ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ
ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ
ಮಡಕೆಯ ಚೂರು
ಒಡೆದ ಮಡಕೆಯ
ಚೂರಲ್ಲಿ,
ಆಡುತ್ತಿಹರು
ಕೆಲ ಚಿಣ್ಣರು,
ಮಡಕೆಯನ್ನು ಒಡೆದು
ಆಡುತ್ತಿಹರು
ಕೆಲರು,
ಅದೇ ಕೊರಗು,
ಆಡುತ್ತಿರುವವರು
ಚಿಣ್ಣರಲ್ಲ!
ನೆರಳು
ಬದುಕಲ್ಲಿ
ಒಂದೊಮ್ಮೆ
ಕತ್ತಲಾವರಿಸೆ,
ನೆರಳೂ
ಕೂಡ
ಹಿಂಬಾಲಿಸದು
ಉರಿ
ಸುಕೀರ್ತಿ
ಸಂಪತ್ತು,
ವರಿಸುತ್ತ
ಬರಲು,
ಹೊತ್ತಿ
ಉರಿವವು
ಹತ್ತಿರದ
ಮನಗಳು!
Rating
Comments
ಉ: ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಅವರಿಗೆ ನಮಸ್ಕಾರಗಳು,
ನಿಮ್ಮ ಚುಟುಕು "ನೆರಳು" ನನಗೆ ತುಂಬಾ ಹಿಡಿಸಿತು. ಚುಟುಕು 6 ಪದಗಳದಾಗಿದ್ದರೂ ಅದರ ಅರ್ಥ ತುಂಬಾ ಆಳವಾದದ್ದಾಗಿದೆ.
ಧನ್ಯವಾದಗಳು.
In reply to ಉ: ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ by ravindra n angadi
ಉ: ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ
ravendra avarige, tamma mechchugege dhanyavadagalu.
ಉ: ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು.
ಮಡಕೆಯ ಚೂರು, ನೆರಳು ಮತ್ತು ಉರಿ ಸರಳ ನಿರೂಪಣೆಯಲ್ಲಿ ಗಹನ ಅರ್ಥ ಹೊಮ್ಮಿಸಿದ ಚುಟುಕುಗಳು . ಒಡೆದ ಮಡಕೆಯ ಚೂರಲ್ಲಿ ಚಿಣ್ಣರು ಆಡುತ್ತಿದ್ದರೆ ಮಡಕೆಯ ಚೂರು ಒಡೆದು ಆಡುತರುವವರು ಯಾರು ವರ್ತಮಾನದ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಚುಟುಕು. ಒಮ್ಮೆ ಬದುಕಲ್ಲಿ ಕತ್ತರರಲು ಆವರಿಸಿದರೆ ನೆರಳು ಕೂಡ ನಮ್ಮನ್ನು ಹಿಂಬಾಲಿಸದು ಇದೊಂದು ಜೀವನದ ಕಟು ವಾಸ್ತವದ ನಿರೂಪಣೆ. ಐಹಿಕ ಸಂಪತ್ತು ಮತ್ತು ಸುಖ ಸಂಪತ್ತನ್ನು ಬೆಂಬತ್ತಿ ಹೋದರೆ ಹತ್ತಿರದ ಮನಗಳು ಉರಿವವು, ಒಂದಕ್ಕಿಂತ ಒಂದು ಮಿಗಿಲಾದ ಚುಟುಕುಗಳು, ಧನ್ಯವಾದಗಳು.
In reply to ಉ: ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಪಾಟೀಲರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಚುಟುಕು ಕವನಗಳ ಮೆಚ್ಚುಗೆಗೆ ಧನ್ಯವಾದಗಳು
ಉ: ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಅವರಿಗೆ,
ಹೊಸ ವರ್ಷದ ಹಾರ್ದಿಕ ಶುಭಾಷಯಗಳು.
ಧನ್ಯವಾದಗಳು.
In reply to ಉ: ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ by ravindra n angadi
ಉ: ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ರವೀಂದ್ರ ರವರೇ, ತಮಗೂ ಹೊಸ ವರುಷದ ಹಾರ್ಧಿಕ ಶುಭಾಶಯಗಳು ಸರ್. ಧನ್ಯವಾದಗಳೊಂದಿಗೆ,- ಲಕ್ಷ್ಮೀಕಾಂತ ಇಟ್ನಾಳ