ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?
ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?
ಈ ಚಿತ್ರ ಯಾರಿಗೆ ಇಸ್ಟ ಆಗೋಲ್ಲ ?
ಕಥೆ -ಚಿತ್ರ ಕಥೆಯಲ್ಲಿ ಏನೋ ಹೊಸತಿರಬೇಕು ಎಂದು ಊಹಿಸಿ ನೋಡಲು ಹೋಗುವವರಿಗೆ ..!!
ತೆಲುಗಿನ ಯಶಸ್ವಿ ನಿರ್ದೇಶಕ ಕನ್ನಡಿಗ ಜಯಂತ್ ಸಿ ಪರಾಂಜಿ ಮತ್ತು ಕನ್ನಡದ ಯಶಸ್ವಿ ನಟ ಪುನೀತ್ ಮತ್ತು ಈ ಚಿತ್ರದ ಬಗೆಗಿನ ನಿರ್ಮಾಣ -ನಿರ್ವಹಣೆ ಜಾಹೀರಾತು ಇತ್ಯಾದಿ ನೋಡಿ ವಿಪರೀತ ನಿರೀಕ್ಷೆ ಇಟ್ಟುಕೊಂಡು ನೋಡಲು ಹೋದವರಿಗೆ ...
ಯಾರಿಗೆ ಇಸ್ಟ ಆಗಬಹುದು?
ಮನೆ ಮಂದಿ ಜೊತೆ ಒಂದು ಸುಂದರ ದಿನ ಅಥವಾ ಸಂಜೆ ಖುಷಿಯಾಗಿ ಕಳೆಯಲು ಇಸ್ಟ ಪಡುವ ಕಥೆ ಚಿತ್ರ ಕಥೆ ಇತ್ಯಾದಿ ಏನೂ ನಿರೀಕ್ಷೆ ಇಟ್ಟುಕೊಳ್ಳದೇ ನೋಡ ಹೋಗುವವರಿಗೆ ..
ಹೈಲೈಟ್ಸ್ :
ಇಡೀ ಚಿತ್ರದ ಜೀವಾಳ -ನಟ ಅಪ್ಪು ಮತ್ತು ನಟಿ ಎರಿಕಾ ಫರ್ನಾಂಡಿಸ್
ಹೊರ ದೇಶದ ಸುಂದರ ಪ್ರಾಕೃತಿಕ ತಾಣಗಳ ಅದ್ಭುತ ಛಾಯಾಗ್ರಹಣ
ಚಿತ್ರದ ಮೇಕಿಂಗ್ -ಯಾವುದೇ ಹಿಂದಿ ಮತ್ತು ತೆಲುಗು ಶ್ರೀಮಂತ ಚಿತ್ರಗಳನ್ನು ಮೀರಿಸುವ ಹಾಗಿದೆ -ಮತ್ತು ನೋಡುಗರಿಗೆ ವಿಶೇಷ ಅನುಭವ ನೀಡೋದು ಖಾತ್ರಿ.
ಏನಿಲ್ಲ :
ಕಥೆ ಚಿತ್ರ ಕಥೆ ಪೇಲವವಾಗಿದೆ ,ತೆಲುಗು-ತಮಿಳು ಮತ್ತು ಹಿಂದಿಯ ಹಾಗೆ ಕೇವಲ ಖ್ಯಾತ ನಟ ನಟಿಯರ ನಾಮ ಬಲದಿಂದ ಒಂದು ಚಿತ್ರವನ್ನು ಕಥೆ ಇಲ್ಲದೆ ಎಲ್ಲ ಮಸಾಲೆ ಬೆರೆಸಿ ತೆಗೆದ ಹಾಗಿದೆ.
