' ಅರುಣೋದಯ ಕಿರಣ '
ಚಿತ್ರ
ಹಳೆಯ ಮತ್ತು ಹೊಸ ವರ್ಷಗಳ
ಸಂದಿ ಕಾಲದಿ ನಿಂತು ಹೊಸ
ಪಲ್ಲವಿಯ ಹಾಡು ಓ! ನವ್ಯ ಕವಿ!
ಎಂದಿಗೂ ಮುಗಿಯದ
ಅಮರ ಕಾವ್ಯದ ಹಾಡು ತುಂಬಲಿ
ಅಂತರಂಗ ಮೈಮನಗಳ ತುಂಬೆಲ್ಲ
ಮೈಮರೆತು ಮಲಗಿರುವ
ಸೋಮಾರಿಗಳನೆಬ್ಬಿಸು ಬದುಕಲಿ
ಸೋತವರ ಹೃದಯವರಳಿಸು
ದಣಿದ ಜೀವಿಗಳಿಗೆ ಚೈತನ್ಯ ತುಂಬು
ಕತ್ತಲಿರುವವರೆಡೆಗೆ
ಬೆಳಕಿನ ಕಿರಣಗಳ ಬೀರು
ಬಂದಿದೆ ನವ ಮನ್ವಂತರದ
ಅಮರ ಕಾವ್ಯ ಹಬ್ಬಿ ಹರಡಲಿ
ಜೀವಿಗಳ ಅಂತರಂಗದಲೆಲ್ಲ
ಎಂಥ ಮಧುರವೀ
ಹೃದಯ ತಣಿಸುವ ಹಾಡು
ಹರಡಿ ಹೊಮ್ಮಲಿ ಜಗದ ತುಂಬೆಲ್ಲ
ಹೊಸ ವರ್ಷದ ನವೀನ
ಕನಸುಗಳ ಅರುಣೋದಯ ಕಿರಣ’
***
Rating
Comments
ಉ: ' ಅರುಣೋದಯ ಕಿರಣ '
ಕವನದಮೂಲಕ ಹಾರೈಸಿರುವ ತಮ್ಮ ಹರಕೆ ನಿಜವಾಗಲಿ
ಹೊಸ ವರ್ಷ ಎಲ್ಲರಿಗೂ ಸಂತಸ ತರಲಿ
ತಮಗೆ ಹಾಗು ಸಮಸ್ತ ಸಂಪದಿಗರಿಗೆ ಹೊಸವರ್ಷದ ಶುಭಾಶಯಗಳು
In reply to ಉ: ' ಅರುಣೋದಯ ಕಿರಣ ' by partha1059
ಉ: ' ಅರುಣೋದಯ ಕಿರಣ '
ಪಾರ್ಥ ಸಾರಥಿಯವರಿಗೆ ವಂದನೆಗಳು
ತಮಗೂ ಮತ್ತು ಎಲ್ಲ ಓದುಗರಿಗೂ ಹೊಸ ವರ್ಷದ ಶುಭಾಶಯಗಳು;
ಉ: ' ಅರುಣೋದಯ ಕಿರಣ '
ಪಾಟೀಲರಿಗೆ ಹೊಸ ವರ್ಷದ ಶುಭಾಶಯಗಳು.
ಸರ್ವ ಸಮಸ್ತರಿಗೂ ಹೊಸ ವರುಷದ ಶುಭಾಶಯಗಳನ್ನು ಕೋರುತ್ತಾ ಎಲ್ಲರಿಗೂ ಒಳಿತೇ ಆಗಲಿ ಎಂಬ ತಮ್ಮ ಕವನದ ಸದಾಶಯ ಮೆಚ್ಚುಗೆ ಆಯಿತು.
ವಂದನೆಗಳು ....ರಮೇಶ ಕಾಮತ್.
