ಸಾಲುಗಳು - 5 (ನನ್ನ ಸ್ಟೇಟಸ್)

ಸಾಲುಗಳು - 5 (ನನ್ನ ಸ್ಟೇಟಸ್)

ಚಿತ್ರ

ಸಾಲುಗಳು - 5  (ನನ್ನ ಸ್ಟೇಟಸ್)

jan 19 2014 

-----------------------------------------------------------------------

36

ಬಿಳುಪಿಗೂ ಕಪ್ಪಿಗೂ ಒಂದೇ ವ್ಯೆತ್ಯಾಸ 
ಅದು ಬಿಳುಪು ಇದು ಕಪ್ಪು 
ಅಷ್ಟೆ !!
------------------------------------------------------------------------ 

37.
ನಿನ್ನನ್ನು ಎರಡು ಸಾರಿ ಸಾಯಿಸುತ್ತೀನಿ 
ಅಂದರೆ ಹೇಗೆ ?
ಸ್ವಲ್ಪನಾದ್ರು ಲಾಜಿಕ್ ಬೇಡವೆ ?
-----------------------------------------------------------------------

38.

"ಕಾಫಿ ಆಯ್ತ?" 
ಬೆಳಗ್ಗೆ ಬೆಳಗ್ಗೆ ರಸ್ತೆಯ ಗಂಡಸರು ಎದುರು/ಪಕ್ಕದ ಮನೆಯ ಗಂಡಸರಿಗೆ ಕೇಳಿದರೆ
"ಕಾಫಿ ಕುಡಿದು ಆಯ್ತಾ?" ಅಂತ ಅರ್ಥ.
ಬೆಳಗ್ಗೆ ಬೆಳಗ್ಗೆ ರಸ್ತೆಯ ಹೆಂಗಸರು ಎದುರು/ಪಕ್ಕದ ಮನೆಯ ಹೆಂಗಸರಿಗೆ ಕೇಳಿದರೆ 
"ಕಾಫಿ ಮಾಡಿ ಆಯ್ತಾ?" ಅಂತ ಅರ್ಥ. 
ನಮ್ಮ ಮನೆಯ ವಿವರಣೆ ಆಯ್ತು. ನಿಮ್ಮ ಮನೆಯದು ಹೇಗೆ 
---------------------------------------------------------------------------

39.

ಅಧಿಕಾರದಿಂದ ವ್ಯಾಮೋಹದಿಂದ ಬಿಜೆಪಿ ಸೇರುತ್ತಿಲ್ಲ .

ನನ್ನ ಜೊತೆ ಬಿಜೆಪಿ ಸೇರುವ ಕೆಜಿಪಿ ನಾಯಕರಿಗೆ ಸೂಕ್ತ ಸ್ಥಾನಮಾನ ನೀಡಬೇಕು!!! 

-ಯಡ್ಯೂರಪ್ಪ 
-------------------------------------------------------------------------------

40
ಅಪರೂಪಕ್ಕೆ...ಒಮ್ಮೆಮ್ಮೆ ವಾಕಿಂಗ್ ಹೋಗುವ ಅಭ್ಯಾಸ ... ಬೆಳಗ್ಗೆ ಹೊತ್ತು 
ಹೀಗೆ ಬೆಳಗ್ಗೆ ಆರಕ್ಕೆ ಹೋಗುತ್ತಿರುವಾಗ ರಸ್ತೆಯ ಪಕ್ಕದಲ್ಲಿ ಲೈಟ್ ಕಂಬದ ಕೆಳಗೆ ಮತ್ತೊಂದು ಕಂಬ ರಸ್ತೆಯಲ್ಲಿ ಮಲಗಿಸಿದ್ದರು, ಅದರ ಮೇಲೆ ನಾಲ್ವರು ಮಾತನಾಡುತ್ತ ಕುಳಿತಿದ್ದರು. ಏನು ಇಷ್ಟು ಬೇಗ ಇವರಿಗೆ ಕೆಲಸ ಅಂದುಕೊಂಡು ಹೋದೆ, ಮತ್ತೆ ಒಂದು ಘಂಟೆ ಕಳೆದು ವಾಪಸ್ ಬರುವಾಗ ಮತ್ತೆ ಅವರು ಅದೇ ಕಂಬದ ಮೇಲೆ ಕುಳಿತು ಹರಟೆ ಮುಂದುವರೆಸಿದ್ದರು. ನಾನು ಹತ್ತಿರ ಹೋಗುತ್ತಿರುವಂತೆ...
"ಲೋ..... ಬಂದ ಕಣ್ರೋ.... " ಎನ್ನುತ್ತ ಎಲ್ಲ ಎದ್ದು ನಿಂತರು. 
ನನಗೆ ಗಾಭರಿ ಆಶ್ಚರ್ಯ, 
ಆದರೆ ಅವರು ನನ್ನ ಕಡೆ ನೋಡದೆ ರಸ್ತೆಯ ಮತ್ತೊಂದು ಬದಿಗೆ ಓಡುತ್ತ ನಡೆದರು, 
ಏಕೆ ಎಂದು ನೋಡಿದೆ.....
.
.
"ವೈನ್ ಶಾಪ್ ... ಮಾಲಿಕ ಬಂದು ಬಾಗಿಲು ತೆರೆಯುತ್ತಿದ್ದ" !!!!!
--------------------------------------------------------------------------------------------
41.

