ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು
ಮಿನಿಗವನಗಳು - ಲಕ್ಞ್ಮೀಕಾಂತ ಇಟ್ನಾಳ
ತುಂತುರು
ನೆಲದ ಹಸಿರಿನ
ಯೌವ್ವನದ ಸ್ಪರ್ಶಕೆ
ಮದವೇರಿದ ಗಾಳಿಯ
ಬಿಸಿಯುಸಿರು
ತಣಿದು
ತುಂತುರಾಯಿತು
ಎಲೆ
ಹಾಸಿಗೆ ಮೇಲೆ!
ಮಧ್ಯಾಹ್ನದ ನಿದ್ದೆ
ಮಧ್ಯಾಹ್ನದ ನಿದ್ದೆ
ಎಂಬುದು
ಹಗಲು ಚಂದಿರನ
ಆಕಳಿಕೆ,
ಅಕಾಲ ಮಳೆ,
ಬೇಡದ ಬಸಿರು,
ಅನಿಷ್ಟದ ಬೆಳೆ,
ಮೊಗದೊಳಗಿನ
ಮುಸುಡಿ!
Rating
Comments
ಉ: ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
' ತುಂತುರು 'ಮತ್ತು ' ಮಧ್ಯಾನ್ಹದ ನಿದ್ದೆ ' ಮಿನಿ ಗವನಗಳು ಚೆನ್ನಾಗಿ ಮೂಡಿ ಬಂದಿವೆ, ಈ ಮಾದರಿಯಲ್ಲೂ ನೀವು ಚೆನ್ನಾಗಿ ಬರೆಯಬಲ್ಲಿ ರೆಂಬುದನ್ನು ನಿರೂಪಿಸಿದ್ದೀರಿ, ಎಲ್ಲ ಪ್ರಾಕಾರಗಳಲ್ಲೂ ನಿಮ್ಮ ರಚನೆಗಳು ಬರಲಿ, ಶುಭ ಹಾರೈಕೆಯೊಂದಿಗೆ ಧನ್ಯವಾದಗಳು.
In reply to ಉ: ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು by H A Patil
ಉ: ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು
ಇಟ್ನಾಳ್ ಅವರಿಗೆ ವಂದನೆಗಳು.
ತುಂಬಾ ಚಂದದ ಕವನ ಧನ್ಯವಾದಗಳು.
In reply to ಉ: ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು by mmshaik
ಉ: ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು
ಶೇಖ ಜಿ ರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಮೆಚ್ಚುಗೆಗೆ ಧನ್ಯ.
In reply to ಉ: ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು by H A Patil
ಉ: ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು
ಹಿರಿಯರಾದ ಪಾಟೀಲ ಜಿ, ತಮ್ಮ ಎಂದಿನ ಮೆಚ್ಚುಗೆಗೆ ಹಾಗೂ ಎಲ್ಲ ಪ್ರಾಕಾರಗಳಲ್ಲೂ ರಚನೆಗೆ ಪ್ರೋತ್ಸಾಹ ನೀಡುವ ತಮ್ಮ ಮೆಚ್ಚುಗೆಗೆ ವಂದನೆಗಳು
ಉ: ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು
ಇಟ್ನಾಳರೆ, ಮಧ್ಯಾಹ್ನದ ನಿದ್ರೆ ಮೇಲೆ ಸ್ವಲ್ಪ ಕರುಣೆ ತೋರಿ...http://www.sciencedaily.com/releases/2010/02/100221110338.htm