ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ದೀಪದ ಬುಡಕೆ
ಕತ್ತಲೆಯಿದ್ದರೂ,
ಕತ್ತಲೆ ಕೊಡುವ
ದೀಪ ದೊರೆಯದು!
ಬಡತನದ ಸಿಟ್ಟಿನ ಜ್ವಾಲೆ,
ದಮನದ ಹೊಟ್ಟೆಯುರಿ,
ಕ್ರಾಂತಿಯ ಕಿಡಿ,
ಈ
ಜ್ವಾಲೆ ಉರಿ ಕಿಡಿಗಳೇ
ಬೆಳಕಿನ ಖಣಿ
ಯುಗದಗ್ಗಿಷ್ಟಿಕೆ
ದಾರಿ ದೀವಿಗೆ,
ಕಲಕಿದ ಮನಕೆ
ಮನು ಕುಲಕೆ!
ಜಗಕೆ ಬೆಳಕು
ನೀಡುವರೆಲ್ಲ,
ಬೆಳೆಯುವುದು
ಕತ್ತಲೆಯಲ್ಲೇ!
ತಲೆಯಿಟ್ಟು
ಮಲಗುವುದು
ಬೆಳಕು,
ಕತ್ತಲೆಯಲ್ಲಿ,
ಹುಟ್ಟುವುದು
ಬೆಳಕು,
ಕತ್ತಲೆಯಲ್ಲಿ!
Rating
Comments
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
'ಹುಟ್ಟುವುದು ಬೆಳಕು ಕತ್ತಲೆ ಯಲ್ಲಿ' ಒಂದು ಸುಂದರ ಕವನ, ಕತ್ತಲು ಬೆಳಕುಗಳ ಸಂಯೋಜನೆ ಅರ್ಥಗರ್ಭಿತವಾಗಿ ಪಡಿ ಮೂಡಿದೆ, ತಮ್ಮ ಕಾವ್ಯ ದಾರೆ ನಿರಂತರವಾಗಿ ಸಾಗಲಿ, ಹೊಸ ವರ್ಷದ ಶುಭಾಶಯಗಳೊಂದಿಗೆ ಹೃತ್ಪೂರ್ವಕ ಧನ್ಯವಾದಗಳು.
In reply to ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
:))
In reply to ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ by kavinagaraj
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಕವಿ ನಾ ಸರ್, ತಮ್ಮ ಸಂಜ್ಞಾಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು. ಹಾಗೆಯೇ ಹೊಸ ವರುಷದ ಹಾರ್ಧಿಕ ಶುಭಾಶಯಗಳು. ಹೊಸ ವರುಷದ ಮೊದಲಿಗೇ ಬಿಗ್ ಬ್ಯಾಂಗ್ ಮೂಲಕ ಅತ್ಯುತ್ತಮ ಲೇಖನ ಕೊಟ್ಟಿದ್ದಕ್ಕೆ ಮತ್ತೊಮ್ಮೆ ಅಭಿನಂದನೆಗಳು ಮತ್ತೆ ಮತ್ತೆ ಸಂಪದಿಗರು ತಮಗೆ ವಂದನೆ ಸಲ್ಲಿಸಲೇಬೇಕು.ಅದಕ್ಕಾಗಿಯೇ ನನ್ನ ಮತ್ತೊಂದು ಸಲಾಮ್ ಸರ್.
In reply to ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ by H A Patil
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಪಾಟೀಲ್ ಜಿ, ತಮಗೂ ಹೊಸ ವರುಷದ ಹೃತ್ಪೂರ್ವಕ ಶುಭಾಶಯಗಳು ಸರ್. ತಮ್ಮ ಮೆಚ್ಚುಗೆಗೆ ಅನಂತ ವಂದನೆಗಳು.
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಹೌದು ಹುಟ್ಟುವುದು ಬೆಳಕು ಕತ್ತಲೆಯಲ್ಲಿ !
ಕರಗುವುದು ಕತ್ತಲೆ ಬೆಳಕಿನಲ್ಲಿ !
