ಮನಸಿನಂತೆ ನಡೆಯದಿರು (ಶ್ರೀ ನರಸಿಂಹ 78)
ಮನಸು ತಾ ಬಯಸಿದ ತೆರದಿ ನಿನ್ನ ಕುಣಿಸುತಿಹುದು
ಜಗದಲೆಲ್ಲ ತನ್ನಂತೆ ನಡೆಯಬೇಕೆಂದು ಬಯಸಿಹುದು
ಸುಖವಿಹುದೆನುತ ನಿನ್ನ ಹೊರಗಲೆಸುತಿಹುದಿ ಮನಸು
ಅದ ನಂಬಿ ನೀ ಕಾಣುತಿಹೆ ಸುಖ,ನೆಮ್ಮದಿಯ ಕನಸು
ಮನಸು ಬಯಸಿದ ತೆರದಿ ನಡೆಯದಿರು ನೀ ಜೀವನದಿ
ಜಗದಲೆಲ್ಲವು ನಿನಗೊಬ್ಬನಿಗಲ್ಲವೆಂಬರಿವಿರಲಿ ಮನದಿ
ಮನಸ ನಿಗ್ರಹಿಸಿ ನಿನ್ನಚ್ಚೆಯಂತಲದ ನೀ ನಡೆಸಬೇಕು
ಸಾಧಿಸಿದರಿದನು ಪಡೆವೆ ಆತ್ಮ ಸಾಕ್ಷಾತ್ಕಾರದ ಬೆಳಕು
ಮನಸು ಚಂಚಲತೆಯಿಂದ ತುಂಬಿಹುದೆಂಬುದದು ಕಟು ಸತ್ಯ
ನಿಗ್ರಹಿಸಲದ ಅನವರತ ಜಪಿಸು ಶ್ರೀ ನರಸಿಂಹನ ನಾಮ ನಿತ್ಯ
Rating
Comments
ಉ: ಮನಸಿನಂತೆ ನಡೆಯದಿರು (ಶ್ರೀ ನರಸಿಂಹ 78)
ಸತೀಶರೆ ನಮಸ್ಕಾರ,
ಮನೋನಿಗ್ರಹದ ಕುರಿತಾದ ಮಹತ್ವನ್ನು ಒತ್ತಿ ಹೇಳುವ "ಮನಸಿನಂತೆ ನಡೆಯದಿರು" ಚೆನ್ನಾಗಿದೆ. ಮನಸಿನಂತೆ ಮಹದೇವ!
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ಮನಸಿನಂತೆ ನಡೆಯದಿರು (ಶ್ರೀ ನರಸಿಂಹ 78) by nageshamysore
ಉ: ಮನಸಿನಂತೆ ನಡೆಯದಿರು (ಶ್ರೀ ನರಸಿಂಹ 78)
" ಮನಸ್ಸಿನಂತೆ ಮಹದೇವ " ನಿಜ, ಮನಸ್ಸು ಹೇಗಿರುತ್ತದೆಯೋ ನೋಡುವ ನೋಟವು ಹಾಗೆ ಇರುತ್ತದೆ ಧನ್ಯವಾದಗಳೊಂದಿಗೆ.....ಸತೀಶ್