ಕಚ'ಗುಳಿಗೆ'-೦೩

ಕಚ'ಗುಳಿಗೆ'-೦೩

ಗುಳಿಗೆಗಳ ಕಾಟ ಈ ಒತ್ತಡದ ಜೀವನದಲ್ಲಿ ಬೇಡದಿದ್ದರೂ ಬಿಡದಾ ಭೂತ. ಬಿಪಿಗೊ, ಥೈರಾಯಿಡ್ಡಿಗೊ, ಟೆಂಕ್ಷನ್ನಿಗೊ, ತಲೊನೋವಿಗೊ, ನೆಗಡಿಗೊ, ಜ್ವರಕ್ಕೊ - ಒಟ್ಟಾರೆ ಮಾತ್ರೆ ನುಂಗುತ್ತಲೆ ಇರಬೇಕು, ಕಾಸು ಕೊಟ್ಟು. ಕೆಲವನ್ನು ತಡೆಯಲಾಗದಿದ್ದರೂ ಸಹನೀಯವಾಗಿಸುವಂತೆ ಮಾಡುವ ಕಾಸಿಲ್ಲದ ಗುಳಿಗೆಗಳೆಂದರೆ ನಗೆಯ ಟಾನಿಕ್ ಮಾತ್ರ. ನಗೆ ಬಿರುಮಳೆಯಾದರೂ ಸರಿ, ಮುಗುಳ್ನಗೆಯಾದರೂ ಸರಿ, ತುಸು ಒತ್ತಡದಿಂದ ಬಿಡುಗಡೆ ಮಾಡಿ ಮುದಗೊಳಿಸುವುದು ಮಾತ್ರ ನಿಜ. ಕೆಲಸದ ಒತ್ತಡ, ಬಿಡುವಿಲ್ಲದ ಓಡಾಟ, ಚಿಂತೆ, ಚಿಂತನೆಗಳಿಗೆಲ್ಲ ಪ್ರಥಮ ಚಿಕಿತ್ಸೆಯೂ ನಗುವೆ; ಆನಂತರ ಮಿಕ್ಕಿದ್ದು.

ಬಿದ್ದು ಬಿದ್ದು ನಗಿಸಲಲ್ಲದಿದ್ದರೂ, ಬಿಕ್ಕಿಬಿಕ್ಕಿ ಅಳಿಸದ ಮೆಲು ಹಾಸ್ಯದ ತೆಳು ಹಾಳೆಯಾಗಿ ಕಚ'ಗುಳಿಗೆ'ಗೆ ಮತ್ತಷ್ಟು ಗುಳಿಗೆ ಸೇರಿಸುವ ಯತ್ನ ಈ ಕಂತಿನಲ್ಲಿ. ವಾರಾಂತ್ಯದ ನಿರಾಳತೆಯ ಜತೆ ಒಂದಷ್ಟು ಬಿಡಿ ನಗೆಯ ಕಿಡಿ ಸಿಡಿಸಲೆಂಬ ಆಶಯದೊಂದಿಗೆ ಈ ಕಚ'ಗುಳಿಗೆ' - ೦೩ :-)

೦೧. ಉರುಳು
______________

ದೇಗುಲದ ಸುತ್ತ ಜನ
ಹಾಕುತ್ತಾರೆ
ವದ್ದೆಯಲೆ 
'ಉರುಳು'
ಮಾಡಿದ ಪಾಪಗಳು
ಆಗದಿರಲೆಂದು
ಕುತ್ತಿಗೆಗೆ 
'ಉರುಳು' !

೦೨. ಪ್ಲೀಸ್ ಹೇಳ್ಬೇಡಿ! 
________________

ಸಂಗಾತಿ
ಇನ್ನೊಬ್ಬಳಿರುವ 
ಸಂಗತಿ,
ಸಂಗಾತಿಗೆ
ಗೊತ್ತಾಗಬಾರದ 
ಸಂಗತಿ !

೦೩. ಸಂದಿಗ ್ದ
_________

ಹೆಂಡತಿ ತಮ್ಮ
'ಸಾಲಾ'
ವಾಪಸ್ಸೆ ಕೊಡ 
ಕೈಸಾಲ :-(

೦೪. ಅಳಿಯನ ಮಾತು 
________________

ನಿಜಕೂ 
ನೀವೆ
ನನ್ನ ಬಲ :-)
ಹೀಗೆ ಸದಾ
ಕೊಡುತಿರಿ -
ಹಣಕಾಸಿನ 
ಬೆಂಬಲ !!