ಕಥೆ ಏನು? :
ಶ್ರೀಮಂತ ತಂದೆಯ ಕೇರ್ ಫ್ರೀ ಸಾಹಸೀ ಮಗ ವಿದೇಶದಲ್ಲಿ ದೇಶೀ ಹುಡುಗಿಯ ನೋಡಿ ಪರವಶನಾಗುತ್ತಾನೆ ,ಮಾತು ಕಥೆ ಸ್ನೇಹವಾಗಿ ಮಾಮೂಲಿನ ಹಾಗೆ ಪ್ರೀತಿಯೂ ಆಗುತ್ತದೆ ಆದರೆ ನಾಯಕ ಪ್ರೀತಿ(ಲವ್ ) ಬದಲಿಗೆ ಸ್ನೇಹವನ್ನು(ಫ್ರೆಂಡ್‌ಶಿಪ್) ಆಯ್ದುಕೊಳ್ಳುವನು -ನಾಯಕನಲ್ಲದೆ ಬೇರಾರನ್ನೂ ಮದ್ವೆ ಆಗಲೊಲ್ಲದ ಹುಡುಗಿ -ಅವಳಿಗಾಗಿ ಗಂಡು ಹುಡುಕುವ ನಾಯಕ ... ..
ಆ ಹುಡುಗಿಗೆ ಹುಡುಗ ಸಿಕ್ತಾನ?
ಮದ್ವೆ ಆಗುತ್ತಾ?
ಸ್ನೇಹಾನಾ ?
ಪ್ರೀತೀನಾ?
ಅಥವಾ
ಎರಡಾ? ......
ಕಥೆಯನ್ನ ಕೇವಲ ನಾಯಕ ನಟರ ಹೆಸರಿಗಿರುವ ಖ್ಯಾತಿಯಿಂದ ಎಳೆದೆಳೆದು ಎರಡೂವರೆ ಘಂಟೆಯ ಸಿನೆಮಾ ತೆಗೆದು ಹಿಟ್ ಮಾಡುವುದರಲಿ ತೆಲುಗು ತಮಿಳು ನಿರ್ದೇಶಕರು ನಿಸ್ಸೀಮರು -ಈ ಜಯಂತ್ ಅವರೂ ಸಹಾ ಆ ಕಲೆಯನ್ನು ಅರೆದು ಕುಡಿದಿರುವರು . . ಅದ್ಕೆ ಸಾಕ್ಷಿಯಾಗಿ ಅವರ ನಿರ್ದೇಶನದ ತೆಲುಗು ಚಿತ್ರಗಳನ್ನು ನೋಡಬಹ್ದು ..!
ಪೇಲವ ಕಥೆಯ ಈ ಚಿತ್ರ ನೋಡುವಂತೆ ಮಾಡೋದು ಅದರ ನಿರ್ಮಾಣಕ್ಕೆ ವ್ಯಯಿಸಿದ ಹಣ ಮತ್ತು ಅದನ್ನು ಮೇಕಿಂಗ್ನಲ್ಲಿ ಪರಿಣಾಮಕಾರಿಯಾಗಿ ವ್ಯಯ್ಸಿದ ರೀತಿ .
ಈ ದೋಷವನ್ನು ಚಿತ್ರದ ಕೆಲವು ಹಾಡುಗಳು ಅವುಗಳ ಸಾಹಿತ್ಯ ಛಾಯಾಗ್ರಹಣ ಮತ್ತು ನಟ ನಟಿಯರ ನಟನೆ ಮರೆಸಿಬಿಡುತ್ತದೆ..
ಪುನೀತ್ ನಟನಾ ಕೌಶಲ್ಯಕ್ಕೆ -ವಂಶಿ ,ಹುಡುಗರು , ಪೃಥ್ವಿ , ಪರಮಾತ್ಮ ಅವುಗಳ ವಿಭಿನ್ನ ಕಥೆ ನಿರೂಪಣೆ ಆ ಪಾತ್ರಗಳ ನಟನೆ ಸಾಕ್ಷಿ .
