"ಈಡೇರಿಸುವಿರಾ ನನ್ನಾಸ ?...
ನಮ್ಮ ಪ್ರೀತಿಯ ಹಕ್ಕಿಗಳೆ ಮರೆತುಬಿಟ್ಟಿರಾ ನಮ್ಮನು?
ನಿಮ್ಮನ್ನು ನೋಡದೆ ಎಷ್ತೂಂದು ದಿನವಾಯಿತು ,
ಪಕ್ಷಿಗಳೆ ಎಲ್ಲಿರುವಿರಿ? ಹೇಗಿರುವಿರಿ ಈಗ ನಿವು,
ನಮ್ಮ ಮನೆಯ ಸುತ್ತಲೂ ಸ್ವಚ್ಛಂದವಾಗಿ ಹಾರಾಡುತ್ತಿದ್ದಿರಿ.
ಈಗ ನಮ್ಮನು ಬಿಟ್ಟು ಎಲ್ಲಿಗೆ ಹೋದಿರಿ,
ನಮ್ಮ ಮಕ್ಕಳಿಗೂ ನಿಮ್ಮನು ತೋರಿಸುವ ಮನದಾಸೆ
ನಿಮ್ಮ ದ್ವನಿಯನು,ನಲಿವನ್ನು ,ಒಗ್ಗಟನ್ನು ತೋರಿಸುವ ಆಶೆ ,
ಮುನಿಸಿರುವಿರಾ ಈಗ ನಮ್ಮ ಮೇಲೆ,
ನಮ್ಮಿಂದ ಬಹಳಷ್ಟುತೋಂದರೆಯಾಗಿದೆ ನಿಜ,
ಅರಿವಾಗಿದೆ ನಮಗೆ ಈಗ ಆ ಸತ್ಯ,
ನಿಮ್ಮನು ಎಲ್ಲೆಂದು ಹುಡುಕಲಿ ಈಗ?
ನಿಮ್ಮನು ಹುಡುಕುತ್ತಾ ತಿರುಗಾಡಿ ಬೆಂದೆ,
ನಿಮ್ಮನ್ನೂಮ್ಮೆ ಕಂಡು ಕ್ಷೇಮ ಕೇಳೋಣವೆಂದೆ,
ಹಕ್ಕಿಗಳೆ ಮತ್ತೆ ಮರಳಿ ಬರುವಿರಾ ನನ್ನೂರಿಗೆ,
ಈ ನನ್ನ ಮನದಾಸಿಯನ್ನು ಈಡೇರಿಸುವಿರಾ ?
ಪ್ರೀತಿಯ ಹಕ್ಕಿಗಳೇ..................
Rating
Comments
ಉ: "ಈಡೇರಿಸುವಿರಾ ನನ್ನಾಸ ?...
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
' ಈಡೇರಿಸುವಿರಾ ನನ್ನಾಸೆ ' ಬಾನಾಡಿಗಳ ಕುರಿತ ಚಿಂತನೆಗೆ ಹಚ್ಚುವಂತಹ ಕವನ, ಇಂದಿನ ಆಧುನಿಕ ಬದುಕಿನ ದಾವಂತದಲ್ಲಿರುವ ನಮಗೆ ಪಕ್ಷಿಗಳ ಇರುವಿಕೆ ಕುರಿತು ಯೋಚನೆಯಿಲ್ಲ, ಭೂಮಿ ನಮ್ಮದು ಮಾತ್ರ ಎಂದು ಅದರ ದುರುಪಯೋಗ ಮಾಡುತ್ತಿದ್ದೇವೆ, ಪ್ರಕೃತಿ ಮತ್ತು ಪರಿಸರದ ಬಗೆಗೆ ಯೋಚನೆಗೆ ಹಚ್ಚುವ ಸತ್ವಪೂರ್ಣ ಕವನ ನೀಡಿದ್ದಿರಿ ಧನ್ಯವಾದಗಳು.
In reply to ಉ: "ಈಡೇರಿಸುವಿರಾ ನನ್ನಾಸ ?... by H A Patil
ಉ: "ಈಡೇರಿಸುವಿರಾ ನನ್ನಾಸ ?...
ನಮಸ್ಕಾರ ಸರ್
ನಿಮ್ಮ ಅಬಿನಂದನೆಗೆ ನನ್ನ ಧನ್ಯವಾದಗಳು
ನನ್ನ ಕವನದಲ್ಲಿ ಎನಾದರು ತಪ್ಪು ಕಂಡು ಬಂದರೆ ದಯವಿಟ್ಟು ತಿಳಿಸಿ ಸರ್ ಹಿರಿಯರ ಮಾರ್ಗದರ್ಸನ ನಮ್ಮಂತವರಿಗೆ ಬೇಕು..
In reply to ಉ: "ಈಡೇರಿಸುವಿರಾ ನನ್ನಾಸ ?... by ravindra n angadi
ಉ: "ಈಡೇರಿಸುವಿರಾ ನನ್ನಾಸ ?...
ರವೀಂದ್ರ್ ಎನ್ ಅಂಗಡಿ ಯವರಿಗೆ ವಂದನೆಗಳು
ತಮ್ಮ ಮರು ಪ್ರತಿಕ್ರಿಯೆ ನೋಡಿದೆ, ನಿಮಗೆ ಯಾವುದೆ ಶಂಕೆ ಕೀಳಿರಿಮೆಗಳು ಬೇಡ, ನಿಮ್ಮ ಕವನಗಳು ಚೆನ್ನಾಗಿ ಮೂಡಿ ಬರುತ್ತಿವೆ ಬರೆಯುತ್ತ ಹೊಗಿ, ಬರೆಯುತ್ತ ಬರೆಯುತ್ತ ಹೊದಂತೆ ಅನುಭವದ ದಿಗಂತ ವಿಸ್ತರಿಸುತ್ತ ನಿಮ್ಮದೆ ಆಧ ಶೈಲಿ ಸಿದ್ಧಿಸುತ್ತ ಹೋಗುತ್ತದೆ, ಮುಂಗಡವಾಗಿ ನಿಮಗೆ ಮತ್ತು ಎಲ್ಲ ಸಂಪದಿಗರಿಗೂ ಹೊಸ ವರ್ಷದ ಶುಭಾಶಯಗಳು.