ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
ನಮ್ಮ ಕಂಪನಿಯಲ್ಲಿ ಪ್ರತಿ ಶುಕ್ರವಾರ ಕನ್ನಡ ಸಾಹಿತ್ಯದ ಬಗ್ಗೆ ಮಾತ್ಕೂಟಗಳನ್ನು ಏರ್ಪಡಿಸುತ್ತಾರೆ. ನಮ್ಮ ಕಂಪನಿಯಲ್ಲಿ ಇರುವ ಯಾರಾದರೂ ಕನ್ನಡದ ಕಬ್ಬಿಗರ/ಕಬ್ಬದ ಬಗ್ಗೆ ಅಣಿಯಾಗಿ ಮಾತನಾಡುತ್ತಾರೆ. ಸುಮಾರು ೧೦-೨೦ ಮಂದಿಯಾದರೂ ಇದಕ್ಕೆ ಬರುತ್ತಾರೆ. ಹೆಚ್ಚಾಗಿ ಹಳೆಗನ್ನಡ ಮತ್ತು ನಡುಗನ್ನಡದ ಕಬ್ಬಿಗರ/ಕಬ್ಬದ ಬಗ್ಗೆ ತಿಳಿದುಕೊಳ್ಳಲು ಹೊಸತಾದ ಹುರುಪಿರುವುದನ್ನು ಹಲವು ಮಂದಿಯಲ್ಲಿ ನಾನು ನೋಡಿದ್ದೇನೆ. ಮೊದಲ ಬಾರಿಗೆ ಕುಮಾರವ್ಯಾಸ ಮತ್ತು ಗದುಗಿನ ಬಾರತದ ಬಗ್ಗೆ ಮಾತ್ಕೂಟ ಚೆನ್ನಾಗಿ ನಡೆಯಿತು. ಆಮೇಲೆ ಇನ್ನೊಂದು ಶುಕ್ರವಾರಕ್ಕೆ ನಾನಾಗಿಯೇ 'ಕವಿರಾಜಮಾರ್ಗ'ದ ಬಗ್ಗೆ ಮಾತನಾಡಲು ಹುರುಪು ತೋರಿದೆ. ತಕ್ಕಮಟ್ಟಿಗೆ ಮಾತ್ಕೂಟಕ್ಕೆ ಅಣಿಯಾಗಿ(ನಲ್ಮೆಯ ಗೆಳೆಯರಾದ ಮಾಯ್ಸ, ಸುನೀಲರ ನೆರವನ್ನು ಇಲ್ಲಿ ನೆನೆಯುವುದು ನನ್ನ ದಮ್ಮ) ಹೋದೆ. ಸುಮಾರು ೧೦ ಮಂದಿ ಇದ್ದರು ಅನ್ಸುತ್ತೆ. ನಾವು ಮಯ್ ಮರೆತು ಕವಿರಾಜಮಾರ್ಗದ ಬಗ್ಗೆ ಉದ್ದುದ್ದ ಮಾತನಾಡಿದೆವು. ನಮ್ಮ ಮಾತ್ಕೂಟದ ತಿರುಳು ಹೀಗಿತ್ತು:
೧. ರಟ್ಟಕೂಟರ ಬಗ್ಗೆ
೨. ಕವಿರಾಜಮಾರ್ಗಕ್ಕೆ ಮುಂಚೆ ಕನ್ನಡ ಸಾಹಿತ್ಯ ಹೇಗಿತ್ತು?
೩. ಕವಿರಾಜಮಾರ್ಗದ ಹೆಗ್ಗಳಿಕೆಗಳು
೪. ಕವಿರಾಜಮಾರ್ಗದ ಸಾಲುಗಳು ಮತ್ತು ಅದರ ತಿರುಳನ್ನು ಬಿಡಿಸಿ ಹೇಳುವಿಕೆ
೫. ಕನ್ನಡದಲ್ಲಿ 'ದೇಸಿ' ಚಿಂತನೆ ಹೆಗ್ಗಳಿಕೆ( ಶೆಲ್ಡನ್ ಪೊಲಾಕ್, ಕೆವಿ ಸುಬ್ಬಣ್ಣ)
೬. ತಿರುಳ್ಗನ್ನಡ ನಾಡು
೭. ಕನ್ನಡ- ಸಕ್ಕದ
೮. ಕನ್ನಡಂಗಳ್ ಮತ್ತು ಅವುಗಳ ಬೇರೆತನ
೯. ಕವಿರಾಜಮಾರ್ಗದ ನಿಬ್ಬರಗಳು - ದನಿಯಾಲಂಕಾರ, ಸಪ್ತ ರಿಪುವರ್ಗ
೧೦. ಚಾಣಕ್ಯ v/s ಸಿರಿವಿಜಯ
ಇವುಗಳ ಬಗ್ಗೆ ಮಾತಾಡಿ, ಚರ್ಚಿಸಿ ಮುಗಿಸಿದಾಗ ಒಂದು ಗಂಟೆಯಶ್ಟು ಹೊತ್ತು ಮೀರಿತ್ತು. ಹಲವು ಮಂದಿ ಕವಿರಾಜಮಾರ್ಗದ ಬಗ್ಗೆ ಇದ್ದ ಮಿತ್ (ತಪ್ಪು ತಿಳುವಳಿಕೆ) ಗಳ ಬಗ್ಗೆ ಹೇಳಿದರು. ಮಿಗೆಯಾಗಿ/ವಿಶೇಶವಾಗಿ 'ಕಾವೇರಿಯಿಂದಂ....' ಪದ್ಯದ ಬಗೆಗಿನ ಹೆಮ್ಮೆ ಮತ್ತು ಉಲ್ಲಿ/ಊ ಗಳನ್ನು ಇನ್ನು ಮುಂದೆ ನಾವು ಬಳಸುತ್ತೇವೆ ಎಂದು ಹುರುಪು ತೋರಿದರು. ಎಲ್ಲರೂ ಚೆನ್ನಾಗಿದೆ ಎಂದು ಹೇಳಿ ಇನ್ನೊಂದು ಮಾತ್ಕೂಟವನ್ನು ಮಾಡಿ ಕವಿರಾಜಮಾರ್ಗದ ಬಗ್ಗೆ ಹೆಚ್ಚು ತಿಳಿಯಬಯಸಿದರು.
ಏನೋ ಗೊತ್ತಿಲ್ಲ ಮಾತ್ಕೂಟವನ್ನು ಮುಗಿಸಿದಾಗ ಮನಸ್ಸಿಗೆ ನಲಿವು, ಹಾಲು ಕುಡಿದಶ್ಟು ಕುಸಿ ಎಲ್ಲ ಒಟ್ಟಿಗೆ ಆಯ್ತು. ಕನ್ನಡಮ್ಮನ ವಸಿಯಾದರೂ ಅಳಿಲುಸೇವೆ ಮಾಡಿದ ಅನಿಸು ಮೂಡಿತು.
Comments
ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
In reply to ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು... by hamsanandi
ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
In reply to ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು... by hpn
ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
In reply to ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು... by ವೈಭವ
ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...