ಅವುಗಳಲ್ಲಿ ಪರಮಾತ್ಮ ,ಛಾಯಾಗ್ರಹಣ -ನಟನೆ -ಸಂಗೀತ ಸಾಹಿತ್ಯ ಮತ್ತು ಮೇಕಿಂಗ್ನಲ್ಲಿ ರಿಚ್ ಆಗಿತ್ತು ,ಈ ನಿನ್ನಿಂದಲೇ ಚಿತ್ರ ಅವಕ್ಕಿಂತ ರಿಚ್ ಆಗಿದೆ ..
ನಾಯಕ ನಟಿಯ ಮೊದಲ ಚಿತ್ರದ ನಟನೆ -ಆ ಚೆಲುವು ಮಂತ್ರ ಮುಗ್ಧಗೊಳಿಸುವುದು .ನಟಿ -ನಟನೆಯಲ್ಲಿ ಫುಲ್ ಮಾರ್ಕ್ಸ್ ಗಿಟ್ಟಿಸುವಳು .
ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಮಣಿ ಶರ್ಮ -ತೆಲುಗು ಧಾಟಿಯ ಸಂಗೀತ ನೀಡಿದ್ದು ಅವುಗಳಲ್ಲಿ ತೆಲುಗು ಮಾಧುರ್ಯ-ಸವಿ ರುಚಿ ಇದೆ
ಅವುಗಳಲ್ಲಿ ಮುಖ್ಯವಾಗಿ ನೀನು ಇರುವಾಗ ಹಾಡು ಕೇಳುವಾಗ -ಅದರ ಛಾಯಾಗ್ರಹಣ ನೋಡುವಾಗ ಮನಸಿಗೆ ಹಿತ -ಕಣ್ಣಿಗೆ ಹಬ್ಬ ...!
ನಿಂತೆ -ನಿಂತೆ -ಓಕೇ
ಇನ್ನುಳಿದ ಹಾಡುಗಳು -ಚಿತ್ರದಲ್ಲಿ ಖಡ್ಡಾಯವಾಗಿ 5 -6 ಹಾಡು ಇರಬೇಕು ಎಂದು ಅಲಿಖಿತ ನಿಯಮ ಪಾಲಿಸಲು ಸೇರಿಸಿದ ಹಾಡುಗಳು -ಬೊರೋ - ಬೋರೋ- ಆದರೆ ಅವುಗಳ ಛಾಯಾಗ್ರಹಣ -ಮತ್ತು ಹಾಡುಗಳಿಗೆ ನಟ ನಟಿಯರಿಗೆ ಹಾಕಿದ ವಸ್ತ್ರ ವೈವಿಧ್ಯತೆ-ಅವುಗಳಿಗೆ ಹಾಕಿಸಿದ ಸೆಟ್ಟುಗಳು ಸೂಪರ್ ...
ತೆಲುಗಿನ ಖ್ಯಾತ ಹಾಸ್ಯ ನಟ 'ಬ್ರಹ್ಮಾನಂದಂ' ಒಂದು ಪುಟ್ಟ ಪಾತ್ರದಲ್ಲಿ ಕೆಲವೇ ಕ್ಷಣಗಳು ಕಾಣಿಸಿ ನಗೆ ಉಕ್ಕ್ಸಿ ಹೋಗುವರು ,ಅವರಿಗಿಂತ ಸಾಧು ಕೋಕಿಲಾಗೆ ಹೆಚ್ಚಿನ ಸಮಯದ ಪಾತ್ರ ಇದೆ ಆದರೆ ಅವರ ಆ ನಟನೆ ನಗೆ ಉಕ್ಕಿಸದೆ ಬೆಪ್ಪು ನಗೆ ಉಕ್ಕೊ ಹಾಗೆ ಮಾಡುವುದು ..!!
ಚಿತ್ರದ ನಿರೂಪಣೆ ತಂತ್ರ ಅದೇ ಹಳೆಯ ಲವ್ ಫ್ರೆಂಡ್‌ಶಿಪ್ -ಧ್ವಂದ್ವ=ಬಬಲ್ ಗಂ ...!!
