ಕಚ'ಗುಳಿಗೆ' - ೦೫

ಕಚ'ಗುಳಿಗೆ' - ೦೫

ಕಚಗುಳಿಗೆಗೆ ಕೆಲವು ಪುರುಷ ಛೇಡನೆಯ ಚುಟುಕಗಳನ್ನು ಸೇರಿಸಲೆಂದು ಯತ್ನಿಸಿದಾಗ ಹೊರಬಿದ್ದ ಪುಟಾಣಿಗಳಿವು. ಯಥಾ ರೀತಿ ದೃಷ್ಟಿಬೊಟ್ಟಿಗೆಂದು ಕೊನೆಯಲ್ಲಿ ಬೇರೆಯ ಚುಟುಕ ಸೇರಿದೆ. ಮೆಲುವಾಗಿ ಕಚಗುಳಿ ಇಡಬಹುದೆಂಬ ಆಶಯದಲ್ಲಿ ತಮ್ಮ ಮುಂದೆ ಮತ್ತೊಂದು ಪುಟ್ಟ 'ಟೈಮ್ಪಾಸ್' :-)

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

 

೦೧. ಶರಣಾಗತಿ !
____________

ಹೆಂಡತಿ
ಮಾಡಿಡುತ್ತಿದ್ದರೆ
ರುಚಿಕಟ್ಟಾದ
ಅಡಿಗೆ,
ದುಸರಾ
ಮಾತಿಲ್ಲದೆ
ಪತಿರಾಯ
ಪಾದ'ದಡಿಗೆ' !

೦೨. ಗಂಡೋದರ
__________

ನೋಡಿದರೆ 
ಸಾಕು
ಗಂಡಸರ ಹೊಟ್ಟೆ,
ನೆನಪಾಗುವುದು
ಪರಲೋಕದ 
ಹಾರುವ 
ತಟ್ಟೆ !

೦೩. ಗಂಡು 'ಭೂಗೋಳ'
_______________

ಗರ್ಭಿಣಿಯರ ಹೊಟ್ಟೆ -
ಪ್ರಸವ ನಂತರ 
ಸಮತಟ್ಟ ;
ಗಂಡಸರ ಹೊಟ್ಟೆ
ಗರ್ಭ ಧರಿಸದೆಯೂ
ಕಿರು ಬೆಟ್ಟ ||

೦೪. ನೆನಪಿನ ಶಕ್ತಿ !
____________

ಕೇಳಿದ್ದು 
ತಂದುಕೊಡುವ
ಗಂಡಸರಲ್ಲಿ 
ಬಲು ಕಮ್ಮಿ;
ಬೇಕೆಂದು
ಲಿಸ್ಟು ಕೊಡುವ
ಹೆಂಗಸರಲಿ
ಜಾಸ್ತಿ ||

೦೫. ಕುತ್ತಿಗೆ 'ಮಾಯ'
______________

ಬಿಡು ಪ್ರಿಯೆ 
ನಿನಗೇಕೆ
ಕುತ್ತಿಗೆಗೆ ಸರ
ಈಗಲ್ಲುಳಿದಿರುವುದು
ಬರೀ
ಕತ್ತಿಲ್ಲದ ಶಿರ !

Comments

Submitted by H A Patil Wed, 01/22/2014 - 19:56

ನಾಗೇಶ ಮೈಸೂರು ರವರಿಗೆ ವಂದನೆಗಳು
ಕಚಗುಳಿಗೆಗಳ ಸರಣಿ ಸುಂದರವಾಗಿ ಚಿಚ್ಚಿಕೊಳ್ಳುತ್ತ ಸಾಗಿದೆ, ಓದುಗರಿಗಂತೂ ಭರ್ಪೂರ ಮನರಂಜನೆ, ಆದರೆ ಯಾಕೆ ಸ್ವಾಮಿ ನಿಮಗೆ ಈ ಪುರುಷ ದ್ವೇಷ? ಬರ ಬರುತ್ತ ಸ್ತ್ರೀವಾದಿಗಳಾಗುತ್ತಿದ್ದೀರಿ ಎನ್ನುವ ಸಂಶಯ ನಮ್ಮನ್ನು ಕಾಡುತ್ತಿದೆ, ಪರಕಾಯ ಪ್ರವೇಶಕ್ಕೆ ಮತ್ತು ಅಭಿವ್ಯಕ್ತಿ ಕ್ರಮಕ್ಕೆ ಧನ್ಯವಾದಗಳು.

Submitted by nageshamysore Thu, 01/23/2014 - 21:33

In reply to by H A Patil

ಪಾಟೀಲರೆ ನಮಸ್ಕಾರ,
ಈಚೆಗೆ ಸಂಪದದಲ್ಲಿ ಮಹಿಳಾ ಸಂಪದಿಗರ ಬರಹಗಳು ಹೆಚ್ಚೆಚು ಕಾಣಿಸುತ್ತಿಲ್ಲ. ಹೀಗೆ ಬರೆದರಾದರೂ ಪ್ರೇರಿತರಾಗಿ ಬರಹದ ರೂಪದಲ್ಲೊ, ಪ್ರತಿಕ್ರಿಯೆಯ ರೂಪದಲ್ಲೊ ಹೆಚ್ಚು ಸಕ್ರೀಯರಾಗಲಿ ಅನ್ನುವ  ದೂರದಾಸೆ ಎನ್ನನಹುದೆ ? :-)
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು