ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
ಲಿನಕ್ಸ್ ನಲ್ಲಿ ಹೊಸ ತಂತ್ರಾಂಶಗಳನ್ನ ಇನ್ಸ್ಟಾಲ್ ಹ್ಯಾಗೆ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಇಲ್ಲಿ ಒಂದು ಸುಲಭ ವಿಧಾನವಿದೆ ನೋಡಿ.
Application ಮೆನುವಿನಲ್ಲಿ Add/Remove ಆಫ್ಶನ್ ಕ್ಲಿಕ್ಕಿಸಿ ಕೆಳಗಿನ ಚಿತ್ರ ದಲ್ಲಿ ಕಂಡಂತೆ ನಿಮಗೊಂದು ವಿಂಡೋ ನಿಮ್ಮ ಪರದೆಯ ಮೇಲೆ ಕಾಣಿಸ್ತದೆ.
ನಿಮಗೆ ಅಡ್ಮಿನಿಸ್ಟ್ರೆಟರ್ (ನಿರ್ವಾಹಕ) ನ ಹಕ್ಕುಗಳಿದ್ದರೆ (Administrative privileges) ನಿಮಗಿಸ್ಟ ಬಂದ ತಂತ್ರಾಂಶ ಇನ್ಸ್ಟಾಲ್ ಮಾಡಿಕೊಳ್ಳೋದು ಅಥವಾ ಬೇಡದವನ್ನ ಕಿತ್ತಾಕೋದು ಕೂಡ ಮಾಡ ಬಹುದು. ನಿಮ್ಮ ಕಂಪ್ಯೂಟರ್ನಲ್ಲಿ ಉಬುಂಟು ಇನ್ಸ್ಟಾಲ್ ಮಾಡ್ಕೊಂಡಾಗ ಮೊದಲಿಗೆ ಒಬ್ಬ ಯುಸರ್ ಸೇರಿಸ್ತೀರಲ್ಲ ಅದಕ್ಕೆ ಈ ಹಕ್ಕುಗಳು ಇರ್ತಾವೆ.
ನಿಮಗೆ ಇನ್ಸ್ತಾಲ್ ಮಾಡ್ಕೋ ಬೇಕಾದ ತಂತ್ರಾಂಶದ ಹೆಸರು ತಿಳಿದಿದ್ದರೆ, Search ಬಾಕ್ಸ್ ನಲ್ಲಿ ಹಾಕಿ ಹುಡುಕ ಬಹುದು ಕೂಡ. ಇಲ್ಲಾಂದ್ರೆ category ಲಿಸ್ಟ್ ನಲ್ಲಿ ನಿಮಗೆ ಬೇಕಾದ ತಂತ್ರಾಂಶ ಹುಡುಕಿ ಸೆಲೆಕ್ಟ್ ಮಾಡಿ (ಚೆಕ್ ಬಾಕ್ಸ್ ನಲ್ಲಿ ಕ್ಲಿಕ್ಕಿಸುವುದರ ಮೂಲಕ), Apply Changes ಬಟನ್ ಪ್ರೆಸ್ ಮಾಡಿ
ನಾನು ಉದಾಹರಣೆಗೆ Font-Forge ಸೆಲೆಕ್ಟ್ ಮಾಡಿ Apply Change ಪ್ರೆಸ್ ಮಾಡಿದಾಗ ಮುಂದೆ ಕಾಣುವ ಚಿತ್ರ ಪರದೆಯ ಮೇಲೆ ಬಂತು.
ಇಲ್ಲಿ Apply ಕ್ಲಿಕ್ ಮಾಡಿ
ಈ ಹಂತದಲ್ಲಿ ನಿಮ್ಮ ಕಂಪ್ಯೂಟರ್ ಇಂಟರ್ನೆಟ್ ಗೆ ಕನೆಕ್ಟ ಆಗಿದ್ದರೆ ಇಂಟರ್ನೆಟ್ ನಿಂದ ಬೇಕಿರುವ ತಂತ್ರಾಂಶಗಳು ಡೌನ್ ಲೋಡ್ ಆಗ್ತವೆ. ಇಲ್ಲಾಂದ್ರೆ ನಿಮ್ಮ ಉಬುಂಟು ಸಿ.ಡಿ ನ್ ಸಿ.ಡಿ ಡ್ರೈವ್ ನಲ್ಲಿರಿಸೋದನ್ನ ಮರೀ ಬೇಡಿ.
ಈಗ Font-Forge ಇನ್ಸ್ಟಾಲೇಷನ್ ಮುಗೀತು. ನೀವು ತಂತ್ರಾಂಶ ಉಪಯೋಗಿಸೋದೊಂದೆ ಬಾಕಿ.
ಕೆಲವು ಕ್ಲಿಷ್ಟಕವರಾದ ತಂತ್ರಾಂಶಗಳು ಇಲ್ಲಿಂದ ಇನ್ಸ್ಟಾಲ್ ಆಗದೇ ಇರಬಹುದು. ಅದರ ಬಗ್ಗೆ ಮತ್ತೊಮ್ಮೆ ತಿಳಿದು ಕೊಳ್ಳೋಣ.
Comments
ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
In reply to ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ by prasannasp
ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
In reply to ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್ by omshivaprakash
ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್