ಜಯಂತ್ -ಅಪ್ಪು ಜೋಡಿಯಿಂದ ನಿರೀಕ್ಷೆ ಹುಸಿ ಆದ ಹಾಗಿದೆ -ಆದರೆ
ಅದೆಲ್ಲವನ್ನೂ ಮೀರಿ -ಈ ಚಿತ್ರವನ್ನು ನೋಡಿ -ಕಾರಣ ಇದರ ಮೇಕಿಂಗ್ :
ಸಾರಥಿ -ಪರಮಾತ್ಮ ನಂತರ ತೆಲುಗು -ಹಿಂದಿ ಸಿನೆಮಾಗಳ ಲೆವೆಲ್‌ಗೆ ಫಿಲ್ಮ್ ಮೇಕಿಂಗ್ ಮಾಡಿದ ಚಿತ್ರ ಇದು .
ಇದು ಕನ್ನಡ ಚಿತ್ರವೇ ಎನ್ನುವ ಮಟ್ಟಿಗೆ ಅಚ್ಚರಿ ಆಗದೆ ಇರದು ..
ಏನೋ ನಿರೀಕ್ಷೆ ಇಟ್ಟುಕೊಳ್ಳದೇ ಹೋಗಿ ನೋಡಿ -ಎಂಜಾಯ್ ಮಾಡಿ ..
<<<ನಾವ್ ನೋಡಿದ್ದು ಒರಿಯಾನ್ ಮಾಲ್ ಪೀ ವೀ ಆರ್ ನಲ್ಲಿ -ಭಾನುವಾರ -ಎಲ್ಲಾ ಸೀಟು ಭರ್ತಿ -ಅತಿ ಮುಂದಿನ ಸಾಲಿನಲ್ಲಿ ಕೂತು ಕತ್ತು ಎತ್ತಿ ನೋಡೋ ಸೌಭಾಗ್ಯ ...!!>>>
ಮಾಮೂಲಿ ಸಿನೆಮಾ ಮಂದಿರದಲ್ಲಿ ನೋಡಿದರೆ ಈ ಚಿತ್ರ ಹಾಗೇ ಕಾಣಬಹುದಾ? ಎನ್ನುವ ಕುತೂಹಲ ..!!
ನೋಡಿದವರು ಪ್ರತಿಕ್ರಿಯಿಸುವರೆ?
.......................................................................................................................................................................................................................
ಈ ಚಿತ್ರದ 'ನೀನು ಇರುವಾಗ ' ಹಾಡಿನ ವೀಡಿಯೋ :
ಚಿತ್ರಗಳ ಮೂಲ :
Comments
ಉ: ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?
ಸಪ್ತಗಿರಿಗಳೆ ನಮಸ್ಕಾರ, ನಮಗೆ ಸಿಂಗಪುರದಲ್ಲಿ ಈ ಚಿತ್ರ ನೋಡಲಾಗದ ಕೊರತೆಯನ್ನ ಒಂದು ಪರ್ಫೆಕ್ಟ್ ಬಯೋಡೇಟಾ ಹಾಕಿ ತೀರಿಸಿಬಿಟ್ಟಿದ್ದೀರಾ. ಸಾಲದ್ದಕ್ಕೆ ಹಾಡಿನ ಲಿಂಕು ಸೇರಿಸಿದ್ದೀರ. ನೀವು ಹೇಳಿದ ಹಾಗೆ ಶೂಟ್ ಮಾಡಿರುವ ತಾಣಗಳು ಅಮೋಘವಾಗಿರುವುದು ಈ ಹಾಡಿನ ತುಣುಕಲ್ಲೂ ಕಾಣಿಸಿಕೊಂಡಿದೆ. ಸೊಗಸಾದ ಚಿತ್ರ ಸಾರಕ್ಕೆ ಧನ್ಯವಾದಗಳು :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?
ಬಹಳ ನಿರೀಕ್ಷೆಯ ಅಪ್ಪು ಚಿತ್ರದಂತೆ... ಸಪ್ತಗಿರಿವಾಸಿಯ ಲೇಖನ ಸಹ ಆಗಸ್ಟ್ ೩ ೨೦೧೩ ರ ನಂತರ ಈ ದಿನ ಬಿಡುಗಡೆಯಾಗಿದೆ!