In reply to ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ by partha1059
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ಪಾರ್ಥರವರೇ, ತಮ್ಮ ಕಾವ್ಯಪೂರ್ಣ ಪ್ರತಿಕ್ರಿಯೆಗೆ ವಂದನೆಗಳು. ಬೆಳಕಿನಲ್ಲಿ ಅಸ್ತಿತ್ವ ಹೀನವಾಗುವ ಕತ್ತಲೆ, ಬೆಳಕು ಮರೆಯಾದೊಡನೆ, ಕೆನೆಗಟ್ಟುವ ನಿಸರ್ಗದೊಳಪದರು, ಬೆಳಕಲ್ಲಿ ಅದು ಇದ್ದರು ಬರಿಗಣ್ಣಿಗೆ ಕಾಣದೇನೊ....ಧನ್ಯವಾದಗಳು
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರಿಗೆ ನಮಸ್ಕಾರ. ಕತ್ತಲನ್ನು ತೊಡೆದು ಬೆಳಕಾಗಿಸುವ ಬೆಳಕಿನ ಹುಟ್ಟೆ ಕತ್ತಲಿನ ಮೂಲದಿಂದೆಂಬ ಕಲ್ಪನೆ ಅದ್ಭುತವಾದಷ್ಟೆ ಅಚ್ಚರಿ ತರುವಂತದ್ದು. ಬಹುಶಃ ನೈಸರ್ಗಿಕ ವೈಶಿಷ್ಟ್ಯಗಳ ಆಳಕ್ಕಿಳಿದು ನೋಡಿದರೆ ಮೇಲೆ ದ್ವಂದ್ವವಾಗಿ ಕಾಡುವ ನೋಟಗಳೆಲ್ಲ ಮೂಲದ ಅದ್ವೈತದಲಿ ಹುಟ್ಟಿ ಕವಲಾದ ಕೊಂಬೆಗಳೆಂಬ ಭಾವ ಮೂಡುತ್ತದೆ. ಆ ಭಾವವನ್ನು ಹಿಡಿದಿಡುವ ಕವನ ಸೊಗಸಾಗಿ ಮೂಡಿದೆ. ತಮಗೆ ಧನ್ಯವಾದಗಳು ಮತ್ತು ಹೊಸ ವರ್ಷದ ಶುಭ ಹಾರೈಕೆಗಳೂ ಸಹ :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ by nageshamysore
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ನಾಗೇಶ್ ಜಿ, ಲಕ್ಷ್ಮೀಕಾಂತ ಇಟ್ನಾಳ ರ ಹೊಸ ವರುಷದ ಹರುಷದ ಶುಭಾಶಯಗಳು. ಎಷ್ಟೊಂದು ಚಂದದ ಪ್ರತಿಕ್ರಿಯೆ ನಾಗೇಶ್ ಜಿ,. ಇದು ಬಹುಶ: ತಮಗೇ ಸಾಧ್ಯ. 'ಕತ್ತಲನ್ನು ತೊಡೆದು, ಬೆಳಕಾಗಿಸುವ ಬೆಳಕು, ಹುಟ್ಟುವುದೇ, ಕತ್ತಲಿನ ಮೂಲದಿಂದ, ಎಂಬ ಕಲ್ಪನೆ ಅದ್ಭುತವಾದದ್ದಷ್ಟೆ ಅಲ್ಲ, ಅಚ್ಚರಿ ತರುವಂತಹುದು ಕೂಡ, ಬಹುಶಃ ನೈಸರ್ಗಿಕ ವೈಶಿಷ್ಟ್ಯಗಳ ಆಳಕ್ಕಿಳಿದು ನೋಡಿದರೆ ಮೇಲೆ ದ್ವಂದ್ವವಾಗಿ ಕಾಡುವ ನೋಟಗಳೆಲ್ಲ ಮೂಲದ ಅದ್ವೈತದಲ್ಲಿ ಹುಟ್ಟಿ ಕವಲಾದ ಕೊಂಬೆಗಳೆಂಬ ಭಾವ ಮೂಡುತ್ತದೆ.' ಸುಂದರ ಪ್ರತಿಕ್ರಿಯೆ ನೀಡಿದ ತಮಗೆ ಹೃತ್ಪೂರ್ವಕ ವಂದನೆಗಳು. ಹಾಗೆಯೇ ಮತ್ತೊಮ್ಮೆ ಹೊಸ ವರುಷದ ಶುಭಾಶಯಗಳು ನಾಗೇಶ್ ಜಿ.
In reply to ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ by lpitnal
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
*****
In reply to ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ by sri.ja.huddar
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ಹುದ್ದಾರರವರೇ, ತಮ್ಮ ಪ್ರತಿಕ್ರಿಯೆ?ಗೆ ವಂದನೆಗಳು
In reply to ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ by lpitnal
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಇಲ್ಲೊಂದು ಜೋಕ್
ತಿಮ್ಮ ಗೆಳೆಯನಿಗೆ ಹೇಳಿದ, ಕುಶಿಯಿಂದ
'ಅವನ ಪಾಸ್ ವರ್ಡ್ ನನಗೆ ಗೊತ್ತಾಯಿತು"
"ಹೌದೆ ? ಏನು ?" ಕುತೂಹಲದಿಂದ ಕೇಳಿದ ಗೆಳೆಯ.
ತಿಮ್ಮನೆಂದ
"ಐದು ಎಂಟು ಸ್ಟಾರ್ ಗಳು ಅಷ್ಟೇ"
In reply to ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ by partha1059
ಉ: ಹುಟ್ಟುವುದು ಬೆಳಕು, ಕತ್ತಲೆಯಲ್ಲಿ! - ಲಕ್ಷ್ಮೀಕಾಂತ ಇಟ್ನಾಳ
ಹ್ಹ್ಹ ಹ್ಹ, ಐದು ಎಂಟು ಸ್ಟಾರ್ ಗಳು, ಧನ್ಯವಾದ ಸರ್ ಪಾರ್ಥ ರವರೇ,.