ಚರಿತ್ರೆ ಎಂದರೆ ಅದೇನೊ ಬರೀ ಯುದ್ದಗಳೆ ಅನ್ನುವಂತಾಗಿದೆ ಮನಸಿಗೆ, ಶಾಲೆಯಲ್ಲಿ ಓದಿದ ಚರಿತ್ರೆಗಳೆಲ್ಲ ಯುದ್ದಗಳೆ,

ಅದು ಘಜನಿಯೊ, ಬಹುಮುನಿಗಳೊ, ಕೃಷ್ಣದೇವರಾಯನೋ, ಅಶೋಕನೋ, ಬಾಹುಬಲಿಯೋ ಎಲ್ಲೆಲ್ಲಿಯು ಅವರು ಗೆದ್ದ ಯುದ್ದಗಳ ವಿವರಗಳೇ ಚರಿತ್ರೆಯೇನೊ ಅನ್ನುವಂತಾಗಿದೆ.
ಈಗಿನ ಚರಿತ್ರೆಯಲ್ಲಿ ಅದೇ ಯುದ್ದದ ಮುಂದುವರೆದ ಭಾಗಗಳು, ಕೆಲವೊಮ್ಮೆ ರಸ್ತೆಯಲ್ಲಿ,ಮನೆಗಳಲ್ಲಿ,........ ಫೇಸ್ ಬುಕ್ಕಿನಲ್ಲಿ ?? .
...
ಆದರೂ ಯುದ್ದ  ಹೊರತುಪಡಿಸಿದ ಚರಿತ್ರೆ ಓದುವಾಸೆ.... ಹುಡುಕಬೇಕು.
----------------------------------------------------------------------------------------------------------

ಕಡೆಯದಾಗಿ ಈ ಹಾಡು ಒಂದನ್ನು ಕೇಳಿಬಿಡಿ

"ನೀ ಮೊದಲು ಮೊದಲು ನನ್ನ ನೋಡಿದಾಗ......."

http://www.youtube.com/watch?v=CqJPLa2eSRI
-----------------------------------------------------------------------------------------------------

 

ಚಿತ್ರಮೂಲ :  https://fbcdn-sphotos-f-a.akamaihd.net/hphotos-ak-ash3/p480x480/1497619_...

 

Rating
No votes yet

Comments

Submitted by swara kamath Mon, 01/20/2014 - 12:49

ಪಾರ್ಥರಿಗೆ ನಮಸ್ಕಾರ,
ಕೆಲವು ದಿನಗಳಿಂದ ಏಕೊ ಏನೊ ಆಪ್ತ ಲೇಖಕರ ಲೇಖನ .ಕವನ, ಮತ್ತು ಪ್ರತಿಕ್ರಿಯೆಗಳು ' ಸಂಪದ 'ದಲ್ಲಿ ಕಾಣಿಸದೆ ತುಂಬಾ ಬೇಸರಿಕೆ ಆಗಿತ್ತು.ಮತ್ತೆ ಈ ದಿನ ತಮ್ಮ ಸ್ಟೇಟಸ್ ನ 'ಸಾಲುಗಳು ,ಬಂಡ್ರಿಯವರ 'ಲಲಿತ ಸಹಸ್ರನಾಮದ ವಿವರಣೆ.ಗಣೇಶರ ಪ್ರತಿಕ್ರಿಯೆಗಳನ್ನು ಓದಿದಾಗ ಮನಸ್ಸಿಗೆ ಮುದ ನೀಡಿತು.
ವಂದನೆಗಳು........ರಮೇಶ ಕಾಮತ್