In reply to ಉ: ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ? by ಗಣೇಶ
ಉ: ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?
ನಾಗೇಶ್ ಜಿ -ಮತ್ತು ಗಣೇಶ್ ಜಿ ಪ್ರತಿಕ್ರಿಯೆಗೆ ನನ್ನಿ .
ಗಣೇಶ್ ಅಣ್ಣಾ ನಾನು ಸಹಾ ಈ ಬರಹ ಸೇರಿಸುವ ಮೊದಲು ನಾ ಕೊನೆಯದಾಗಿ ಯಾವತ್ತೂ ಬರ್ಹ ಸೇರಿಸಿದ್ದು ಅಂತ- ಆಗ ಮನದಲಿ ಯಾರಾದರೂ ಈ ಬಗ್ಗೆ ಹೇಳಬಹುದು ಎಂದುಕೊಂಡೆ -ಊಹೆ ಸುಳ್ಳಾಗಲಿಲ್ಲ ನೋಡಿ ...!!
ಬರೆಯುತ ಸಕ್ರಿಯನಾಗಿರಲು ಯತ್ನಿಸುವೆ ...!!
ಈ ಬರ್ಹದ ಜೊತೆ ಇನ್ನೆರಡು ಅಂಶ ಸೇರಿಸಬೇಕಿತ್ತು ಮರೆತಿದ್ದೆ ಆದರೆ ಈಗ ಸೇರಿಸಲು -ಬದಲಿಸುವ ಅವಕಾಶ ಇಲ್ಲ :((
ಅಂಶ 1: ಈ ಚಿತ್ರದಲ್ಲಿ ಆರಂಭದಲಿ ಅತಿ ಎತ್ತರದ ಕ್ರೇನ್ಗೆ ಸೇರಿಸಿ ಕಟ್ಟಿದ ಕಾರಿನ ಮೇಲೆ ನಿಂತಿರುವ ಅಪ್ಪು ಕೆಳಗಿಳಿದು ಕಾರೊಳು ಇಳಿದು ಅಲ್ಲಿನ ಒಂದು ಬಟ್ಟೆ ತೆಗೆದುಕೊಂಡು ಮೇಲೆ ಬರಬೇಕು
http://www.youtube.com/watch?v=yb9QGCiy-Z8
>>>ಪುನೀತ್ ಅವರಿಗೆ ಹೈಟ್ ಫಿಯರ್ ಇರೋ ಅಂಶ ಮೊನ್ನೆ ಗೊತ್ತಾಯ್ತು ..
ಸ್ಕೈ ಡೈವಿಂಗ್ -
http://www.youtube.com/watch?v=sL9XnFcDDSk
ಈ ದೃಶ್ಯಗಳ ತೆಗೆದ ರೀತಿ ಯಾವ್ದೋ ಹಾಲಿವುಡ್ ಬಾಲಿವುಡ್ ಚಿತ್ರಗಳನ್ನು ತೆಗೆದ ಹಾಗಿದೆ ..
ಇದು ಕನ್ನಡ ಮತ್ತು ತೆಲುಗು ತಮಿಳಿಗೆ ಹೊಸತು (ಹಿಂದಿಯಲ್ಲಿ ಅದಾಗಲೇ ಬಂದಿದ್ದು -ಹೃತಿಕ್ ರೋಶನ್ -ಫರನ್ ಅಖ್ತರ್ ಅವರ ಜಿಂದಗಿ ನಾ ಮಿಲೇಗಿ ದುಬಾರಾದಲ್ಲಿದೆ).http://www.youtube.com/watch?v=NXdMxT6vifg
ಅಂಶ 2: ರಾಕ್ ಕ್ಲೈಂಬಿಂಗ್ ಸನ್ನಿವೇಶದ ಚಿತ್ರೀಕರಣ ಸಹ ಸೂಪರ್ -
ಇದನ್ನು
ಮಿಷನ್ ಇಂಪಾಸಿಬಲ್ ಚಿತ್ರದ ಟಾಮ್ ಕ್ರೂಸ್ ಸನ್ನಿವೇಶಕ್ಕೆ ಹೋಲಿಸದಿದ್ದರೆ-http://www.youtube.com/watch?v=58JbY73_fOA
ಇದೂ ಕನ್ನಡದ ಮಟ್ಟಿಗೆ ಹೊಸತು ಮತ್ತು ಬೆಸ್ಟು...