೦೫. ಪ್ರಗತಿ 
____________

ಈಗ
ದೊಡ್ಡ 
ಸ್ಟೇಟಸ್ಸು
ಸಣ್ಣವರಿಗು..
- ಫೇಸು
ಬುಕ್ಕಿನ ಲಾಗು :-)

೦೬. ವರದಾ
_____________

ಒಡೆದರೂ ದೇವರಿಗೆ
ನೂರೆಂಟು ಕಾಯಿ
ವರ ಕೊಡದೆ ನಗುವ -
ಇನ್ನು ಸ್ವಲ್ಪ ಕಾಯಿ !

೦೭. ಯಾವುದು ಕಷ್ಟ ?
_____________________

ಬಟ್ಟೆ
ಮಾಡಿದರೆ 
ಸಾಲದು
ಮಡಿ,
ಒಣಗಿಸಲು
ಹತ್ತಬೇಕು
ನಾಕೆ 'ಮಹಡಿ'!

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Comments

Submitted by nageshamysore Sun, 01/12/2014 - 15:08

ಸಂಪದಿಗರೆ, ಯಾಕೊ ಮೊದಲ ಅವೃತ್ತಿ ಕಲೆಸಿಕೊಂಡುಬಿಟ್ಟ ಕಾರಣ, ಈ ಆವೃತ್ತಿ ಮತ್ತೆ ಸೇರಿಸಿದ್ದೇನೆ. ದಯವಿಟ್ಟು ಈ ಆವೃತ್ತಿಯನ್ನು ಗಮನಿಸಿ.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by sathishnasa Sun, 01/12/2014 - 21:01

" ಪ್ರಾಸ " ಬದ್ದ ಕಚಗುಳಿ ಚೆನ್ನಾಗಿದೆ ನಾಗೇಶ್ ರವರೇ ....ಸತೀಶ್

Submitted by bhalle Mon, 01/13/2014 - 08:58

ಚೆನ್ನಾಗಿದೆ. ಒಂದು ತಿದ್ದುಪಡಿ ನನಗೆ ತಿಳಿದಿರುವಂತೆ ...
ದೇಗುಲದ ಸುತ್ತ ಜನ ಹಾಕುತ್ತಾರೆ ವದ್ದೆಯಲೆ 'ಉರುಳು'
ಬದಲಿಗೆ
ದೇಗುಲದ ಸುತ್ತ ಜನ ಹಾಕುತ್ತಾರೆ ಒದ್ದೆಯಲೆ 'ಉರುಳು'
ಆಗಬೇಕು ಅನ್ನಿಸುತ್ತೆ ...

Submitted by nageshamysore Mon, 01/13/2014 - 18:34

In reply to by bhalle

ನಮಸ್ಕಾರ ಭಲ್ಲೆ ಜೀ, ನಿಮ್ಮ ಅನಿಸಿಕೆ ನಿಜ. 'ಒದ್ದೆ' ಸರಿಯಾದ ರೂಪ - ವದ್ದೆ ಅಲ್ಲ. ತಪ್ಪು ಸರಿಪಡಿಸಿದ್ದಕ್ಕೆ ಧನ್ಯವಾದಗಳು :-) ಮೂಲದಲ್ಲೂ ತಿದ್ದಿಬಿಡುತ್ತೇನೆ. - ನಾಗೇಶ ಮೈಸೂರು

Submitted by H A Patil Mon, 01/13/2014 - 13:38

ನಾಗೇಶ ಮೈಸೂರು ರವರಿಗೆ ವಂದನೆಗಳು
ಕಚಗುಳಿಗೆ 03 ಚೆನ್ನಾಗಿದೆ, ಸಾಲಾ ಎಂದ ಮೇಲೆ ಸಾಲದ ಪ್ರಶ್ನೆ ಎಲ್ಲಿಂಧ ಬಂತು, ಅದು ನೀವು ನಿಮ್ಮ ನೆಮ್ಮದಿಯ ಬದುಕಿಗೆ ಕೊಡಲೆ ಬೇಕಾದ ದಕ್ಷಿಣೆ, ಸಂಗಾತಿ ಸಂಗತಿ ಪದಗಳ ಸಂಧರ್ಭೋಚಿತ ಔಚಿತ್ಯಪೂರ್ಣ ಬಳಕೆ, ಎಲ್ಲ ಚುಟುಕುಗಳು ಅರ್ಥಪೂರ್ಣವಾಗಿ ಮೂಡಿ ಬಂದಿವೆ. ಧನ್ಯವಾದಗಳು.