In reply to ಉ: ' ಅರುಣೋದಯ ಕಿರಣ ' by swara kamath
ಉ: ' ಅರುಣೋದಯ ಕಿರಣ '
ರಮೇಶ ಕಾಮತರಿಗೆ ವಂದನೆಗಳು
ಕವನದಲ್ಲಿ ಸದಾಶಯ ಗುರಿತಿಸಿ ಮೆಚ್ಚುಗೆ ಸೂಚಿಸಿದ್ದೀರಿ, ತಮ್ಮ ಎಂದಿನ ನಿರಂತರ ಪ್ರೋತ್ಸಾಹಕ್ಕೆನಾಣು ಋಣಿ. ತಮಗೂ ತಮ್ಮ ಕುಟುಂಬದ ಎಲ್ಲ ಸದಸ್ಯರೀಗೂ ಈ ನವ ವರುಷ ಹರ್ಷೋಲ್ಲಾಸಗಳನ್ನು ತರಲಿ ಎಂಬ ಆಶಯದೊಂದಿಗೆ ಧನ್ಯವಾದಗಳು.;
ಉ: ' ಅರುಣೋದಯ ಕಿರಣ '
ಪಾಟೀಲರಿಗೆ ನಮಸ್ಕಾರಗಳು,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಹೊಸ ವರ್ಷವು ನಿಮಗೆ ಸದಾ ಆನಂದವನ್ನೇ ತರಲಿ.
ಧನ್ಯವಾದಗಳು. :-)
In reply to ಉ: ' ಅರುಣೋದಯ ಕಿರಣ ' by ravindra n angadi
ಉ: ' ಅರುಣೋದಯ ಕಿರಣ '
ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
ಈ ಹೊಸ ವರುಚ ತಮ್ಮ ಕಾವ್ಯ ಚೇತನವನ್ನು ದ್ವಿಗುಣ ಗೊಳಿಸಲಿ ಉತ್ತಮೋತ್ತಮ ಕೃತಿಗಳು ತಮ್ಮ ಲೇಖನಿಯಿಂದ ಹೊರ ಹೊಮ್ಮಲಿ, ಈ ಶುಭ ಸಂಧರ್ಭದಲ್ಲಿ ತಮಗೂ ತಮ್ಮ ಕುಟುಂಬ ವರ್ಗದವರೀಗೂ ಹೊಸ ವರ್ಷದ ಶುಭಾಶಯಗಳು,
ಉ: ' ಅರುಣೋದಯ ಕಿರಣ '
ಹಿರಿಯರಾದ ಪಾಟೀಲಜಿ, ಕವನದ ಆಶಯ ಇಡೀ ಸಮುದಾಯವನ್ನುದ್ದೇಶಿಸಿ, ತಮ್ಮ ಕವಿ ಮನದ ಹಾರೈಕೆಗಳು ಸರಳವಾಗಿ, ಸುಂದರವಾಗಿ ಬಿಚ್ಚಿಕೊಳ್ಳುತ್ತವೆ. ಇನ್ನಾದರೂ ದೀನ, ಬಡವ, ಬಲ್ಲಿದ ರ ಅಂತರ ಕಡಿಮೆಯಾಗಲಿ, ಸಮಾನತೆ, ಸರಳತೆ, ಶಾಂತಿ ನೆಮ್ಮದಿ ಎಲ್ಲರಿಗೂ ಬರಲಿರುವ ದಿನಗಳು ನೀಡಲೆಂದು ನನ್ನದೂ ಈ ಮೂಲಕ ಹಾರೈಕೆ. ಸುಂದರ ಕವನ ಸರ್. ಧನ್ಯವಾದಗಳು.