ಚಿತ್ರ ಹಣ ಮಾಡೋದು ಖಾತ್ರಿ -ಆದರೆ ಖ್ಯಾತ ನಟ ನಿರ್ದೇಶ್‌ಕರಿಬ್ಬರ ಈ ಸಂಗಮ ಅಮೋಘ -ಅಪೂರ್ವ ಸಂಗಮ ಆಗದಿದ್ದುದು ಬೇಜಾರಿನ ಸಂಗತಿ ..
ನನಗೆ ತಿಳಿದ ಮಟ್ಟಿಗೆ ಈ ಚಿತ್ರ ವಿದೇಶಗಳಲ್ಲಿ ಕೆಲ ದೇಶಗಳಲ್ಲಿ ಬಿಡುಗಡೆ ಆಗಿದೆ - ನಿಮ್ಮ ಸಮೀಪದ ಯಾವ್ದಾರ ಸಿನೆಮಾ ಹಾಲಲ್ಲಿ ಇದೆಯಾ ನೋಡಿ ನಾಗೇಶ್ ಜೀ
ಶುಭವಾಗಲಿ
\|/
In reply to ಉ: ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ? by venkatb83
ಉ: ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?
>>ನಿಮ್ಮ ಸಮೀಪದ ಯಾವ್ದಾರ ಸಿನೆಮಾ ಹಾಲಲ್ಲಿ ಇದೆಯಾ ನೋಡಿ ನಾಗೇಶ್ ಜೀ
-ನಾಗೇಶರು ಪೆಬ್ರವರಿಯವರೆಗೆ ಕಾಯಬೇಕು : http://articles.timesofindia.indiatimes.com/2014-01-17/news-interviews/4...
In reply to ಉ: ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ? by ಗಣೇಶ
ಉ: ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?
ಈಗಿಂದಲೆ ಕಣ್ಣಿಟ್ಟಿರುತ್ತೇನೆ ಇಲ್ಲಿನ 'ಮಲ್ಟಿಪ್ಲೆಕ್ಸ್'ಗಳ ಮೇಲೆ ! ಫೆಬ್ರವರಿ ಮೊದಲ ವಾರ ಚೈನೀಸ್ ಹೊಸವರ್ಷದ ರಜೆ ಇದೆ. ಆಗ ಬಿಡುಗಡೆಯಾದರೆ ಇನ್ನೂ ಚೆನ್ನಾಗಿರುತ್ತದೆ!
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?
ಸಪ್ತಗಿರಿ ಅವರೆ ಪುನ: ಸಂಪದಕ್ಕೆ ತಮ್ಮ ಈ ಚಿತ್ರ ವಿಮರ್ಶಾ ಲೇಖನದ ಮೂಲಕ ಹೊಸವರ್ಷದ ಖಾತೆ ತೆರೆದಿರುವಿರಿ. ತಮ್ಮ ವೈವಿದ್ಯಮಯ ಲೇಖನ ಹಾಗು ಪ್ರತಿಕ್ರಿಯೆಗಳನ್ನು ಓದಿಸುವ ಮೂಲಕ ನಮ್ಮನ್ನು ಸದಾ ಸಂಪದದಲ್ಲಿ ಕ್ರಿಯಾಶೀಲರನ್ನಾಗಿರಿಸಬೇಕಾಗಿ ಆಶಿಸುತ್ತೇನೆ.
ವಂದನೆಗಳು......ರಮೇಶ ಕಾಮತ್