Submitted by nageshamysore Mon, 01/13/2014 - 18:37

In reply to by H A Patil

ನಮಸ್ಕಾರ ಪಾಟೀಲರೆ, ಕಚ'ಗುಳಿಗೆ' ತಮಗೆ ಮುದಕೊಡುವ ಗುಳಿಗೆಯಾಗಿದ್ದಕ್ಕೆ ಸಂತಸ. ತಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು :-)
ನಾಗೇಶ ಮೈಸೂರು

Submitted by ravindra n angadi Mon, 01/13/2014 - 16:18

ನಮಸ್ಕಾರಗಳು ಸರ್

ತುಂಬಾ ಚನ್ನಾಗಿದೆ ನಿಮ್ಮ ಕಚಗುಳಿಗೆಗಳು
ಈ ನಮ್ಮ ದಿನ ನಿತ್ಯದ ಜಂಜಾಟದಲಿ ಜನರ ನಗೆ ಮಾಯವಾಗಿದೆ " ನಿಮ್ಮ ಕಚಗುಳಿಗೆಗಳಿಂದ ಸ್ವಲ್ಪಾದರು ಜಂಜಾಟ ಮರತು ನಕ್ಕರೆ ಅದೇೆ ಸ್ವರ್ಗ".

:) :) " ನಿಮಗು ,ನಿಮ್ಮ ಪರಿವಾರದವರಿಗು ಮಕರ ಸಂಕ್ತಮಣದ ಹಾರ್ದಿಕ ಶುಭಾಶೆಯಗಳು".:) :)

Submitted by nageshamysore Mon, 01/13/2014 - 18:43

In reply to by ravindra n angadi

ನಮಸ್ಕಾರ ರವೀಂದ್ರರೆ, ನಗೋದಿಕ್ಕೆ ಸುಲಭವಾಗಲಿ ಅಂತ ಕರಗೋಕೆ ಟೈಮೂ ಹಿಡಿಯೊ 'ಕ್ಯಾಪ್ಸೂಲ್' ಬದಲು, ಸುಲಭವಾಗಿ ಕರಗೊ ಗುಳಿಗೆ ಕೊಟ್ಟೆ. ಕಚ'ಗುಳಿಗೆ'ಗೆ ತಮ್ಮ ಪ್ರತಿಕ್ರಿಯೆಯ ಕಚಗುಳಿ ಖುಷಿ ಕೊಟ್ಟಿತು. ತಮಗೂ ತಮ್ಮ ಕುಟುಂಬದೆಲ್ಲರಿಗೂ, ಮತ್ತು ಸಮಸ್ತ ಸಂಪದಿಗರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು :-) - ನಾಗೇಶ ಮೈಸೂರು

Submitted by ಗಣೇಶ Mon, 01/13/2014 - 23:54

In reply to by nageshamysore

ನಾಗೇಶರೆ, ಒಂದಕ್ಕಿಂತ ಒಂದು ಸೂಪರ್! ಮೂರೂ "ಗುಳಿಗೆ" ಒಟ್ಟಿಗೆ ನುಂಗಿದೆ..ಏನೂ ಹೆಚ್ಚುಕಮ್ಮಿಯಾಗಲಿಕ್ಕಿಲ್ಲ ತಾನೆ..?

Submitted by nageshamysore Tue, 01/14/2014 - 03:01

In reply to by ಗಣೇಶ

ಗಣೇಶ್ ಜಿ, ಬಿಲ್ಕುಲ್ ಚಿಂತೆ ಬೇಡ. ಎಲ್ಲಾ ಆಯುರ್ವೇದಿಕ್, ಸಸ್ಯಾಹಾರಿ ಮೂಲದ ಮಾತ್ರೆಗಳು. ನಗುವೊಂದೆ ಸೈಡ್ ಎಫೆಕ್ಟ್. ಸ್ವಲ್ಪ ನಿಧಾನವಾಗಿ ಸೇವಿಸುತಿದ್ದರೆ, ಎಷ್ಟು ಬೇಕಾದರೂ ನುಂಗಬಹುದು :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by venkatb83 Tue, 01/14/2014 - 13:03

;())))

ಸರ್ವ ಸಂಪದ ಬಂಧು ಬಳಗಕ್ಕೆ

******* ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು*******

ಶುಭವಾಗಲಿ

\|/