In reply to ಉ: ' ಅರುಣೋದಯ ಕಿರಣ ' by lpitnal
ಉ: ' ಅರುಣೋದಯ ಕಿರಣ '
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಕವನದ ವಸ್ತುನಿಷ್ಟ ವಿಮರ್ಶೆ ಮತ್ತು ಮೆಚ್ಚುಗೆ ಸಂತಸ ತಂದಿದೆ, ತಮ್ಮ ಆಶಯದಂತೆ ಜಗಕೆ ಶಾಂತಿ ನೆಮ್ಮದಿಯನ್ನು ಈ ವರ್ಷ ತರಲಿ ಎಂಬ ತನ್ನ ಸದಾಶಯಕ್ಕೆ ಧನ್ಯವಾದಗಳು.
ಉ: ' ಅರುಣೋದಯ ಕಿರಣ '
ಶುಭ ಬಯಸುವ ಬಯಕೆ ಹೊತ್ತ ಕವನ! ನಿಮಗೂ ನವವರ್ಷ ಶುಭ ತರಲಿ.
In reply to ಉ: ' ಅರುಣೋದಯ ಕಿರಣ ' by kavinagaraj
ಉ: ' ಅರುಣೋದಯ ಕಿರಣ '
ಕವಿ ನಾಗರಾಜ ರವರಿಗೆ ವಂದನೆಗಳು ಕವನದ ಮುಚ್ಚುಗೆಗೆ ಮತ್ತು ಶುಭ ಹಾರೈಕೆಗೆ ಧನ್ಯವಾದಗಳು.
ಉ: ' ಅರುಣೋದಯ ಕಿರಣ '
ಪಾಟೀಲರಿಗೆ ಹೊಸವರ್ಷದ ಶುಭಾಶಯಗಳು ಮತ್ತು ನಮಸ್ಕಾರ. ಹೊಸವರ್ಷದ ಸ್ವಾಗತವನ್ನು ಮಾಡುವ ಸರಳ ಸುಂದರ ಕವನ ಅರುಣೋದಯ ಕಿರಣ. ನಿಮ್ಮ ಆಶಯದಂತೆ ಬರಿ ಸೋಮಾರಿಗಳನ್ನು ಬಡಿದೆಬ್ಬಿಸುವುದು ಮಾತ್ರವಲ್ಲದೆ, ನಾಡು ನುಡಿಯ ಪ್ರಜ್ಞೆಗಳನ್ನು ಎಲ್ಲರಲ್ಲು ಜಾಗೃತಗೊಳಿಸಿ ಹೆಮ್ಮೆಯಿಂದ ಎದೆ ಸೆಟೆದು ನಿಲ್ಲಿಸುವ ಧೀರತೆಗೆ ಪೂರಕವಾಗಲಿ, ಈ ಹೊಸತಿನ ಪ್ರಜ್ಞೆ. ಸುಂದರ ಕವನದೊಂದಿಗೆ ಸುಂದರ ವರ್ಷಾರಂಭ ಮಾಡಿಸಿದ್ದಕ್ಕೆ ಮತ್ತೆ ಧನ್ಯವಾದಗಳು.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ' ಅರುಣೋದಯ ಕಿರಣ ' by nageshamysore
ಉ: ' ಅರುಣೋದಯ ಕಿರಣ '
+೧, ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
-ಗಣೇಶ.
In reply to ಉ: ' ಅರುಣೋದಯ ಕಿರಣ ' by ಗಣೇಶ
ಉ: ' ಅರುಣೋದಯ ಕಿರಣ '
ಗಣೇಶ ರವರಿಗೆ ವಂದನೆಗಳು ಕವನದ ಮೆಚ್ಚುಗೆಗೆ ಧನ್ಯವಾದಗಳು.
In reply to ಉ: ' ಅರುಣೋದಯ ಕಿರಣ ' by nageshamysore
ಉ: ' ಅರುಣೋದಯ ಕಿರಣ '
ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ನಾಡು ನುಡಿಯ ಬಗೆಗಿನ ತಮ್ಮ ಕಾಳಜಿ ಮೆಚ್ಚುವಂತಹುದು ಕವನದ ಮೆಚ್ಚುಗೆಗೆ ಧನ್ಯವಾದಗಳು.