಕಾಯಿಲೆ. -ರಕ್ತಹಹೊರಬೀಳುವ 'ರಕ್ತಾರ್ಶಸ್ ಮೂಲವ್ಯಧಿ', ನೋವಿನ ಕಾಯಿಲೆ. ಅಂತ್ರವೃದ್ಧಿಗೆ ಇಂಗ್ಲೀಷ್ ನಲ್ಲಿ 'ಹರ್ನಿಯ', ಅಂಗದ ಭಾಗ ಯಾವುದಾದರೂ ಕಾರಣದಿಂದ ತನ್ನ ಸ್ಥಾನದಿಂದ ಆಚೆಗೆ ಚಾಚಿಕೊಂಡಿರುವುದು ಅಂತ್ರವೃದ್ಧಿ. ಭೇಷಜಗ್ರಂಥದಲ್ಲಿ ಸುವೈದ್ಯನು, ಭೆಷಜಕುಷಲನಾಗಿ, ಮಿತ್ರನಾಗಿ, ಸುಶೃಶನಂತೆ ಸುಶಿಕ್ಷಿತನಾಗಿ ಇರಬೇಕೆಂದು ಹೊಗಳಿದ್ದಾನೆ. 'ಭೈಷಜವಿದ್ಯಯ ಪರಮಾಚಾರ್ಯ' ರೆಂದು ಹೆಸರಾಗಿದ್ದವರೆಂದು, ಚೀನದ ವಿಜ್ಞಾನಿ, 'ತುಚ್ಛಿ,' ಯವರು ತಮ್ಮ ಗ್ರಂಥವೊಂದರಲ್ಲಿ ತಿಳಿಸಿದ್ದಾರೆ.
ಅಂದು ಉಪಯೋಗಿಸುತ್ತಿದ್ದ, ಯಂತ್ರಗಳು ಶಸ್ತ್ರಗಳು
ತುಕ್ಕು ಹಿಡಿಯದಂತಹ, ಸುವರ್ಣಾವಿ ಪಂಚ ಲೋಹಗಳಿಂದ ನಿರ್ಮಾಣವಾದ ಯಂತ್ರಗಳು, ಬಳಕೆಯಲ್ಲಿದ್ದವು. ಬಿದಿರು, ದಾರ. ಕೊಂಬು, ನರಗಳು, ಕಡೆಗೆ, ಹುಲ್ಲು [ದರ್ಭೆ], ಕತ್ತರಿಸುವುದಕ್ಕೆ, ಕೊಯ್ಯುವುದಕ್ಕೆ, ೨೦ ಬಗೆಯ, ಶಸ್ತ್ರಗಳ ಉಪಯೊಗ ; ಇವುಗಳಲ್ಲಿ 'ಮಂಡಲಾಗ್ರ', 'ಕರಪತ್ರ', 'ವೃದ್ಧಿಪತ್ರ', 'ನಖಶಸ್ತ್ರ', 'ಮುದ್ರಿಕ', 'ಉತ್ಪಲಪತ್ರಿಕಾ', 'ಅರ್ಧಧರಾಸೂಚಿ', 'ಕಶಪತ್ರ', ಮುಂತಾದವು
Comments
ಉ: ಭಾರತೀಯ ವೈದ್ಯರಂಗದ ಪಿತಾಮಹ "ಸುಶೃತ"
In reply to ಉ: ಭಾರತೀಯ ವೈದ್ಯರಂಗದ ಪಿತಾಮಹ "ಸುಶೃತ" by Dr Pannag kamat
ಉ: ಭಾರತೀಯ ವೈದ್ಯರಂಗದ ಪಿತಾಮಹ "ಸುಶೃತ"
ಧನ್ಯವಾದಗಳು...ನಿಮ್ಮ ಪ್ರತಿಕ್ರಿಯೆಯಿಂದ ತುಂಬಾ ಸಂತೋಷವಾಯಿತು...