ವೈರಾಗ್ಯ (ಶ್ರೀ ನರಸಿಂಹ-75)

ವೈರಾಗ್ಯ (ಶ್ರೀ ನರಸಿಂಹ-75)

ಸಾವ  ಕಂಡಾಗಲಷ್ಟೆ ಏಳುವುದೆಮ್ಮ ಮನದಿ ವೈರಾಗ್ಯ

ಮರು ಕ್ಷಣವೆ ಮರೆತದ ಬಯಸುವೆವು  ಭೋಗ, ಭಾಗ್ಯ

ಮನಕಿದ್ದರೂ ಶಾಶ್ವತವಲ್ಲ  ಜಗದಲೆಲ್ಲವೆಂಬುದರರಿವು

ಮಾಯೆಗೊಳಗಾಗಿ ಪಡೆಯಲಿಚ್ಚಿಪುದೆಲ್ಲವನು ಮನವು

 

ಹಣ,ಹೆಣ್ಣಿನಿಂದಲೇ ಸಿಗುವುದೆಲ್ಲ ಸುಖ ಎಂದೆಣಿಸದಿರು

ದುಃಖ, ಕಷ್ಟಗಳನು ಜೊತೆ ತರುವುದವು ಮರೆಯದಿರು

ವ್ಯಾಮೋಹವಿರಿಸದಿರು ಸತಿ, ಸುತ, ಸಖರುಗಳೊಳಗೆ

ಎಲ್ಲರೊಡನಿದ್ದು ನೀ ಬೆಳಸು ವೈರಾಗ್ಯ ಮನಸಿನೊಳಗೆ

 

ಸುಖವಿರಲಿ, ದುಃಖ ಬರಲಿ ಸಮಸ್ಥಿತಿಯಲಿರಿಸು ಮತಿಯನು

ಶ್ರೀ ನರಸಿಂಹನ ಚರಣದಿ ಇರಿಸು ಅನವರತ ನೀ ಮನಸನು

Rating
No votes yet

Comments

Submitted by makara Sun, 12/29/2013 - 13:35

ನಮ್ಮದು ಕೆಲವೊಮ್ಮೆ ಸ್ಮಶಾನ ವೈರಾಗ್ಯ ಮತ್ತೆ ಕೆಲವೊಮ್ಮೆ ಪ್ರಸವ ವೈರಾಗ್ಯ. ಮಗದೊಮ್ಮೆ ಅಭಾವ ವೈರಾಗ್ಯ ಅವೇನಿದ್ದರೂ ತಾತ್ಕಾಲಿಕ ಮಾತ್ರ, ಮತ್ತೆ ಅವನ್ನು ಮರೆತು ಮತ್ತೆ ಮಾಯೆಯೊಳಗೆ ಸಿಲುಕುತ್ತೇವೆ ಅದೇ ವಿಸ್ಮಯವೋ, ಚೋದ್ಯವೋ ಒಂದೂ ಅರ್ಥವಾಗದು. ಈ ಹಿನ್ನಲೆಯಲ್ಲಿ ಒಳ್ಳೆಯ ಕವನ ಸತೀಶರೆ. ನಿಮ್ಮ ಕವನ ಎಲ್ಲಾ ರೀತಿಯ ತಾತ್ಕಾಲಿಕ ವೈರಾಗ್ಯಗಳನ್ನು ಬದಿಗಿಟ್ಟು ಸ್ವಾಭಾವಿಕ ವೈರಾಗ್ಯದ ಬಗೆಗೆ ಆಲೋಚಿಸುವಂತೆ ಮಾಡುತ್ತದೆ.