ಹೀಗೊಂದು ಕತೆ

ಹೀಗೊಂದು ಕತೆ

ಚಿತ್ರ

 

ನೋಡಿ ಹೀಗೆ ಒಂದು ಸುಂದರ ಕತೆ ಓದಿದೆ. 

ಅಗಸನ ಕತ್ತೆಯೊಂದು ಹಾಳು ಬಾವಿಗೆ ಬಿದ್ದುಬಿಟ್ಟಿತು. ಅಗಸ ನೋಡಿದ. ಮೇಲೆ ಎತ್ತಲು ಪ್ರಯತ್ನಪಟ್ಟು ಕಡೆಗೊಮ್ಮೆ ಕೈಚೆಲ್ಲಿ ಯೋಚಿಸಿದ, 
ಕತ್ತೆಗೆ ಹೇಗೂ ವಯಸ್ಸಾಗಿ ಹೋಗಿದೆ ಅದರಿಂದ ತನಗೇನು ಉಪಯೋಗವಿಲ್ಲ. ಅದನ್ನು ಕಷ್ಟಬಿದ್ದು ಮೇಲೆ ತಂದರೂ ಸಹ ತನಗೇನು ಲಾಭವಿಲ್ಲ ಅನ್ನಿಸಿತು. 
ಅಲ್ಲದೆ ಅಂಗಳದಲ್ಲಿದ್ದ ಬಾವಿಯನ್ನು ಮುಚ್ಚಿಸಬೇಕಿತ್ತು.ಹಾಗೆ ಮಣ್ಣು ಹಾಕಿ ಮುಚ್ಚಿಬಿಟ್ಟರೆ ಎರಡೂ ಕೆಲಸವೂ ಆಯಿತಲ್ಲವೆ.
ಸುತ್ತಮುತ್ತಲ ಸ್ನೇಹಿತರನ್ನು ಕರೆದ. ಅವರೆಲ್ಲ ಸೇರಿ ಮಣ್ಣನ್ನು, ಕಸವನ್ನು ತಂದು ಬಾವಿ ಮುಚ್ಚಲು ಪ್ರಾರಂಭಿಸಿದರು. 

ಕತ್ತೆಗೊಮ್ಮೆ ಹೊಳೆಯಿತು ಅವರು ಏನು ಮಾಡುತ್ತಿದ್ದಾರೆ ಎಂದು ಗೊತ್ತಯಿತು, ಗಾಭರಿ. 
ಸ್ವಲ್ಪ ಕಾಲ ಮಣ್ಣು ತುಂಬಿದ ಅಗಸ ಬಾವಿಯಲ್ಲಿ ಬಗ್ಗಿ ನೋಡಿದ ಅವನಿಗೊಂದು ಆಶ್ಚರ್ಯ ಕಾದಿತ್ತು,

ಪ್ರತಿ ಮಂಕರಿ ಮಣ್ಣು ತನ್ನ ಮೇಲೆ ಬಿದ್ದಂತೆ ಕತ್ತೆ ಒಮ್ಮೆ ಬೆನ್ನನ್ನು ಒದರುತ್ತಿತ್ತು,

 ಮತ್ತು ಮಣ್ಣು ಕೆಳಗೆ ಬಿದ್ದಂತೆ ಅದು ಒಂದೊಂದು ಮೆಟ್ಟಿಲು ಮೇಲೆ ಬರುತ್ತಿತ್ತು !!!!! 

ನೋಡು ನೋಡುತ್ತಿರುವಂತೆ, ಕಸ ಮಣ್ಣು ಬಾವಿಯನ್ನು ತುಂಬುತ್ತಿರುವಂತೆ ಕತ್ತೆ ಒಂದೊಂದೆ ಹೆಜ್ಜೆ ಮೇಲೆ ಮೇಲೆ ಬಂದು ಕಡೆಗೊಮ್ಮೆ ಮೇಲ್ಬಾಗ ತಲುಪಿದಂತೆ ,

ಸಂತಸದಿಂದ ಕೂಗುತ್ತ ಅಲ್ಲಿಂದ ಓಡಿಹೋಯಿತು. 

ಗೆಳೆಯರೆ. ನಮ್ಮ ಜೀವನವೂ ಅಷ್ಟೆ ಅಲ್ಲವೆ,

ಕಷ್ಟು ದುಃಖಗಳು ನಮ್ಮ ಮೇಲೆ ಬೀಳುತ್ತಲೆ ಇದ್ದು ನಮ್ಮನ್ನು ಮುಗಿಸಲು ಹೊಂಚು ಹಾಕುತ್ತವೆ.

ಸಮಾಧಾನದಿಂದ ಚಿಂತಿಸಿ ಕಾರ್ಯಪ್ರವೃತ್ತರಾದರೆ ಅದೇ ಕಷ್ಟ ದುಃಖಗಳೆ ನಮ್ಮನ್ನು ಮೇಲೆ ಹತ್ತಿಸುವ ಮೆಟ್ಟಲಾಗಬಲ್ಲದು. 

ನಾಳೆ ಕಳೆದರೆ ಹೊಸವರ್ಷ ನಿಮ್ಮ ಮುಂದಿದೆ.

2014 ಎಲ್ಲರಿಗೂ ಶುಭ ತರಲಿ.  

ಹಾರೈಕೆಗಳೊಡನೆ.

ಇಂತಿ ಪ್ರೀತಿಯಿಂದ 
ನಿಮ್ಮವ 
ಪಾರ್ಥಸಾರಥಿ 
 

Rating
No votes yet

Comments

Submitted by H A Patil Mon, 12/30/2013 - 20:12

ಪಾರ್ಥ ಸಾರಥಿ ಯವರಿಗೆ ವಂದನೆಗಳು
ಕಥೆ ಚೆನ್ನಾಗಿ ಬಂದಿದೆ. ಕತ್ತೆಯಂತಹ ಕತ್ತೆಯೂ ಅದನ್ನು ಮುಗಿಸಲು ಅದರ ಯಜಮಾನ ಹೂಡಿದ ಯೋಜನೆಯನ್ನೆ ತನ್ನ ಉಳಿವಿಗಾಗಿ ಬಳಸಿಕೊಳ್ಳುವ ಬಗೆ ಚೆನ್ನಾಗಿ ಮೂಡಿ ಬಂದಿದೆ. ಕತ್ತೆಯ ಬುದ್ಧಿವಂತಿಕೆ ನಮಗೊಂದು ಮಾದರಿ. ಉತ್ತಮ ನೀತಿ ಕಥೆ ನೀಡಿದ್ದಕ್ಕೆ ಧನ್ಯವಾದ ಗಳು.

Submitted by kavinagaraj Tue, 12/31/2013 - 10:22

ಯಾರನ್ನೂ ಕತ್ತೆ ಎಂದು ಹಂಗಿಸಬಾರದೆಂದು ಈ ಕತ್ತೆಯ ಕತೆಯ ಸಾರ! ಚೆನ್ನಾಗಿದೆ, ಪಾರ್ಥಸಾರಥಿಯವರೇ. ನಿಮಗೂ ಶುಭಾಶಯಗಳು.

Submitted by ravindra n angadi Wed, 01/01/2014 - 15:12

ಪಾರ್ಥಸಾರಥಿಯವರಿಗೆ ನಮಸ್ಕಾರಗಳು,
ನೀವು ಬರೆದ ಕಥೆ ಚೆನ್ನಾಗಿ ಮೂಡಿಬಂದಿದೆ. ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.
ಧನ್ಯವಾದಗಳು.

Submitted by partha1059 Wed, 01/01/2014 - 18:35

ಪ್ರತಿಕ್ರಿಯಿಸಿದ‌ ಎಲ್ಲ ಗೆಳೆಯರಿಗೂ ವಂದನೆಗಳು ಹಾಗು ಮತ್ತೊಮ್ಮೆ ಹೊಸವರ್ಶ್ಹದ‌ ಶುಭಾಶಯಗಳು